ನಿಜವಾದ ’ವಿಲನ್’ ಯಾರು? ಸುದೀಪ್? ಶಿವಣ್ಣ? ಉತ್ತರ ಸಿಗಲಿದೆಯಣ್ಣಾ!

Published : Sep 26, 2018, 09:25 AM IST
ನಿಜವಾದ ’ವಿಲನ್’ ಯಾರು? ಸುದೀಪ್? ಶಿವಣ್ಣ? ಉತ್ತರ ಸಿಗಲಿದೆಯಣ್ಣಾ!

ಸಾರಾಂಶ

ಶಿವಣ್ಣ- ಸುದೀಪ್ ಮುಖಾಮುಖಿ ಟೀಸರ್ ಅ.1 ಕ್ಕೆ | ಅ.18, ಕೆ ಜಿ ರಸ್ತೆ 3 ಮೇನ್ ಥಿಯೇಟರ್‌ಗಳಲ್ಲಿ ರಿಲೀಸ್ | ಚಿತ್ರದಲ್ಲಿ ನಿಜವಾದ ವಿಲನ್ ಯಾರು? ಶಿವಣ್ಣಾನಾ? ಸುದೀಪಾ? ಎಲ್ಲದಕ್ಕೂ ಉತ್ತರ ಕೊಡಲಿದೆ ಟೀಸರ್ 

ಬೆಂಗಳೂರು (ಸೆ. 26): ಇಬ್ಬರು ಸ್ಟಾರ್‌ಗಳು ತಮ್ಮ ಅಭಿಮಾನಿಗಳ ನಿರೀಕ್ಷೆಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲು ಜತೆಯಾಗಿ ಬರುತ್ತಿದ್ದಾರೆ. ಹಾಗೆ ಜತೆಗೂಡಿ ಬರುತ್ತಿರುವುದು ‘ದಿ ವಿಲನ್’ ಜೋಡಿ. ಪ್ರೇಮ್ ನಿರ್ದೇಶಿಸಿ, ಸಿ ಆರ್ ಮನೋಹರ್ ನಿರ್ಮಾಣದ ಈ ಚಿತ್ರದ ಇಬ್ಬರು ನಾಯಕರಾದ ಶಿವರಾಜ್‌ಕುಮಾರ್ ಹಾಗೂ ಸುದೀಪ್ ಅವರ ಪಾತ್ರಗಳ ಟೀಸರ್‌ಗಳನ್ನು ಬೇರೆ ಬೇರೆಯಾಗಿಯೇ ಈಗಾಗಲೇ ಬಿಡುಗಡೆ ಮಾಡಲಾಗಿದೆ.

ಎರಡೂ ಟೀಸರ್‌ಗಳಿಗೂ ಒಳ್ಳೆಯ ಪ್ರತಿಕ್ರಿಯೆ ಬಂದಿದ್ದರೂ ಸುದೀಪ್ ಹಾಗೂ ಶಿವಣ್ಣ ಅವರನ್ನು ಟೀಸರ್‌ನಲ್ಲೇ ಜತೆಯಾಗಿ ನೋಡುವ ಕುತೂಹಲಕ್ಕೆ ಮಾತ್ರ ಪ್ರೇಮ್ ಉತ್ತರ ಕೊಡಲಿಲ್ಲ. ಆ ಕಾರಣಕ್ಕೆ ಅಕ್ಟೋಬರ್ 1 ಕ್ಕೆ ಮತ್ತೊಂದು ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ. ಈ ಟೀಸರ್ ಇಬ್ಬರು ಒಟ್ಟಿಗೆ ಇರುವಂತಹ ದೃಶ್ಯಗಳನ್ನು ಒಳಗೊಂಡಿದೆ.

ಅ.1 ಕ್ಕೆ ವಿಲನ್ ಗುಟ್ಟು ರಟ್ಟು?:

ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ ಎನ್ನುವ ಪ್ರಶ್ನೆಯಷ್ಟೆ ಪ್ರೇಮ್ ಚಿತ್ರದಲ್ಲಿ ವಿಲನ್ ಯಾರೆಂಬುದು ಕೇಳಿ ಬರುತ್ತಿರುವ ಪ್ರಶ್ನೆ. ಕಿಚ್ಚ ಹಾಗೂ ಶಿವಣ್ಣ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಟೀಸರ್‌ನಲ್ಲಿ ನಿರ್ದೇಶಕರು ಈ ಪ್ರಶ್ನೆಗೆ ಉತ್ತರ ಕೊಡುತ್ತಾರೆಯೇ ಎಂದರೆ ಹೌದು ಎನ್ನಲಾಗುತ್ತಿದೆ. ‘ದಿ ವಿಲನ್’ ಚಿತ್ರದಲ್ಲಿ ನಿಜವಾದ ವಿಲನ್ ಯಾರೆಂಬುದನ್ನು ಅ.1 ರಂದು ಅನಾವರಣಗೊಳ್ಳುತ್ತಿರುವ ಟೀಸರ್ ಹೇಳುತ್ತದಂತೆ. ಅಂಥ ಕುತೂಹಲದ ಹಿಂಟ್ಸ್ಗಳನ್ನು ಟೀಸರ್‌ನಲ್ಲಿ ಪ್ರೇಮ್ ಸೇರಿಸಿದ್ದಾರೆಂಬುದು ಸುದ್ದಿ.

‘ಇಬ್ಬರು ಹೀರೋಗಳು ಜತೆಯಾಗಿ ಕಾಣಿಸಿಕೊಳ್ಳುತ್ತಿರುವ ಮೊದಲ ಟೀಸರ್ ಹೇಗಿರಬೇಕೆಂಬುದನ್ನು ಸಾಕಷ್ಟು ವರ್ಕ್ ಮಾಡಿಯೇ ಟೀಸರ್ ರೂಪಿಸಲಾಗುತ್ತಿದೆ. ಇದರಲ್ಲಿ ವಿಲನ್ ಯಾರೆಂಬುದನ್ನು ಪರೋಕ್ಷವಾಗಿ ಹೇಳುತ್ತಿದ್ದೇನೆ. ಸೂಕ್ಷ್ಮವಾಗಿ ಟೀಸರ್ ಗಮನಿಸಿದವರಿಗೆ ಮಾತ್ರ ಖಳನಾಯಕನ ಗುಟ್ಟು ರಟ್ಟಾಗುತ್ತದೆ’ ಎನ್ನುತ್ತಾರೆ ಪ್ರೇಮ್.

ಅಲ್ಲಿಗೆ ಇಬ್ಬರು ಹೀರೋಗಳಲ್ಲಿ ಯಾರು ವಿಲನ್ ಎನ್ನುವ ಅವರವರ ಅಭಿಮಾನಿಗಳಲ್ಲಿದ್ದ ಕಾತರಕ್ಕೆ ಅ.೧ರಂದು ಸಮಾಧಾನ ದೊರೆಯಲಿದೆ.

ಮುಂಗಡ ಬುಕ್ಕಿಂಗ್ ಯಾವಾಗ?:

ದಿ ವಿಲನ್ ಸಿನಿಮಾ ಅ.18 ರಂದು ತೆರೆಗೆ ಬರುತ್ತಿದೆ ಎಂಬುದನ್ನು ಈಗಾಗಲೇ ಚಿತ್ರತಂಡ ಘೋಷಣೆ ಮಾಡಿದೆ. ಸಾಮಾನ್ಯವಾಗಿ ಪ್ರೇಮ್ ನಿರ್ದೇಶನದ ಸಿನಿಮಾಗಳಿಗೆ ಟಿಕೆಟ್ ಮುಂಗಡವಾಗಿಯೇ ಬುಕ್ಕಿಂಗ್ ಇರುತ್ತದೆ. ಹಾಗಾದರೆ ಮುಂಗಡ ಬುಕ್ಕಿಂಗ್ ಯಾವಾಗ ಎನ್ನುವ ಕುತೂಹಲಕ್ಕೆ ಅ.2 ರಂದೇ ಉತ್ತರ ದೊರೆಯಲಿದೆ. ಕಾಂಬೋ ಟೀಸರ್ ಬಿಡುಗಡೆಯಾದ ಮರು ದಿನವೇ ಚಿತ್ರದ ಮುಂಗಡ ಟಿಕೆಟ್ ಬುಕ್ಕಿಂಗ್ ದಿನಾಂಕವನ್ನೂ ಸಹ ಚಿತ್ರತಂಡ ಘೋಷಣೆ ಮಾಡುತ್ತಿದೆ.

ಒಂದು ಚಿತ್ರಕ್ಕೆ ಒಂದು ಮೇನ್ ಥಿಯೇಟರ್ ಸಿಗುವುದೇ ಕಷ್ಟ. ಆದರೆ, ‘ದಿ ವಿಲನ್’ ಚಿತ್ರಕ್ಕೆ ಈಗಾಗಲೇ ಬೆಂಗಳೂರಿನ ಕೆ ಜಿ ರಸ್ತೆಯಲ್ಲೇ ಮೂರು ಚಿತ್ರಮಂದಿರಗಳು ಬುಕ್ ಆಗಿವೆ. ಹೀಗಾಗಿ ನಿರೀಕ್ಷೆಗೂ ಮೀರಿ ಚಿತ್ರಮಂದಿರಗಳಿಗೆ ‘ದಿ ವಿಲನ್’ ಲಗ್ಗೆ ಹಾಕುತ್ತಿದ್ದಾನೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ
ಯಶ್- ರಾಧಿಕಾ ಪುತ್ರಿಗೆ 7 ವರ್ಷಗಳ ಸಂಭ್ರಮ: ಹುಟ್ಟುಹಬ್ಬದ ಕ್ಯೂಟ್​ ಫೋಟೋಗಳು ಇಲ್ಲಿವೆ