ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!

ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!

Published : Jun 09, 2026, 05:19 PM IST

ಪೆದ್ದಿ ಸಿನಿಮಾದಲ್ಲಿ ಜಾನ್ವಿ ಕಪೂರ್​ನ ಅಶ್ಲೀಲವಾಗಿ ಚಿತ್ರಿಸಿದ ರೀತಿಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು. ನಿರ್ದೇಶಕ ಕ್ಷಮೆ ಕೇಳಿದ್ದು ಗೊತ್ತೇ ಇದೆ. ಆದ್ರೆ ಖುದ್ದು ಜಾನ್ವಿಗೆ ಸಿನಿಮಾ ಸೆಟ್​​ನಲ್ಲೇ ಇದರ ಸೂಚನೆ ಸಿಕ್ಕಿತ್ತಾ..?

ಪೆದ್ದಿ ಸಿನಿಮಾದಲ್ಲಿ ಜಾನ್ವಿ ಕಪೂರ್​ನ ಅಶ್ಲೀಲವಾಗಿ ಚಿತ್ರಿಸಿದ ರೀತಿಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು. ನಿರ್ದೇಶಕ ಕ್ಷಮೆ ಕೇಳಿದ್ದು ಗೊತ್ತೇ ಇದೆ. ಆದ್ರೆ ಖುದ್ದು ಜಾನ್ವಿಗೆ ಸಿನಿಮಾ ಸೆಟ್​​ನಲ್ಲೇ ಇದರ ಸೂಚನೆ ಸಿಕ್ಕಿತ್ತಾ..? ನಿರ್ದೇಶಕನ ವರ್ತನೆಯಿಂದ ಜಾನ್ವಿ ಬೇಸರಗೊಂಡಿದ್ರಾ..? ಹೌದು ಅಂತಿವೆ ಜಾನ್ವಿ ಚಾಟಿಂಗ್ ಸ್ಕ್ರೀನ್ ಶಾಟ್ಸ್. ಇತ್ತೀಚಿಗೆ ರಿಲೀಸ್ ಆಗಿರೋ ಪೆದ್ದಿ ಸಿನಿಮಾದಲ್ಲಿ ನಾಯಕಿಯನ್ನ ಅಶ್ಲೀಲವಾಗಿ ತೋರಿಸಿರೋ ವಿಚಾರ ಎಲ್ಲೆಡೆ ಸದ್ದು ಮಾಡ್ತಾ ಇದೆ.

ಜಾನ್ವಿಯನ್ನ ನಿರ್ದೇಶಕ ಬುಚ್ಚಿಬಾಬು ಹೈಪರ್-ಸೆಕ್ಯುವಲೈಸ್  ಆಗಿ ತೋರಿಸಿದ್ದಾರೆ. ಕಾಮದ ಗೊಂಬೆಯಂತೆ ಚಿತ್ರಿಸಿದ್ದಾರೆ ಅಂತ ಟೀಕೆ ವ್ಯಕ್ತವಾಗಿತ್ತು. ಒಂದು ಹಂತದಲ್ಲಿ ಈ ಬಗ್ಗೆ ಹೆಚ್ಚಿದ ಆಕ್ರೋಶ ನೋಡಿ, ನಿರ್ದೇಶಕ ಬುಚ್ಚಿಬಾಬು ಸೋಷಿಯಲ್ ಮಿಡಿಯಾದಲ್ಲಿ ಕ್ಷಮೆ ಕೂಡ ಯಾಚಿಸಿದ್ರು. ಆದರೆ ಈ ರೀತಿ ಚಿತ್ರಿಸುವಾಗ ಜಾನ್ವಿ ಏನ್ ಮಾಡ್ತಾ ಇದ್ರು ಅಂತ ಕೂಡ ಕೆಲವರು ಪ್ರಶ್ನೆ ಮಾಡ್ತಾ ಇದ್ರು. ಅದಕ್ಕೆ ಉತ್ತರವಾಗಿ ಕೆಲ ಜಾನ್ವಿ ಆಪ್ತರು ಜಾನು ಚಾಟಿಂಗ್ ವಿವರಗಳನ್ನ ಶೇರ್ ಮಾಡಿದ್ದಾರೆ. ಅಸಲಿಗೆ ಶೂಟಿಂಗ್ ಟೈಂನಲ್ಲೇ ಬುಚ್ಚಿಬಾಬು ಇಡುವ ಕ್ಯಾಮೆರಾ ಅಂಗಲ್ಸ್ ನೋಡಿ ಜಾನು ಮುಜುಗರ ಪಟ್ಟಿದ್ರಂತೆ.

ತನ್ನ ಎದೆ, ಸೊಂಟದ ಸುತ್ತಲೇ ಅವರ ಕ್ಯಾಮೆರಾ ಕೋನ ಇರ್ತಾ ಇತ್ತು. ಒಂದು ಹಂತದಲ್ಲಿ ನಾನು ಇದನ್ನ ವಿರೋಧಿಸಿದ್ದೆ ಅಂತ ಜಾನ್ವಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಇದೇ ವಿಚಾರವಾಗಿ ಜಾನ್ವಿ ಸೆಟ್​ನಲ್ಲಿ ಕಣ್ಣೀರು ಕೂಡ ಹಾಕಿದ್ರಂತೆ. ಆಗ ಖುದ್ದು ರಾಮ್​ಚರಣ್ ಜಾನು ಬೆಂಬಲಕ್ಕೆ ನಿಂತಿದ್ರಂತೆ. ಒಟ್ನಲ್ಲಿ ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ನಟಿಯರಾದ್ರೂ , ಅವರು ಶೋಷಣೆಗೆ ಒಳಗಾಗ್ತಾರೆ. ಕಮರ್ಷಿಯಲ್ ಸಿನಿಮಾಗಳಲ್ಲಿ ಹೆಣ್ಣನ್ನ ಚಿತ್ರಿಸುವ, ನಡೆಸಿಕೊಳ್ಳುವ ರೀತಿ ಎಷ್ಟು ಕೀಳಾಗಿರುತ್ತೆ ಅನ್ನೋದು ಈ ಜಾನ್ವಿಯ ಈ  ಮೆಸೇಜ್​ಗಳ ಮೂಲಕ ಜಗಜ್ಜಾಹೀರಾಗಿದೆ.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
Read more