
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಕರ್ಣ ಸೀರಿಯಲ್ (Karna Serial )ಸಕತ್ ಇಂಟರೆಸ್ಟಿಂಗ್ ಆಗಿದ್ದು, ಇದು ವೀಕ್ಷಕರ ಮನಸ್ಸನ್ನು ಗೆದ್ದಿದೆ. ನಿಧಿ, ನಿತ್ಯಾ ಮತ್ತು ಕರ್ಣನ ಸುತ್ತ ಸುತ್ತುವ ಕಥೆ ಇದು. ಇದೀಗ ಸೀರಿಯಲ್ ರೋಚಕ ತಿರುವಿನಲ್ಲಿ ಬಂದು ನಿಂತಿದೆ. ಕರ್ಣ ನಿಧಿಯನ್ನು ಮದ್ವೆಯಾಗಬೇಕು ಎನ್ನುವುದು ಕೆಲವರ ಮಾತಾದರೆ, ಕರ್ಣ ಮತ್ತು ನಿತ್ಯಳ ಕೆಮೆಸ್ಟ್ರಿ ಚೆನ್ನಾಗಿದೆ ಎನ್ನುವುದು ಮತ್ತೆ ಕೆಲವರ ಮಾತು. ಇದಾಗಲೇ ನಿತ್ಯ ಮತ್ತು ನಿಧಿ ಇಬ್ಬರ ಮೇಲೂ ಅರಿಶಿಣ-ಕುಂಕುಮ ಬಿದ್ದಾಗಿದ್ದು, ಯಾರನ್ನು ಮದುವೆಯಾಗುತ್ತಾನೆ ಎನ್ನುವ ಬಗ್ಗೆ ವೀಕ್ಷಕರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಈ ಸೀರಿಯಲ್ನಲ್ಲಿ ನಿಧಿಗೆ ಕರ್ಣನ ಮೇಲೆ ಲವ್. ಯಾವಾಗಲೂ ಕರ್ಣ ಸರ್ ಎಂದು ಓಡುವ ಅವಳು, ಅವನನ್ನು ಮದುವೆ ಆಗೋ ಕನಸು ಕಾಣುತ್ತಿರುತ್ತಾಳೆ. ಇನ್ನೂ ಅವಳು ಕರ್ಣನ ಮುಂದೆ ಪ್ರೀತಿಯನ್ನು ಹೇಳಿಕೊಂಡಿಲ್ಲ. ಅದೇ ಇನ್ನೊಂದೆಡೆ ಕರ್ಣನನ್ನು ಕಂಡರೆ ನಿತ್ಯಾಗೆ ಇಷ್ಟವಿಲ್ಲ. ಆದರೆ ಸೀರಿಯಲ್ ಯಾವ ರೀತಿ ಟ್ವಿಸ್ಟ್ ಪಡೆದುಕೊಳ್ಳುತ್ತದೆ ಹೇಳಲು ಆಗದು.
ಶೂಟಿಂಗ್ನಲ್ಲಿ ಮೈಯೆಲ್ಲಾ ಕೆಂಪು:
ಇದೇ ವೇಳೆ, ಶೂಟಿಂಗ್ ಸಮಯದಲ್ಲಿ ನಿತ್ಯಾ ಪಾತ್ರಧಾರಿ ನಮ್ರತಾ ಗೌಡ (Namratha Gowda) ಅವರ ಮೈಯೆಲ್ಲಾ ಕೆಂಪಗಾಗಿದೆ. ಅದನ್ನು ಪುನೀತ್ ಗೌಡ ಎನ್ನುವವರು ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಹಾಗೆಯೇ ಮೇಲ್ನೋಟಕ್ಕೆ ನೋಡಿದರೆ ಕೆಂಪು ಬಣ್ಣ ನೋಡಿ ಗಾಬರಿಯಾಗುವುದು ಮಾಮೂಲು. ಆದರೆ ಪೂರ್ಣ ವಿಡಿಯೋ ನೋಡಿದರೆ ತಿಳಿಯುತ್ತದೆ, ಇದು ಶೂಟಿಂಗ್ ವೇಳೆ ತೆಗೆದ ವಿಡಿಯೋ. ಇದರಲ್ಲಿ ನಿಧಿ ಮತ್ತು ನಿತ್ಯಾ ಇಬ್ಬರ ಮೇಲೂ ಅರಿಶಿಣ-ಕುಂಕುಮ ಬೀಳುವ ದೃಶ್ಯವಿದೆ. ಆಗ ನಮ್ರತಾ ಅವರ ಮೇಲೆ ಕುಂಕುಮ ಬಿದ್ದಾಗಿನ ದೃಶ್ಯವಿದು!
ಇದನ್ನೂ ಓದಿ: Bigg Bossಗೆ ಹೊರಟ ದತ್ತನನ್ನೇ ಸಾಯಿಸಿಬಿಟ್ಟಳಾ ಶರಾವತಿ? ಪ್ಲಾಸ್ಟಿಕ್ ಸರ್ಜರಿ ಜೊತೆ Drishti Bottuಗೆ ಬರ್ತಾನಾ?
ಏನಿದು ಸೀರಿಯಲ್ ಸ್ಟೋರಿ:
ಇನ್ನು ಸೀರಿಯಲ್ ವಿಷಯಕ್ಕೆ ಬರುವುದಾದರೆ, ಈಗ ನಿತ್ಯಾಗೆ ಏನೇ ಸಮಸ್ಯೆ ಬಂದರೂ ಕೂಡ ಅದನ್ನು ಕರ್ಣ ಪರಿಹಾರ ಮಾಡ್ತಾನೆ. ಅವಳನ್ನು ಅಪಾಯದಿಂದ ಬಚಾವ್ ಮಾಡಿರೋ ಕರ್ಣ ಕೊನೆಗೆ ನಿತ್ಯಾಳನ್ನೇ ಮದುವೆ ಆಗ್ತಾನಾ? ಹೀಗೊಂದು ಸಂಶಯ ಶುರುವಾಗಿದೆ. ಆದ್ದರಿಂದ ಇವರಿಬ್ಬರಲ್ಲಿ ಕರ್ಣ ಕೊನೆಗೆ ಯಾರನ್ನು ಮದುವೆಯಾಗುತ್ತಾರೆ ಎನ್ನುವುದು ಸೀರಿಯಲ್ ಕುತೂಹಲ. ಅಷ್ಟಕ್ಕೂ ಇದಾಗಲೇ ತೇಜಸ್ ಹಾಗೂ ನಿತ್ಯಾ ನಿಶ್ಚಿತಾರ್ಥ ಆಗಿದೆ. ಮನೆಯಲ್ಲಿ ತಿಳಿಸದೆ ತೇಜಸ್ ಉಂಗುರ ಬದಲಾಯಿಸಿಕೊಂಡಿದ್ದ. ಇನ್ನೊಂದೆಡೆ ಇವನ ಪಾಲಕರು ಕೂಡ ನಿತ್ಯಾಗೆ ಬಾಯಿಗೆ ಬಂದಹಾಗೆ ಬೈದಿದ್ದರು. ನಿನಗೆ ಯೋಗ್ಯತೆ ಇಲ್ಲ, ಗತಿಗೆಟ್ಟವಳು, ನಮ್ಮ ಮನೆಗೆ ಬಂದು ಕುಟುಂಬ ಹಾಳೋ ಮಾಡೋದು ಬೇಡ ಅಂತೆಲ್ಲ ಬೈದಿದ್ದರು.
ಯಾರನ್ನು ಮದ್ವೆಯಾಗ್ತಾನೆ ಕರ್ಣ?
ಅಪ್ಪ-ಅಮ್ಮನನ್ನು ಕಳೆದುಕೊಂಡಿರೋ ನಿತ್ಯಾಗೆ ಅತ್ತೆ-ಮಾವನ ಪ್ರೀತಿ ಸಿಗಬೇಕು ಎನ್ನೋದಿತ್ತು. ಇನ್ನೊಂದು ಕಡೆ ತೇಜಸ್ ತಂದೆ-ತಾಯಿ ಇಷ್ಟೆಲ್ಲ ಹೀನಾಯವಾಗಿ ಮಾತನಾಡಿದಾಗ ನಾನು ಹೇಗೆ ಮದುವೆ ಆಗಲಿ ಅಂತ ನಿತ್ಯಾಗೆ ಸಂಶಯ ಶುರುವಾಗಿದೆ. ಕರ್ಣ ಮದುವೆ ಆಗಬಾರದು ಅಂತ ಅವನ ತಂದೆ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಈಗ ಅಜ್ಜಿ ಈ ಒಪ್ಪಂದವನ್ನು ಮುರಿದಿದ್ದಾರೆ. ಕರ್ಣ ಮದುವೆ ಆಗದಿದ್ರೆ ಸಾಯೋದಾಗಿ ಬೆದರಿಕೆ ಕೂಡ ಹಾಕಿದ್ದಳು. ಹೀಗಾಗಿ ಕರ್ಣ ಮದುವೆ ಆಗಲು ರೆಡಿ ಆಗಿದ್ದಾನೆ.
ಇದನ್ನೂ ಓದಿ: ಸಿನಿಮಾಕ್ಕೆ ಎಂಟ್ರಿ ಕೊಟ್ಟ ಸೀತಾರಾಮ ಸೀರಿಯಲ್ ಸಿಹಿ: ಪುಟಾಣಿ ರಿತು ಸಿಂಗ್ ಹೇಳಿದ್ದೇನು ಕೇಳಿ...
ಕೆಲ ದಿನಗಳ ಹಿಂದೆ ಕರ್ಣ ಪಾತ್ರಧಾರಿ ಕಿರಣ್ ರಾಜ್ (Kiran Raj) ಅವರು ಸಂದರ್ಶನವೊಂದರಲ್ಲಿ ಕರ್ಣ ಯಾರನ್ನು ಮದುವೆಯಾಗುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ್ದರು. ಕಿರಣ್ ರಾಜ್ ಜಾಣ್ಮೆಯಿಂದ ಯಾರನ್ನು ಬೇಕಾದ್ರೂ ಕರ್ಣ ಮದುವೆಯಾಗಲಿ ಬಿಡಿ, ನೀವು ಸೀರಿಯಲ್ ನೋಡ್ತಾ ಇರಿ ಎಂದಿದ್ದರು! ಜೊತೆಗೆ ನೀವು ಏನು ಅಂದುಕೊಂಡಿದ್ರೋ ಅದು ಖಂಡಿತಾ ಆಗಲ್ಲ. ನಿಮ್ಮ ಕಮೆಂಟ್ಸ್ ನೋಡಿ ಸೀರಿಯಲ್ ಬರೆಯುತ್ತಾರೆ ಎಂದುಕೊಂಡರೆ ಅದು ತಪ್ಪು. ಆದ್ದರಿಂದ ಏನು ಬೇಡ ಎಂದುಕೊಳ್ಳುತ್ತೀರೋ ಅದೇ ಆಗುವುದು ಎನ್ನುವ ಮೂಲಕ ಅಡ್ಡಗೋಡೆಯ ಮೇಲೆ ದೀಪ ಇಟ್ಟು ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.