
ಬಾಲಿವುಡ್ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ (Deepika Padukone) ಹಾಗೂ ನಟ ರಣವೀರ್ ಸಿಂಗ್ (Ranveer Singh) ಮುದ್ದಿನ ಮಗಳು ದುವಾ (Dua)ಗೆ ಈಗ ಒ೦ದು ವರ್ಷ ತುಂಬಿದೆ. ದುವಾ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ ದೀಪಿಕಾ ಹಾಗೂ ರಣವೀರ್. ಮಗಳ ಹುಟ್ಟುಹಬ್ಬದ ಖುಷಿಯಲ್ಲಿ ದೀಪಿಕಾ ಪಡುಕೋಣೆ ಕೇಕ್ ತಯಾರಿಸಿದ್ದಾರೆ. ದುವಾ ಹುಟ್ಟಿದ್ದು ಸೆಪ್ಟೆಂಬರ್ 8 ರಂದು. ಆದ್ರೆ ಸೆಪ್ಟೆಂಬರ್ 10 ರಂದು ದೀಪಿಕಾ ಪಡುಕೋಣೆ ಸೋಶಿಯಲ್ ಮೀಡಿಯಾದಲ್ಲಿ ಕೇಕ್ ಫೋಟೋ ಪೋಸ್ಟ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ದೀಪಿಕಾ ಹಂಚಿಕೊಂಡಿದ್ದೇನು? : ಇನ್ಸ್ಟಾಗ್ರಾಮ್ ನಲ್ಲಿ ದೀಪಿಕಾ ಪಡುಕೋಣೆ ಕೇಕ್ ಫೋಟೋ ಹಾಕಿದ್ದಾರೆ. ಚಾಕಲೇಟ್ ಕೇಕ್ ಇದಾಗಿದೆ. ಕೇಕ್ ಮೇಲೆ ಒಂದು ಕ್ಯಾಂಡಲ್ ಇದೆ. ಅಕ್ಕಪಕ್ಕ ಅಲಂಕಾರ ಮಾಡಿರೋದನ್ನು ಫೋಟೋದಲ್ಲಿ ಕಾಣಬಹುದು. ನನ್ನ ಪ್ರೀತಿಯ ಭಾಷೆ ಏನು? ನನ್ನ ಮಗಳ ಹುಟ್ಟುಹಬ್ಬದಂದು ಕೇಕ್ ತಯಾರಿಸುವುದು ಎಂದು ದೀಪಿಕಾ ಪಡುಕೋಣೆ ಫೋಟೋಕ್ಕೆ ಶೀರ್ಷಿಕೆ ಹಾಕಿದ್ದಾರೆ. ಕೇಕ್ ತಯಾರಿಸೋದು ಸುಲಭದ ಕೆಲ್ಸವಲ್ಲ. ಹಾಗಂತ ತಾಯಂದಿರಿಗೆ ಅದು ಕಠಿಣ ಕೂಡ ಅಲ್ಲ. ಮಕ್ಕಳಿಗಾಗಿ ಅಮ್ಮಂದಿರು ಏನು ಮಾಡಲೂ ಸಿದ್ಧ ಇರ್ತಾರೆ. ಇದಕ್ಕೆ ಬಾಲಿವುಡ್ ಸೆಲೆಬ್ರಿಟಿಗಳು ಹೊರತಾಗಿಲ್ಲ. ದೀಪಿಕಾ ತಮ್ಮ ಮಗಳಿಗಾಗಿ ತಾವೇ ಸ್ವತಃ ಕೇಕ್ ತಯಾರಿಸಿದ್ದಾರೆ. ಈ ಮೂಲಕ ಅಮ್ಮನ ಕರ್ತವ್ಯ ನಿಭಾಯಿಸಿದ ಸಾರ್ಥಕತೆ ಅನುಭವಿಸಿದ್ದಾರೆ.
2025ರಲ್ಲಿ ಅತಿಹೆಚ್ಚು ಆದಾಯ ಗಳಿಸಿದ ಟಾಪ್ 5 ಸಿನಿಮಾಗಳ ಲಿಸ್ಟ್ ನೋಡಿ! ಕಮಾಲ್ ಮಾಡಿದ ಉಪ್ಪಿ!
ಸ್ಟಾರ್ ಕಿಡ್ ದುವಾ : ಬಾಲಿವುಡ್ ಸೂಪರ್ ಜೋಡಿ ದೀಪಿಕಾ ಪಡುಕೋನೆ ಹಾಗೂ ರಣವೀರ್ ಸಿಂಗ್ 2018 ರಲ್ಲಿ ಇಟಲಿಯ ಲೇಕ್ ಕೊಮೊದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಇಬ್ಬರೂ ಮದುವೆಗೆ 3 ವರ್ಷ ಮೊದಲು 2015 ರಲ್ಲಿ ಸಿಕ್ರೇಟ್ ಆಗಿ ನಿಶ್ಚಿತಾರ್ಥ ಮಾಡ್ಕೊಂಡಿದ್ದರು. 2024, ಸೆಪ್ಟೆಂಬರ್ 8 ರಂದು ದೀಪಿಕಾ ಪಡುಕೋಣೆ ತಮ್ಮ ಮಗಳು ದುವಾಗೆ ಜನ್ಮ ನೀಡಿದ್ದರು. ದೀಪಿಕಾ ಗರ್ಭದಲ್ಲಿರುವಾಗ್ಲೇ ದುವಾ ಸಾಕಷ್ಟು ಸುದ್ದಿ ಮಾಡಿದ್ದಳು. ದುವಾ ಮುಖ ನೋಡೋಕೆ ಈಗ್ಲೂ ಅಭಿಮಾನಿಗಳು ಕಾತರರಾಗಿದ್ದಾರೆ. ಆದ್ರೆ ದೀಪಿಕಾ ಹಾಗೂ ರಣವೀರ್ ಸಿಂಗ್ ಮಗಳ ಮುಖವನ್ನು ಅಭಿಮಾನಿಗಳಿಗೆ ತೋರಿಸಿಲ್ಲ. ಅಲ್ಲಿ ಇಲ್ಲಿ, ಅಷ್ಟು ಇಷ್ಟು ದುವಾ ಮುಖ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಈಗ ದುವಾಗೆ ಒಂದು ವರ್ಷ ತುಂಬಿದ್ದು, ಅಭಿಮಾನಿಗಳು ದುವಾಗೆ ಆಶೀರ್ವಾದ ಮಾಡಿದ್ದಾರೆ. ಹುಟ್ಟುಹಬ್ಬದ ಸುರಿಮಳೆಗೈದಿದ್ದಾರೆ. ದೀಪಿಕಾ ಕೇಕ್ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ದೀಪಿಕಾ ಪಡುಕೋಣೆ ಕೆಲ್ಸವನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಆದ್ರೆ ಇನ್ನೂ ದುವಾ ಮುಖ ತೋರಿಸಿಲ್ಲ ಎನ್ನುವ ಬೇಸರ ಫ್ಯಾನ್ಸ್ ಗಿದೆ. ಆದಷ್ಟು ಬೆಗ ದುವಾ ಮುಖ ತೋರಿಸಿ ಎನ್ನುವ ಕಮೆಂಟ್ ಜೊತೆ, ದುವಾ ಬರ್ತ್ ಡೇ ಆಗಿ ಎರಡು ದಿನಗಳ ಮೇಲೆ ಪೋಸ್ಟ್ ಹಾಕಿದ ದೀಪಿಕಾ ಕ್ರಮವನ್ನು ಕೆಲವರು ಖಂಡಿಸಿದ್ದಾರೆ. ಈಗಲಾದ್ರೂ ಪೋಸ್ಟ್ ಹಾಕಿದ್ರಲ್ಲ ಅಂತ ಕೆಲವರು ಸಮಾಧಾನ ಮಾಡ್ಕೊಂಡಿದ್ದಾರೆ.
ಸದ್ದಿಲ್ಲದೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯ ರೈ ಬಚ್ಚನ್, ದಿಢೀರ್ ಬೆಳವಣಿಗೆ ಏನು?
ತಾಯ್ತನ ಆನಂದಿಸುತ್ತಿರುವ ದೀಪಿಕಾ ಪಡುಕೋಣೆ : ದೀಪಿಕಾ ಪಡುಕೋಣೆ, ಪ್ರೆಗ್ನೆಂಟ್ ಇರುವಾಗ ಶೂಟಿಂಗ್ ನಲ್ಲಿ ಬ್ಯುಸಿ ಇದ್ರು. ಕಲ್ಕಿ ಚಿತ್ರದ ಶೂಟಿಂಗ್ ಮುಗಿಸಿದ್ರು. ಸಿಂಘಮ್ ಅಗೇನ್ ಸಿನಿಮಾದಲ್ಲೂ ದೀಪಿಕಾ ಕಾಣಿಸಿಕೊಂಡಿದ್ದರು., ದುವಾ ಜನಿಸಿದ್ಮೇಲೆ ದೀಪಿಕಾ ಕೆಲಸಕ್ಕೆ ಬ್ರೇಕ್ ಪಡೆದಿದ್ದರು. ತಾಯ್ತನವನ್ನು ಎಂಜಾಯ್ ಮಾಡ್ತಿದ್ದ ದೀಪಿಕಾ, ಕಾರ್ಯಕ್ರಮಗಳಲ್ಲಿ, ಸೋಶಿಯಲ್ ಮೀಡಿಯಾದಲ್ಲಿ, ಫೋಟೋ ಶೂಟ್ ನಲ್ಲಿ ಕಾಣಿಸಿಕೊಳ್ತಿದ್ದರು. ದುವಾ ದೊಡ್ಡವಳಾಗ್ತಿದ್ದಂತೆ ದೀಪಿ ಕೆಲಸಕ್ಕೆ ವಾಪಸ್ ಆಗ್ತಿದ್ದಾರೆ. AA22xA6 ದೀಪಿಕಾ ಪಡುಕೋಣೆ ಮುಂಬರುವ ಸಿನಿಮಾ. ದಕ್ಷಿಣದ ಸೂಪರ್ಸ್ಟಾರ್ ಅಲ್ಲು ಅರ್ಜುನ್ ಜೊತೆ ದೀಪಿಕಾ ನಟಿಸಲಿದ್ದಾರೆ. ಈ ಸಿನಿಮಾವನ್ನು ಅಟ್ಲೀ ನಿರ್ದೇಶನ ಮಾಡಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.