ಹೆಸರೇ ಡಿಫರೆಂಟು, ಸೂತ್ರಧಾರಿ ವೆರಿವೆರಿ ಡಿಫರೆಂಟು ಅದರೆ ಸಿಕ್ತು 'A' ಸರ್ಟಿಫಿಕೇಟ್‌!

Published : Oct 04, 2019, 02:55 PM IST
ಹೆಸರೇ ಡಿಫರೆಂಟು, ಸೂತ್ರಧಾರಿ ವೆರಿವೆರಿ ಡಿಫರೆಂಟು ಅದರೆ ಸಿಕ್ತು 'A' ಸರ್ಟಿಫಿಕೇಟ್‌!

ಸಾರಾಂಶ

ಒಂದೇ ಚಿತ್ರ, ತೆಲುಗಿನಲ್ಲಿ ಅದಕ್ಕೆ ಯು/ಎ ಸರ್ಟಿಫಿಕೇಟ್‌ ಸಿಗುತ್ತೆ. ಕನ್ನಡದಲ್ಲಿ ಎ ಸರ್ಟಿಫಿಕೇಟ್‌ ಸಿಗುತ್ತೆ. ಭಾಷಾ ವೈವಿಧ್ಯತೆ ಅಂದ್ರೆ ಇದೇನಾ? ಕರ್ನಾಟಕ ಸೆನ್ಸಾರ್‌ ಮಂಡಳಿ ಧೋರಣೆಯ ವಿರುದ್ಧ ಹೀಗೆ ತಣ್ಣಗೆ ಸಿಟ್ಟು ಹೊರ ಹಾಕಿದವರು ‘ಮೀನಾ ಬಜಾರ್‌’ಚಿತ್ರ ನಿರ್ದೇಶಕ ರಾಣಾ ಸುನೀಲ್‌ ಕುಮಾರ್‌ ಸಿಂಗ್‌.

ಎರಡು ವರ್ಷಗಳಿಂದ ನಾನಾ ಕಾರಣಕ್ಕೆ ಸುದ್ದಿ ಮಾಡುತ್ತಲೇ ಬಂದ ‘ಮೀನಾ ಬಜಾರ್‌’ ಚಿತ್ರವೀಗ ರಿಲೀಸ್‌ಗೆ ರೆಡಿ ಆಗಿದೆ. ಕನ್ನಡದ ಜತೆಗೆ ಇದು ತೆಲುಗಿನಲ್ಲೂ ಬಿಡುಗಡೆ ಆಗುತ್ತಿದೆ. ಎರಡು ಭಾಷೆಯಲ್ಲೂ ಈಗ ಸೆನ್ಸಾರ್‌ ಮುಗಿಸಿದೆ. ತೆಲುಗಿನಲ್ಲಿ ಯು/ಎ ಸರ್ಟಿಫಿಕೇಟ್‌ ಸಿಕ್ಕಿದೆ. ಕನ್ನಡದಲ್ಲಿ ‘ಎ’ ಸರ್ಟಿಫಿಕೇಟ್‌ ಕೊಟ್ಟಿದ್ದಾರಂತೆ. ಇದೆಲ್ಲ ಹೀಗೆ ಸಾಧ್ಯ ಎನ್ನುವುದು ಅವರ ಪ್ರಶ್ನೆ. ಚಿತ್ರದ ಪೋಸ್ಟರ್‌ ಹಾಗೂ ಟೀಸರ್‌ ಲಾಂಚ್‌ ಸಂದರ್ಭದಲ್ಲಿ ಅವರು ತಮ್ಮೊಳಗಿನ ನೋವನ್ನು ತಣ್ಣಗೆ ಹೊರ ಹಾಕಿದರು.

ನಟಿಗೆ ಮೋಸ ಮಾಡಿ ‘ಗೀತಾ’ ಹಿಟ್ ಆಯ್ತಾ? ಶಾನ್ವಿ ಬರೆದ್ರು ಅಸಮಾಧಾನ ಪತ್ರ!

‘ಚಿತ್ರದ ಪೂರ್ಣ ಹೆಸರು ‘ಡಿಡಿಡಿ.ಮೀನಾಬಜಾರ್‌.,’ ಶೀರ್ಷಿಕೆ ಕೊಂಚ ವಿಭಿನ್ನ ಮತ್ತು ವಿಕ್ಷಿಪ್ತವಾಗಿದೆ. ಆದರೂ ತಕ್ಷಣಕ್ಕೆ ಇದು ಡಾಟ್‌.ಕಾಮ್‌ಗೆ ಸಂಬಂಧಿಸಿದ ಚಿತ್ರ ಎಂದುಕೊಳ್ಳುವುದು ಅಷ್ಟೇ ಸಹಜ. ಆ ಗೊಂದಲಕ್ಕೆ ಮೊದಲು ಸ್ಪಷ್ಟನೆ ಕೊಟ್ಟರು ಸುನೀಲ್‌ ಕುಮಾರ್‌ ಸಿಂಗ್‌.‘ ಇದು ಡಾಟ್‌.ಕಾಮ್‌ ಅಲ್ಲ. ಡಾಟ್‌ ಕಾಮಾ. ಕಾಮ ಅಂದ್ರೆ ಸೆಕ್ಸ್‌ ಆಗಬಹುದು, ಬಯಕೆ ಅಂತಲೂ ಇರಬಹುದು. ಇಲ್ಲವೇ ಮುಂದುವರೆದ ಭಾಗ ಅಂತಲೂ ಆಗಬಹುದು. ಚಿತ್ರದ ಕತೆಗೆ ತಕ್ಕಂತೆ ಈ ಟೈಟಲ್‌ ಇಟ್ಟಿದ್ದೇವೆ’ ಎನ್ನುತ್ತಾರೆ ರಾಣಾ ಸುನೀಲ್‌ ಕುಮಾರ್‌ ಸಿಂಗ್‌.

ಸಿಂಗರ್‌ ಚನ್ನಪ್ಪಗೆ 'ಲೈಟಾಗಿ ಲವ್ವಾಗಿದೆ'!

ನಿರ್ದೇಶಕ ಸುನೀಲ್‌ ಕುಮಾರ್‌ ಸಿಂಗ್‌ ಅವರೇ ಈ ಚಿತ್ರದ ಪ್ರಧಾನ ಪಾತ್ರಧಾರಿ. ವೈಭವಿ ಜೋಷಿ ಹಾಗೂ ಮುಂಬೈ ಮೂಲದ ನಟಿ ಶ್ರೀಜಿತ್‌ ಘೋಷ್‌ ನಾಯಕಿಯರು. ಅವರೊಂದಿಗೆ ಆಲಿಷಾ ಕೂಡ ಇದ್ದಾರೆ. ರಾಜೇಶ್‌ ನಟರಂಗ, ಅರವಿಂದ್‌ ರಾವ್‌, ಲಕ್ಷ್ಮಿ ಹೆಗಡೆ, ರೂಪೇಶ್‌ ಕುಮಾರ್‌, ಜೀವಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಶಿವಣ್ಣ ಅಂದ್ರೆ ಫೆಂಟಾಸ್ಟಿಕ್‌, ವೆರಿ ಹಂಬಲ್‌, ವೆರಿ ಸಿನ್ಸಿಯರ್‌:ದ್ವಾರಕೀಶ್‌

ಸಿಂಗ್‌ ಸಿನಿಮಾಸ್‌ನ ನಾಗೇಂದ್ರ ಸಿಂಗ್‌ ಈ ಚಿತ್ರದ ನಿರ್ಮಾಪಕರು. ನಿರ್ದೇಶಕ ಸುನೀಲ್‌ ಕುಮಾರ್‌ ಅವರೇ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಮಣಿಕಾಂತ್‌ ಕದ್ರಿ ಸಂಗೀತ, ಶ್ರೀಕಾಂತ್‌ ಸಂಕಲನ, ಮ್ಯಾಥ್ಯೂ ಛಾಯಾಗ್ರಹಣ ಈ ಚಿತ್ರಕ್ಕಿದೆ. ಆದಿನ ಚಿತ್ರದ ವಿಭಿನ್ನ ಪೋಸ್ಟರ್‌ ಲಾಂಚ್‌ಗೆ ಬೆಂಗಳೂರಿನ ವಿಜಯ್‌ ಕಾಲೇಜು ವಿದ್ಯಾರ್ಥಿಗಳು ಬಂದಿದ್ದರು. ಹಾಗೆಯೇ ಟೀಸರ್‌ ಲಾಂಚ್‌ಗೆ ಮೂವರು ಸಾಫ್ಟ್‌ವೇರ್‌ ಉದ್ಯೋಗಿಗಳ ಬಂದಿದ್ದರು. ಅವರೊಂದಿಗೆ ವಿಭಿನ್ನವಾಗಿ ಪೋಸ್ಟರ್‌ ಮತ್ತು ಟೀಸರ್‌ ಲಾಂಚ್‌ ಮಾಡಿಸಿರುವ ಚಿತ್ರತಂಡ, ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರಲು ಆಲೋಚನೆಯಲ್ಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?