
ಇದು ಗಾಯಕ ಚೆನ್ನಪ್ಪ ಹುದ್ದಾರ್ ಮೊದಲ ಬಾರಿಗೆ ನಾಯಕರಾಗಿ ಅಭಿನಯಿಸುತ್ತಿರುವ ‘ಲೈಟಾಗಿ ಲವ್ವಾಗಿದೆ’ ಚಿತ್ರದ ಪ್ರೇಮ ಪುರಾಣ. ಈ ಚಿತ್ರವೀಗ ಆಡಿಯೋ ಲಾಂಚ್ ಮೂಲಕ ಸದ್ದು ಮಾಡಿದೆ. ಇತ್ತೀಚೆಗಷ್ಟೇ ಈ ಚಿತ್ರದ ಆಡಿಯೋ ಸೀಡಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಿರ್ದೇಶಕ ಸಂತೋಷ್ ಆನಂದರಾಮ್ ಅತಿಥಿಯಾಗಿ ಬಂದು ಆಡಿಯೋ ಲಾಂಚ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ಸರಿಗಮಪ ರುಬೀನಾ ’ಮಕ್ಕಳ ದಸರಾ’ ಮುಖ್ಯ ಅತಿಥಿ!
ಬಹುತೇಕ ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿಕೊಂಡು ನಿರ್ಮಿಸಿ, ನಿರ್ದೇಶಿಸಿದ ಸಿನಿಮಾ ಇದು. ಪ್ರಜ್ವಲ್ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಗುರುನಾಥ್ ಗದಾಡಿ ನಿರ್ಮಿಸಿ, ನಿರ್ದೇಶಿಸಿದ ಚಿತ್ರ. ಸಿಂಗರ್ ಚೆನ್ನಪ್ಪ ಹುದ್ದಾರ್ ಹಾಗೂ ಸಚಿನ್ ಚಿತ್ರದ ನಾಯಕ ನಟರು. ಅವರಿಗಿಲ್ಲಿ ಜೋಡಿ ಆದವರು ದಿವ್ಯಾ ಹಾಗೂ ಶ್ವೇತಾ. ಉಳಿದಂತೆ ಚಿತ್ರದಲ್ಲಿ ಚೈತ್ರಾ ಶೆಟ್ಟಿ, ಅನ್ವಿತಾ ನಾಯರ್, ಸಂಜು ಬಸಯ್ಯ, ಸೋಮಶೇಖರ ಜಾಡರ್ ಹಾಗೂ ಜ್ಯೋತಿ ಮುರೂರ ಸೇರಿದಂತೆ ಹಲವರು ಇದ್ದಾರೆ. ಇದೊಂದು ಪಕ್ಕಾ ಲವ್ ಸ್ಟೋರಿ. ಆಡಿಯೋ ಲಂಚ್ ಮಾಡಿ ಮಾತನಾಡಿದ ನಿರ್ದೇಶಕ ಸಂತೋಷ್ ಆನಂದ ರಾಮ್, ಚಿತ್ರದ ಶೀರ್ಷಿಕೆಯೇ ಮುದ್ದಾಗಿದೆ. ಚಿತ್ರವೂ ಅಷ್ಟೇ ಮುದ್ದಾಗಿ ಬಂದಿದೆ ಎನ್ನುವ ವಿಶ್ವಾಸವಿದೆ ಎಂದರು.
ಬಡತನದಿಂದ ಬಂದ ಸರಿಗಮಪ ಹುಡುಗ ಕರುನಾಡಿನ ಮನೆಮಾತಾದ ಕಥೆ!
‘ಟೈಟಲ್ ನೋಡಿದಾಗ ಇದೊಂದು ಶುದ್ಧ ಲವ್ ಸ್ಟೋರಿ ಎನ್ನುವಂತಿದ್ದರೂ, ಇದು ಕೌಟುಂಬಿಕ ಚಿತ್ರವೂ ಹೌದು. ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟವಾಗುವಂತಹ ಅನೇಕ ಅಂಶಗಳು ಚಿತ್ರದಲ್ಲಿವೆ. ಆ್ಯಕ್ಷನ್ ಜತೆಗೆ ಸೆಂಟಿಮೆಂಟ್ ಅಂಶಗಳಿಗೂ ಹೆಚ್ಚು ಆದ್ಯತೆ ನೀಡಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಹುಟ್ಟುವ ಪ್ರೇಮದಿಂದ ಇಂದಿನ ಯುವಜನತೆ ಹೇಗೆಲ್ಲ ಸಮಸ್ಯೆಗಳಿಗೆ ಸಿಲುಕುತ್ತದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲು ಹೊರಟಿದ್ದೇವೆ’ ಎಂದರು ನಿರ್ಮಾಪಕ ಕಮ್ ನಿರ್ದೇಶಕ ಗುರುನಾಥ್.
'ಸರಿಗಮಪ' ವೇದಿಕೆಯಲ್ಲೇ 'ಐಗಿರಿ ನಂದಿನಿ' ಸವಾಲ್ ಹಾಕಿದ ಮೂಡುವಡೆ ವರ್ಷ ಜ್ಞಾನ!
ಆಕಾಶ್ ಪರ್ವ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸರಿಗಮಪ ರಿಯಾಲಿಟಿ ಶೋನ ಮತ್ತೊಂದು ಅಪ್ಪಟ ಗ್ರಾಮೀಣ ಪ್ರತಿಭೆ ಹಾವೇರಿಯ ಹನುಮಂತ, ಮೊದಲ ಬಾರಿಗೆ ಈ ಚಿತ್ರದ ಮೂಲಕ ಸಿನಿಮಾಕ್ಕೆ ಹಾಡಿದ್ದಾರೆ. ಯುವ ಕಲಾವಿದ ಮಂಜುನಾಥ ರೇಳೆಕರ ಚಿತ್ರದ ನಿರೂಪಣೆಯ ಮಾತಿಗೆ ಧ್ವನಿ ನೀಡಿದ್ದಾರೆ. ಶಿವ ಪುತ್ರ ಹಾಗೂ ವಿನೋದ್ ಛಾಯಾಗ್ರಹಣ ಚಿತ್ರಕ್ಕಿದೆ. ಆರ್ಯ ಸ್ವಾಮಿ ಸಂಕಲನದ ಜತೆಗೆ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.