
ನವದೆಹಲಿ (ಡಿ. 17): ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ನ ಫೇವರೇಟ್ ಕಪಲ್ ಗಳಾಗಿದ್ದಾರೆ.
ದೀಪಿಕಾ -ರಣವೀರ್ ಕಳೆದ 6 ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ರಣವೀರ್ ಗೆ ದೀಪಿಕಾ ಸದಾ ಬೆಂಬಲವಾಗಿ ನಿಂತಿದ್ದಾರೆ. ಇಬ್ಬರ ನಡುವಿನ ಸಂಬಂಧ ತುಂಬಾ ಅನ್ಯೋನ್ಯವಾಗಿದೆ. ರಣವೀರ್ ನೆನೆದು ದೀಪಿಕಾ ಆಗಾಗ ಭಾವುಕರಾಗುತ್ತಿರುತ್ತಾರೆ. ಇದಕ್ಕೆ ನಿನ್ನೆ ನಡೆದ ಅವಾರ್ಡ್ ಕಾರ್ಯಕ್ರಮವೇ ಸಾಕ್ಷಿ. ಪದ್ಮಾವತ್ ಚಿತ್ರಕ್ಕಾಗಿ ರಣವೀರ್ ಗೆ ಬೆಸ್ಟ್ ಆ್ಯಕ್ಟರ್ ಅವಾರ್ಡ್ ಬಂದಾಗ ದೀಪಿಕಾ ಕಣ್ಣಾಲಿಗಳು ತುಂಬಿದ್ದವು. ಈ ಫೋಟೋ ವೈರಲ್ ಆಗುತ್ತಿದೆ.
ಪ್ರಶಸ್ತಿ ಸ್ವೀಕರಿಸಿದ ರಣವೀರ್ ಭಾವುಕರಾಗಿ ಮಾತನಾಡುತ್ತಾ, " ಪದ್ಮಾವತ್ ಚಿತ್ರದಲ್ಲಿ ನನಗೆ ರಾಣಿ ಸಿಗಲಿಲ್ಲ. ಆದರೆ ನಿಜ ಜೀವನದಲ್ಲಿ ರಾಣಿ ಸಿಕ್ಕಿದ್ದಾಳೆ. ಈ ಆರು ವರ್ಷಗಳಲ್ಲಿ ನಾನೇನಾದ್ರೂ ಸಾಧಿಸಿದ್ದರೆ ಅದು ದೀಪಿಕಾಳಿಂದ. ಥ್ಯಾಂಕ್ಯೂ ಸೋ ಮಚ್. ಲವ್ ಯೂ ಬೇಬಿ " ಎಂದು ಹೆಂಡತಿ ಕಡೆ ನೋಡಿದ್ದಾರೆ.
ಈಗ ತಾನೇ ಮದುವೆಯಾಗಿದ್ದರಿಂದ ಭಾರೀ ಸಂಭ್ರಮದಲ್ಲಿದ್ದಾರೆ. ಮದುವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಮದುವೆ ಅನ್ನೋದು ಒಳ್ಳೆಯ ಸಂಗತಿ. ಮದುವೆಯಾದ ಮೇಲೆ ಮ್ಯಾಜಿಕ್ ಆಗಿದೆ. ಒಂದು ರೀತಿ ಪವರ್ ಬಂದಂತಾಗಿದೆ. ಮದುವೆ ನನಗೆ ಎಲ್ಲವನ್ನೂ ಕೊಟ್ಟಿದೆ" ಎಂದು ರಣವೀರ್ ಸಿಂಗ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.