
ದಕ್ಷಿಣ ಭಾರತದ ಚಿತ್ರಗಳಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ ಈ ವರ್ಷ ಸಾಕಷ್ಟು ಮೋಡಿ ಮಾಡಿತ್ತು. 'ಗೀತ ಗೋವಿಂದಂ' ಚಿತ್ರದಲ್ಲಿ ಈ ಇಬ್ಬರ ನಟನೆ ಎಲ್ಲರ ಹುಬ್ಬೇರುವಂತೆ ಮಾಡಿದ್ದು ಸುಳ್ಳಲ್ಲ. ಅದರಲ್ಲಿಯೂ ಇವರಿಬ್ಬರ ಇಂಟಿಮೇಟೆಡ್ ಸೀನ್‌ನಿಂದಾನೇ ರಶ್ಮಿಕಾ-ರಕ್ಷಿತ್ ನಿಶ್ಚಿತಾರ್ಥ ಬ್ರೇಕ್ ಅಪ್ ಆಯಿತೆಂಬ ಗಾಳಿ ಸುದ್ದಿಯೂ ಹರಿದಾಡಿತ್ತು.
ಆಮೇಲೆ ದೇವರಕೊಂಡ ರಕ್ಷಿತ್ ಅವರನ್ನು ಹೊಗಳಿ, ಸಂಬಂಧ ಸರಿ ಮಾಡಲು ತಾವು ಸಿದ್ಧವಾಗಿರುವುದಾಗಿಯೂ ಸಂದರ್ಶನವೊಂದರಲ್ಲಿ ಹೇಳಿ ಕೊಂಡಿದ್ದರು. ಇದೀಗ ರಶ್ಮಿಕಾರನ್ನು ವಿಜಯ್ ಹೊಗಳಿದ್ದು ಮತ್ತೆ ಸುದ್ದಿಯಾಗುತ್ತಿದೆ.
ರಶ್ಮಿಕಾ ಮಂದಣ್ಣ ಯಶಸ್ಸಿಗೆ ಈ 5 ಘಟನೆಗಳೇ ಕಾರಣ!
'ಕಾಮ್ರೇಡ್ ರಶ್ಮಿಕಾ, ಕಂಗ್ರಾಜ್ಯುಲೇಷನ್ಸ್. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಗೂಗಲ್ ಆದ ಚೈಲ್ಡ್ ಆಫ್ ದಿ ಇಯರ್ ನಾಯಕಿ ನೀವು. ಅಷ್ಟೇ ಅಲ್ಲದೆ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ಚಿತ್ರದಲ್ಲಿ ನಿಮ್ಮದೇ ಪಾರುಪತ್ಯ. ಹಾಡುಗಳಲ್ಲಿ 1, 4 ಹಾಗೂ 9ನೇ ಸ್ಥಾನ ಪಡೆದಿವೆ. ನನಗೆ ಪಾರ್ಟಿ ಬೇಕು' ಎಂದು ಕೇಳಿ ಕೊಂಡಿದ್ದಾರೆ.
ಕಿಸ್' ನಿಂದಲೇ 'ಕಿರಿಕ್' ಜೋಡಿ ಬ್ರೇಕ್ ಅಪ್ ಆಯ್ತಾ ? ಸತ್ಯ ಬಿಚ್ಚಿಟ್ಟ ದೇವರಕೊಂಡ
ಮೂರು ಕೋಟಿ ವೆಚ್ಚದ ಸಿನಿಮಾ ಚಲೋ ಒಂದು ರೀತಿ ಹೆಸರು ತಂದುಕೊಟ್ಟರೆ, ಗೀತಾ ಗೊವಿಂದಂ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 127.8 ಕೋಟಿ ಗಳಿಸಿ, ಹೆಸರು ಮಾಡಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.