ಅನುಷ್ಕಾ-ಕೊಹ್ಲಿ ಹ್ಯಾಪಿ ಮ್ಯಾರೀಡ್ ಲೈಫ್‌ನ ಸೀಕ್ರೆಟ್ ಇದು!

Published : Dec 17, 2018, 02:19 PM IST
ಅನುಷ್ಕಾ-ಕೊಹ್ಲಿ ಹ್ಯಾಪಿ ಮ್ಯಾರೀಡ್ ಲೈಫ್‌ನ ಸೀಕ್ರೆಟ್ ಇದು!

ಸಾರಾಂಶ

ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಬಾಲಿವುಡ್‌ನ ಫೇವರೇಟ್ ಕಪಲ್ | ಮದುವೆಯಾಗಿ ಒಂದು ವರ್ಷ ಕಳೆದಿದ್ದು ಕೆಲದಿನಗಳ ಹಿಂದೆ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿಕೊಂಡಿದ್ದರು | ಇವರಿಬ್ಬರ ಅನ್ನೋನ್ಯ ದಾಂಪತ್ಯದ ಗುಟ್ಟು ಬಿಚ್ಚಿಟ್ಟರು ಅನುಷ್ಕಾ  

ನವದೆಹಲಿ (ಡಿ. 17): ಅನುಷ್ಕಾ ಶರ್ಮಾ ಸದ್ಯಕ್ಕೆ  ಬಾಲಿವುಡ್ ನ ಮೋಸ್ಟ್ ಸಕ್ಸಸ್ ಫುಲ್ ನಟಿ. ಜಬ್ ಹರಿಮೆಟ್ ಸೆಜಲ್, ಪರಿ, ಹಾಗೂ ಸುಯ್ ಧಾಗಾ ಸಿನಿಮಾ ತೆರೆ ಕಂಡಿದೆ. ಇದು ಹೇಳಿಕೊಳ್ಳುವ ಮಟ್ಟಿಗೆ ಹಿಟ್ ಆಗದಿದ್ದರೂ ಅನುಷ್ಕಾಗೆ ಹೆಸರು ತಂದು ಕೊಟ್ಟದ್ದಂತೂ ಸುಳ್ಳಲ್ಲ. 

ವಿರುಷ್ಕಾ ವೆಡ್ಡಿಂಗ್ ಆ್ಯನಿವರ್ಸರಿ; ಇಲ್ಲಿವೆ ರೊಮ್ಯಾಂಟಿಕ್ ಫೋಟೋಗಳು

ಇತ್ತ ವಿರಾಟ್ ಕೊಹ್ಲಿ ಕ್ರಿಕೆಟ್ ನಲ್ಲಿ ಬ್ಯುಸಿಯಾಗಿದ್ದರು. ಇವರಿಬ್ಬರದ್ದೂ ಮೇಡ್ ಫಾರ್ ಈಚ್ ಅದರ್ ಎನ್ನವಂತಹ ಜೋಡಿ. ಖಾಸಗಿ ಜೀವನವನ್ನು, ಸಾರ್ವಜನಿಕ ಜೀವನವನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಾರೆ. ಈ ಬಗ್ಗೆ ಅನುಷ್ಕಾ ಮಾತನಾಡುತ್ತಾ, ನಾವು ನಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾಗ ಮದುವೆ ಸಹಜ ಎನಿಸಿ ಬಿಡುತ್ತದೆ. ಮದುವೆಯಾದ ಬಳಿಕ ಹೆಣ್ಣು ಮಕ್ಕಳಿಗೆ ಕರಿಯರ್ ಇರಲ್ಲ ಎಂದು ನನಗನಿಸುವುದಿಲ್ಲ. ಈಗಿನ ಕಾಲದಲ್ಲಿ ಮಹಿಳೆಯರು ಮನೆ ಒಳಗೆ, ಹೊರಗೂ ದುಡಿಯುತ್ತಾರೆ. ಮದುವೆ ಒಂದು ಬಂಧನವಲ್ಲ. ಎಂಜಾಯ್ ಮಾಡಿ ಎಂದು ಅನುಷ್ಕಾ ಹೇಳಿದ್ದಾರೆ.

ಕ್ರಿಕೆಟಿಗರ ಹೃದಯ ಗೆದ್ದ ವಿರುಷ್ಕಾ ಜೋಡಿಯ ತ್ಯಾಗ!

ಇನ್ನು ಮುಂದುವರೆಯುತ್ತಾ, ಪ್ರೆಗೆನ್ಸಿ ಬಗೆಗಿನ ರೂಮರ್ ಗಳಿಗೆ ಪ್ರತಿಕ್ರಯಿಸುತ್ತಾ, ಮದುವೆಯಾಗಿದ್ದೇವೆ ಎಂದರೆ ನಂತರ ಮಕ್ಕಳನ್ನು ಮಾಡಿಕೊಳ್ಳಬೇಕೆಂದಿಲ್ಲ. ಗರ್ಭಿಣಿಯಾಗಿದ್ದೇನೆ ಎಂದರೆ ಮುಚ್ಚಿಡಲು ಸಾಧ್ಯವಿಲ್ಲ.ತಿಂಗಳು ಕಳೆದಂತೆ ಗೊತ್ತಾಗುತ್ತದೆ ಎಂದು ಅನುಷ್ಕಾ ಹೇಳಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಹಿಂದೂ ಹೆಸರಿನ ಮೂಲಕವೇ ಚಿತ್ರರಂಗದಲ್ಲಿ ಧೂಳೆಬ್ಬಿಸಿದ ಮುಸ್ಲಿಂ ನಟರು
ಧುರಂಧರದಲ್ಲಿ ರಣವೀರ್ ಲುಕ್‌ ಬದಲಿಸಿದ ಮಾಜಿ ಮಹಿಳಾ ಟೆಕ್ಕಿ, ಯಾರೀಕೆ ಪ್ರೀತಿಶೀಲ್? ದಿನವೊಂದಕ್ಕೆ ಎಷ್ಟು ವೇತನ??