ದೂರದರ್ಶನ ವೀಕ್ಷಕರ ಮನ ಗೆದ್ದಿದ್ದ ರಾಮಾಯಣದ ಶ್ರೀರಾಮ ಇದೀಗ ಕುಟುಂಬ ಸಮೇತ ಸೀರಿಯಲ್ ನೋಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದೂರದರ್ಶನ ವೀಕ್ಷಕರ ಮನ ಗೆದ್ದಿದ್ದ ರಾಮಾಯಣದ ಶ್ರೀರಾಮ ಇದೀಗ ಕುಟುಂಬ ಸಮೇತ ಸೀರಿಯಲ್ ನೋಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದೂರದರ್ಶನದಲ್ಲಿ ಪ್ರಾಸರವಾಗುತ್ತಿದ್ದ ರಾಮಾಯಣ ಇಂದಿನ ಮಕ್ಕಳಿಗೆ ತಿಳಿಯದಿದ್ದರೂ ಹಿಂದಿನವರಿಗೆ ಅಚ್ಚುಮೆಚ್ಚಿನ ಟಿವಿ ಶೋ. ಲಾಕ್‌ಡೌನ್ ಘೋಷಣೆಯಾದ ಬೆನ್ನಲ್ಲೇ ದೂರದರ್ಶನ ರಾಮಾಯಣವನ್ನು ಮರು ಪ್ರಸಾರ ಮಾಡುವುದಾಗಿ ಹೇಳಿ ಇದೀಗ ಪ್ರಸಾರವಾಗುತ್ತಿದೆ. ಆ ರಾಮಾಯಣದಲ್ಲಿ ನಟಿಸಿದ ಶ್ರೀರಾಮ ಈಗ ಮೊಮ್ಮಕ್ಕಳೊಂದಿಗೆ ಕುಳಿತು ರಾಮಾಯಣ ವೀಕ್ಷಿಸಿದ್ದಾರೆ.
undefined
ಅಭಿಮಾನಿಗಳ ಮನವಿಗೆ ಸ್ಪಂದಿಸಿದ ಡಿಡಿ, ಮತ್ತೆ ಹಳೇ ರಾಮಾಯಣ ಶುರು
ನಟ, ನಿರ್ಮಾಪಕ ಹಾಗೆಯೇ ನಿರ್ದೇಶಕರಾಗಿಯೂ ಹೆಸರು ಮಾಡಿದ ಅರುಣ್ ಗೋವಿಲ್ ಅವರು ಮೊಮ್ಮಕ್ಕಳೊಂದಿಎ ಮನೆಯಲ್ಲಿ ಕುಳಿತು ರಾಮಾಯಣ ನೋಡುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳ್ಲಲಿ ವೈರಲ್ ಆಗಿದೆ. ಹಿರಿಯ ನಟ ಅರುಣ್ ಅವರು ಜನರ ಅಚ್ಚುಮೆಚ್ಚಿನ ರಾಮಾಯಣದಲ್ಲಿ ಶ್ರೀರಾಮನಾಗಿ ನಟಿಸಿದ್ದರು. ಇದೀಗ ತಮ್ಮ ಕುಟುಂಬಸ್ಥರೊಂದಿಗೆ ಕುಳಿತು ಆರಂಭದಿಂದಲೇ ಸೀರಿಯಲ್ ನೋಡುತ್ತಿದ್ದಾರೆ. ಇಂಡಿಯನ್ ಟಿಲಿವಿಷನ್ ಚಿರತ್ರೆಯಲ್ಲಿ ಮಹತ್ವ ಸ್ಥಾನ ಪಡೆದಿದ್ದ ದೂರದರ್ಶನದಲ್ಲಿ ಪ್ರಸಾರವಾದ ರಾಮಾಯಣ, ಮಹಾಭಾರತ, ಭ್ಯೋಮ್‌ಕೇಶ್ ಭಕ್ಷಿ, ಸರ್ಕಸ್ ಸೀರಿಯಲ್‌ಗಳು ಈಗ ಮರುಪ್ರಸಾರವಾಗುತ್ತಿದೆ.
ರಾಮ-ಸೀತೆ ಪಾತ್ರಧಾರಿಗೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸಲು ಆಫರ್!
ಈ ಬಗ್ಗೆ ಪ್ರತಿಕ್ರಿಯಿಸಿದ ಅರುಣ್ ಗೋವಿಲ್ ಹಳೆ ಸೀರಿಯಲ್‌ಗಳ ಮರು ಪ್ರಸಾರ ಯಾಕೆ ಮುಖ್ಯ ಎಂಬುದನ್ನು ತಿಳಿಸಿದ್ದಾರೆ. ಹೊಸ ತಲೆಮಾರು ಹಳೆಯ ಸೀರಿಯಲ್ ನೋಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅವರು ರಾಮಾಯಣದ ನೀತಿ ಪಾಠ, ಮೌಲ್ಯಗಳನ್ನು ತಿಳಿದುಕೊಳ್ಳಲು ಇದು ನೆರವಾಗಲಿದೆ. ಇದನ್ನು ಕುಟುಂಬದ ಜೊತೆ ನೋಡುವುದರಿಂದ ಈ ಬಗ್ಗೆ ಚರ್ಚಿಸುವುದಕ್ಕೂ ವೇದಿಕೆ ಸಿಗುತ್ತದೆ. ಅವರಿಗೆ ಸಂದೇಹಗಳಿದ್ದಲ್ಲಿ ಅದನ್ನು ಹಿರಿಯರು ತಿಳಿಸಿಕೊಡಬಹುದು. ಅದೊಂದು ಕೌಟುಂಬಿಕ ಧಾರವಾಹಿ. ಸಂಬಂಧಗಳು ಹೇಗಿರಬೇಕು..? ಹೇಗಿತ್ತು ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಡಲಾಗಿದೆ. ಅದರಲ್ಲಿ ಸಾಕಷ್ಟು ಘನಾತ್ಮಕ ಚಿಂತನೆಗಳಿವೆ. ಈಗ ಲಾಕ್‌ಡೌನ್ ಇದೆ. ಹೊರಗೆ ಎಲ್ಲೂ ಹೋಗುವಂತಿಲ್ಲ. ಹಾಗಾಗಿ ಮನೆಯಲ್ಲೇ ಕುಳಿದು ಸಮಯವನ್ನು ಸರಿಯಾಗಿ ಬಳಸಿಕೊಳ್ಳಬಹುದು.
ಆ ಕಾಲದಲ್ಲಿ ಸೀರಿಯಲ್ ರಾಮ ಸೀತೆಗೆ ಪೂಜೆ, ಮಂಗಳಾರತಿ ಮಾಡಿದ ನಟಿಯರು!
ರಾಮಾಯಣ ಭಾರತದ ಚರಿತ್ರೆಯನ್ನು ಧಾರವಾಹಿ ರೂಪದಲ್ಲಿ ತೋರಿಸಿದ ಸಿರೀಸ್. 1987-1988ರಲ್ಲಿ ಇದು ಪ್ರಸಾರವಾಗಿತ್ತು. ರಮಾನಂದ ಸಾಗರ್ ಅವರು ಈ ಧಾರವಾಹಿಯನ್ನು ಬರೆದು, ನಿರ್ದೇಶನ ಮಾಡಿದ್ದರು. ಇದರಲ್ಲಿ ಸೀತೆಯಾಗಿ ದೀಪಿಕಾ ಚಿಕಾಲಿಯಾ, ಅರವಿಂದ್ ತ್ರಿವೇದಿ ರಾವಣನಾಗಿ, ದಾರಾ ಸಿಂಗ್ ಹನುಮಂತನಾಗಿ ನಟಿಸಿದ್ದರು.