
‘ಮುನ್ಬೆ ವಾ ಯೆನ್ ಅನ್ಬೆ ವಾ..’ ತಮಿಳಿನ ಈ ಜನಪ್ರಿಯ ಗೀತೆಯನ್ನು ಶ್ರೇಯಾ ಘೋಶಾಲ್ ದನಿಯಲ್ಲಿ ಕೇಳಿರುತ್ತೀರಿ. ಈಗ ರ‍್ಯಾಪಿಡ್ ರಶ್ಮಿ ಮಾದಕ ದನಿಯಲ್ಲಿ ಮತ್ತೊಮ್ಮೆ ಕೇಳಬಹುದು.
ಜೊತೆಗೆ ಇದೇ ರಾಗದಲ್ಲಿರುವ ‘ಪಲ್ಲವಿ ಅನುಪಲ್ಲವಿ’ ಚಿತ್ರದ ಜನಪ್ರಿಯ ಗೀತೆ ‘ನಗೂ.. ಎಂದಿದೆ..’ ಎಂಬ ಎಸ್ ಜಾನಕಿ ಹಾಡಿರುವ ಹಾಡನ್ನೂ ಸೊಗಸಾಗಿ ಹಾಡಿದ್ದಾರೆ. ‘ಮಿಕ್ಸ್‌ಡ್ ಸ್ಟ್ರಿಂಗ್ಸ್’ನ ಅನ್ನೋ ಆಲ್ಬಂ ಸೀರೀಸ್ ಅನ್ನು ರ್ಯಾಪಿಡ್ ರಶ್ಮಿ ಯೂಟ್ಯೂಬ್‌ಗೆ ಬಿಡುಗಡೆ ಮಾಡಿದ್ದು, ಇದರಲ್ಲಿ ಅವರು ಹಾಡಿದ ಈ ಎರಡು ಹಾಡುಗಳಿವೆ. ಜನಪ್ರಿಯ ಎಂಟಿವಿ ಕೋಕ್ ಸ್ಟುಡಿಯೋ ಮಾದರಿಯ ಸೆಟ್ಟಿಂಗ್ ನಲ್ಲಿ ಈ ಆಲ್ಬಂ ಚಿತ್ರೀಕರಿಸಲಾಗಿದೆ. ಇದಕ್ಕೆ ಹಿನ್ನೆಲೆ ಸಂಗೀತ ಪ್ರದೀಪ್ ವರ್ಮಾ ಅವರದು.
‘ನಾನು ಆರ್‌ಜೆ ಆಗೋ ಮುಂಚೆ ಸಿಂಗರ್ ಆಗಿದ್ದೆ. ಮಂಜುಳಾ ಗುರುರಾಜ್ ಸಾಧನಾ ಸಂಗೀತ ಶಾಲೆಯ ವಿದ್ಯಾರ್ಥಿನಿ ಆಗಿದ್ದೆ. ಸಿನಿಮಾಗಳಿಗೆ ಟ್ರ್ಯಾಕ್ ಹಾಡಿದ್ದೀನಿ. ಅನೇಕ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದೆ, ಎಸ್‌ಪಿಬಿ, ರಾಘವೇಂದ್ರ ರಾಜ್‌ಕುಮಾರ್ ಅವರ ಮುಂದೆಲ್ಲ ಹಾಡಿದ್ದೀನಿ. ಆರ್‌ಜೆ ಆದಮೇಲೆ ಗಾಯನದ ಕಡೆ ಗಮನ ಕಡಿಮೆ ಆಗಿತ್ತು. ಆದರೆ ಇತ್ತೀಚೆಗೆ ಗಾಯನ ಪ್ರತಿಭೆ ನನ್ನೊಳಗಿರುವಾಗ, ಅದಕ್ಯಾಕೆ ಜನರ ಮುಂದೆ ಪ್ರದರ್ಶಿಸಬಾರದು ಅನ್ನುವ ಯೋಚನೆ ಬಂತು. ಕೋಕ್ ಸ್ಟುಡಿಯೋ ಮಾದರಿಯ ಸೆಟ್ಟಿಂಗ್ ನಲ್ಲಿ ಮೊದಲ ಸೀರೀಸ್ ಹಾಡುಗಳನ್ನು ಚಿತ್ರೀಕರಿಸಿಕೊಂಡೆ’ ಎನ್ನುತ್ತಾರೆ ರಶ್ಮಿ.
ಸೆಲೆಬ್ರಿಟಿಗಳ ಜತೆ ಫ್ಲರ್ಟ್ ಮಾಡೋದು ಇಷ್ಟವಿಲ್ಲ: ಸುಷ್ಮಾ ರಾವ್
ಈ ಸೀರೀಸ್ ಹತ್ತು ದಿನಗಳಿಗೊಮ್ಮೆ, ಒಟ್ಟು ನಾಲ್ಕು ವಾರಗಳ ಕಾಲ ರ‍್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನಲ್‌ನಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಮೊದಲ ಭಾಗ ಪ್ರಸಾರವಾಗಿದ್ದರೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. 28,000ಕ್ಕೂ ಅಧಿಕ ಮಂದಿ ಈ ಆಲ್ಬಂ ವೀಕ್ಷಿಸಿದ್ದಾರೆ. ಮುಂದಿನ ವಾರ ಮುಂದಿನ ಭಾಗ ಬರಲಿದ್ದು ಅದರಲ್ಲಿ ರಶ್ಮಿ ಎರಡು ಭಾವಗೀತೆಗಳನ್ನು ಹಾಡಲಿದ್ದಾರೆ.
‘ಪ್ರತೀ ಸೋಮವಾರ ರಾತ್ರಿ ಎಫ್‌ಬಿಯಲ್ಲಿ ಲೈವ್ ಆರ್ಕೆಸ್ಟ್ರಾವನ್ನೂ ಮಾಡ್ತೀನಿ. ಲಕ್ಷಾಂತರ ಜನ ಇದನ್ನು ನೋಡ್ತಾರೆ. ಕಮೆಂಟ್ ನಲ್ಲಿ ತಮ್ಮಿಷ್ಟದ ಹಾಡು ಯಾವುದು ಅನ್ನೋದನ್ನು ರಿಕ್ವೆಸ್ಟ್ ಮಾಡಿದರೆ ಅದನ್ನೂ ಹಾಡ್ತೀನಿ’ ಅಂತಾರೆ ರಶ್ಮಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.