ಬೈ ಬೈ ಕೊರೋನಾ, ನೀನು ಹೋಗಲೇ ಬೇಕಿದೆ; ವೈರಲ್‌ ಆಯ್ತು ಹಂಸಲೇಖ ಹಾಡು

Published : Apr 01, 2020, 01:48 PM IST
ಬೈ ಬೈ ಕೊರೋನಾ, ನೀನು ಹೋಗಲೇ ಬೇಕಿದೆ; ವೈರಲ್‌ ಆಯ್ತು ಹಂಸಲೇಖ  ಹಾಡು

ಸಾರಾಂಶ

‘ಮಕ್ಕಳೇ ಭಯಪಡಬೇಡಿ, ಕೊರೋನಾ ಒಂದು ಕ್ರಿಮಿ. ಆ ತರಹ ವೈರಸ್‌ಗಳು ಭೂಮಿಗೆ ಅದೆಷ್ಟೋ ಬಂದು ಹೋಗಿವೆ. ಇದು ಸಹ ಬಂದು ಹೋಗುತ್ತೆ. ಹಾಗಾಗಿ ಹೆದರಬೇಡಿ. ಕೊರೋನಾ ಸೆಂಡಪ್‌ ಮಾಡೋಣ, ಬೈ ಬೈ ಹೇಳೋಣ’ ಎಂದು ಹಂಸಲೇಖ ಧೈರ್ಯ ತುಂಬಿದ್ದಾರೆ.

ಬೈ ಬೈ ಕೊರೋನಾ, ನೀನು ಹೋಗಲೇ ಬೇಕಿದೆ, ಗುಡ್‌ ಬೈ ಕೊರೋನಾ ನಿನಗೆ ಬೇರೆ ದಾರಿ ಏನಿದೆ

ಇದು ಹಂಸಲೇಖ ಸಾಹಿತ್ಯ ರಚಿಸಿರುವ ಹಾಡು. ಕೊರೋನಾ ವೈರಸ್‌ ಜಾಗೃತಿ ಕುರಿತ ಈ ಹಾಡು ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸಾಹಿತ್ಯದ ಸಾಲುಗಳಿಗೆ ಹಂಸಲೇಖ ಸಂಗೀತ ನೀಡಿದ್ದರೆ ಪತ್ನಿ ಲತಾ ಹಂಸಲೇಖ ಹಾಗೂ ಪುತ್ರಿ ನಂದಿನಿ ಧ್ವನಿ ನೀಡಿದ್ದಾರೆ. ಹಾಡಿನ ಆರಂಭಕ್ಕೂ ಮುನ್ನ ಇದರ ಉದ್ದೇಶ ಕುರಿತು ಹಂಸಲೇಖ ಮಾತನಾಡಿದ್ದಾರೆ.

‘ಮಕ್ಕಳೇ ಭಯಪಡಬೇಡಿ, ಕೊರೋನಾ ಒಂದು ಕ್ರಿಮಿ. ಆ ತರಹ ವೈರಸ್‌ಗಳು ಭೂಮಿಗೆ ಅದೆಷ್ಟೋ ಬಂದು ಹೋಗಿವೆ. ಇದು ಸಹ ಬಂದು ಹೋಗುತ್ತೆ. ಹಾಗಾಗಿ ಹೆದರಬೇಡಿ. ಕೊರೋನಾ ಸೆಂಡಪ್‌ ಮಾಡೋಣ, ಬೈ ಬೈ ಹೇಳೋಣ’ ಎಂದು ಧೈರ್ಯ ತುಂಬಿದ್ದಾರೆ. ಸದ್ಯಕ್ಕೆ ಈ ಹಾಡು ಯುಟ್ಯೂಬ್‌ನಲ್ಲಿ ಲಭ್ಯವಿದೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Charge Sheet 03-08 Review: ಕೊಲೆ ಪ್ರಕರಣದ ರೋಚಕ ತನಿಖೆ; ‘ಚಾರ್ಜ್ ಶೀಟ್‌’ ಸಿನಿಮಾ ನೋಡಬೇಕಾ?
'ವಿಲನ್ ರೋಲ್'ನ ಲೀಸ್ ತೆಗೆದುಕೊಂಡಿದ್ದಾರಾ ಯಶ್? ಈ ಪ್ರಶ್ನೆಗೆ ಮಾರ್ಮಿಕ ಉತ್ತರ ಇಲ್ಲಿದೆ ನೋಡಿ!