
‘ನಾನು ಮತ್ತು ಉಪೇಂದ್ರ ಅವರು ಬ್ರಹ್ಮ ಚಿತ್ರದ ಮೂಲಕ ಜತೆಯಾದ್ವಿ. ಆ ನಂತರ ಐ ಲವ್‌ಯೂ ಸಿನಿಮಾ ಮಾಡಿದ್ವಿ. ಈ ಎರಡೂ ಚಿತ್ರಗಳ ಯಶಸ್ಸಿನ ನಂತರ ಈಗ ‘ಕಬ್ಜ’ ಶುರುವಾಗುತ್ತಿದೆ. ಮೂರನೇ ಸಿನಿಮಾ ಪಕ್ಕಾ ಹಿಟ್ ಆಗಲಿದೆ. ಆ ನಂಬಿಕೆಯಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಕಬ್ಜ ಸೆಟ್ಟೇರುತ್ತಿದೆ. ಈಗ ಚಿತ್ರದ ಹೆಸರು ಹಾಗೂ ಪೋಸ್ಟರ್ ಮಾತ್ರ ಬಿಡುಗಡೆ ಮಾಡುತ್ತಿದ್ದೇವೆ. ಇದೊಂದು ಪಕ್ಕಾ ಮಾಸ್ ಹಾಗೂ ಆ್ಯಕ್ಷನ್ ಸಿನಿಮಾ’ ಎಂದಷ್ಟೇ ಹೇಳಿದರು ಆರ್ ಚಂದ್ರು.
ಚೀನಾದಲ್ಲಿ ನಿರ್ದೇಶಕನೊಂದಿಗೆ ಅಂಡರ್‌ವರ್ಲ್ಡ್‌ಗೆ ಕಾಲಿಟ್ಟ ಉಪ್ಪಿ!
ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಮರಾಠಿ, ಬೆಂಗಾಲಿ ಭಾಷೆಯಲ್ಲಿ ‘ಕಬ್ಜ’ ಸೆಟ್ಟೇರುತ್ತಿದ್ದು, ನಾಯಕ ನಟರಾಗಿ ಉಪೇಂದ್ರ ಹೊರತಾಗಿ ಬೇರೆ ಯಾರೂ ಇನ್ನೂ ಆಯ್ಕೆ ಆಗಿಲ್ಲ. ನಿರ್ದೇಶನದ ಜತೆಗೆ ನಿರ್ಮಾಪಕರಾಗಿ ಆರ್ ಚಂದ್ರು ಅವರೇ ಇದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ ಎಂಬುದು ಇತ್ತೀಚೆ ಪ್ಯಾಷನ್ ಆಗಿದೆ. ‘ಕೆಜಿಎಫ್’, ‘ಕುರುಕ್ಷೇತ್ರ’ ಹಾಗೂ ‘ಪೈಲ್ವಾನ್’ ಚಿತ್ರಗಳು ಈ ಪ್ಯಾನ್ ಇಂಡಿಯಾ ಉತ್ಸಾಹಕ್ಕೆ ಮತ್ತಷ್ಟುಬಲ ತುಂಬಿವೆ. ಹಾಗೆ ನೋಡಿದರೆ ಆರ್ ಚಂದ್ರು ಅವರ ನಿರ್ದೇಶನದ ಚಿತ್ರಗಳು ತೆಲುಗಿಗೂ ಹೋಗಿದ್ದು, ಅವರೇ ಒಂದು ಚಿತ್ರವನ್ನು ತೆಲುಗಿನಲ್ಲಿ ನಿರ್ದೇಶಿಸಿದ್ದಾರೆ. ಉಪೇಂದ್ರ ಅವರಿಗೆ ಟಾಲಿವುಡ್‌ನಲ್ಲಿ ಮೊದಲಿನಿಂದಲೂ ಅಭಿಮಾನಿ ಬಳಗ ಇದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬಹುಭಾಷೆಯಲ್ಲಿ ‘ಕಬ್ಜ’ ಚಿತ್ರವನ್ನು ಮಾಡಲು ಹೊರಟಿದ್ದಾರೆ ನಿರ್ದೇಶಕರು.
ಇನ್ನೂ ಚಿತ್ರದ ಪೋಸ್ಟರ್‌ದಲ್ಲಿ ಉಪ್ಪಿ ಅವರು ಲಾಂಗ್ ಹಿಡಿದು ರೆಟ್ರೋ ಲುಕ್‌ನಲ್ಲಿ ನಿಂತಿರುವುದು ನೋಡಿದಾಗ ಇದು ‘ಆ ದಿನಗಳ’ ರೌಡಿಸಂ ಕತೆ ಎನ್ನುವುದರಲ್ಲಿ ಅನುಮಾನವಿಲ್ಲ. ಅಲ್ಲದೆ ಭೂಗತ ಲೋಕದ ಕತೆಯನ್ನೇ ‘ಕಬ್ಜ’ ಸಿನಿಮಾ ಹೇಳಲಿದೆ ಎಂಬುದು ಚಿತ್ರತಂಡದ ಮಾಹಿತಿ. ‘ಚಂದ್ರು ಅವರು ಮತ್ತೊಂದು ಹೊಸ ರೀತಿಯ ಕತೆಯೊಂದಿಗೆ ಬರುತ್ತಿದ್ದಾರೆ. ಅವರು ಹೇಳಿದ ಕತೆಯ ಸಾಲು ಚೆನ್ನಾಗಿದೆ’ ಎಂದಷ್ಟೆಉಪ್ಪಿ ಅವರು ಹೇಳಿಕೊಂಡರು.
'51'ರ ಯಂಗ್ ಮ್ಯಾನ್ ಸ್ಯಾಂಡಲ್‌ವುಡ್ ಮಾಸ್ಟರ್ ಮೈಂಡ್!
ರವಿಚಂದ್ರನ್, ಶಿವರಾಜ್‌ಕುಮಾರ್, ಉಪೇಂದ್ರ, ಸುದೀಪ್, ಪುನೀತ್‌ರಾಜ್‌ಕುಮಾರ್, ದರ್ಶನ್ ಹಾಗೂ ಯಶ್ ಅಭಿಮಾನಿ ಸಂಘದ ಅಧ್ಯಕ್ಷರುಗಳು, ಲಹರಿವೇಲು, ವಿತರಕರಾದ ಮೋಹನ್‌ದಾಸ್ ಪೈ, ಮೋಹನ್ ಅವರು ಏಳು ಭಾಷೆಯ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದರು. ಅಂದಹಾಗೆ ಇದು ಟು ಇನ್ ವನ್ ಕಾರ್ಯಕ್ರಮ. ಹೊಸ ಚಿತ್ರದ ಟೈಟಲ್ ಲಾಂಚ್ ಜತೆಗೆ ‘ಐ ಲವ್ ಯು’ ಚಿತ್ರದ ಶತದಿನೋತ್ಸವ ಸಂಭ್ರಮ.
ಹೀಗಾಗಿ ಚಿತ್ರತಂಡಕ್ಕೆ ನೂರು ದಿನಗಳ ಸಂಭ್ರಮದ ನೆನಪಿನ ಕಾಣಿಕೆ ಕೂಡ ನೀಡಿ ಚಂದ್ರು ಖುಷಿಗೊಂಡರು. ‘ಓಂ’ನಲ್ಲಿ ಶಿವಣ್ಣನಿಗೆ ಲಾಂಗ್ ಕೊಟ್ಟು ಗಾಂಧಿನಗರದಲ್ಲಿ ಲಾಂಗ್‌ಗೇ ಲಾಂಗ್ ಲೈಫ್ ಕೊಟ್ಟಉಪೇಂದ್ರ ಅವರೇ ಈಗ ಲಾಂಗ್ ಹಿಡಿದಿದ್ದಾರೆ. ಲಾಂಗು ಮೆಚ್ಚಿಕೊಂಡವರ ಮಚ್ಚಿನ ಕತೆ ಹೇಗಿರುತ್ತದೆಂಬ ಕುತೂಹವಂತೂ ‘ಕಬ್ಜ’ ಹುಟ್ಟು ಹಾಕಿದೆ.
ಪ್ರೇಕ್ಷಕರ ದಿಲ್ ಮೇಲೆ ರಿಯಲ್ ಸ್ಟಾರ್ ಕಬ್ಜ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.