ನಮ್ ಗಣಿ ಈಗ ಹಾಡಿನ ಮೂಡ್‌ನಲ್ಲಿದ್ದಾನೆ. ‘ಯಾಕೋ ಏನೋ ಲೈಫ್‌ನಲ್ಲಿ ಏನು ಆಯ್ತೀಲ್ಲ...’ಅಂತ ರಾಗ ತೆಗೆದಿದ್ದಾನೆ. ಹಾಗಾದ್ರೆ ಗಣಿ ಲೈಫನಲ್ಲಿ ಏನಾಯ್ತು? ಈ ಕುತೂಹಲದ ಪ್ರಶ್ನೆಗೆ ಉತ್ತರ ಬೇಕಿದ್ದರೆ ನೀವು ‘ನಮ್ ಗಣಿ ಬಿಕಾಂ ಪಾಸ್’ ಸಿನಿಮಾ ನೋಡಲೇಬೇಕು.
ಐಶಾನಿ ಶೆಟ್ಟಿ ಹಾಗೂ ಅಭಿಷೇಕ್ ಶೆಟ್ಟಿಅಭಿನಯದ ‘ನಮ್ ಗಣಿ ಬಿಕಾಂ ಪಾಸ್’ ಚಿತ್ರವೀಗ ಹಾಡುಗಳ ಮೂಲಕ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಚಿತ್ರತಂಡವು ಲಹರಿ ಸಂಸ್ಥೆ ಮೂಲಕ ಆಡಿಯೋ ಸೀಡಿ ಹೊರತಂದಿದೆ.
ಸ್ಯಾಂಡಲ್ ವುಡ್ ನಲ್ಲಿ ಜೋರಾಗಿದೆ ‘ನಮ್ ಗಣಿ’ ಸೌಂಡು
ಆಡಿಯೋ ಸೀಡಿ ಬಿಡುಗಡೆ ನೆಪದಲ್ಲಿ ಆ ದಿನ ಚಿತ್ರ ತಂಡವು, ಹಿರಿಯ ನಟ ದೊಡ್ಡಣ್ಣ ಅವರಿಗೆ ಸನ್ಮಾನ ಸಮಾರಂಭ ಆಯೋಜಿಸಿತ್ತು. ಹಿರಿಯ ನಿರ್ದೇಶಕ ದೊರೆ ಭಗವಾನ್, ನಟ ಮುಖ್ಯಮಂತ್ರಿ ಚಂದ್ರು, ಕಲಾ ಗಂಗೋತ್ರಿ ಮಂಜು,ಲಹರಿ ವೇಲು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಮೂರು ಹಾಡುಗಳ ಪ್ರದರ್ಶನ ನಂತರ ಆಡಿಯೋ ಸೀಡಿ ಹೊರ ಬಂತು. ಯುವ ಸಂಗೀತ ನಿರ್ದೇಶಕ ವಿಕಾಸ್ ವಸಿಷ್ಠ ಸಂಗೀತ ಸಂಯೋಜನೆಯ ಹಾಡುಗಳಿಗೆ ವೇದಿಕೆಯಲ್ಲಿದ್ದವರೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದರು. ಆನಂತರ ದೊಡ್ಡಣ್ಣ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಪೂರ್ಣ ಪ್ರಮಾಣದ ನಟಿಯಾದ ಐಶಾನಿ ಶೆಟ್ಟಿ!
ಅಲ್ಲಿ ದೊಡ್ಡಣ್ಣ ಅವರನ್ನು ವಿಶೇಷವಾಗಿ ಗೌರವಿಸಿದ್ದು ನಿರ್ಮಾಪಕ ನಾಗೇಶ್ ಕುಮಾರ್. ಅವರು ‘ನಮ್ ಗಣಿ ಬಿಕಾಂ ಪಾಸ್’ ಚಿತ್ರದ ನಿರ್ಮಾಪಕರು. ಈ ಹಿಂದೆ ಅವರು ‘ಸೆಕೆಂಡ್ ಹಾಫ್’ ಸಿನಿಮಾ ನಿರ್ಮಿಸಿ ತೆರೆಗೆ ತಂದಿದ್ದರು. ಆ ಸಿನಿಮಾದ ಸೋಲಿನ ಬಳಿಕ ಸಿನಿಮಾ ಸಹವಾಸವೇ ಸಾಕು ಎಂದವರು, ಮತ್ತೆ ನಿರ್ಮಾಣಕ್ಕೆ ಮರಳಿದ್ದಕ್ಕೆ ಕಾರಣ ಚಿತ್ರದ ನಿರ್ದೇಶಕ ಕಮ್ ನಾಯಕ ನಟ ಅಭಿಷೇಕ್ ಹೇಳಿದ್ದ ಕತೆಯಂತೆ. ರೀ ಎಂಟ್ರಿಗೆ ಹಾಗೊಂದು ಕಾರಣವಾಯಿತು ಎನ್ನುವ ಮೂಲಕ ಗಣಿ ಬಿಕಾಂ ಪಾಸ್ ಪಕ್ಕಾ ಮನರಂಜನೆ ಸಿನಿಮಾ ಎಂದರು. ಚಿತ್ರಕ್ಕೆ ಅಭಿಷೇಕ್ ಶೆಟ್ಟಿನಾಯಕ ಕಮ್ ನಿರ್ದೇಶಕ.
‘ ಇದು ಸಿನಿಮಾ ಅಲ್ಲ, ಜೀವನ.ಯಾಕಂದ್ರೆ ನಾಲ್ಕು ವರ್ಷಗಳ ಸುಧೀರ್ಘ ಪಯಣದಲ್ಲಿ ಇಂತಹದೊಂದು ಚಿತ್ರಕ್ಕೆ ನಿರ್ದೇಶಕ ಕಮ್ ನಾಯಕ ನಟನಾಗಿದ್ದೇನೆ. ಇದು ಶುದ್ಧ ಮನರಂಜನೆ ಚಿತ್ರ. ಎಲ್ಲೂ ಡಬಲ್ ಮೀನಿಂಗ್ ಇಲ್ಲ. ಇನ್ನೇನು ಅನವಶ್ಯಕ ಸಂಗತಿ ಹೇಳಿಲ್ಲ. ಈ ಕಾಲದ ಹುಡುಗ- ಹುಡುಗಿಯ ನಡುವಿನ ಒಂದು ಕುತೂಹಲದ ಕತೆ. ಪ್ರೀತಿ, ಪ್ರೇಮದ ಜತೆಗೆ ಪ್ರತಿಯೊಬ್ಬರನ್ನು ಕಾಡಿಸುವ ಒಂದು ಸಂದೇಶ ಈ ಚಿತ್ರದಲ್ಲಿದೆ’ಎಂದಿದ್ದು ಅಭಿಷೇಕ್ ಶೆಟ್ಟಿ. ಅವರಿಲ್ಲಿ ಓರ್ವ ಪದವೀಧರ. ಕೆಲಸವಿಲ್ಲದ ನಿರುದ್ಯೋಗಿ. ಆತನ ಹತ್ತು ಲಕ್ಷ ಸಂಪಾದಿಸಬೇಕೆಂದು ಹೊರಟಾಗ ಆತನ ಜೀವನದಲ್ಲಾಗುವ ಏರುಪೇರುಗಳನ್ನು ಅವರ ಪಾತ್ರದ ಮೂಲಕ ತೋರಿಸಲಾಗುತ್ತಿದೆಯಂತೆ.
ಬಿಸಿಯೂಟ ತಯಾರಿಕೆಗೆ ಕೆಬಿಸಿಯಲ್ಲಿ 1 ಕೋಟಿ!
ಇದೇ ಮೊದಲು ನಟಿ ಐಶಾನಿ ಶೆಟ್ಟಿಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರಂತೆ. ಎರಡು ಶೇಡ್‌ಗಳಿರುವ ಪಾತ್ರ. ಹಳ್ಳಿ ಹುಡುಗಿ ಮುಗ್ದೆ ಎನ್ನುವುದರ ಜತೆಗೆ ಮನೆಯ ಜವಾಬ್ದಾರಿಯ ವಿವಾಹಿತ ಮಹಿಳೆಯಾಗಿಯೂ ಕಾಣಿಸಿಕೊಂಡಿದ್ದಾರೆ. ಆ ಪಾತ್ರವೇ ವಿಶೇಷ ಎನ್ನುವ ಖುಷಿ ಐಶಾನಿ ಅವರದ್ದು. ಅವರೊಂದಿಗೆ ಚಿತ್ರದಲ್ಲಿ ಪಲ್ಲವಿ ಗೌಡ ಹಾಗೂ ರಚನಾ ದಶರಥ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ.ಸದ್ಯ ಚಿತ್ರ ಆಡಿಯೋ ಲಾಂಚ್ ಮಾಡಿ ಸುದ್ದಿಯಲ್ಲಿದೆ. ರಿಲೀಸ್‌ಗೂ ಸಿದ್ಧತೆ ನಡೆಸಿದೆ. ಬಹುತೇಕ ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆಯಿದೆ. ಸಮಾರಂಭಕ್ಕೆ ಬಂದಿದ್ದ ಅತಿಥಿಗಳೆಲ್ಲ ಚಿತ್ರಕ್ಕೆ ಶುಭ ಹಾರೈಸಿದರು.