ಎರಡು ವರ್ಷದ ಬಳಿಕ ಎರಡು ಶೇಡ್‌ನಲ್ಲಿ ಶಾನ್ವಿ!

By Web Desk  |  First Published Sep 20, 2019, 10:17 AM IST

ಗೋಕಾಕ್‌ ಚಳವಳಿಯ ಹಿನ್ನೆಲೆಗೆ ಕನೆಕ್ಟ್ ಆದ ಕತೆ ಎನ್ನುವ ಕಾರಣಕ್ಕೆ ಆರಂಭದಿಂದ ಸಾಕಷ್ಟುನಿರೀಕ್ಷೆ ಹುಟ್ಟಿಸಿದ ಸಿನಿಮಾ ‘ಗೀತಾ’. ಗಣೇಶ್‌ ಸಿನಿ ಕರಿಯರ್‌ನಲ್ಲಿ ಒಂದು ವಿಭಿನ್ನವಾದ ಸಿನಿಮಾ ಅಂತಲೂ ಸುದ್ದಿ ಆಗಿದೆ. ಇದೇ ತಿಂಗಳು 27ಕ್ಕೆ ಚಿತ್ರ ತೆರೆಗೆ ಬರುತ್ತಿದೆ. ಇದಕ್ಕೆ ಮೂವರು ನಾಯಕಿರು. ಆ ಪೈಕಿ ಚಿನಕುರುಳಿ ಬಹುಭಾಷೆ ತಾರೆ ಶಾನ್ವಿ ಶ್ರೀವಾಸ್ತವ್‌ ಕೂಡ ಒಬ್ಬರು. ಒಂದಷ್ಟುಗ್ಯಾಪ್‌ ನಂತರ ‘ಗೀತಾ’ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುವ ತವಕದಲ್ಲಿರುವ ಶಾನ್ವಿ ಅವರೊಂದಿಗೆ ಚಿತ್ರದ ಕುರಿತು ಮಾತುಕತೆ.


ದೇಶಾದ್ರಿ ಹೊಸ್ಮನೆ

ತೆರೆ ಮೇಲೆ ಕಾಣಿಸಿಕೊಳ್ಳದೆ 2 ವರ್ಷ ಆಯಿತು, ಈ ಗ್ಯಾಪ್‌ ಯಾಕೆ?

Tap to resize

Latest Videos

ಇಷ್ಟುದಿನಗಳ ಕಾಲ ಶೂಟಿಂಗ್‌, ಶೂಟಿಂಗ್‌ ಅಂತಲೇ ಓಡಾಡಿಕೊಂಡಿದ್ದೆ. ಈಗ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳು ತೆರೆಗೆ ಬರುತ್ತಿವೆ. ಇದೇ ತಿಂಗಳು 27ಕ್ಕೆ ‘ಗೀತಾ’ ರಿಲೀಸ್‌. ಆದಾದ ನಂತರ ‘ಅವನೇ ಶ್ರೀಮನ್ನಾರಾಯಣ’. ಇವೆರೆಡೂ ರಿಲೀಸ್‌ ಆದ್ರೆ ಇನ್ನೊಂದು ಲೆವೆಲ್‌ನಲ್ಲಿ ನಾನಿರುವುದು ಗ್ಯಾರಂಟಿ.

ಸದ್ಯಕ್ಕೆ ‘ಗೀತಾ’ ಚಿತ್ರದ ಮೇಲಿನ ನಿಮ್ಮ ನಿರೀಕ್ಷೆ ಏನು?

ಸಿನಿಮಾ ಸುದ್ದಿ ಆಗುವ, ಸದ್ದು ಮಾಡುವ ಎರಡು ವಿಶ್ವಾಸ ನನಗಿದೆ. ಯಾಕಂದ್ರೆ ಇದು ಸ್ಪೆಷಲ್‌ ಸಿನಿಮಾ. ಒಂದೊಳ್ಳೆಯ ಕತೆ, ಅಷ್ಟೇ ಮುದ್ದಾದ ಟೈಟಲ್‌. ಆ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದೆ. ವಿಷ್ಯುವಲ್‌, ಕತೆಯ ನಿರೂಪಣೆ, ಸಂಗೀತ, ಮೇಕಿಂಗ್‌ ಎಲ್ಲವೂ ಚೆನ್ನಾಗಿ ಬಂದಿವೆ. ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಸೇರಿದಂತೆ ಪ್ರತಿಯೊಬ್ಬರ ವೃತ್ತಿಪರತೆ ಚಿತ್ರದ ಪ್ರತಿ ದೃಶ್ಯದಲ್ಲೂ ಎದ್ದು ಕಾಣುತ್ತದೆ.

ಮೋಸ್ಟ್ ಫ್ಯಾಷನೆಬಲ್ ಶಾನ್ವಿ ಶ್ರೀವಾಸ್ತವ್ ಕ್ಯೂಟ್ ಫೋಟೋಗಳು

ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ?

ಪ್ರಿಯಾ ಪಾತ್ರದ ಹೆಸರು. ಎರಡು ಶೇಡ್‌ಗಳಲ್ಲಿರುವ ಬರುವ ಪಾತ್ರ. ಹೀರೋಯಿನ್‌ ಎನ್ನುವ ಇಮೇಜ್‌ ಇರದಿದ್ದರೂ, ಕಥಾ ನಾಯಕನ ಜತೆಗೆ ಸಿನಿಮಾದ ಉದ್ದಕ್ಕೂ ಕಾಣಿಸಿಕೊಳ್ಳುವಂತಹ ಪಾತ್ರ. ಸಿಕ್ಕರೂ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಸಾಧ್ಯವೂ ಇರುವುದಿಲ್ಲ. ಹಾಗಾಗಿ ನಾನು ಈ ಪಾತ್ರವನ್ನು ಒಪ್ಪಿಕೊಂಡೆ. ಪಾತ್ರಕ್ಕೆ ಎಮೋಷನ್‌ ಇದೆ, ಕೋಪವಿದೆ, ನೆಗೆಟಿವ್‌ ಲುಕ್‌ ಇದೆ. ಅದು ಯಾಕಾಗಿ ಎನ್ನುವುದು ಚಿತ್ರ ನೋಡಿದಾಗ ಗೊತ್ತಾಗುತ್ತೆ.

80 ದಶಕದ ಯುವತಿಯರ ಗೆಟಪ್‌ನಲ್ಲಿ ನೀವು ಕಾಣಿಸಿಕೊಂಡಿದ್ದೀರಂತೆ, ಹೌದೆ?

ಅದು ಕತೆಗೆ ಪೂರಕವಾಗಿ ಪ್ಲಾಷ್‌ಬ್ಯಾಕ್‌ನಲ್ಲಿ ಬರುವ ಪಾತ್ರದ ಒಂದು ಶೇಡ್‌. ಕತೆಯ ಸನ್ನಿವೇಶವೇ ಅಲ್ಲಿ ಹಾಗಿದೆ. ಆ ಕತೆಗೆ ಪೂರಕವಾಗಿ ಆ ಪಾತ್ರಕ್ಕೂ ಅಲ್ಲಿ ಹೆಚ್ಚಿನ ಪ್ರಾಮುಖ್ಯತೆಯಿದೆ. ಅಲ್ಲಿ ನಾನು, ಆ ಕಾಲದಲ್ಲಿ ಯುವತಿಯರು ಹೇಗಿರುತ್ತಿದ್ದರೋ ಆ ಪ್ರಕಾರ ತಲೆಗೆ ದಪ್ಪನೆಯ ಕಲರ್‌ಫುಲ್‌ ಹೇರ್‌ ಬ್ಯಾಂಡ್‌, ಕಣ್ಣಿಗೆ ಗಾಢವಾದ ಕಾಜಲ್‌ ಮತ್ತು ಐ ಲೈನರ್‌ ಹಚ್ಚಿಕೊಂಡಿದ್ದೆನೆ. ವಸ್ತ್ರಾಲಂಕಾರವೇ ವಿಶೇಷವಾಗಿದೆ. ಇನ್ನು ಈ ಕಾಲದ ಯುವತಿಯರಂತೆ ಮಾರ್ಡನ್‌ ಹುಡುಗಿ ಆಗಿ ಅಭಿನಯಿಸಿದ್ದು ಅಷ್ಟೇ ಸಂತಸ ನೀಡಿದೆ.

ಈ ಪಾತ್ರದ ತಯಾರಿ, ಸಿದ್ಧತೆ ಹೇಗಿತ್ತು?

ರೆಟ್ರೋ ಲುಕ್‌ ಅಂದಾಗ ಅದು ಆಯಾ ಪ್ರದೇಶಕ್ಕೆ ತಕ್ಕನಾಗಿಯೇ ಇರುತ್ತೆ. ಮೂಲತಃ ನಾನು ಇಲ್ಲಿಯವಳಲ್ಲ. ನಟಿಯಾಗಿ ಇಲ್ಲಿಗೆ ಬಂದವಳು. ಹಾಗಾಗಿ 80 ದಶಕದಲ್ಲಿನ ಇಲ್ಲಿನ ಯುವತಿಯರ ಲುಕ್‌, ಗೆಟಪ್‌ ಹೇಗಿದ್ದವು ಎನ್ನುವುದನ್ನು ಕಲಿಯುವುದಕ್ಕಾಗಿಯೇ ಸಾಕಷ್ಟುಹಳೇ ಸಿನಿಮಾ ನೋಡಿದೆ. ನಿರ್ದೇಶಕರಿಂದಲೂ ಸಾಕಷ್ಟುಔಟ್‌ಪುಟ್‌ ಸಿಕ್ಕವು

ನಟಿ ಶಾನ್ವಿ ಬ್ಯಾಗ್‌ ಸೀಕ್ರೆಟ್ ರಿವೀಲ್ ಮಾಡಿದ ಆ್ಯಂಕರ್ ಅನುಶ್ರೀ!

‘ಗೀತಾ’ ಚಿತ್ರಕ್ಕೆ ನೀವು ಬಂದಿದ್ದು ಹೇಗೆ?

ಒಂದು ರೀತಿ ಆಕಸ್ಮಿಕ. ಚಿತ್ರದಲ್ಲಿರುವುದು ಮೂವರು ನಾಯಕಿಯರ ಪಾತ್ರ. ಹಾಗಾಗಿ ನನ್ನ ಪಾತ್ರಕ್ಕೆ ಆದಾಗಲೇ ಸಾಕಷ್ಟುನಾಯಕಿಯರನ್ನು ಸಂಪರ್ಕ ಮಾಡಲಾಗಿತ್ತಂತೆ. ಮೂವರು ನಾಯಕಿಯರು ಎನ್ನುವ ಕಾರಣದಿಂದಲೇ ಹಲವರು ಅಭಿನಯಿಸಲು ನಿರಾಕರಿಸಿದ್ದರಂತೆ. ಇದೆಲ್ಲ ಆದ ಮೇಲೆ ಒಂದಿನ ಗಣೇಶ್‌ ಸರ್‌ ಕಾಲ್‌ ಮಾಡಿ, ಚಿತ್ರದಲ್ಲಿನ ಪಾತ್ರದ ವಿವರ ನೀಡಿದರು. ಇಂಟರೆಸ್ಟಿಂಗ್‌ ಎನಿಸಿತು. ಭೇಟಿ ಮಾಡಿ ಕತೆ ಕೇಳ್ತೀನಿ ಅಂದೆ. ನಿರ್ದೇಶಕರಾದ ವಿಜಯ್‌ ಸರ್‌, ಕತೆ ಮತ್ತು ಪಾತ್ರದ ಡಿಟೈಲ್ಸ್‌ ಕೊಟ್ಟರು. ಹೀರೋಯಿನ್‌ ಎನ್ನುವುದಕ್ಕಿಂತ ಆ ಪಾತ್ರ ನನಗೆ ಮುಖ್ಯವಾಗಿತ್ತು. ಹಾಗಾಗಿ ಒಪ್ಪಿಕೊಂಡೆ.

ಮೂವರಲ್ಲಿ ನೀವೂ ಒಬ್ಬರು ಅಂದಾಗ, ಇಮೇಜ್‌ ಬಗ್ಗೆ ಯೋಚಿಸಲಿಲ್ಲವೇ?

ಈಗ ಅಂತಹ ಭಯ ಇಲ್ಲ. ಇದು ಮಲ್ಟಿಸ್ಟಾರ್‌ ಸಿನಿಮಾಗಳ ಯುಗ. ಮೇಲಾಗಿ ನನಗೆ ಕ್ಯಾರೆಕ್ಟರ್‌ ಮುಖ್ಯ. ಅದರ ಬಾಹ್ಯ ಇಮೇಜ್‌ ಅಲ್ಲ. ನಟಿಯಾಗಿ ನಾನು ನನ್ನನ್ನು ತೋರಿಸಿಕೊಳ್ಳುವುದಕ್ಕೆ ಈ ಪಾತ್ರ ಹೇಳಿ ಮಾಡಿಸಿದಂತಿತ್ತು. ಸ್ಟೋರಿ ಚೆನ್ನಾಗಿತ್ತು. ಅದಕ್ಕಾಗಿ ಒಪ್ಪಿಕೊಂಡೆ.

ಅಯ್ಯೋ! ರಾಧಾ ಮಿಸ್‌ಗೆ ಟೂ ಬಿಟ್ಟು ಶಾನ್ವಿ ಹಿಂದೆ ಹೊರಟೇ ಬಿಟ್ರು ರಮಣ್?

ಗಣೇಶ್‌ ಜತೆಗೆ ಎರಡನೇ ಸಿನಿಮಾ, ಹೇಗಿತ್ತು ಅವರೊಂದಿಗಿನ ನಟನೆಯ ಅನುಭವ?

ಅವರೊಬ್ಬ ಪರಿಪೂರ್ಣ ನಟ. ಎಂಥದ್ದೇ ಕ್ಲಿಷ್ಟಕರ ಸನ್ನಿವೇಶವಾದರೂ ಸರಿ, ಸಿಂಗಲ್‌ ಟೇಕ್‌ ಗ್ಯಾರಂಟಿ. ಅಂತಹ ನಟರಿಂದ ನೋಡಿ ಕಲಿಯುವುದು ತುಂಬಾ ಇರುತ್ತೆ. ಮೊದಲ ಚಿತ್ರದಲ್ಲಿ ಅಷ್ಟಾಗಿ ಅವರೊಂದಿಗೆ ಅಭಿನಯಿಸಲು ಆಗಿರಲಿಲ್ಲ. ಆದರೆ ಈ ಸಿನಿಮಾದ ಉದ್ದಕ್ಕೂ ಅವರ ಪಾತ್ರದ ಜತೆಗೆ ನಾನಿದ್ದೇನೆ. ಹಾಗಾಗಿ ಚಿತ್ರೀಕರಣದ ಬಹುತೇಕ ದಿನ ನಾವು ಜತೆಯಲ್ಲಿದ್ದೇವು. ಸೆಟ್‌ನಲ್ಲಿದ್ದಾಗ ತುಂಬಾ ತಮಾಷೆ, ಹರಟೆ, ಮಾತು ಇದ್ದೇ ಇರುತ್ತಿದ್ದವು. ಇನ್ನು ಕ್ಯಾಮೆರಾ ಮುಂದೆ ನಿಂತರೆ, ಪಾತ್ರವೇ ಅವರಾಗಿ ನಿಲ್ಲುತ್ತಿದ್ದರು.

 

click me!