ಮತ ಹಾಕುವಾಗ 'ಇವೆಲ್ಲಾ' ಗಮನದಲ್ಲಿರಲಿ: ನಿಮ್ಮ ವೋಟು ದುರ್ಬಳಕೆಯಾಗದಿರಲಿ

Published : Apr 04, 2019, 03:42 PM IST
ಮತ ಹಾಕುವಾಗ 'ಇವೆಲ್ಲಾ' ಗಮನದಲ್ಲಿರಲಿ: ನಿಮ್ಮ ವೋಟು ದುರ್ಬಳಕೆಯಾಗದಿರಲಿ

ಸಾರಾಂಶ

2019ರ ಲೋಕಸಭೆ ಚುನಾವಣೆಗೆ ಸಜ್ಜಾದ ಭಾರತ| ಮತದಾನದ ಮೂಲಕ ಭಾರತದ ಭವಿಷ್ಯ ಬರೆಯಲಿರುವ ಮತದಾರ| ಮತದಾನಕ್ಕೆ ಸಜ್ಜಾಗುವ ಮುನ್ನ ಈ ವಿಷಯಗಳು ಗಮನದಲ್ಲಿರಲಿ| ಚಾಲೆಂಜ್ ವೋಟ್, ಟೆಂಡರ್ ವೋಟ್ ಬಗ್ಗೆ ನಿಮಗೆ ಗೊತ್ತಿರಲೇಬೇಕು| ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಚಾಲೆಂಜ್ ವೋಟ್ ಮೂಲಕ ಮತದಾನ ಮಾಡಬಹುದು|

ಬೆಂಗಳೂರು(ಏ.04): ಲೋಕಸಭೆ ಚುನಾವಣೆಗೆ ಇಡೀ ದೇಶ ಸಜ್ಜಾಗಿದೆ. ರಾಷ್ಟ್ರೀಯ ಹಬ್ಬವಾದ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗಿಯಾಗಲು ಪ್ರತಿಯೊಬ್ಬ ಮತದಾರ ಕಾತರದಿಂದ ಕಾಯುತ್ತಿದ್ದಾನೆ.

ತನ್ನ ಮತದ ಮೂಲಕ ತಾನು ಬಯಸುವ ಸರ್ಕಾರವನ್ನು ರಚಿಸುವ ಅಧಿಕಾರ ಪಡೆದಿರುವ ನಾಗರಿಕ, ತನ್ನ ಮತದ ಸದ್ಬಳಕೆ ಕುರಿತು ಅತ್ಯಂತ ಜಾಗರೂಕನಾಗಿರುತ್ತಾನೆ.

ಈ ಹಿನ್ನೆಲೆಯಲ್ಲಿ ಮತದಾನದ ಮಹತ್ವ, ಮತದಾನದ ಸದ್ಬಳಕೆ ಕುರಿತು, ಭಾರತದ ಚುನಾವಣಾ ಆಯೋಗ ಮತದಾರನಿಗೆ ನಿಯಮಿತವಾಗಿ ಮಾಹಿತಿ ನೀಡುತ್ತಲೇ ಇರುತ್ತದೆ. ಅಲ್ಲದೇ ಚುನಾವಣೆ ಸಮಯದಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಚುನಾವಣಾ ಆಯೋಗ ಅಗತ್ಯ ಅಭಿಯಾನ ಕೈಗೊಂಡಿರುತ್ತದೆ.

ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರಿರದಿದ್ದರೇ ಏನು ಮಾಡಬೇಕು?:

ಬಹುತೇಕ ಮತದಾರರು ಎದುರಿಸುವ ಸಾಮಾನ್ಯ ಸಮಸ್ಯೆ ಎಂದರೆ, ಮತದಾನಕ್ಕೆಂದು ಮತಗಟ್ಟೆಗೆ ಹೋದಾಗ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವುದು.

ಒಂದು ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ಕಾಣಿಸದೇ ಹೋದಾಗ, ಮತಗಟ್ಟೆಯಲ್ಲೇ 'ಚಾಲೆಂಜ್ ವೋಟ್' ಮಾಡಲು ಮತದಾರನಿಗೆ ಅವಕಾಶ ಕಲ್ಪಿಸಲಾಗಿದೆ. ಭಾರತದ ಚುನಾವಣಾ ಆಯೋಗದ ಸೆಕ್ಷನ್ 49A ಸಹಾಯದಿಂದ ಚಾಲೆಂಜ್ ವೋಟ್ ಮಾಡಲು ಅವಕಾಶವಿದೆ.

ಚಾಲೆಂಜ್ ವೋಟ್ ಮಾಡಲು ಮತದಾರ ಮತಗಟ್ಟೆ ಅಧಿಕಾರಿಗೆ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ತೋರಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಚಾಲೆಂಜ್ ವೋಟ್ ಮೂಲಕ ಮತ ಹಾಕಬಹುದು.

ನಿಮ್ಮ ಹೆಸರಲ್ಲಿ ಮತ್ತೋರ್ವ ಮತದಾನ ಮಾಡಿದ್ದರೆ ಏನು ಮಾಡಬೇಕು?:

ಇದೂ ಕೂಡ ಮತದಾರ ಎದುರಿಸುವ ಗಂಭೀರ ಸಮಸ್ಯೆಗಳಲ್ಲಿ ಒಂದು. ಮತದಾನಕ್ಕಾಗಿ ಮತದಾರ ಮತಗಟ್ಟೆಗೆ ಹೋದಾಗ, ಅದಾಗಲೇ ಮತದಾರನ ಹೆಸರಲ್ಲಿ ಮತ್ತೋರ್ವ ವೋಟ್ ಮಾಡಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ.

ಈ ಸಮಯದಲ್ಲಿ ಧೃತಿಗೆಡದೇ 'ಟೆಂಡರ್ ವೋಟ್' ಮೂಲಕ ಮತದಾನ ಮಾಡಬಹುದಾಗಿದೆ. ಟೆಂಡರ್ ವೋಟ್ ಎಂದರೆ ತಾನು ಈ ಮೊದಲು ಮತದಾನ ಮಾಡಿಲ್ಲ ಎಂದು ಸಾಬೀತುಪಡಿಸಿ ತನ್ನ ಹೆಸರಲ್ಲಿ ಅದಾಗಲೇ ಮತದಾನ ಮಾಡಲಾಗಿದ್ದು, ಇದಕ್ಕೆ ಪ್ರತಿಯಾಗಿ ಮತ್ತೆ ಮತದಾನ ಮಾಡುವುದಾಗಿದೆ.

ಅಲ್ಲದೇ ಒಂದು ಮತಗಟ್ಟೆಯಲ್ಲಿ ಶೇ.14ಕ್ಕಿಂತ ಹೆಚ್ಚು ಟೆಂಡರ್ ವೋಟ್ ಮಾಡಲಾಗಿದ್ದರೆ, ಆ ನಿರ್ದಿಷ್ಟ ಮತಗಟ್ಟೆಗೆ ಮತ್ತೊಮ್ಮೆ ಚುನಾವಣೆ ಘೋಷಿಸಲಾಗುತ್ತದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!