ರಾಜ್ಯ ಸಮರ: ಹೊಸಮುಖ ಕಣಕ್ಕಿಳಿಸಿ ಗೆಲ್ಲಲು ಬಿಜೆಪಿ ಸಿದ್ಧತೆ!

By Web DeskFirst Published Mar 15, 2019, 11:36 AM IST
Highlights

ಬಿಜೆಪಿಗೆ ಆಡಳಿತ ವಿರೋಧಿ, ಅಲೆ ಅಂತಃಕಲಹದ ತಲೆನೋವು | ಹೀಗಾಗಿ ಹಳಬರಿಗೆ ಕೊಕ್, ಹೊಸಮುಖಗಳಿಗೆ ಬಿಜೆಪಿ ಮಣೆ? ಉತ್ತ ರ ಪ್ರದೇಶದಿಂದ ಮನೇಕಾ ಗಾಂಧಿ ಹರ್ಯಾಣಕ್ಕೆ ಶಿಫ್ಟ್ ಸಾಧ್ಯತೆ | ಕಾಂಗ್ರೆಸ್, ಚೌಟಾಲಾ ಕುಟುಂಬಗಳಲ್ಲೂ ಒಳಜಗಳ

ಮಹಾಭಾರತ ಸಂಗ್ರಾಮ: ಹರ್ಯಾಣ

ಚಂಡೀಗಢ[ಮಾ.15]: ಕಳೆದ ಸಲ ಮೋದಿ ಅಲೆಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಬಿಜೆಪಿಗೆ ಈ ಸಲ ಹರ್ಯಾಣದಲ್ಲಿ ಆಡಳಿತ ವಿರೋಧಿ ಅಲೆಯ ಬಿಸಿ ತಟ್ಟಿದೆ. ಹೀಗಾಗಿ ಇದರ ಲಾಭವನ್ನು ಗಿಟ್ಟಿಸಲು ಕಾಂಗ್ರೆಸ್, ಐಎನ್‌ಎಲ್‌ಡಿ, ಜೆಜೆಪಿ, ಆಮ್ ಆದ್ಮಿ ಪಾರ್ಟಿ ಹಾಗೂ ಇತರ ಪ್ರತಿಪಕ್ಷಗಳು ಕಾತರವಾಗಿವೆ. ಆದರೆ ವಿಪಕ್ಷಗಳಲ್ಲಿ ಒಗ್ಗಟ್ಟಿನ ಕೊರತೆ ಇದೆ. ಹೀಗಾಗಿ ರಾಜ್ಯದಲ್ಲಿ ಈ ಬಾರಿಯ ಫಲಿತಾಂಶ ಏನಾಗಬ ಹುದು ಎಂಬ ಕುತೂಹಲ ಕೆರಳಿಸಿದೆ.

2014ರಲ್ಲಿ ಹರ್ಯಾಣದ 10 ಸ್ಥಾನಗಳಲ್ಲಿ ಬಿಜೆಪಿ 7ರಲ್ಲಿ ಗೆದ್ದಿದ್ದರೆ, ಓಂಪ್ರಕಾಶ್ ಚೌಟಾಲಾ ಅವರ ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್‌ಎಲ್‌ಡಿ) 2 ಹಾಗೂ ಕಾಂಗ್ರೆಸ್ ಏಕೈಕ ಸ್ಥಾನ ಪಡೆದಿದ್ದವು. ಆದರೆ 2019ರಲ್ಲಿ ಪರಿಸ್ಥಿತಿ ಬದಲಾಗಿದೆ.

ರಾಜ್ಯ ಸಮರ: ಗೋವಾ ಬಿಜೆಪಿಗೆ ಗಣಿಗಾರಿಕೆ ಸವಾಲು

ಹೊಸಮುಖಗಳಿಗೆ ಬಿಜೆಪಿ ಮಣೆ:

5 ವರ್ಷದ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಈ ಬಾರಿ ಸ್ಥಿತಿ ಬದಲಾವಣೆಯಾಗಿದ್ದು, ಆಡಳಿತ ವಿರೋಧಿ ಅಲೆ, ಆಂತರಿಕ ಕಚ್ಚಾಟ ಹಾಗೂ ಭಿನ್ನಾಭಿಪ್ರಾಯದಿಂದ ಬಿಜೆಪಿ ತತ್ತರಿಸಿ ಹೋಗಿದೆ. ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಆಡಳಿತದ ಬಗ್ಗೆ ಬಿಜೆಪಿಯಲ್ಲೇ ಅತೃಪ್ತಿಯಿದೆ. ಹೀಗಾಗಿ ಆಡಳಿತ ವಿರೋಧಿ ಅಲೆಯಿಂದ ಬಚಾವಾಗುವ ಉದ್ದೇಶದಿಂದ ಬಹುತೇಕ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿ ಹೊಸ ಮುಖಗಳಿಗೆ ಟಿಕೆಟ್ ಕೊಡಲು ಬಿಜೆಪಿ ಮುಂದಾಗಿದೆ.

ಈ ಸಲ ಕರ್ನಾಲ್ ಅಥವಾ ಕುರುಕ್ಷೇತ್ರದಲ್ಲಿ ಕೇಂದ್ರ ಸಚಿವೆ ಮನೇಕಾ ಗಾಂಧಿ ಸ್ಪರ್ಧಿಸಬಹುದು ಎಂಬ ಬಲವಾದ ಗುಲ್ಲು ರಾಜ್ಯದಲ್ಲಿ ಎದ್ದಿದೆ. ಮನೇಕಾ ಗಾಂಧಿ ಪಕ್ಕದ ಉತ್ತರಪ್ರದೇಶದಲ್ಲಿನ ಬಿಜೆಪಿ ಸಂಸದರಾಗಿದ್ದರೂ, ತಮ್ಮ ಪೀಲಿಭೀತ್ ಕ್ಷೇತ್ರವನ್ನು ಪುತ್ರ ವರುಣ್ ಗಾಂಧಿ ಅವರಿಗೆ ಬಿಟ್ಟುಕೊಟ್ಟು ಹರ್ಯಾಣದ ಕರ್ನಾಲ್ ಅಥವಾ ಕುರುಕ್ಷೇತ್ರ ದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ರಾಜ್ಯ ಸಮರ: ಈ ಸಲವೂ ಬಿಜೆಪಿಗೆ ಕ್ಲೀನ್ ಸ್ವೀಪ್ ಸಾಧ್ಯವೇ?

ಮನೇಕಾ ಅವರೇನೂ ಹರ್ಯಾಣಕ್ಕೆ ಹೊರಗಿನವರಲ್ಲ. ಅವರ ಹೈನುಗಾರಿಕೆ ತಜ್ಞರಾಗಿದ್ದ ಮುತ್ತಜ್ಜ ದಾತಾರ್ ಸಿಂಗ್ ಅವರು ಕರ್ನಾಲ್‌ನವರೇ. ಹೀಗಾಗಿ ರಾಜ್ಯದಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿ ನೆಲೆ ಸಡಿಲವಾಗದಂತೆ ನೋಡಿಕೊಳ್ಳುವ ಬಿಜೆಪಿ ರಣನೀತಿಯ ಭಾಗವಾಗಿ ಮನೇಕಾ ಹರ್ಯಾಣಕ್ಕೆ ವಲಸೆ ಬರುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಮೂಲಗಳು ಹೇಳಿ

ಕರ್ನಾಲ್‌ನ ಹಾಲಿ ಬಿಜೆಪಿ ಸಂಸದ ಅಶ್ವಿನಿ ಚೋಪ್ರಾ ಅವರು ಪಕ್ಷ ವಿರೋಧಿ ಹೇಳಿಕೆ ನೀಡಿರುವ ಕಾರಣ ಅವರಿಗೆ ಟಿಕೆಟ್ ಸಾಧ್ಯತೆ ಕ್ಷೀಣವಾಗಿದೆ. ಇನ್ನು ಕುರುಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದ ರಾಜ್‌ಕುಮಾರ್ ಸೈನಿ ಅವರು ಲೋಕತಂತ್ರ ಸುರಕ್ಷಾ ಪಾರ್ಟಿ ಎಂಬ ಹೊಸ ಪಕ್ಷ ಹುಟ್ಟುಹಾಕಿದ್ದಾರೆ. ಹೀಗಾಗಿ ತೆರವಾಗುವ ಈ ಎರಡು ಕ್ಷೇತ್ರದಲ್ಲಿ ಒಂದು ಮನೇಕಾ ಪಾಲಾಗಲಿವೆ ಎನ್ನಲಾಗಿದೆ.

ಇನ್ನು ಅಂಬಾಲಾ, ರೋಹ್ತಕ್, ಸೋನೇಪತ್, ಹಿಸಾರ್, ಸಿರ್ಸಾ, ಭಿವಾನಿಯಲ್ಲೂ ಬಿಜೆಪಿ ಹೊಸ ಮುಖಗಳಿಗೆ ಮಣೆ ಹಾಕುವ ನಿರೀಕ್ಷೆಯಿದೆ.

ಮರಾಠ ನಾಡಲ್ಲಿ ಮತ್ತೆ ಸಾಂಪ್ರದಾಯಿಕ ಸ್ಪರ್ಧೆ

ಪ್ರತಿಪಕ್ಷಗಳಲ್ಲಿ ಒಗ್ಗಟ್ಟಿನ ಕೊರತೆ:

ಬಿಜೆಪಿ ಪರಿಸ್ಥಿತಿ ಅಷ್ಟು ಚೆನ್ನಾಗಿ ಇಲ್ಲ ಎಂದ ಮಾತ್ರಕ್ಕೆ ಪ್ರತಿಪಕ್ಷಗಳ ಪರಿಸ್ಥಿತಿ ಉತ್ತಮವಾಗಿದೆ ಎಂದೇನೂ ಹೇಳಲಾಗದು. ಇತ್ತೀಚಿನ ಜಿಂದ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿನ ಕೊರತೆಯ ಲಾಭ ಪಡೆದುಕೊಂಡು ಬಿಜೆಪಿ ಗೆದ್ದಿದ್ದೇ ಇದಕ್ಕೆ ನಿದರ್ಶ

ಹಗರಣವೊಂದರಲ್ಲಿ ಜೈಲುಶಿಕ್ಷೆಗೆ ಗುರಿಯಾಗಿರುವ ಮಾಜಿ ಮುಖ್ಯಮಂತ್ರಿ ಓಂಪ್ರಕಾಶ್ ಚೌಟಾಲಾ ಅವರ ಕುಟುಂಬದಲ್ಲಿ ಒಡಕು ಉಂಟಾಗಿದ್ದು, ಅವರ ಪುತ್ರರಾದ ಅಜಯ್ ಚೌಟಾಲಾ ಹಾಗೂ ದುಷ್ಯಂತ್ ಚೌಟಾಲಾ ಬೇರೆಬೇರೆಯಾಗಿದ್ದಾರೆ. ಓಂಪ್ರಕಾಶ್ ಚೌಟಾಲಾ ಸ್ಥಾಪಿತ ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) ಈಗ ಇಬ್ಭಾಗವಾಗಿದ್ದು, ದುಷ್ಯಂತ್ ಚೌಟಾಲಾ ‘ಜನನಾಯಕ ಜನತಾ ಪಾರ್ಟಿ’ (ಜೆಜೆಪಿ) ಸ್ಥಾಪಿಸಿಕೊಂಡಿದ್ದಾರೆ. ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಜೆಜೆಪಿಗೆ ಬೆಂಬಲ ಪ್ರಕಟಿಸಿದೆ.

ಲೋಕಸಭಾ ಚುನಾವಣೆ : ಇಲ್ಲಿನ ಚದುರಂಗದಾಟದಲ್ಲಿ ಬಿಜೆಪಿಗೆ ಮೇಲುಗೈ

ಈ ನಡುವೆ, ಜೆಜೆಪಿ, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಬಿಜೆಪಿ ಎದುರಿ ಸೋಣ ಎಂಬ ಪ್ರಯತ್ನವನ್ನು ಕೇಜ್ರಿವಾಲ್ ಆರಂಭಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜತೆ ಮಾತುಕತೆಗೂ ಅವರು ಯತ್ನಿಸಿದ್ದಾರೆ. ಆದರೆ ‘ಹರ್ಯಾಣದಲ್ಲಿ ನೆಲೆಯನ್ನೇ ಹೊಂದಿರದ ಆಪ್ ಜತೆ ನಮ್ಮ ಹೊಂದಾಣಿಕೆ ಏಕೆ?’ ಎಂಬುದು ಕಾಂಗ್ರೆಸ್ಸಿಗರ ಪ್ರಶ್ನೆ. ಇನ್ನು ಪ್ರಮುಖ ವಿಪಕ್ಷವಾಗಿರುವ ಕಾಂಗ್ರೆಸ್ ಕೂಡ ಆಂತರಿಕ ಕಚ್ಚಾಟದಲ್ಲಿ ನಿರತವಾಗಿದೆ. ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಹಾಗೂ ಹರ್ಯಾಣ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ತನ್ವರ್ ಬಣಗಳ ಮಧ್ಯೆ ಸಂಘರ್ಷ ತಾರಕ ಕ್ಕೇರಿದೆ. ಇತ್ತೀಚೆಗಷ್ಟೇ ಹೂಡಾ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ತನ್ವರ್ ಬದಲಿಸಲು ಆಗ್ರಹಿಸಿದ್ದಾರೆ. ಇದು ಟಿಕೆಟ್ ಹಂಚಿಕೆಯನ್ನು ವಿಳಂಬ ಮಾಡಿದೆ

ಇನ್ನು ಕಾಂಗ್ರೆಸ್ಸಿಗರ ಪಟ್ಟಿಯಲ್ಲಿ ನವೀನ್ ಜಿಂದಾಲ್ (ಕುರುಕ್ಷೇತ್ರ), ಕುಮಾರಿ ಸೆಲ್ಜಾ (ಅಂಬಾಲಾ), ದೀಪೇಂದರ್ ಹೂಡಾ (ರೋಹ್ತಕ್) ಹಾಗೂ ಅಶೋಕ್ ತನ್ವರ್ (ಸಿರ್ಸಾ) ಪ್ರಮುಖರಾಗಿದ್ದಾರೆ.

ರಾಜ್ಯ ಸಮರ: ಮಹಾಗಠಬಂಧನಕ್ಕೆ ಮೋದಿ-ನಿತೀಶ್ ಸಡ್ಡು

ಸಂಭಾವ್ಯ ಅಭ್ಯರ್ಥಿಗಳು

*ಮನೇಕಾ ಗಾಂಧಿ (ಬಿಜೆಪಿ) *ನವೀನ್ ಜಿಂದಾಲ್ (ಕಾಂಗ್ರೆಸ್) *ದೀಪೇಂದರ್ ಸಿಂಗ್ ಹೂಡಾ (ಕಾಂಗ್ರೆಸ್) *ರಾವ್ ಇಂದರ್ ಜಿತ್ ಸಿಂಗ್ (ಬಿಜೆಪಿ) *ದುಷ್ಯಂತ ಚೌಟಾಲಾ (ಜೆಜೆಪಿ) *ಕುಮಾರಿ ಸೆಲ್ಜಾ (ಕಾಂಗ್ರೆಸ್) *ಅಶೋಕ್ ತನ್ವರ್ (ಕಾಂಗ್ರೆಸ್)

ಪ್ರಮುಖ ಕ್ಷೇತ್ರಗಳು

*ಕರ್ನಾಲ್ *ಹಿಸಾರ್ *ಸಿರ್ಸಾ *ಫರೀದಾಬಾದ್ *ಗುಡಗಾಂವ್ *ರೋಹ್ತಕ್ *ಕುರುಕ್ಷೇತ್ರ *ಅಂಬಾಲಾ

ರಾಜ್ಯ ಸಮರ: ಯುಪಿಯಲ್ಲಿ ಈ ಸಲವೂ ಬಿಜೆಪಿ ಮ್ಯಾಜಿಕ್ ಮಾಡುತ್ತಾ?

ಚುನಾವಣಾ ವಿಷಯಗಳು

ಹರ್ಯಾಣದಲ್ಲಿನ ಅತ್ಯಾಚಾರ ಪ್ರಕರಣ ಗಳು ಹಾಗೂ ಕಾನೂನು ಸುವ್ಯವಸ್ಥೆ ಕುರಿತು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ೫ ವರ್ಷದ ಸಾಧನೆ ಮತ್ತು ವೈಫಲ್ಯಗಳು, ಮನೋಹರಲಾಲ್ ಖಟ್ಟರ್ ಸರ್ಕಾರದ ಸಾಧನೆಗಳು ಹಾಗೂ ವೈಫಲ್ಯಗಳು ಸೇರಿದಂತೆ ಇತರೆ ಪ್ರಮುಖ ವಿಷಯಗಳು

click me!