ಹುತಾತ್ಮ ಯೋಧ ಗುರು ಪತ್ನಿಗೆ ಟಿಕೆಟ್ ನೀಡುತ್ತಾ ಈ ಪಕ್ಷ?

By Web DeskFirst Published Mar 15, 2019, 11:06 AM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ವಿವಿಧ ರೀತಿಯ ರಾಜಕೀಯ ಬೆಳವಣಿಗೆಗಳಾಗುತ್ತಿದ್ದು, ಈ ಪಕ್ಷ ಹುತಾತ್ಮ ಯೋಧ ಗುರು ಪತ್ನಿಯವರನ್ನು ಕಣಕ್ಕೆ ಇಳಿಸಲು ಯತ್ನಿಸಿದ್ದಾಗಿ ಹೇಳಿದೆ. 

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ರಾಜ್ಯದ 28  ಕ್ಷೇತ್ರದಲ್ಲಿಯೂ ಸ್ಪರ್ಧಿಸಲಾಗುವುದು ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ನಾಯಕ ಹಾಗೂ ಮಾಜಿ ಸಚಿವ ಮಹೇಶ್ ತಿಳಿಸಿದ್ದಾರೆ. 

ಮುಸ್ಲಿಂ ಮುಖಂಡ ಶರಿಯದ್ ಖಾನ್‌ರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಂತೆ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ಸ್ವತಂತ್ರವಾಗಿ ಪಕ್ಷವು ಕಣಕ್ಕಿಳಿಯಲಿದೆ. 

ಲೋಕಸಭಾ ಚುನಾವಣಾ ಪ್ರಚಾರವು ರಾಜ್ಯದ ಮುಖಂಡರು ಮಾಡಲಿದ್ದು, ಒಮ್ಮೆ ಮಾತ್ರ ಪಕ್ಷದ ಅಧ್ಯಕ್ಷೆ ಮಾಯಾವತಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಏ. 10 ರಂದು ಮೈಸೂರಿನಲ್ಲಿ ಆಯೋಜಿಸು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು. ಉಗ್ರರ ಕೃತ್ಯಕ್ಕೆ ಹುತಾತ್ಮರಾದ ಮಂಡ್ಯ ಜಿಲ್ಲೆಯ ಯೋಧ ಗುರು ಪತ್ನಿ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಯುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದಂತಹ ಯಾವುದೇ ಪ್ರಸ್ತಾಪ ಇಲ್ಲ. 

ಆಕೆಗೆ ಇನ್ನೂ 25 ಆಗಿಲ್ಲ. ಪಕ್ಷದ ಸ್ಥಳೀಯ ನಾಯಕರು ಭಾವನಾತ್ಮಕವಾಗಿ ಪ್ರಯತ್ನ ಪಟ್ಟಿದ್ದು ನಿಜ. ಆದರೆ, ಪಕ್ಷದ ಉನ್ನತ ಮಟ್ಟದಲ್ಲಿ ಅಂತಹ ಆಲೋಚನೆಗಳು ಇಲ್ಲ ಎಂದು ಹೇಳಿದರು.

click me!