ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!

ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!

Published : Mar 10, 2026, 07:04 PM IST

ಬೆಂಗಳೂರಿನಲ್ಲಿ ಅಕ್ರಮ ಸಂಬಂಧಕ್ಕಾಗಿ ಪತ್ನಿಯೇ ಪತಿಯನ್ನು ಕೊಂದಳು! ಹೃದಯಾಘಾತವೆಂದು ನಾಟಕವಾಡಿ, 20 ದಿನಕ್ಕೆ ಪ್ರಿಯಕರನೊಂದಿಗೆ ಮದುವೆಯಾದಳು. ಈ ಕ್ರೈಂ ಸ್ಟೋರಿಯ ಸತ್ಯ ಬಯಲಾದದ್ದು ಹೇಗೆ? ತಿಳಿಯಿರಿ.

ಪ್ರೀತಿ, ನಂಬಿಕೆ ಮತ್ತು ಸಂಸಾರ ಎಂಬ ಪವಿತ್ರ ಬಂಧಕ್ಕೆ ಕಳಂಕ ತರುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ತನ್ನ ಸುಂದರ ಸಂಸಾರಕ್ಕೆ ತಾನೇ ಬೆಂಕಿ ಹಚ್ಚಿದ ಕಿರಾತಕಿ ಹೆಂಡತಿಯೊಬ್ಬಳು, ಅಕ್ರಮ ಸಂಬಂಧಕ್ಕಾಗಿ ಗಂಡನನ್ನೇ ಮುಗಿಸಿ, ಆತ ಸತ್ತ 20 ದಿನ ಕಳೆಯುವ ಮೊದಲೇ ಮತ್ತೊಬ್ಬನ ಜೊತೆ ಹಸೆಮಣೆ ಏರಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಇದು ಯಾವುದೇ ಸಿನೆಮಾ ಕಥೆಯಲ್ಲ, ಬೆಂಗಳೂರಿನಲ್ಲಿ ನಡೆದ ನೈಜ ಕ್ರೈಮ್ ಸ್ಟೋರಿ!

ಪುಟ್ಟ ಸಂಸಾರದಲ್ಲಿ ಅಕ್ರಮ ಸಂಬಂಧದ ವಿಷಗಾಳಿ:

ಮೃತ ಪರಮೇಶ ಒಬ್ಬ ಬಡ ಮೆಕಾನಿಕ್. ತನ್ನ ಹೆಂಡತಿ ಆಶಾ ಮತ್ತು ಇಬ್ಬರು ಮಕ್ಕಳೊಂದಿಗೆ ಸುಖವಾಗಿಯೇ ಜೀವನ ನಡೆಸುತ್ತಿದ್ದ. ಆರ್ಥಿಕವಾಗಿ ಸ್ವಲ್ಪ ಹಿಂದುಳಿದಿದ್ದರೂ ಪರಮೇಶ ತನ್ನ ಕುಟುಂಬವನ್ನು ಪ್ರೀತಿಯಿಂದಲೇ ಸಲಹುತ್ತಿದ್ದ. ಹೆಂಡತಿ ಆಶಾ ಮದುವೆ ಮನೆಗಳಲ್ಲಿ ತಾಂಬೂಲ ನೀಡುವ ಕೆಲಸಕ್ಕೆ ಹೋಗುತ್ತಿದ್ದಳು. ಆದರೆ, ಇದೇ ಕೆಲಸದ ಸ್ಥಳದಲ್ಲಿ ಆಕೆಗೆ ಒಬ್ಬ ಅಡುಗೆ ಭಟ್ಟನ ಪರಿಚಯವಾಗಿತ್ತು. ಈ ಪರಿಚಯ ದಿನ ಕಳೆದಂತೆ ಅಕ್ರಮ ಸಂಬಂಧಕ್ಕೆ ತಿರುಗಿತು. ಗಂಡನ ಕಣ್ತಪ್ಪಿಸಿ ಪ್ರಿಯಕರನೊಂದಿಗೆ ಲವ್ವಿ-ಡವ್ವಿ ನಡೆಸುತ್ತಿದ್ದ ಆಶಾಗೆ, ತನ್ನ ಸುಖಕ್ಕೆ ಗಂಡ ಪರಮೇಶ ಅಡ್ಡಿಯಾಗಿದ್ದಾನೆ ಎನಿಸತೊಡಗಿತು.

ಹಾರ್ಟ್ ಅಟ್ಯಾಕ್ ನಾಟಕ ಮತ್ತು ಸಮಾಧಿ:

ತನ್ನ ಪ್ರಿಯಕರನ ಜೊತೆ ಸೇರಿ ಪರಮೇಶನನ್ನು ಹತ್ಯೆ ಮಾಡಲು ಆಶಾ ಸಂಚು ರೂಪಿಸಿದಳು. ಒಂದು ರಾತ್ರಿ ಪರಮೇಶ ಗಾಢ ನಿದ್ರೆಯಲ್ಲಿದ್ದಾಗ, ಪ್ರಿಯಕರನನ್ನು ಮನೆಗೆ ಕರೆಸಿಕೊಂಡ ಆಶಾ, ಇಬ್ಬರೂ ಸೇರಿ ಆತನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದರು. ಮರುದಿನ ಬೆಳಗ್ಗೆ ಏನೂ ಅರಿಯದವಳಂತೆ 'ನನ್ನ ಗಂಡನಿಗೆ ಹಾರ್ಟ್ ಅಟ್ಯಾಕ್ ಆಗಿದೆ' ಎಂದು ಚೀರಾಡಿ ನಾಟಕವಾಡಿದಳು. ಸಂಬಂಧಿಕರು ಮತ್ತು ಗೆಳೆಯರು ಇದನ್ನು ನಂಬಿ, ಪರಮೇಶನ ಅಂತ್ಯಕ್ರಿಯೆ ನಡೆಸಿ ಮಣ್ಣು ಮಾಡಿದರು.

ಸಂದೇಹ ಹುಟ್ಟಿಸಿದ 19ನೇ ದಿನದ ಮದುವೆ:

ಯಾವುದೇ ಹೆಣ್ಣುಮಗಳು ಗಂಡ ಸತ್ತಾಗ ಕನಿಷ್ಠ ತಿಂಗಳ ಕಾಲ ಶೋಕದಲ್ಲಿರುತ್ತಾಳೆ. ಆದರೆ ಆಶಾ ಮಾತ್ರ ತನ್ನ ಗಂಡ ಸತ್ತು 20ನೇ ದಿನಕ್ಕೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯೊಂದಿಗೆ ಮದುವೆ ಮಾಡಿಕೊಳ್ಳುತ್ತಾಳೆ. ಇದರಿಂದ ಅನುಮಾನಗೊಂಡ ಮೃತ ಗಂಡನ ಮನೆಯವರು ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಆಗ ಹೂಳಲಾಗಿದ್ದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಜೊತೆಗೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಹೆಂಡತಿ, ಆಕೆಯ ಹೊಸ ಗಂಡ ಹಾಗೂ ಸ್ನೇಹಿತೆಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.

ಮರಣೋತ್ತರ ಪರೀಕ್ಷಾ ವರದಿಯಲ್ಲಿ ಹೃದಯಾಘಾತದ ಸಾವಲ್ಲ, ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬ ಅಂಶ ತಿಳಿದುಬಂದಿದೆ. ಪೊಲೀಸರು ತಮ್ಮದೇ ಸ್ಟೈಲ್‌ನಲ್ಲಿ ಬೆಂಡೆತ್ತಿದಾಗ ಹೆಂಡತಿ ಹಾಗೂ ಆಕೆಯ ಪ್ರಿಯಕರ ಸೇರಿಕೊಂಡು ಗಂಡ ಪರಮೇಶನನ್ನು ಪರಲೋಕಕ್ಕೆ ಕಳಿಸಿದ ಬಗ್ಗೆ ಸತ್ಯವನ್ನು ಬಾಯಿಬಿಟ್ಟಿದ್ದಾರೆ. ಇದೀಗ ಸುಂದರ ಕುಟುಂಬದ ಯಜಮಾನ ಸತ್ತು ಮಸಣ ಸೇರಿದರೆ, ಹೆಂಡತಿ ಅನೈತಿಕ ಸಂಬಂಧಕ್ಕೆ ಬಿದ್ದು, ಗಂಡನನ್ನೇ ಕೊಲೆಗೈದು ಜೈಲು ಸೇರಿದ್ದಾಳೆ.

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more