ಹಿಂದಿ Indian Idol ಸ್ಟೇಜ್‌ ಮೇಲೆ ದಿಯಾ ಹೆಗಡೆ; ಸದ್ಯದಲ್ಲೇ ಸೋನಿ ಟಿವಿಯಲ್ಲಿ ಕನ್ನಡದ ಕಂಪು!

By Shriram Bhat  |  First Published Mar 6, 2024, 5:55 PM IST

ಪುಟಾಣಿ ದಿಯಾ ಹೆಗಡೆ  ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಸರಿಗಮಪ ಸೀಸನ್‌ 19'ರಲ್ಲಿ ಅದ್ಭುತ ಪ್ರದರ್ಶನ ನೀಡಿ ಬಹಳಷ್ಟು ಮೆಚ್ಚುಗೆ ಗಳಿಸಿದ್ದರು. ಗಾಯನ ಮಾತ್ರವಲ್ಲದೇ ಡಾನ್ಸ್‌ ಮಾಡುವ ಮೂಲಕವೂ ಎಲ್ಲರ ಅಚ್ಚುಮೆಚ್ಚಿನ ಗಾಯಕಿ-ನಾಯಕಿ ಆಗಿದ್ದರು.


ಕನ್ನಡ ಕಿರುತೆರೆ ಲೋಕದ ಖ್ಯಾತ ಸಂಗೀತದ ರಿಯಾಲಿಟಿ ಶೋದಲ್ಲಿ ಮಿಂಚಿದ್ದ ಪುಟಾಣಿ ಪ್ರತಿಭೆಯೊಂದು ಇದೀಗ ಹಿಂದಿಯ ರಿಯಾಲಿಟಿ ಶೋಗೂ ಕಾಲಿರಿಸಿದೆ. ಅದು ಬೇರಾರು ಅಲ್ಲ, ದಿಯಾ ಹೆಗಡೆ. ಜೀ ಕನ್ನಡದ ಸರಿಗಮಪ (Zee Kannada Saregamapa) ಸೀಸನ್‌ 19ರಲ್ಲಿ ಮನೆಮಾತಾಗಿದ್ದ ಸಾಗರದ ಪುಟಾಣಿ ದಿಯಾ ಹೆಗಡೆ (Diya Hegde) ಇದೀಗ ರಾಷ್ಟ್ರ ಮಟ್ಟದ ಸಿಂಗಿಂಗ್‌ ವೇದಿಕೆ ಏರಿದ್ದಾಳೆ. ಇಂಡಿಯನ್‌ ಐಡಲ್‌ ಫಿನಾಲೆ ವೇದಿಕೆಯಲ್ಲಿ ಎಲ್ಲರನ್ನು ರಂಜಿಸಿರುವ ದಿಯಾ, ಇದೇ ಮಾರ್ಚ್‌ 9ರಿಂದ ಸೋನಿ ಟಿವಿಯಲ್ಲಿ ಪ್ರಸಾರವಾಗಲಿರುವ 'ಸೂಪರ್‌ ಸ್ಟಾರ್‌ ಸಿಂಗರ್‌ ಸೀಸನ್ 3'ಯಲ್ಲಿ ಸ್ಪರ್ಧಿಯಾಗಿ ಕಣಕ್ಕಿಳಿಯಲಿದ್ದಾಳೆ. 

ಸಂಗೀತ ಮತ್ತು ಡಾನ್ಸ್ ವಿಭಾಗದಲ್ಲಿ ಕನ್ನಡ ಕಿರುತೆರೆ ಲೋಕದಲ್ಲಿ ಸಖತ್ ಮಿಂಚುತ್ತಿರುವ ದಿಯಾ ಹೆಗಡೆ ಸಾಗರದ ಬಂದಗದ್ದೆ ಗ್ರಾಮದವರು. ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ  ಬಂದಗದ್ದೆಯ ಈ ಅಮೋಘ ಪ್ರತಿಭೆ ವೆಂಕಟೇಶ್ ಹೆಗಡ-ಅಪರ್ಣಾ ಹೆಗಡೆ ಪುತ್ರಿ. ದಿಶಾ ಹೆಗಡೆ ಮತ್ತು ದಿಯಾ ಹೆಗಡೆ ಎಂಬ ಅಕ್ಕ-ತಂಗಿಯರಿಬ್ಬರಲ್ಲಿ ಈ ದಿಯಾ ಹೆಗಡೆ ಚಿಕ್ಕವರು. ಈಗ ಸೋನಿ ಟಿವಿಯಲ್ಲಿ ಪ್ರಸಾರ ಕಾಣಲಿರುವ ರಿಯಾಲಿಟಿ ಶೋದಲ್ಲಿ ಭಾಗವಹಿಸಲಿದ್ದಾರೆ. ಅದಕ್ಕೂ ಮೊದಲೇ ಅವರು ಅಲ್ಲಿ ದರ್ಶನ ಮತ್ತು ಪ್ರದರ್ಶನ ನೀಡಿದ್ದಾರೆ. 

Tap to resize

Latest Videos

undefined

ಮಿಸ್‌ ವರ್ಲ್ಡ್ ಆಗಿದ್ದರೂ ಸಿನಿಮಾದಲ್ಲಿ ಮಿಂಚಲಾಗದ ನಟಿ ಈಗ ಸಾಮಾಜಿಕ ಕಾರ್ಯಕರ್ತೆ!

ಮಾರ್ಚ್‌ 9ರಿಂದ (09 March 2024) ಸೂಪರ್‌ ಸ್ಟಾರ್‌ ಸಿಂಗರ್‌ 3 ಶೋ ಶುರುವಾಗಲಿದೆ. ಸೋನಿ ಟಿವಿಯಲ್ಲಿ ಸದ್ಯ ಇಂಡಿಯನ್‌ ಐಡಲ್‌ (Indian Idol)ಸೀಸನ್‌ 14ರ ಗ್ರ್ಯಾಂಡ್‌ ಫಿನಾಲೆ ನಡೆದಿದೆ. ಈ ಶೋನಲ್ಲಿಯೇ ಸೂಪರ್‌ ಸ್ಟಾರ್‌ ಸಿಂಗ್‌ ಸೀಸನ್‌ 3 (Super Star Singer Season 3) ರಲ್ಲಿ ಭಾಗವಹಿಸಲಿರುವ ಪುಟಾಣಿಗಳನ್ನು ರಿವೀಲ್‌ ಮಾಡಿದ್ದಾರೆ. ಆ ಪೈಕಿ ಸಾಗರದ ದಿಯಾ ಹೆಗ್ಡೆ ಸಹ ಕಾಣಿಸಿಕೊಂಡು ಭಾರೀ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಹಿಂದಿನ ಗಾಯನ ಸ್ಪರ್ಧಾ ಕಣಕ್ಕೂ ಕನ್ನಡದ ಪುಟಾಣಿ ಕಾಲಿರಿಸಿದೆ. 

ಅರೆರೆ ಎಂಥ ನಟನೆ, ರಶ್ಮಿಕಾಗೆ ಸಿಕ್ತು ಪುಷ್ಪಾ ಹೀರೋ ಸರ್ಟಿಫಿಕೇಟ್; ಏನಂದ್ರು ಅಲ್ಲು ಅರ್ಜುನ್?

ಈ ಪುಟಾಣಿ ದಿಯಾ ಹೆಗಡೆ  ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಸರಿಗಮಪ ಸೀಸನ್‌ 19'ರಲ್ಲಿ ಅದ್ಭುತ ಪ್ರದರ್ಶನ ನೀಡಿ ಬಹಳಷ್ಟು ಮೆಚ್ಚುಗೆ ಗಳಿಸಿದ್ದರು. ಗಾಯನ ಮಾತ್ರವಲ್ಲದೇ ಡಾನ್ಸ್‌ ಮಾಡುವ ಮೂಲಕವೂ ಎಲ್ಲರ ಅಚ್ಚುಮೆಚ್ಚಿನ ಗಾಯಕಿ-ನಾಯಕಿ ಆಗಿದ್ದರು. ಈ ಪುಟಾಣಿ ದಿಯಾ ಹೆಗಡೆ ಗಾಯನಕ್ಕೆ ಮನಸೋತ ಜಡ್ಜ್‌ಸ್ ಶೋನ ಕೊನೆಯಲ್ಲಿ 'ಬೆಸ್ಟ್‌ ಎಂಟರ್‌ಟೈನರ್‌' ಅವಾರ್ಡ್‌ ನೀಡಿ ಗೌರವಿಸಿದ್ದರು. 

ನಟನಾಗುವುದು ಹಾಗಿರಲಿ, ಡಾನ್ಸ್‌ ಮಾಡಲೂ ಅಸಾಧ್ಯ ಅಂದಿದ್ರು ಡಾಕ್ಟರ್; ಇಂದು ಸೂಪರ್ ಸ್ಟಾರ್!

ಜೀ ಕನ್ನಡದಲ್ಲಿ ಪ್ರಸಾರವಾದ ಸರಿಗಮಪ ಶೋನಲ್ಲಿ ತಮ್ಮ ಗಾಯನದ ಮೂಲಕವೇ ಮಿಂಚು ಹರಿಸಿದ್ದರು. ಇದೀಗ ಇದೇ ಪುಟಾಣಿ ರಾಷ್ಟ್ರೀಯ ಮಟ್ಟದಲ್ಲಿ ಮಿನುಗಿದ್ದಾರೆ. ಸೋನಿ ಟಿವಿಯಲ್ಲಿ ಪ್ರಸಾರವಾದ ಇಂಡಿಯನ್‌ ಐಡಲ್‌ ಸಿಂಗಿಂಗ್‌ ಶೋನ ಫಿನಾಲೆಯಲ್ಲಿ ದಿಯಾ ಹೆಗ್ಡೆ ಸಹ ಗಾಯನದ ಮೂಲಕವೇ ಗಮನ ಸೆಳೆದರು. ಇನ್ಮುಂದೆ ಸೂಪರ್ ಸ್ಟಾರ್ ಸಿಂಗರ್ ಸೀಸನ್ 3ನಲ್ಲಿ ಭಾಗವಹಿಸುವ ಮೂಲಕ ಕಸ್ತೂರಿ ಕನ್ನಡದ ಕಂಪನ್ನು ಮುಂಬೈ ನೆಲದಲ್ಲಿ ಹರಡಲಿದ್ದಾರೆ. ಈಗಾಗಲೇ ದಿಯಾ ಹೆಗಡೆ ತಮ್ಮ ಗಾಯನದ ಮೂಲಕ ಅಲ್ಲಿನ ಜಡ್ಜಸ್‌ಗಳಾದ ಸೋನು ಕಕ್ಕರ್ ಹಾಗು ಶ್ರೇಯಾ ಘೋಷಾಲ್ ಅವರ ಮೆಚ್ಚುಗೆ ಪಡೆದಿದ್ದಾರೆ. 

ಪುಷ್ಪಾ ಹೀರೋ ನಟನೆ ಬಗ್ಗೆ ಅಭಿಪ್ರಾಯ ಹೇಳಿದ ರಶ್ಮಿಕಾ; ಅಲ್ಲು ಅರ್ಜುನ್ ರಿಯಾಕ್ಷನ್ ಏನು?

click me!