ಒಂದೊಂದೇ ಬಟ್ಟೆ ಕಳಚಿ ಲವ್‌ ಮಾಡಬೇಕು, ಅದಕ್ಕಾಗಿ ಅಂಡರ್‌ವೇರ್‌ ನೋಡಬೇಕು ಎಂದ್ರು ಆ ನಿರ್ದೇಶಕ! ಪ್ರಿಯಾಂಕಾ ಹೇಳಿದ್ದೇನು?

By Suvarna News  |  First Published Mar 6, 2024, 5:43 PM IST

ಒಂದೊಂದೇ ಬಟ್ಟೆ ಕಳಚಿ ಲವ್‌ ಮಾಡಬೇಕು, ಅದಕ್ಕಾಗಿ ಅಂಡರ್‌ವೇರ್‌ ನೋಡಬೇಕು ಎಂದಿದ್ದರು  ಆ ನಿರ್ದೇಶಕ ಎನ್ನುತ್ತಲೇ ಭಯಾನಕ ಘಟನೆ ನೆನಪಿಸಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ 
 


’ಆಗಷ್ಟೇ ನಾನು ಬಾಲಿವುಡ್​ಗೆ ಕಾಲಿಟ್ಟಿದ್ದೆ. ಒಂದು ಸಿನಿಮಾದಲ್ಲಿ ಒಪ್ಪಿಕೊಂಡಿದ್ದೆ. ಅದರಲ್ಲಿ ಡ್ಯಾನ್ಸ್ ಮಾಡುವ ದೃಶ್ಯವಿತ್ತು, ಆ ದೃಶ್ಯದಲ್ಲಿ ನಾಯಕನನ್ನು ನಾನು ಮೋಹಿಸಬೇಕಿತ್ತು.  ಆಗ ನಿರ್ದೇಶಕರು ನನ್ನ ಬಳಿ ಬಂದು ನೀವು ಈ ಶೂಟಿಂಗ್‌ ಮಾಡಬೇಕಾದರೆ  ನಿಮ್ಮ ಉಳ ಉಡುಪಗಳನ್ನೆಲ್ಲ ಕಳಚಬೇಕು, ಆದ್ದರಿಂದ ಮೊದಲು ನೀವು ಯಾವ ರೀತಿಯ ಅಂಡರ್‌ವೇರ್‌ ಹಾಕಿದ್ದೀರಿ ಎನ್ನುವುದನ್ನು ​ ನೋಡಬೇಕು ಎಂದು ಹೇಳಿದರು. ನನಗೆ ತುಂಬಾ ಭಯವಾಯಿತು. ಇನ್ನೂ ಎಂಟ್ರಿ ಕೊಟ್ಟಿದ್ದಷ್ಟೇ. ಇದನ್ನು ಕೇಳಿ ಅಳು ಜೊತೆ  ಕೋಪನೂ ಬಂತು. ಏನು ಹೇಳಬೇಕು ಎಂಬುದೇ ಗೊತ್ತಾಗಲಿಲ್ಲ. ಆದರೆ ಒಪ್ಪಲಿಲ್ಲ. ಮರುದಿನವೇ ಆ ಪ್ರಾಜೆಕ್ಟ್​ನಿಂದ ನಾನು ಹೊರನಡೆದೆ. ನನಗೆ ಅದರಲ್ಲಿ ನಟಿಸಲು ಇಷ್ಟವಿಲ್ಲ ಎಂದುಬಿಟ್ಟೆ ಎಂದು ಬಾಲಿವುಡ್‌ ನಟಿ  ಪ್ರಿಯಾಂಕಾ ಚೋಪ್ರಾ  ಹೇಳಿದ್ದಾರೆ. 
 
ಪ್ರಿಯಾಂಕಾ ಚೋಪ್ರಾ ಅವರು ಈಚೆಗೆ ನೀಡಿದ ಸಂದರ್ಶನದಲ್ಲಿ ತಮ್ಮ ನಟನಾ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಆದ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ. ನಿರ್ಮಾಪಕರು ಈ ರೀತಿ ಹೇಳಿದ್ದರು ಎಂದು ಅವರು ಹೇಳಿದರೂ ಆ ಚಿತ್ರದ ಹೆಸರು ಮತ್ತು  ನಿರ್ಮಾಪಕರ ಹೆಸರನ್ನು ಬಹಿರಂಗಪಡಿಸಲಿಲ್ಲ.  ಬಹುಶಃ ಈ ಘಟನೆ ನಡೆದಿದ್ದು 2002 ಅಥವಾ 2003ರಲ್ಲಿ ಇರಬಹುದು. ನಾನು ಈ ಚಿತ್ರದಲ್ಲಿ ನಾಯಕನನ್ನು  ಮೋಹಿಸುವ ರಹಸ್ಯ ಏಜೆಂಟ್ ಆಗಿ ನಟಿಸಬೇಕಿತ್ತು.  ಹುಡುಗಿಯರು ರಹಸ್ಯವಾಗಿ ಹೋದಾಗ ಅದನ್ನೇ ಮಾಡುತ್ತಾರೆ. ಪುರುಷರನ್ನು ಮೋಹಿಸುವ ದೃಶ್ಯದಲ್ಲಿ, ಪ್ರತಿಯೊಂದು ಬಟ್ಟೆಯನ್ನು ತೆಗೆಯುವಂತೆ ನನ್ನನ್ನು ಕೇಳಲಾಯಿತು. ನಾನು ಹೆಚ್ಚಿನ ಬಟ್ಟೆಗಳನ್ನು ಧರಿಸಲು ಬಯಸಿದ್ದೆ. ಆದರೆ ನಿರ್ದೇಶಕರು  'ಇಲ್ಲ, ನಾನು   ಒಳ ಉಡುಪುಗಳನ್ನು ನೋಡಬೇಕಾಗಿದೆ. ಇಲ್ಲದಿದ್ದರೆ ಜನ ಯಾಕೆ ಈ ಸಿನಿಮಾ ನೋಡಬೇಕು? ಎಂದು ಪ್ರಶ್ನಿಸಿದರು.  ಅದೊಂದು ಅಮಾನವೀಯ ಕ್ಷಣ ಎಂದು ನೆನಪಿಸಿಕೊಂಡರು. 

ದುಡ್ಡಿಗಾಗಿ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಬಾಲಿವುಡ್​ ಸ್ಟಾರ್​ಗಳಿಗೆ ಕಂಗನಾ ರಣಾವತ್​ ಟಾಂಗ್​!

Tap to resize

Latest Videos

ಈ ರೀತಿ ನಿರ್ಮಾಪಕರು ಹೇಳಿದ  ಎರಡು ದಿನಗಳ ನಂತರ ಅಲ್ಲಿಂದ ಹೊರಬಂದೆ ಎಂದರು. ‘ನಾನು ಅಂದು ಸುಮ್ಮನೆ ಆ ಸಿನಿ ನಿರ್ಮಾಪಕನ (Producer) ಕಚೇರಿಯಿಂದ ಹೊರಟೆ. ನಿಜಕ್ಕೂ ದಿಗ್ಭ್ರಮೆಯಾಗಿತ್ತು. ಆದರೆ ಈಗಲೂ ಅನ್ನಿಸುತ್ತದೆ, ನಾನು ಅಂದು ಆ ವ್ಯಕ್ತಿಯನ್ನು ಎದುರಿಸಬೇಕಿತ್ತು. ನೀವು ಹೇಳುತ್ತಿರುವುದು ತಪ್ಪು ಎಂದು ಅವರಿಗೆ ಕಠಿಣವಾಗಿ ಹೇಳಬೇಕಿತ್ತು. ಆ ಕ್ಷಣಕ್ಕೆ ಭಯಗೊಂಡು, ಮೌನವಾಗಿ ಇಲ್ಲಿಂದ ದೂರ ನಡೆಯುವುದೇ ಉತ್ತಮ ಎನ್ನಿಸಿಬಿಟ್ಟಿತ್ತು.  ನನಗೆ ಅದರಲ್ಲಿ ನಟಿಸಲು ಇಷ್ಟವಿಲ್ಲ ಎಂದುಬಿಟ್ಟೆ ಎಂದು ಆ ಕರಾಳ ದಿನವನ್ನ ಪ್ರಿಯಾಂಕಾ ರಿವೀಲ್ ಮಾಡಿದ್ದಾರೆ.  

ಅಷ್ಟಕ್ಕೂ, ಕಾಸ್ಟಿಂಗ್​ ​ ಕೌಚ್​ (casting couch) ಎನ್ನುವುದು ಕೆಲ ವರ್ಷಗಳಿಂದ ಸಿನಿರಂಗದಲ್ಲಿ ಬಹಳ ಸದ್ದು ಮಾಡಿದ ಶಬ್ದ. 2018ರಲ್ಲಿ ನಟಿ ಶ್ರುತಿ ಹರಿಹರನ್​ ಅವರು ತಮಗೆ ಆಗಿರುವ ಕಹಿ ಘಟನೆಗಳನ್ನು ಹಂಚಿಕೊಂಡಿದ್ದರು. ನಂತರ ಮೀ ಟೂ ಎಂಬ ದೊಡ್ಡ ಅಭಿಯಾನವೇ ಶುರುವಾಯಿತು. ಅಲ್ಲಿಂದೀಚೆಗೆ ಹಲವು ನಟಿಯರು ಮುನ್ನೆಲೆಗೆ ಬಂದು ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯಗಳ ಕುರಿತು ಹೇಳಿಕೊಂಡರು. ಅಲ್ಲಿಂದ ಮೀ ಟೂ ಹಾಗೂ ಕಾಸ್ಟಿಂಗ್​ ​ ಕೌಚ್​ ಎನ್ನುವುದು ದೊಡ್ಡ ಸ್ವರೂಪ ಪಡೆದುಕೊಂಡಿತು. ನಟನಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿನ ಮಹಿಳೆಯರೂ ಇದರ ಬಗ್ಗೆ ವಿವರಣೆ ನೀಡತೊಡಗಿದರು. ಇದಾದ ಬಳಿಕ ಇತ್ತೀಚಿನ ವರ್ಷಗಳಲ್ಲಿ ಹಲವು ನಟಿಯರು ಈ ಬಗ್ಗೆ ಭಯಾನಕ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದು, ಪ್ರಿಯಾಂಕಾ ಈಗ ವಿಷಯ ಹೇಳಿದ್ದಾರೆ. 

ಕೊನೆಯ ವಿಡಿಯೋ ಮಾಡಿ ಕರ್ನಾಟಕದಲ್ಲಿ ಸಾಯಲು ಹೊರಟಿರುವೆ: ನಟಿ ವಿಜಯಲಕ್ಷ್ಮಿ ಶಾಕಿಂಗ್‌ ಹೇಳಿಕೆ

click me!