ಬ್ರಿಟಿಷ್ ಮೂಲವನ್ನು ಒಪ್ಪಿಕೊಂಡ್ರಾ ಆಲಿಯಾ ಭಟ್; ಮಹೇಶ್ ಭಟ್ ಮಗಳ ಕಥೆ ವಿಚಿತ್ರವಾಗಿದೆ ಅಂದ್ಕೊಂಡ್ರಲ್ವಾ!

Published : Dec 27, 2023, 03:58 PM ISTUpdated : Dec 27, 2023, 04:01 PM IST
ಬ್ರಿಟಿಷ್ ಮೂಲವನ್ನು ಒಪ್ಪಿಕೊಂಡ್ರಾ ಆಲಿಯಾ ಭಟ್; ಮಹೇಶ್ ಭಟ್ ಮಗಳ ಕಥೆ ವಿಚಿತ್ರವಾಗಿದೆ ಅಂದ್ಕೊಂಡ್ರಲ್ವಾ!

ಸಾರಾಂಶ

ನಟಿ ಆಲಿಯಾ ಭಟ್ ಸದ್ಯ ಸಿನಿಮಾ ನಟನೆಯಲ್ಲಿ ಸಖತ್ ಚೂಸಿ ಆಗಿದ್ದಾರೆ. ಬಾಲಿವುಡ್ ನಟ ರಣಬೀರ್ ಕಪೂರ್ ಅವರನ್ನು ಮದುವೆಯಾಗಿರುವ ನಟ ಆಲಿಯಾ ಭಟ್, ಸದ್ಯ ಮಗುವಿನ ತಾಯಿ ಆಗಿದ್ದಾರೆ. 

ಬಾಲಿವುಡ್ ನಟಿ ಆಲಿಯಾ ಭಟ್ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ ತಾವು ಬ್ರಿಟಿಷ್ ಲಿಂಕ್ ಹೊಂದಿರುವುದನ್ನು ಒಪ್ಪಿಕೊಂಡಿದ್ದಾರೆ. ಸಂದರ್ಶಕಿ ಕೇಳಿದ ಪ್ರಶ್ನೆಗೆ ಆಲಿಯಾ ಭಟ್ ಖಚಿತವಾಗಿ ಉತ್ತರ ನೀಡಿದ್ದಾರೆ. 'ಆಲಿಯಾ ಭಟ್ ಇಂಗ್ಲಿಷಿನವರಾ?' ಎಂದು ಕೇಳಿದ ಪ್ರಶ್ನೆಗೆ 'ಯೆಸ್, ನನ್ನ ತಾಯಿ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನವರು (Birmingham), ಆದರೆ ನಾನು ಹುಟ್ಟಿದ್ದು ಹಾಗೂ ಬೆಳೆದಿದ್ದು ಭಾರತದಲ್ಲಿ' ಎಂದಿದ್ದಾರೆ ನಟಿ ಆಲಿಯಾ ಭಟ್ (Alia Bhatt).'ನನ್ನ ತಾಯಿ ಮೂಲಕ ನಾನು ಬ್ರಿಟಿಷ್‌ ಹೌದು' ಎಂದಿದ್ದಾರೆ ನಟಿ ಆಲಿಯಾ. 

'ನಿಮಗೆ ಇಂಗ್ಲೆಂಡ್‌ನವರಂತೆ ಇಂಗ್ಲಿಷ್ ಮಾತನಾಡಲು ಬರುತ್ತದೆಯಲ್ವಾ' ಎಂದು ಕೇಳಿದ ಪ್ರಶ್ನೆಗೆ 'ಹೌದು, ನನ್ನ ಅಜ್ಜಿ ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಿದ್ದರು. ಹೀಗಾಗಿ ನನ್ನ ಅಮ್ಮನ ಮೂಲಕ ನಾನು ಕೂಡ ಕಲಿತು ಇಲ್ಲಿಯವರಂತೆ ಇಂಗ್ಲಿಷ್ ಮಾತನಾಡಬಲ್ಲೆ ಎಂದಿದ್ದಾರೆ ನಟಿ ಆಲಿಯಾ. ಅದೆಷ್ಟೋ ಇಂಟರ್‌ವ್ಯೂಗಳಲ್ಲಿ ನಟಿ ಆಲಿಯಾ ಇಂಗ್ಲೆಂಡ್ ಆಕ್ಸೆಂಟ್‌ನಲ್ಲೇ (acccent)ಮಾತನಾಡಿದ್ದಾರೆ. ಆಕೆಯ ಅಮ್ಮ ಇಂಗ್ಲೆಂಡ್‌ನವರು, ಆಲಿಯಾ ಕೂಡ ಅಲ್ಲಿಯ ಸಿಟಿಜನ್‌ಶಿಪ್ (Citizenship)ಹೊಂದಿದ್ದಾರೆ ಎನ್ನಲಾಗಿದೆ. ನಟಿ ಆಲಿಯಾ ಭಾರತ ಹಾಗೂ ಇಂಗ್ಲೆಂಡ್ ಎರಡೂ ಕಡೆಯ ಪೌರತ್ವ ಹೊಂದಿರುವುದು ವಿಶೇಷ ಸಂಗತಿ. 

ಕತ್ರಿನಾ ಜತೆ ಲಂಡನ್‌ನಲ್ಲಿ ಸುಮಧುರ ಕ್ಷಣಗಳನ್ನು ಕಳೆದಿದ್ದೇನೆ, ಆಕೆ ವಿಶಾಲ ಹೃದಯಿ; ನಟ ಶಾರುಖ್ ಖಾನ್

ನಟಿ ಆಲಿಯಾ ಭಟ್ ಸದ್ಯ ಸಿನಿಮಾ ನಟನೆಯಲ್ಲಿ ಸಖತ್ ಚೂಸಿ ಆಗಿದ್ದಾರೆ. ಬಾಲಿವುಡ್ ನಟ ರಣಬೀರ್ ಕಪೂರ್ ಅವರನ್ನು ಮದುವೆಯಾಗಿರುವ ನಟ ಆಲಿಯಾ ಭಟ್, ಸದ್ಯ ಮಗುವಿನ ತಾಯಿ ಆಗಿದ್ದಾರೆ. ತಾಯ್ತನವನ್ನು ಎಂಜಾಯ್ ಮಾಡುತ್ತಿರುವ ಆಲಿಯಾ ಭಟ್, ಸದ್ಯ ನಟನೆಯಿಂದ ಕೊಂಚ ಬಿಡುವು ಮಾಡಿಕೊಂಡಿದ್ದಾರೆ. ಸದ್ಯ ಅವರ ಪತಿ ನಟ ರಣಬೀರ್ ಕಪೂರ್ ಮಾತ್ರ ಸಿನಿಮಾ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬ್ರಹ್ಮಾಸ್ತ್ರ ಬಳಿಕ ನಟಿ ಆಲಿಯಾ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. 

ಬೇರೊಬ್ಬಳು ಬಾಲಿವುಡ್ ನಾಯಕಿಗೆ ಕೊಕ್ ಕೊಡಿಸಿ ಅನಿಮಲ್ 'ಗೀತಾಂಜಲಿ'ಯಾದ್ರಾ ರಶ್ಮಿಕಾ ಮಂದಣ್ಣ!

ಅಂದಹಾಗೆ, ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ (ಗಂಡ-ಹೆಂಡತಿ) ಕಳೆದ ವರ್ಷ ಬಿಡುಗಡೆಯಾದ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಒಟ್ಟಿಗೇ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ನಟ ರಣಬೀರ್ ಕಪೂರ್ (Ranbir Kapoor) ಹಾಗೂ ನಟಿ ರಶ್ಮಿಕಾ ಮಂದಣ್ಣ ಜೋಡಿ ಅನಿಮಲ್ (Animal) ಚಿತ್ರದಲ್ಲಿ ಒಟ್ಟಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಅನಿಮಲ್ ಚಿತ್ರವು 500 ಕೋಟಿಗೂ ಹೆಚ್ಚು ಗಳಿಕೆ ಮಾಡಿ ಮುನ್ನುಗ್ಗುತ್ತಿದೆ. ಅನಿಮಲ್ ಚಿತ್ರವು ಹಿಟ್ ದಾಖಲಿಸಿದೆ ಎಂಬ ವರದಿ ಬಂದಿದ್ದು, ಇಡೀ ಟೀಮ್ ಸಂತಸಗೊಂಡಿದೆ. ಈ ಮೂಲಕ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‌ ಸಿನಿಜಗತ್ತಿನಲ್ಲಿ ಕೂಡ ಮೋಡಿ ಮಾಡಿದ್ದಾರೆ. 

ಸುಮಲತಾ ಎದುರೇ ಮಾಲಾಶ್ರೀ ಹೇಳಿದ್ರು; ಅಂಬರೀಷ್ ಜತೆ ಸುಮಲತಾ ಬಂದಾಗೆಲ್ಲ ಹೊಟ್ಟೆಕಿಚ್ಚು ಆಗ್ತಿತ್ತು..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?