ಕತ್ರಿನಾ ಜತೆ ಲಂಡನ್‌ನಲ್ಲಿ ಸುಮಧುರ ಕ್ಷಣಗಳನ್ನು ಕಳೆದಿದ್ದೇನೆ, ಬೆಳಿಗ್ಗೆ ಬೇಗ ಎದ್ದು ಬಂದಿದ್ದಳು; ನಟ ಶಾರುಖ್ ಖಾನ್

By Shriram Bhat  |  First Published Dec 27, 2023, 2:42 PM IST

ನಟ ಶಾರುಖ್ ಖಾನ್ ಸದ್ಯ ಡಂಕಿ ಚಿತ್ರದ ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ. 21 ಡಿಸೆಂಬರ್ 2023 ರಂದು ಬಿಡುಗಡೆ ಆಗಿರುವ ಶಾರುಖ್ ಖಾನ್ ನಾಯಕತ್ವದ ಡಂಕಿ ಚಿತ್ರವು ಸಿಕ್ಕಾಪಟ್ಟೆ ಎಂಬಷ್ಟು ನಿರೀಕ್ಷೆ ಮೂಡಿಸಿತ್ತು. 


ಬಾಲಿವುಡ್ ನಟ ಶಾರುಖ್ ಖಾನ್ ಅವರು ನಟಿ ಕತ್ರಿನಾ ಕೈಫ್ ಬಗ್ಗೆ ಮಾತನಾಡಿದ್ದಾರೆ. ಕತ್ರಿನಾ ನನ್ ಬೆಸ್ಟ್ ಫ್ರೆಂಡ್ ಎಂದಿದ್ದಾರೆ ನಟ ಶಾರುಖ್. ಅಷ್ಟೇ ಅಲ್ಲ, ಕತ್ರಿನಾ ಒಳ್ಳೆಯ ಮನಸ್ಸಿನ ವ್ಯಕ್ತಿ, ಅವಳೊಂದಿಗೆ ಟೈಮ್ ಕಳೆಯುವುದು ನಿಜವಾಗಿಯೂ ಯೋಗ್ಯವಾದುದು ಎಂದಿದ್ದಾರೆ ನಟ ಶಾರುಖ್. ಕತ್ರಿನಾ ಬಗ್ಗೆ ಮಾತನಾಡುತ್ತ ಶಾರುಖ್ 'ಆಕೆ ನಿಜವಾಗಿಯೂ ಒಳ್ಳೆಯ ಹಾರ್ಟ್ ಮತ್ತು ಆತ್ಮವಿರುವ ವ್ಯಕ್ತಿ. ಆಕೆಯೊಂದಿಗೆ ನಾನು ಈ ಚಿತ್ರದಲ್ಲಿ ಅಲ್ಲ, ಬದಲಿಗೆ ಲಂಡನ್‌ನಲ್ಲಿ ಕಳೆದ ಕ್ಷಣಗಳು ನಿಜವಾಗಿಯೂ ಸುಮಧುರವಾಗಿದ್ದವು. ಅಲ್ಲಿ ಶೂಟಿಂಗ್‌ನಲ್ಲಿ ಇರುವಾಗ ಆಕೆ ಅಕ್ಷರಶಃ ನನಗೆ ಹತ್ತಿರವಾಗಿದ್ದಳು. 

ನಟಿ ಕತ್ರಿನಾ ಬಗ್ಗೆ ಹೇಳಬೇಕೆಂದರೆ ಆಕೆ ಲಂಡನ್‌ನಲ್ಲಿದ್ದಾಗ ಶೂಟಿಂಗ್ ಟೈಮ್ ಹೊರತಪಡಿಸಿಯೂ ತುಂಬಾ ಕಂಫರ್ಟೇಬಲ್ ಎನಿಸಿದ್ದಳು. ಶೂಟಿಂಗ್ ಮುಗಿದ ಮೇಲೆ ಎಲ್ಲರ ಬಗ್ಗೆ ಕೇರ್ ತೆಗೆದುಕೊಳ್ಳುತ್ತಿದ್ದಳು, ಬೆಳಿಗ್ಗೆ ಬೇಗ ಎದ್ದು ನಮ್ಮ ಜತೆ ಮಾತುಕತೆ ಆಡುತ್ತಿದ್ದಳು. ನನಗೆ ಮನೆಯಿಂದ ಹೊರಗಿದ್ದೇನೆ ಎಂಬ ಚಿಂತೆ ಕಾಡದಂತೆ ನನ್ನ ಫ್ಯಾಮಿಲಿಯಂತೆ ಇದ್ದಳು. ಕತ್ರಿನಾ ನಿಜವಾಗಿಯೂ ಗ್ರೇಟ್ ಹ್ಯೂಮನ್ ಬೀಂಗ್. ಆಕೆ ನನಗೆ ನನ್ನ ಇನ್ನೊಬ್ಬಳು ಫ್ರೆಂಡ್ ಜೂಹಿ ಚಾವ್ಲಾ ಇದ್ದಂತೆ' ಎಂದಿದ್ದಾರೆ ನಟ ಶಾರುಖ್ ಖಾನ್. 

Tap to resize

Latest Videos

ಮುಂಬೈ 'ಗ್ಯಾರೇಜ್‌'ನಲ್ಲಿ ವಾಸವಿದ್ದ ನಟ; ಈಗ ದುಬೈ, ಲಂಡನ್‌, ಅಮೆರಿಕಾದಲ್ಲೂ ಮನೆ, ಹತ್ತು ಕಾರುಗಳು!

ಅಂದಹಾಗೆ, ನಟ ಶಾರುಖ್ ಖಾನ್ ಸದ್ಯ ಡಂಕಿ ಚಿತ್ರದ ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ. 21 ಡಿಸೆಂಬರ್ 2023 ರಂದು ಬಿಡುಗಡೆ ಆಗಿರುವ ಶಾರುಖ್ ಖಾನ್ ನಾಯಕತ್ವದ ಡಂಕಿ ಚಿತ್ರವು ಸಿಕ್ಕಾಪಟ್ಟೆ ಎಂಬಷ್ಟು ನಿರೀಕ್ಷೆ ಮೂಡಿಸಿತ್ತು. ಆದರೆ, ಡಂಕಿ ಚಿತ್ರವು ಓಪನಂಗ್ ಪಡೆಯಲು ವಿಫಲವಾಯಿತು. ಅಷ್ಟೇ ಅಲ್ಲ, 3 ದಿನಗಳಲ್ಲಿ 100 ಕೋಟಿ ಕಲೆಕ್ಷನ್ ಮಾಡಲು ಸಹ ವಿಫಲವಾಯಿತು. ಆದರೆ, ಸಲಾರ್ ಚಿತ್ರವು ಕೇವಲ ಒಂದೇ ದಿನದಲ್ಲಿ ನೂರು ಕೋಟಿ ಕಲೆಕ್ಷನ್ ಮಾಡಿ ಗೆದ್ದು ಬೀಗಿತು. ದಿನದಿನಕ್ಕೂ ಬಾಕ್ಸ್‌ ಆಫೀಸ್ ಕಲೆಕ್ಷನ್‌ನಲ್ಲಿ ಕಳಪೆ ಗಳಿಕೆ ಮಾಡುತ್ತಿರುವ ಡಂಕಿ ಫ್ಲಾಪ್ ಚಿತ್ರವೆಂಬ ಹಣೆಪಟ್ಟಿ ಹಚ್ಚಿಕೊಂಡಿದೆ.

ಸಲಾರ್ ಸಿನಿಮಾದಲ್ಲಿ 'ಅದೊಂದು' ಮಿಸ್ ಆಗ್ಬಿಟ್ಟಿದೆ; 'ಶೌರ್ಯಂಗ ಪರ್ವಂ'ನಲ್ಲಿ ಇರುತ್ತಾ?! 

ಒಟ್ಟಿನಲ್ಲಿ, ಈ ವರ್ಷದ ಶುರುವಿನಲ್ಲಿ ಪಠಾಣ್ ಹಾಗೂ ಜವಾನ್ ಸಿನಿಮಾ ಮೂಲಕ ಭಾರೀ ಯಶಸ್ಸು ಗಳಿಸಿದ್ದ ನಟ ಶಾರುಖ್ ಖಾನ್ ಈಗ ಡಂಕಿ ಮೂಲಕ ಸೋಲಿನ ರುಚಿ ಅನುಭವಿಸಿದ್ದಾರೆ. ಈ ಮೊದಲು 2018ರಿಂದ 2022ರವರೆಗೂ ಸಿನಿಮಾಗಳಿಂದ ದೂರವೇ ಉಳಿದಿದ್ದ ನಟ ಶಾರುಖ್ ಈ ವರ್ಷ 2 ಗೆಲುವು ಹಾಗೂ ಒಂದು ಸೋಲು ನೋಡಿದ್ದಾರೆ. 

click me!