ಆಸ್ಟ್ರೇಲಿಯಾ ಮಕ್ಕಳಿಗೆ ಯಶ್‌ 'ರಾಮಾಯಣ' ದರ್ಶನ ಇಲ್ವಾ? ದೇವ-ದಾನವರ ಯುದ್ಧ ಏಕೆ ನೋಡಲ್ಲ? ಇದೇನಿದು ನಿಯಮ..?

Published : Jul 18, 2026, 08:20 PM IST
Ramayana

ಸಾರಾಂಶ

ನಮ್ಮ ಪೌರಾಣಿಕ 'ರಾಮಾಯಣ' ಚಿತ್ರವನ್ನ ಮಕ್ಕಳ ಸಮೇತ ಎಲ್ಲರೂ ನೋಡಬೇಕು ಎನ್ನುವ ಕಾರಣಕ್ಕೆ ಸಿನಿಮಾ ನಿರ್ಮಾಣ ಮಾಡಲಾಗ್ತಿದೆ. ಆದರೆ ಆಸ್ಟ್ರೇಲಿಯಾದಲ್ಲಿ ಹೀಗೇಕೆ..? ಆಸ್ಟ್ರೇಲಿಯಾ ಮಕ್ಕಳು ನೋಡಬಾರದಂತಹ ಅಂಶ ಏನಿದೆ ಅನ್ನೋ ಚರ್ಚೆ ಶುರುವಾಗಿದೆ. ಆ ರಹಸ್ಯ ಇಲ್ಲಿದೆ ನೋಡಿ..

ನಮಿತ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಾಣದ 'ರಾಮಾಯಣ' (Ramayana) ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಏಕಕಾಲಕ್ಕೆ ಸಿನಿಮಾ ದೇಶವಿದೇಶಗಳಲ್ಲಿ ಬಿಡುಗಡೆ ಆಗಲಿದೆ. ಮುಂದಿನ ವಾರ ಟ್ರೈಲರ್ ರಿಲೀಸ್ ಪ್ಲ್ಯಾನ್ ನಡೀತಿದೆ. ಈ ಮಧ್ಯೆ ಆಸ್ಟ್ರೇಲಿಯಾದಲ್ಲಿ ಮಕ್ಕಳು ಸಿನಿಮಾ ನೋಡೋ ಹಾಗಿಲ್ಲ ಅನ್ನೋ ನಿಯಮವೊಂದು ಪಾಸ್ ಆಗಿದೆ. ಅದು ಯಾಕೆ ಅಂತ ನೋಡೋಣ ಬನ್ನಿ..

ರಾಮಾಯಣ.. ರಾಕಿಂಗ್ ಸ್ಟಾರ್ ಯಶ್​ರಾವಣ ಆಗಿ ಆರ್ಭಟಿಸೋ ಸಿನಿಮಾ.. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಿತೇಶ್ ತಿವಾರಿ ನಿರ್ದೇಶನದ ಪೌರಾಣಿಕ ಸಿನಿಮಾ ತೆರೆಗೆ ಬರಲಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸಿದ್ದಾರೆ. ಚಿತ್ರ ನಿರ್ಮಾಣಕ್ಕೂ ಯಶ್ ಕೈಜೋಡಿಸಿದ್ದಾರೆ. ಸದ್ಯ ಟ್ರೈಲರ್ ಜೊತೆಗೆ 34 ನಿಮಿಷಗಳ ಸ್ಪೆಷಲ್ ಫುಟೇಜ್ ಆಸ್ಟ್ರೇಲಿಯಾದಲ್ಲಿ ಸೆನ್ಸಾರ್ ಆಗಿದೆ. ಅಚ್ಚರಿ ಅಂದ್ರೆ ಅಲ್ಲಿನ ಸೆನ್ಸಾರ್ ಮಂಡಳಿ 'M' ರೇಟಿಂಗ್ ಕೊಟ್ಟಿದೆ. ಅಂದ್ರೆ 16 ವರ್ಷಕ್ಕಿಂತ ಚಿಕ್ಕ ಮಕ್ಕಳು ಸಿನಿಮಾ ನೋಡಲು ಅವಕಾಶ ಇಲ್ಲ..

ಅರೇ, ನಮ್ಮ ಪೌರಾಣಿಕ 'ರಾಮಾಯಣ' ಚಿತ್ರವನ್ನ ಮಕ್ಕಳ ಸಮೇತ ಎಲ್ಲರೂ ನೋಡಬೇಕು ಎನ್ನುವ ಕಾರಣಕ್ಕೆ ಸಿನಿಮಾ ನಿರ್ಮಾಣ ಮಾಡಲಾಗ್ತಿದೆ. ಆದರೆ ಆಸ್ಟ್ರೇಲಿಯಾದಲ್ಲಿ ಹೀಗೆ..? ಆಸ್ಟ್ರೇಲಿಯಾ ಮಕ್ಕಳು ನೋಡಬಾರದಂತಹ ಅಂಶ ಏನಿದೆ ಅನ್ನೋ ಚರ್ಚೆ ಶುರುವಾಗಿದೆ.

ಆಸ್ಟ್ರೇಲಿಯಾದಲ್ಲಿ ಮಕ್ಕಳ ಬಗ್ಗೆ ಬಹಳ ಕಾಳಜಿ ವಹಿಸಲಾಗ್ತಿದೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಲಾಗಿದೆ. ಅದೇ ರೀತಿ ಸಿನಿಮಾದಲ್ಲಿ ಹಿಂಸೆ, ಅಸಭ್ಯ ಭಾಷೆ ಅಥವಾ ಇತರ ಮೆಚ್ಯೂರ್ಡ್ ವಿಷಯಗಳಿದ್ದರೆ ಆ ಸಿನಿಮಾಗಳಿಗೆ 'ಎಂ' ಅನ್ನೋ ಸೆನ್ಸಾರ್ ಸರ್ಟಿಫಿಕೆಟ್ ಕೊಡಲಾಗುತ್ತೆ. ರಾಮಾಯಣ ಚಿತ್ರದಲ್ಲಿ ಒಂದಷ್ಟು ಆಕ್ಷನ್ ಸನ್ನಿವೇಶಗಳಿವೆ. ರಾಕ್ಷಕರ ಎದುರು ರಾಮ- ಲಕ್ಷ್ಮಣರ ಆರ್ಭಟದ ದೃಶ್ಯಗಳಿವೆ. ಇದೇ ಕಾರಣಕ್ಕೆ ಅಲ್ಲಿ 'M' ರೇಟಿಂಗ್ ಕೊಟಲಾಗಿದೆ. ಅದೇನೆ ಇದ್ರು ರಾಮಾಯಣ ಕಥೆ ಎಲ್ಲರನ್ನೂ ಸೆಳೆಯೋದ್ರಲ್ಲಿ ನೋ ಡೌಟ್.

ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ರಾಮಾಯಣ' ಟ್ರೇಲರ್‌ಗೂ ಮುನ್ನ ಯಶ್ ಜೊತೆ ಕಾಣಿಸಿಕೊಂಡ ರಿಷಬ್: ಅಯೋಧ್ಯೆ ವಿಶೇಷ ವಾಚ್ ವೈರಲ್
'ಇಂತಹ ನಟಿಯನ್ನು ನಾನು ನೋಡಿಲ್ಲ': ರಶ್ಮಿಕಾ ಕಠಿಣ ಪರಿಶ್ರಮಕ್ಕೆ ಫಿದಾ ಆದ ಬೃಂದಾ ಮಾಸ್ಟರ್