
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ (Aamir Khan)ಮೂರನೇ ಮದುವೆ ಆದ ಮೇಲೆ ಸಿಕ್ಕಾಪಟ್ಟೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಮೀರ್ ಖಾನ್‌ಗೆ ಮೂರನೇ ಮದುವೆ ಆದೆ ಅನ್ನೋ ಅಪವಾದ, ಟ್ರೋಲ್ಟಾರ್ಚರ್ ಮಾಡುತ್ತಿದ್ರೆ, ಈಗ ಪ್ರಾಣ ಬೆದರಿಕೆ ಬೇರೆ ಬಂದಿದೆ. ಹಾಗಾದ್ರೆ ಅಮೀರ್ಜೀವಕ್ಕೆ ಕುತ್ತು ಬಂದಿದ್ದು ಯಾಕೆ..? ನೋಡೋಣ ಬನ್ನಿ..
ಬಾಲಿವುಡ್ ಅಂಗಳದಲ್ಲಿ ಲವ್ ಬರ್ಡ್ಸ್ ಹಾರಾಟ ಹೊಸದೇನಲ್ಲ, ಆದರೆ ಆಮಿರ್ ಖಾನ್ ಮೂರು ಮೂರು ಭಾರಿ ಲವ್ ಮಾಡಿ ಮದುವೆ ಮೂರು ಭಾರಿ ಮದುವೆ ಆಗಿದ್ದಾರೆ. ಮೊದಲೆರಡು ದಾಂಪತ್ಯಕ್ಕೆ ವಿಚ್ಛೇಧನ ಕೊಟ್ಟಿರೋ ಅಮೀರ್ ಇತ್ತೀಚೆಗಷ್ಟೆ ಮೂರನೇ ಮದುವೆ ಆಗಿ ಖುಷಿ ಖುಷಿಯಲ್ಲಿದ್ರು. ಆದ್ರೆ ಇದೀಗ ಅಮೀರ್ ಖಾನ್ನ ಕೊಂದರೇ ಐದು ಕೋಟಿ ಬಹುಮಾನ ಕೊಡೋದಾಗಿ ಅನೌನ್ಸ್ ಮಾಡಲಾಗಿದೆ..
ಅಮೀರ್ ಖಾನ್ಭಾರತೀಯ ಚಿತ್ರ ಜಗತ್ತಿನ ಸೂಪರ್ ಸ್ಟಾರ್.. ಆದ್ರೇನಂತೆ. ಈ ಸ್ಟಾರ್ ಮೂರು ಮೂರು ಮದುವೆ ಆಗಿ ಇವತ್ತು ಸಮಾಜದ ಸೆನ್ಸೇಷನ್ ಆಗಿದ್ದಾರೆ. ಜುಲೈ 5ನೇ ತಾರೀಕು ಬೆಂಗಳೂರಿನ ಬ್ಯೂಟಿ ಎಂಟರ್‌ಪ್ರೆನ್ಯೂರ್ ಗೌರಿ ಸ್ಪ್ರ್ಯಾಟ್ ಅವರ ಕೈ ಹಿಡಿದ ಆಮಿರ್ ಖಾನ್ ಹನಿಮೂನ್ ಗೆ ಹಾರಿದ್ರು. ಅಲ್ಲಿಂದ ವಾಪಸ್ ಬರೋ ಅಷ್ಟರಲ್ಲಿ ಅಮೀರ್ ತಲೆ ತಂದುಕೊಟ್ಟವರಿಗೆ 5 ಕೋಟಿ ಕೊಡೋದಾಗಿ ಸುದ್ದಿ ಹಬ್ಬಿದೆ.
ಅಮೀರ್ಖಾನ್ ಗೆ ಈ ಬೆದರಿಕೆ ಬರೋದಕ್ಕೆ ಕಾರಣ ಮೂರು ಮೂರು ಮದುವೆ. ಈ ಹಿಂದೆ ರೀನಾ ದತ್ತಾ ಜೊತೆ ಹಸೆಮಣೆ ಏರಿದ್ದ ಅಮೀರ್ ಖಾನ್ ವಿಚ್ಛೇಧನ ಕೊಟ್ಟಿ, ಕಿರಣ್ ರಾವ್ನ ಮದುವೆ ಆದ್ರು. ಈಗ ಅವರಿಗೂ ವಿಚ್ಛೇಧನ ಕೊಟ್ಟು ಈಗ ಗೌರಿ ಸ್ಪ್ರ್ಯಾಟ್ ಜೀವನಕ್ಕೆ ಹೋಗಿದ್ದಾರೆ ಅಮೀರ್.. ಹೀಗಾಗಿ ಅಯೋಧ್ಯೆಯ ತಪಸ್ವಿ ಛಾವಣಿಯ ಪೀಠಾಧೀಶ ಜಗದ್ಗುರು ಪರಮಹಂಸ ಆಚಾರ್ಯ ಅವರು ಅಕ್ಷರಶಃ ಆಮಿರ್ ಖಾನ್ ತಲೆಗೆ ಬೆಲೆ ಕಟ್ಟಿದ್ದಾರೆ. ಆಮಿರ್ ಖಾನ್ ಸಮಾಜದಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ, ಅವರನ್ನು ಸದೆಬಡಿಯುವವರಿಗೆ 5 ಕೋಟಿ ರೂಪಾಯಿ ಬಹುಮಾನ ನೀಡುತ್ತೇನೆ, ಅಷ್ಟೇ ಅಲ್ಲದೆ ಅವರ ಮೇಲಾಗುವ ಎಲ್ಲಾ ಕಾನೂನು ಪ್ರಕರಣಗಳ ಜವಾಬ್ದಾರಿಯೂ ನನ್ನದೇ ಎಂದಿದ್ದಾರೆ.
ಅಷ್ಟೆ ಅಲ್ಲ ಮಹಾರಾಷ್ಟ್ರದ ಸಚಿವ ನಿತೇಶ್ ರಾಣೆ, ಆಮಿರ್ ಖಾನ್ಅವರನ್ನ ‘ಲವ್ ಜಿಹಾದ್‌ನ ಬ್ರಾಂಡ್ ಅಂಬಾಸಿಡರ್’ ಎಂದು ಹೇಳಿದ್ದು, ಈ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಒಟ್ನಲ್ಲಿ ಅಮೀರ್ ಖಾನ್ ಈಗ ಜೀವ ಬೆದರಿಕೆಯಲ್ಲಿ ಜೀವನ ಮಾಡೋ ಹಾಗಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.