
ಧುರಂಧರ್: ದಿ ರಿವೆಂಜ್ ಚಿತ್ರದ ಬಳಿಕ ಬಹುಭಾಷಾ ನಟ ಮಾಧವನ್ ಹೊಸ ಸಿನಿಮಾ 'GDN' ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ಪ್ರಚಾರದ ವೇಳೆ ಅವರು ಇಂದಿನ ಯುವಕರು ಭಾರತೀಯ ಸಿನಿಮಾಗಳಿಗಿಂತ ಜಪಾನೀಸ್ ಅನಿಮೆ ಮತ್ತು ಕೊರಿಯನ್ ಕಂಟೆಂಟ್ಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ತಮ್ಮ 20 ವರ್ಷದ ಮಗ ವೇದಾಂತ್ ಜನರೇಷನ್ ಮಕ್ಕಳನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಮಾಧವನ್, ನನ್ನ ಮಗನ ಗೌರವವನ್ನು ನಾನು ಗಳಿಸಿದ್ದೇನೆ. ಆದರೆ ಅವನ ವಯಸ್ಸಿನ ಯುವಕರನ್ನು ನೋಡಿದರೆ, ಅವರು ನಮ್ಮ ಸಿನಿಮಾಗಳಿಂದ ಸಂಪೂರ್ಣವಾಗಿ ದೂರವಾಗುತ್ತಿದ್ದಾರೆ. ಅವರು ಜಪಾನೀಸ್ ಅನಿಮೆ ಮತ್ತು ಕೊರಿಯನ್ ಕಂಟೆಂಟ್ಗಳನ್ನು ಹೆಚ್ಚು ನೋಡುತ್ತಿದ್ದಾರೆ. ಆದರೆ ತಮಿಳು, ಹಿಂದಿ ಅಥವಾ ಬೇರೆ ಭಾರತೀಯ ಸಿನಿಮಾಗಳನ್ನು ಥಿಯೇಟರ್ನಲ್ಲಿ ನೋಡಲು ಆಸಕ್ತಿ ತೋರಿಸುತ್ತಿಲ್ಲ. ಇದು ನನಗೆ ದೊಡ್ಡ ಚಿಂತೆಯ ವಿಷಯ ಎಂದಿದ್ದಾರೆ.
'ನಾಯಕ ಕುಳ್ಳನಾಗಿದ್ದರೆ, ಅದು ಅವನ ಸಮಸ್ಯೆ, ನನ್ನ ತಪ್ಪಲ್ಲ'.. ಈ ನಟಿಯ ಸೆನ್ಸೇಷನಲ್ ಕಮೆಂಟ್ಸ್ ಯಾರ ಬಗ್ಗೆ?
ಮಾಧವನ್ ಅವರ ಪ್ರಕಾರ, ಭಾರತೀಯ ಚಿತ್ರರಂಗ ತನ್ನ ಪ್ರೇಕ್ಷಕರನ್ನು ಕಳೆದುಕೊಳ್ತಿದೆ. ಇಲ್ಲಿನ ಪ್ರೇಕ್ಷಕರು ಇನ್ನೊಂದು ಸಿನಿಮಾ ಇಂಡಸ್ಟ್ರಿಗೆ ಆಕರ್ಷಿತರಾಗ್ತಿದ್ದಾರೆ. ಹೊಸ ರೀತಿಯ ಕಥೆ ಹೇಳುವ ಜಾಗತಿಕ ಮನರಂಜನೆ ಅವರನ್ನು ಸೆಳೆಯುತ್ತಿದೆ ಎಂದು ಮಾಧವನ್ ಹೇಳಿದ್ದಾರೆ.
ಇದೇ ವೇಳೆ ತಮ್ಮ ಸಿನಿಮಾ ಆಯ್ಕೆಗಳ ಬಗ್ಗೆಯೂ ಮಾಧವನ್ ಮಾತನಾಡಿದ್ದಾರೆ. ನಾನು ಬಯಸಿದ್ದರೆ ಕೇವಲ ಕಮರ್ಷಿಯಲ್ ಸಿನಿಮಾಗಳನ್ನೇ ಮಾಡಿ ಹಿಟ್ಗಳನ್ನು ಕೊಡಬಹುದಿತ್ತು. ಆದರೆ ನಟನಾಗಿ ನನ್ನ ಸಾಮರ್ಥ್ಯವನ್ನು ತೋರಿಸುವಂತಹ ವಿಭಿನ್ನ ಪಾತ್ರಗಳಲ್ಲಿ ನಟಿಸಲು ನಾನು ಬಯಸಿದೆ. ಜೀವನದಲ್ಲಿ ಪಡೆದ ಅನುಭವಗಳನ್ನು ಅರ್ಥಪೂರ್ಣ ಪಾತ್ರಗಳ ಮೂಲಕ ತೋರಿಸುವ ಅವಕಾಶ ಸಿಕ್ಕಾಗ ಅದನ್ನು ಬಳಸಿಕೊಳ್ಳಲು ನಿರ್ಧರಿಸಿದೆ ಎಂದಿದ್ದಾರೆ.
ಅಷ್ಟೇ ಅಲ್ಲ, ಉತ್ತಮ ಮತ್ತು ಪ್ರೇರಣಾದಾಯಕ ಸಿನಿಮಾಗಳನ್ನು ನಿರ್ಮಿಸುವ ಜವಾಬ್ದಾರಿ ನಿರ್ದೇಶಕರು, ಕಥೆಗಾರರು ಹಾಗೂ ನಟರ ಮೇಲಿದೆ ಎಂದು ಮಾಧವನ್ ಅಭಿಪ್ರಾಯಪಟ್ಟಿದ್ದಾರೆ. ನಾವು ಸಮಾಜಕ್ಕೆ ಎಷ್ಟು ಸ್ಫೂರ್ತಿ ನೀಡುತ್ತೇವೆ ಎಂಬುದೇ ಮುಖ್ಯ ಎಂದಿದ್ದಾರೆ.
ಸದ್ಯ ಅವರ ಮುಂದಿನ ಸಿನಿಮಾ 'GDN' ಭಾರತದ ಖ್ಯಾತ ಸಂಶೋಧಕ ಹಾಗೂ ಕೈಗಾರಿಕೋದ್ಯಮಿ ಜಿ.ಡಿ. ನಾಯ್ಡು ಅವರ ಜೀವನವನ್ನು ಆಧರಿಸಿದೆ. ಯಾವುದೇ ಇಂಜಿನಿಯರಿಂಗ್ ಪದವಿ ಇಲ್ಲದಿದ್ದರೂ, ಭಾರತದ ಮೊದಲ ಎಲೆಕ್ಟ್ರಿಕ್ ಮೋಟರ್ ಅಭಿವೃದ್ಧಿಪಡಿಸಿದ ಹಾಗೂ ಸ್ವಾತಂತ್ರ್ಯಪೂರ್ವ ಕಾಲದಲ್ಲೇ ಮರ್ಸಿಡಿಸ್ಗೆ ಸಮನಾದ ಕಾರು ನಿರ್ಮಿಸಲು ಪ್ರಯತ್ನಿಸಿದ ಮಹಾನ್ ಆವಿಷ್ಕಾರಕರ ಕಥೆಯನ್ನು ಈ ಸಿನಿಮಾ ಹೇಳಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.