ರಾಕಿಂಗ್ ಸ್ಟಾರ್ ಯಶ್ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಒಂದು ಪೋಸ್ಟ್‌ಗೆ ಬಾಲಿವುಡ್ ಕಂಗಾಲಾಗಿದೆ. ಘಟಾನುಘಟಿ ಸ್ಟಾರ್ಸ್ ರಣಬೀರ್ ಕಪೂರ್, ಅಲಿಯಾ ಭಟ್, ವಿಕ್ಕಿ ಕೌಶಾಲ್ ಇದೀಗ ಆತಂಕಗೊಂಡಿದ್ದಾರೆ.
ಬೆಂಗಳೂರು(ಮಾ.22) ಕೆಜಿಎಫ್ ಮೂಲಕ ದೇಶ ವಿದೇಶಗಳಲ್ಲಿ ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್ ಇದೀಗ ಮತ್ತೆ ಸದ್ದು ಮಾಡಿದ್ದಾರೆ. ಯಶ್ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಒಂದು ಪೋಸ್ಟರ್ ಬಾಲಿವುಡ್‌ನ್ನೇ ಕಂಗಾಲು ಮಾಡಿದೆ. ಹೌದು, ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಬಿಡುಗಡೆ ದಿನಾಂಕವನ್ನು ಯಶ್ ಘೋಷಿಸಿದ್ದಾರೆ. ಆದರೆ ಯಶ್ ಘೋಷಣೆ, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ನಟ ರಣಬೀರ್ ಕಪೂರ್, ಆಲಿಯಾ ಭಟ್ ಹಾಗೂ ವಿಕ್ಕಿ ಕೌಶಾಲ್ ಆತಂಕ ಹೆಚ್ಚಿಸಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಮಾರ್ಚ್ 19, 2026ರಂದು ತೆರೆ ಕಾಣಲಿದೆ. ಟಾಕ್ಸಿಕ್ ಬಿಡುಗಡೆ ದಿನಾಂಕವನ್ನು ಯಶ್ ಸೋಶಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದಾರೆ. ಯಶ್ ಸಿನಿಮಾ ಬಿಡುಗಡೆ ದಿನಾಂಕವೇ ಇದೀಗ ಬಾಲಿವುಡ್ ದಿಗ್ಗಜರನ್ನು ಕಂಗೆಡೆಸಿದೆ. ಕಾರಣ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ವಾರ್ ಆ್ಯಂಡ್ ಲವ್ ಚಿತ್ರವೂ ಮಾರ್ಚ್ 20 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ವಾರ್ ಆ್ಯಂಡ್ ಲವ್ ಸಿನಿಮಾದ ಶೂಟಿಂಗ್ ಕೆಲಸಗಳು ನಡೆಯುತ್ತಿದೆ. ಆದರೆ ಯಶ್ ಟಾಕ್ಸಿಕ್ ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾದರೆ ವಾರ್ ಆ್ಯಂಡ್ ಲವ್ ಸಿನಿಮಾಗೆ ಹೊಡತೆ ಬೀಳಲಿದೆ ಅನ್ನೋ ಆತಂಕ ಬಾಲಿವುಡ್‌ಗೆ ಎದುರಾಗಿದೆ.
Yash Toxic: ಈ ವರ್ಷ ತೆರೆಗೆ ಬರಲ್ಲ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ; ಮತ್ತೆ ಯಾವಾಗ?
ವಾರ್ ಆ್ಯಂಡ್ ಲವ್ ಸಿನಿಮಾದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್, ವಿಕ್ಕಿ ಕೌಶಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಮಾಯಾಣ ಚಿತ್ರದಲ್ಲಿ ಯಶ್ ಹಾಗೂ ರಣಬೀರ್ ಕಪೂರ್ ನಟಿಸುತ್ತಿದ್ದಾರೆ. ಇದೀಗ ಇವರಿಬ್ಬರ ಸಿನಿಮಾ ಮುಖಾಮುಖಿಯಾಗುತ್ತಿದೆ. ಇದು ದಿಗ್ಗಜರನ್ನು ಕಂಗೆಡಿಸಿದೆ. ಇದೀಗ ಸಂಜಯ್ ಲೀಲಾ ಬನ್ಸಾಲಿ ಸಿನಿಮಾ ಬಿಡುಗಡೆ ದಿನಾಂಕವನ್ನು ಬೇಗನೆ ಮಾಡುವ ಸಾಧ್ಯತೆ ಇದೆ. ಟಾಕ್ಸಿಕ್ ಸಿನಿಮಾಗಿಂತ ಮೊದಲು ವಾರ್ ಆ್ಯಂಡ್ ಲವ್ ಸಿನಿಮಾ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆದರೆ ಯಾವುದು ಅಧಿಕೃತಗೊಂಡಿಲ್ಲ.
ಯುಗಾದಿ, ಗುಡಿ ಪರ್ವ, ಚೈತ್ರ ನವರಾತ್ರಿ ಹಬ್ಬಗಳಿಂದ ಸಾಲು ಸಾಲು ರಜೆಗಳಿವೆ. ಇನ್ನು ಕೊನೆಯಲ್ಲಿ ಈದ್ ಹಬ್ಬವೂ ಬರಲಿದೆ. ಹೀಗಾಗಿ ಯಶ್ ಟಾಕ್ಸಿಕ್ ಸಿನಿಮಾ ಭರ್ಜರಿ ಕಲೆಕ್ಷನ್ ಕಾಣುವ ಸಾಧ್ಯತೆ ಇದೆ. ಗೀತು ಮೋಹನದಾಸ್ ನಿರ್ದೇಶದ ಟಾಕ್ಸಿಕ್ ಸಿನಿಮಾ ಕುರಿತು ಯಶ್ ಹಾಕಿದ ರಿಲೀಸ್ ಡೇಟ್ ಪೋಸ್ಟ್ ಭಾರಿ ಕುತೂಹಲ ಹೆಚ್ಚಿಸಿದೆ. ಸ್ಟೈಲೀಶ್ ಲುಕ್‌ನಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಬ್ಯಾಕ್‌ಡ್ರಾಪ್‌ನಲ್ಲಿ ಯಶ್ ಫೋಟೋ ಬಳಸಿಕೊಳ್ಳಲಾಗಿದೆ. ಜೊತೆಗೆ ಸಿನಿಮಾದ ಸೀನ್ ಕೂಡ ಬಳಸಿಕೊಳ್ಳಲಾಗಿದೆ.
ಟಾಕ್ಸಿಕ್ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಇಂಗ್ಲೀಷ್ ಭಾಷೆಯಲ್ಲಿ ಶೂಟಿಂಗ್ ಮಾಡುತ್ತಿರುವ ಮೊದಲ ಭಾರತೀಯ ಸಿನಿಮಾ ಇದಾಗಿದೆ. ಈ ಮೂಲಕ ಭಾರತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗಲಿದೆ. ಇನ್ನು ಹಿಂದಿ, ತೆಲೆಗು, ತಮಿಳು, ಮಲೆಯಾಳಂ ಭಾಷೆಗಳಿಗೆ ಡಬ್ ಮಾಡಲಾಗುತ್ತದೆ.
ಯಶ್ ಟಾಕ್ಸಿಕ್ ಚಿತ್ರಕ್ಕೆ ಕಿಯಾರಾ ಅಡ್ವಾನಿ ಪಡೆದ ಸಂಭಾವನೆ ಇಷ್ಟೊಂದಾ?