ಭಾರತಕ್ಕೆ ಎಂಟ್ರಿ ಕೊಟ್ಟ ಆಸ್ಕರ್ ನಲ್ಲಿ ಕಪಾಳಮೋಕ್ಷ ಮಾಡಿದ್ದ ನಟ ವಿಲ್ ಸ್ಮಿತ್

By Shruiti G KrishnaFirst Published Apr 23, 2022, 1:54 PM IST
Highlights

ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ ಹಾಸ್ಯ ನಟ ಕ್ರಿಸ್ ರಾಕ್(Chris Rock) ಕಪಾಳಕ್ಕೆ ಹೊಡೆದು ವಿವಾದ ಸೃಷ್ಟಿಸಿದ್ದ ನಟ ವಿಲ್ ಸ್ಮಿತ್ ಭಾರತಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆಸ್ಕರ್ ವಿವಾದ ಬಳಿಕ ವಿಲ್ ಸ್ಮಿತ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ ಹಾಸ್ಯ ನಟ ಕ್ರಿಸ್ ರಾಕ್(Chris Rock) ಕಪಾಳಕ್ಕೆ ಹೊಡೆದು ವಿವಾದ ಸೃಷ್ಟಿಸಿದ್ದ ನಟ ವಿಲ್ ಸ್ಮಿತ್ ಭಾರತಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆಸ್ಕರ್ ವಿವಾದ ಬಳಿಕ ವಿಲ್ ಸ್ಮಿತ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಕ್ರಿಸ್ ರಾಕ್ ಅವರಿಗೆ ಕಪಾಳಕ್ಕೆ ಹೊಡೆದ ಪರಿಣಾಮ ನಟ ವಿಲ್ ಸ್ಮಿತ್(Will Smith) ಅವರನ್ನು ಆಸ್ಕರ್ ನಿಂದ 10 ವರ್ಷ ಬ್ಯಾನ್ ಮಾಡಲಾಗಿದೆ.

ಈ ವಿವಾದ ಬಳಿಕ ವಿಲ್ ಸ್ಮಿತ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಮೊದಲ ಬಾರಿಗೆ ಭಾರತದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಶನಿವಾರ ಕಾಣಿಸಿಕೊಂಡಿದ್ದಾರೆ. ಕಾರಿನಿಂದ ಹೊರಬರುತ್ತಿರುವ ಫೋಟೋ ವೈರಲ್ ಆಗಿದೆ. ಅಂದಹಾಗೆ ವಿಲ್ ಸ್ಮಿತ್ ಭಾರತಕ್ಕೆ ಎಂಟ್ರಿ ಕೊಡುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಸಹ ಎಂಟ್ರಿ ಕೊಟ್ಟಿದ್ದರು. 2019ರಲ್ಲಿ ವಿಲ್ ಸ್ಮಿತ್ ಭಾರತಕ್ಕೆ ಬಂದಿದ್ದರು. ರಿಯಾಲಿಟಿ ಶೋ ದಿ ಬಕೆಟ್ ಲಿಸ್ಟ್ ಚಿತ್ರೀಕರಣಕ್ಕಾಗಿ ಬಂದಿದ್ದರು. ಅಂದು ಭಾರತಕ್ಕೆ ಬಂದಿದ್ದ ವಿಲ್ ಸ್ಮಿತ್ ಅನೇಕ ಬಾಲಿವುಡ್ ಸ್ಟಾರ್ ಗಳನ್ನು ಭೇಟಿಯಾಗಿದ್ದರು. ಬಳಿಕ ಹರಿದ್ವಾರಕ್ಕೂ ಭೇಟಿ ನೀಡಿದ್ದರು. ಇದೀಗ ಮತ್ತೆ ಭೇಟಿ ನೀಡಿದ್ದಾರೆ.

ಅಂದಹಾಗೆ ಆಸ್ಕರ್ ನಿಂದ ಬ್ಯಾನ್ ಆಗಿರುವ ವಿಲ್ ಸ್ಮಿತ್ ಮುಂದಿನ 10 ವರ್ಷಗಳಲ್ಲಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಅಂಡ್ ಸೈನ್ಸ್ ನಡೆಸುವ ಯಾವುದೇ ಕಾರ್ಯಕ್ರಮಗಳಲ್ಲಿ ಸ್ಮಿತ್ ಭಾಗವಹಿಸುಂತಿಲ್ಲ. ಆದರೆ ಸ್ಮಿತ್ ಈ ಬಾರಿ ಪಡೆದ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿಯನ್ನು ಹಿಂಪಡೆದಿಲ್ಲ.

ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿದ್ದ ಪ್ರಕರಣ; 'ಆಸ್ಕರ್'ನಿಂದ ವಿಲ್ ಸ್ಮಿತ್ ಗೆ 10 ವರ್ಷ ಬ್ಯಾನ್

ಪತ್ನಿ ಬಗ್ಗೆ ತಮಾಷೆ ಮಾಡಿದ್ದಕ್ಕೆ ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿದ್ದ ಸ್ಮಿತ್

ಮಾರ್ಚ್ 27ರಂದು ನಡೆದ ಆಸ್ಕರ್ ಸಮಾರಂಭದಲ್ಲಿ ಡಾಕ್ಯುಮೆಂಟರಿ ಫೀಚರ್ ವಿಭಾಗದ ಪ್ರಶಸ್ತಿಯನ್ನು ಘೋಷಿಸಲು ಬಂದ ಕ್ರಿಸ್ ರಾಕ್, ನಟ ವಿಲ್ ಸ್ಮಿತ್ ಪತ್ನಿ, ಜಡಾ ಪಿಂಕೆಟ್ ಸ್ಮಿತ್ ಬಗ್ಗೆ ತಮಾಷೆ ಮಾಡಿದ್ದರಿಂದ ನಟ ವಿಲ್ ಸ್ಮಿತ್ ಅವರಿಂದ ಕಪಾಳಕ್ಕೆ ಹೊಡೆಸಿಕೊಂಡಿದ್ದರು. ಇದು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿತ್ತು, ವಿಶ್ವದಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಕ್ರಿಸ್ ರಾಕ್ ತನ್ನ ಪತ್ನಿಯ ಬಗ್ಗೆ ತಮಾಷೆ ಮಾಡಿದ ಕಾರಣಕ್ಕೆ ವೇದಿಕೆಯ ಮೇಲೆ ಹೋಗಿ ವಿಲ್ ಸ್ಮಿತ್ ಕಪಾಳಕ್ಕೆ ಬಾರಿಸುವ ಮೂಲಕ ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದ್ದರು. ಕಪಾಳಕಕ್ಕೆ ಬಾರಿಸಿ ಬಂದ ಸ್ಮಿತ್ ನನ್ನ ಪತ್ನಿ ಬಗ್ಗೆ ಮಾತನಾಬೇಡ ಎಂದು ಕಿರುಚಾಡಿದರು. 'ನನ್ನ ಪತ್ನಿಯ ಹೆಸರನ್ನು ನಿನ್ನ ಕೆಟ್ಟ ಬಾಯಿಯಿಂದ ಹೊರಗಿಡು' ಎಂದು ಸ್ಮಿತ್ ಕೂಗಾಡಿದ್ದರು.

ಅಕಾಡಿಮಿ ನಿರ್ಧಾರವನ್ನು ಗೌರವಿಸುತ್ತೇನೆ; ಆಸ್ಕರ್ ನಿಂದ ಬ್ಯಾನ್ ಆದ ವಿಲ್ ಸ್ಮಿತ್ ಪ್ರತಿಕ್ರಿಯೆ

ಈ ಘಟನೆ ಎಲ್ಲರಿಗೂ ಶಾಕ್ ನೀಡಿದ್ದು. ಕಪಾಳಕ್ಕೆ ಬಾರಿಸಿದ ಕೆಲವೇ ನಿಮಿಷಗಳಲ್ಲಿ ವಿಲ್ ಸ್ಮಿತ್ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದು ಬೀಗಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಲ್ ಸ್ಮಿತ್ ಕಣ್ಣೀರು ಹಾಕಿದ್ದರು. ವಿವಾದ ಬಳಿಕ ವಿಲ್ ಸ್ಮಿತ್ ಕ್ಷಮೆ ಕೇಳಿದ್ದರು.

 

click me!