ಬಾಲಿವುಡ್ ಪ್ರಣಯ ಪಕ್ಷಿಗಳು ಎಂದೇ ಗುರುತಿಸಿಕೊಂಡಿದ್ದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರ(Sidharth Malhotra and Kiara Advani) ದೂರ ದೂರ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇಬ್ಬರು ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದರು ಎನ್ನುವ ಮಾತು ಕೇಳಿಬರುತ್ತಿತ್ತು.
ಸಿನಿಮಾರಂಗದಲ್ಲಿ ಲವ್, ಬ್ರೇಕಪ್, ಡಿವೋರ್ಸ್ ಹೊಸದೇನಲ್ಲ. ಆಗಾಗ ಇಂತ ಸುದ್ದಿಗಳು ಕೇಳಿಬರುತ್ತಲೆ ಇರುತ್ತೆ. ಅದರಲ್ಲೂ ಬಾಲಿವುಡ್ ನಲ್ಲಿ ಇಂತ ಸುದ್ದಿಗಳು ತುಸು ಜಾಸ್ತಿ ಅಂತನೇ ಹೇಳಬಹುದು. ಇದೀಗ ಬಾಲಿವುಡ್ ನಲ್ಲಿ ಮತ್ತೊಂದು ಬ್ರೇಕಪ್ ವಿಚಾರ ಸದ್ದು ಮಾಡುತ್ತಿದೆ. ಬಾಲಿವುಡ್ ಪ್ರಣಯ ಪಕ್ಷಿಗಳು ಎಂದೇ ಗುರುತಿಸಿಕೊಂಡಿದ್ದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರ(Sidharth Malhotra and Kiara Advani) ದೂರ ದೂರ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇಬ್ಬರು ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದರು ಎನ್ನುವ ಮಾತು ಕೇಳಿಬರುತ್ತಿತ್ತು. ಆಗಾಗ ವಿದೇಶಿ ಪ್ರಯಾಣ, ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಅಲ್ಲದೇ ಶೇರ್ಷಾ(Shershaah) ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ನೆಚ್ಚಿನ ಜೋಡಿಯಾಗಿದ್ದರು. ಈ ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಹೃದಯ ಗೆದ್ದಿತ್ತು. ಇಬ್ಬರು ಆದಷ್ಟು ಬೇಗ ಮದುವೆಯಾಗಿ ಎಂದು ಅಭಿಮಾನಿಗಳು ಹಾರೈಸಿದ್ದರು. ಆದರೀಗ ಇಬ್ಬರೂ ಬ್ರೇಕಪ್(breakup) ಮಾಡಿಕೊಂಡು ದೂರ ಆಗಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ಗುಲ್ಲಾಗಿದೆ.
ಸಿದ್ಧಾರ್ಥ್ ಮತ್ತು ಕಿಯಾರಾ ಇಬ್ಬರು ತಮ್ಮ ಪ್ರೀತಿ ವಿಚಾರವನ್ನು ಯಾವತ್ತು ಬಹಿರಂಗವಾಗಿ ಹೇಳಿಕೊಂಡವರಲ್ಲ, ಅಲ್ಲದೆ ನಿರಾಕರಿಸಿಯೂ ಇಲ್ಲ. ಶೇರ್ಷಾ ಸಿನಿಮಾ ಬಿಡುಗಡೆ ಬಳಿಕ ಈ ಜೋಡಿ ಮತ್ತಷ್ಟು ಫೇಮಸ್ ಆಗಿತ್ತು. ಸದಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಇದೀಗ ಒಬ್ಬರಿಗೊಬ್ಬರು ಭೇಟಿ ಮಾಡುವುದನ್ನೆ ಬಿಟ್ಟಿದ್ದಾರಂತೆ. ಈ ಬಗ್ಗೆ ಆಂಗ್ಲ ಮಾಧ್ಯಮ ವರದಿ ಮಾಡಿದೆ.
ಹೀಗಿರಲಿದೆ ಕಿಯಾರಾ ಅದ್ವಾನಿ- ಸಿದ್ಧಾರ್ಥ್ ಮಲ್ಹೋತ್ರಾ ವೈವಾಹಿಕ ಜೀವನ
ಕಿಯಾರಾ ಮತ್ತು ಸಿದ್ಧಾರ್ಥ್ ಬೇರೆ ಆಗಿದ್ದಾರೆ. ಇಬ್ಬರೂ ಒಬ್ಬರಿಗೊಬ್ಬರು ಭೇಟಿ ಮಾಡುವುದನ್ನೇ ನಿಲ್ಲಿಸಿದ್ದಾರೆ. ಇಬ್ಬರು ತಮ್ಮ ರಿಲೇಶನ್ ಶಿಪ್ ಕೊನೆಗೊಳಿಸಿದ್ದಾರೆ. ಆದರೆ ಇಬ್ಬರು ಬೇರೆ ಆಗಲು ಇನ್ನು ಕಾರಣ ತಿಳಿದಿಲ್ಲ. ಆದರೆ ಇಬ್ಬರು ಬೇರೆ ಆಗಿರುವುದಂದು ನಿಜ. ಇಬ್ಬರು ಒಂದಾಗಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ ಇಬ್ಬರು ಮತ್ತೆ ಒಂದಾಗುವ ಸೂಚನೆ ಇಲ್ಲ ಎಂದು ವರದಿ ಮಾಡಿದೆ.
ಕಿಯಾರಾ ಮತ್ತು ಸಿದ್ಧಾರ್ಥ್ ಇಬ್ಬರು ಬೆಸ್ಟ್ ಜೋಡಿ ಎಂದು ಫ್ಯಾನ್ ಕಾಮೆಂಟ್ ಮಾಡುತ್ತಿದ್ದರು. ಇಬ್ಬರ ಕ್ಯೂಟ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿತ್ತು. ಶೇರ್ಷಾ ಸಿನಿಮಾ ಬಳಿಕವಂತು ಇಬ್ಬರಿಗೆ ಅಭಿಮಾನಿ ಬಳಗ ಹೆಚ್ಚಾಗಿತ್ತು. ಕ್ಯೂಟ್ ಜೋಡಿ ನೋಡಿ ಅಭಿಮಾನಿಗಳು ಸಹ ಹೀಗೆ ಇರಬೇಕೆಂದು ಬಯಸುತ್ತಿದ್ದರು. ಆದರೀಗ ಇಬ್ಬರು ದೂರ ಆಗುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಇಬ್ಬರು ಸಿನಿಮಾರಂಗದಲ್ಲಿ ಸಖತ್ ಬ್ಯುಸಿ ಇರುವ ಕಲಾವಿದರು. ಆದರೆ ನಿಜಕ್ಕೂ ಏನಾಗಿದೆ ಎನ್ನುವುದು ಬಹಿರಂಗವಾಗಿಲ್ಲ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸಿದ್ಧಾರ್ಥ್ ಸದ್ಯ ರೋಹಿತ್ ಶೆಟ್ಟಿ ಅವರ ಪೊಲೀಸ್ ವೆಬ್ ಸರಣಿಗೆ ಸಿದ್ಧರಾಗುತ್ತಿದ್ದಾರೆ. ಇತ್ತೀಚಿಗಷ್ಟೆ ಮಿಷನ್ ಮಜ್ನು ಸಿನಿಮಾದ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ರಶ್ಮಿಕಾ ಅವರ ಮೊದಲ ಬಾಲಿವುಡ್ ಸಿನಿಮಾ ಇದಾಗಿದ್ದು, ಸಿಕ್ಕಾಪಟ್ಟೆ ನಿರೀಕ್ಷೆ ಕೂಡ ಮೂಡಿಸಿದೆ. ಇನ್ನು ಯೋದ, ಥ್ಯಾಂಕ್ ಗಾಡ್, ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.
Kiara Advani In Maldives: ಹಾಟ್ ವಾಟರ್ ಬೇಬಿ ಲುಕ್‌ನಲ್ಲಿ ನಟಿ, ಯಾರಮ್ಮಾ ಫೋಟೋಗ್ರಫರ್ ಅಂತಿದ್ದಾರೆ ನೆಟ್ಟಿಗರು
ಕಿಯಾರಾ ಬಾಲಿವುಡ್ ಜೊತೆಗೆ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲೂ ಬ್ಯುಸಿಯಾಗಿದ್ದಾರೆ. ಭೂಲ್ ಭುಲೈಯ-2ನಲ್ಲಿ ಕಾರ್ತಿಕ್ ಆರ್ಯನ್ ಜೊತೆ ನಟಿಸುತ್ತಿದ್ದಾರೆ. ಜಗ್ ಜಗ್ ಜಿಯೋ, ಮತ್ತು RC 15 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಮ್ ಚರಣ್ ನಟನೆಯ 15ನೇ ಸಿನಿಮಾದಲ್ಲಿ ಕಿಯಾರಾ ನಟಿಸುತ್ತಿದ್ದು ಶಂಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.