ಸ್ಟುಡಿಯೊದಲ್ಲಿ ವಾಂತಿ ಕ್ಲೀನ್ ಮಾಡುವುದರಿಂದ ವೃತ್ತಿ ಜೀವನ ಆರಂಭಿಸಿದೆ- ರವೀನಾ ಟಂಡನ್

Published : Apr 23, 2022, 11:50 AM IST
ಸ್ಟುಡಿಯೊದಲ್ಲಿ ವಾಂತಿ ಕ್ಲೀನ್ ಮಾಡುವುದರಿಂದ ವೃತ್ತಿ ಜೀವನ ಆರಂಭಿಸಿದೆ- ರವೀನಾ ಟಂಡನ್

ಸಾರಾಂಶ

ಸಿನಿಮಾ ಕುಟುಂಬದಿಂದ ಬಂದರೂ ರವೀನಾ ಸಿನಿಮಾ ಮತ್ತು ಜಾಹೀರಾತು ನಿರ್ಮಾಪಕ ಪ್ರಹ್ಲಾದ್ ಕಕ್ಕರ್ ಅವರ ಕಚೇರಿಯಲ್ಲಿ ಕೆಲಸ ಪ್ರಾರಂಭ ಮಾಡುವ ಮೂಲಕ ಸಿನಿಮಾರಂಗದ ಜರ್ನಿ ಪ್ರಾರಂಭ ಮಾಡಿರುವುದಾಗಿ ಹೇಳಿದ್ದಾರೆ. ಪ್ರಾರಂಭದ ದಿನಗಳಲ್ಲಿ ಸ್ಟುಡಿಯೊ ಕ್ಲೀನ್ ಮಾಡುವ ಕೆಲಸವನ್ನು ಮಾಡಿರುವುದಾಗಿ ಹೇಳಿದ್ದಾರೆ.

ಬಾಲಿವುಡ್ ಸ್ಟಾರ್ ನಟಿ ರವೀನಾ ಟಂಡನ್(Raveena Tandon) ಸದ್ಯ ರಮಿಕಾ ಸೇನ್ ಆಗಿ ವಿಶ್ವದಾದ್ಯಂತ ಸದ್ದು ಮಾಡುತ್ತಿದ್ದಾರೆ. ಬ್ಲಾಕ್ ಬಸ್ಟರ್ ಕೆಜಿಎಫ್-2(KGF 2) ಸಿನಿಮಾದಲ್ಲಿ ರವೀನಾ ಟಂಡನ್ ರಮಿಕಾ ಸೇನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರವೀನಾ ಅವರನ್ನು ರಮಿಕಾ ಸೇನ್ ಅಂತಾನೆ ಎಲ್ಲರೂ ಕರೆಯುತ್ತಿದ್ದಾರೆ. ದೊಡ್ಡ ಮಟ್ಟದ ಸಕ್ಸಸ್ ಎಂಜಾಯ್ ಮಾಡುತ್ತಿರುವ ರವೀನಾ ಟಂಡನ್ ಇತ್ತೀಚಿಗಷ್ಟೆ ತನ್ನ ಪ್ರಾರಂಭದ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಕುಟುಂಬದಿಂದ ಬಂದಿದ್ದರೂ ರವೀನಾ ಎಷ್ಟು ಕಷ್ಟಪಟ್ಟು ಮೇಲೆ ಬಂದರು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ. 30 ವರ್ಷಗಳ ಹಿಂದೆ ಎಂದರೆ 1991ರಲ್ಲಿ ರವೀನಾ ಟಂಡನ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಖ್ಯಾತ ನಿರ್ಮಾಪಕ ರವಿ ಡಂಟನ್ ಮಗಳು ರವೀನಾ ಟಂಡನ್.

ಸಿನಿಮಾ ಕುಟುಂಬದಿಂದ ಬಂದರೂ ರವೀನಾ ಸಿನಿಮಾ ಮತ್ತು ಜಾಹೀರಾತು ನಿರ್ಮಾಪಕ ಪ್ರಹ್ಲಾದ್ ಕಕ್ಕರ್ ಅವರ ಕಚೇರಿಯಲ್ಲಿ ಕೆಲಸ ಪ್ರಾರಂಭ ಮಾಡುವ ಮೂಲಕ ಸಿನಿಮಾರಂಗದ ಜರ್ನಿ ಪ್ರಾರಂಭ ಮಾಡಿರುವುದಾಗಿ ಹೇಳಿದ್ದಾರೆ. ಪ್ರಾರಂಭದ ದಿನಗಳಲ್ಲಿ ಸ್ಟುಡಿಯೊ ಕ್ಲೀನ್ ಮಾಡುವ ಕೆಲಸವನ್ನು ಮಾಡಿರುವುದಾಗಿ ಹೇಳಿದ್ದಾರೆ. ಯಾವತ್ತು ನಟಿಯಾಗಬೇಕೆಂದು ಬೆಳೆದಿಲ್ಲ ಎಂದು ರವೀನಾ ಹೇಳಿದ್ದಾರೆ.

ಈ ಬಗ್ಗೆ ಮಿಡ್ ಡೇ ಜೊತೆ ಮಾತನಾಡಿದ ರವೀನಾ ಟಂಡನ್, 'ನಾನು ಸ್ಟುಡಿಯೊ ಫ್ಲೋರ್ ನಲ್ಲಿ ವಾಂತಿ ಕ್ಲೀನ್ ಮಾಡುವ ಮೂಲಕ ನನ್ನ ವೃತ್ತಿ ಜೀವನ ಪ್ರಾರಂಭಿಸಿದೆ. ಪ್ರಹ್ಲಾದ್ ಕಕ್ಕರ್ ಜೊತೆ ಕೆಲಸ ಮಾಡುತ್ತಿದ್ದೆ. ಆ ಸಮಯದಲ್ಲಿ ಅವರು ಪರದೆ ಹಿಂದೆ ಏನು ಮಾಡುತ್ತಿದ್ದೀರಿ ಎಂದು ಹೇಳುತ್ತಿದ್ದರು. ನೀವು ಪರದೆ ಮುಂದೆ ಇರಬೇಕು ಎನ್ನುತ್ತಿದ್ದರು. ನಾನು ಇಲ್ಲ ಇಲ್ಲ..ನಾನು ನಟಿಯಾಗುವುದಾ ಎಂದು ಹೇಳುತ್ತಿದ್ದೆ. ಡಿಫಾಲ್ಟ್ ಆಗಿ ಚಿತ್ರರಂಗದಲ್ಲಿ ಇದ್ದೀನಿ. ನಾನು ನಟಿಯಾಗುತ್ತೇನೆ ಎಂದು ಯೋಚಿಸಿರಲಿಲ್ಲ' ಎಂದಿದ್ದಾರೆ.

IPL 2022: RCB ಪಂದ್ಯ ವೀಕ್ಷಿಸಿದ KGF 2 ಅಧೀರ ಮತ್ತು ರಮಿಕಾ ಸೇನ್; ಫೋಟೋ ವೈರಲ್

ಮಾಡೆಲ್ ಗಳು ಸೆಟ್ ಗೆ ಬರದಿದ್ದಾಗ ಪ್ರಹ್ಲಾದ್ ಅವರು ರವೀನಾಗೆ ಕರೆ ಮಾಡಿ ಎನ್ನುತ್ತಿದ್ದರು. ಅವರು ನನಗೆ ಮೇಕಪ್ ಮಾಡಿಕೊಳ್ಳಲು, ಪೋಸ್ ನೀಡಲು ಹೇಳುತ್ತಿದ್ದರು. ಇದನ್ನೆಲ್ಲಾ ನಾನು ಮಾಡಬೇಕೆ ಎಂದು ಯೋಚಿಸುತ್ತಿದ್ದೆ. ಬಳಿಕ ಅವರಿಗ್ಯಾಕೆ ನಾನು ಉಚಿತವಾಗಿ ಮಾಡಬೇಕು ಅಂತಯೋಚಿಸಿ, ಮಾಡಲಿಂಗ್ ಶುರು ಮಾಡಿದೆ.

ಆಗ ನನಗೆ ಸಿನಿಮಾ ಆಫರ್ ಗಳು ಬರುತ್ತಲೇ ಇದ್ದವು. ಆದರೆ ನಾನು ನಟನೆ, ಡಾನ್ಸಿಂಗ್, ಡೈಲಾಗ್ ಡೆಲಿವರಿ ಯಾವುದರ ಬಗ್ಗೆಯೂ ತರಬೇತಿ ಪಡೆದಿಲ್ಲ. ನಾನು ಕೆಲಸ ಮಾಡುತ್ತಾ ಎಲ್ಲವನ್ನು ಕಲಿಯುತ್ತಾ ಬೆಳೆದೆ ಎಂದು ಹೇಳಿದ್ದಾರೆ.

ಕಪಿಲ್ ಶರ್ಮಾ ಜೊತೆ ಟಿಪ್ ಬರ್ಸಾ ಪಾನಿ ಹಾಡಿಗೆ ಹೆಜ್ಜೆ ಹಾಕಿದ ರವೀನಾ ಟಂಡನ್!

ಕೆಜಿಎಫ್-2 ಬಗ್ಗೆ

ಕೆಜಿಎಫ್-2 ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ. ಎಲ್ಲಾ ದಾಖಲೆಯಗಳನ್ನು ಪುಡಿ ಪುಡಿ ಮಾಡಿ ಕೆಜಿಎಫ್-2 ಭಾರತೀಯ ಸಿನಿಮಾರಂಗದಲ್ಲಿ ಇತಿಹಾಸ ಬರೆದಿದೆ. ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಅಭಿನಯ, ಸಂಜಯ್ ದತ್ ಆರ್ಭಟ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್, ಪ್ರಕಾಶ್ ರೈ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಅದ್ದೂರಿ ಮೇಕಿಂಗ್, ಆಕ್ಷನ್, ಸಂಗೀತ, ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. ವಾರದ ಬಳಿಕವೂ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಮ್ ಚರಣ್ ಜೊತೆ ಐಟಂ ಸಾಂಗ್ಸ್‌ಗೆ ಹೆಜ್ಜೆ ಹಾಕಿದ ನಟಿಯರಿವರು! ಈಗ ಎಲ್ಲರ ಕಣ್ಣು ಆಕೆಯ ಮೇಲೆ
Sanjay Dutt KD movie controversy: ಜೋಗಿ ಪ್ರೇಮ್ ಸಿನಿಮಾದ ಗೀತೆಗೆ ಸಂಜಯ್ ದತ್ ಕ್ಷಮೆ | ಏನಿದು ವಿವಾದ?