ಸುಶಾಂತ್ ಹಾಗೂ ರಿಯಾ ಸಂಬಂಧ ಮಧ್ಯೆ ಮಹೇಶ್ ಭಟ್‌ಗೇನು ಕೆಲಸ ಎಂದು ನಟಿ ಸುಚಿತ್ರಾ ಕೃಷ್ಣ ಮೂರ್ತಿ ಪ್ರಶ್ನಿಸಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ ಹೆಸರಿನ ಜೊತೆಗೆ ಹಿಡಿಯ ನಿರ್ದೇಶಕ ಮಹೇಶ್ ಭಟ್ ಹೆಸರೂ ಕೇಳಿ ಬಂದಿದೆ. ಸುಶಾಂತ್-ರಿಯಾ ಸಂಬಂಧದ ಮಧ್ಯೆ ಮಹೇಶ್ ಭಟ್‌ಗೇನು ಕೆಲಸ ಎಂದು ನಟಿ ಸುಚಿತ್ರಾ ಕೃಷ್ಣ ಮೂರ್ತಿ ಪ್ರಶ್ನಿಸಿದ್ದಾರೆ.
ರಿಯಾ-ಸುಶಾಂತ್ ಸಂಬಂಧದಲ್ಲಿ ಮಹೇಶ್ ಭಟ್ ಪಾತ್ರವೇನು..? ಸಿಬಿಐ ಮಹೇಶ್ ಭಟ್ ಅವರ ವಿಚಾರಣೆ ನಡೆಸಿದೆಯಾ..? ಎಂದು ಪ್ರಶ್ನಿಸಿದ್ದಾರೆ. ಸಿಬಿಐ ವಿಚಾರಣೆಗಾಗಿ ಮಹೇಶ್ ಭಟ್ ಅವರನ್ನು ಕರೆದಿದೆಯೇ..? ಮಹೇಶ್ ಸುಶಾಂತ್ ಮತ್ತು ರಿಯಾ ಮಧ್ಯೆ ಅಷ್ಟು ಕಠಿಣವಾಗಿದ್ದೇಕೆ ಎಂದು ನಟಿ ಟ್ವೀಟ್ ಮಾಡಿದ್ದಾರೆ.
ಡ್ರಗ್ಸ್ ಡೀಲಿಂಗ್: ಸುಶಾಂತ್ ಗರ್ಲ್‌ಫ್ರೆಂಡ್ ರಿಯಾ ವಿರುದ್ಧ ಕೇಸ್
ಇತ್ತೀಚೆಗಷ್ಟೇ ರಿಯಾ ಮತ್ತು ಮಹೇಶ್ ಭಟ್ ಚಾಟ್ ಸ್ಲ್ರೀನ್ ಶಾಟ್ ವೈರಲ್ ಆಗಿತ್ತು. ಆಕೆ ಜೂನ್ 8ರಂದು ಸುಶಾಂತ್ ಮನೆ ಬಿಡುತ್ತಿರುವುದಾಗಿ ಆಕೆ ಮೆಸೇಜ್ ಮಾಡಿದ್ದಳು. ಹಿಂತಿರುಗಿ ನೋಡಬೇಡ. ನಿನ್ನ ತಂದೆಗೆ ಖುಷಿಯಾಗುತ್ತದೆ ಎಂದು ಮಹೇಶ್ ಭಟ್ ಮೆಸೇಜ್ ಮಾಡಿದ್ದರು. ಈ ಘಟನೆಯಾಗಿ ಜೂನ್ 14ರಂದು ನಟ ಆತ್ಮಹತ್ಯೆ ಮಾಡಿಕೊಂಡಿದ್ದರು.
Has been called in by for questioning? Why was he so adamant leave when she did on 8th June?
— Suchitra Krishnamoorthi (@suchitrak)ಮಹೇಶ್ ಭಟ್ ತಂದೆಗೆ ಸಮಾನ ಎಂದು ಹೇಳಿಕೆ ನೀಡಿದ್ದ ರಿಯಾ ಮತ್ತು ಹಿರಿಯ ನಿರ್ದೇಶಕ ಮಹೇಶ್ ಮಧ್ಯದ ಚಾಟ್ ವೈರಲ್ ಆಗುತ್ತಿದ್ದಂತೆ ಇಬ್ಬರೂ ಟ್ರೋಲ್ ಆಗಿದ್ದರು. ಅವರಿಬ್ಬರ ಫೋಟೋಸ್ ಕೂಡಾ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸುಶಾಂತ್ ಮನೆ ಬಿಡುವ ಮುನ್ನ 8 ಹಾರ್ಡ್ ಡ್ರೈವ್ ನಾಶ ಮಾಡಿದ್ದ ರಿಯಾ
ಸುಶಾಂತ್ ಮೃತಪಟ್ಟ ನಂತರ ಮಹೇಶ್ ಭಟ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು, ಸಡಕ್ 2 ನೆಲಕಚ್ಚಿದೆ. ಟ್ರೈಲರ್ ಮೋಸ್ಟ್ ಡಿಸಲೈಕ್ಡ್ ಟ್ರೈಲರ್ ಆಗಿ ಮೂಡಿ ಬಂದಿದ್ದರೆ, ಸಿನಿಮಾಗೆ 1.1 ರೇಟಿಂಗ್ ಬಂದಿದೆ.,