ವಾರದಲ್ಲಿ ಕಂಗನಾಗೆ 1 ಮಿಲಿಯನ್ ಫಾಲೋವರ್ಸ್: ಸ್ಪೆಷಲ್ ಮೆಸೇಜ್ ಕೊಟ್ಟ ಕ್ವೀನ್

By Suvarna NewsFirst Published Sep 1, 2020, 10:16 AM IST
Highlights

ಇತ್ತೀಚೆಗಷ್ಟೇ ಟ್ವಿಟರ್ ಸೇರಿಕೊಂಡ ಬಾಲಿವುಡ್ ನಟಿ ಕಂಗನಾ ರಣಾವತ್‌ ಫಾಲೋವರ್ಸ್‌ ಸಂಖ್ಯೆ 1 ಮಿಲಿಯನ್ ತಲುಪಿದೆ.

ಬಾಲಿವುಡ್ ಕ್ವೀನ್ ನಟಿ ಕಂಗನಾ ರಣಾವತ್ ಫಾಲೋವರ್ಸ್ ಸಂಖ್ಯೆ 1 ಮಿಲಿಯನ್ ಆಗಿದೆ. ಈ ಸಂದರ್ಭ ನಟಿ ಸ್ಪೆಷಲ್ ಮೆಸೇಜ್ ಕೂಡಾ ಕೊಟ್ಟಿದ್ದಾರೆ. ಟ್ವಿಟರ್ ಸೇರಿದ ಒಂದೇ ವಾರದಲ್ಲಿ ಕಂಗನಾ ಫಾಲೋವರ್ಸ್ ಸಂಖ್ಯೆ 1 ಮಿಲಿಯನ್ ಆಗಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್ ನೆಪೊಟಿಸಂನ್ನು ತೀವ್ರವಾಗಿ ಟೀಕಿಸುತ್ತಿರುವ ನಟಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ವಿಡಿಯೋ ಮಾಡಿದ ನಟಿ ತಮ್ಮ ಫಾಲೋವರ್ಸ್‌ಗೆ ಥ್ಯಾಂಕ್ಸ್ ಹೇಳಿದ್ದಾರೆ.

ಮೂವಿ ಮಾಫಿಯಾ ಗೂಂಡಾಗಳಿಗಿಂತ ನಂಗೆ ಮುಂಬೈ ಪೊಲೀಸರ ಭಯ: ಕಂಗನಾ

ಮಣಿಕರ್ಣಿಕಾ ನಟಿ ಮಣಿಪುರಿ ಡ್ರೆಸ್‌ ಫಾನೆಕ್‌ನಲ್ಲಿ ಕಾಣಿಸಿಕೊಂಡು ಭಾರತದ ಫ್ಯಾಷನ್‌, ವಿಶೇಷವಾಗಿ ಈಶಾನ್ಯ ಭಾಗದ ಫ್ಯಾಷನ್‌ ಪ್ರೇರಣೆಯಾಗಿ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.

Smile or not to smile ? Which is more appealing? pic.twitter.com/FQXzCXtfQV

— Kangana Ranaut (@KanganaTeam)

ಬೇರೆಯವರನ್ನು ಅಳವಡಿಸಿಕೊಂಡು ನಮ್ಮದನ್ನು ತಿರಸ್ಕರಿಸುವುದು ಫ್ಯಾಷನ್ ಅಲ್ಲ. ರಾಷ್ಟ್ರೀಯತೆಯ ನಿಜವಾದ ಅರ್ಥ ರಾಷ್ಟ್ರ ಮೊದಲು, ನಮ್ಮದಕ್ಕೆ ಮೊದಲ ಆದ್ಯತೆ. ನನ್ನ 1 ಮಿಲಿಯನ್ ಟ್ವಿಟರ್ ಕುಟುಂಬಕ್ಕೆ ಚೀಯರ್ಸ್ ಎಂದು ಬರೆದಿದ್ದಾರೆ.

ಬಾಲಿವುಡ್‌ನಲ್ಲಿ ಹೇಗಿರುತ್ತೆ ಗೊತ್ತಾ ಡ್ರಗ್‌ ಮಾಫಿಯಾ?

ಕಂಗನಾ ತಲೈವಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು,  ಮಾರ್ಚ್ ತನಕ ನಟಿ ಈ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದರು.  ಇನ್ನು ತೇಜಸ್‌ ಸಿನಿಮಾ ಶೂಟಿಂಗ್ ಕೂಡಾ ಶೀಘ್ರ ಆರಂಭವಾಗಲಿದೆ. ಇದರಲ್ಲಿ ನಟಿ ಏರ್ ಫೋರ್ಸ್‌ ಪೈಲಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

click me!