ಬ್ಲಾಕ್ ಫಾಂಥರ್ ಸಿನಿಮಾ ಖ್ಯಾತಿಯ ಚಡ್ವಿಕ್ ಬೋಸ್ಮನ್ ಕೊನೆಯ ಟ್ವೀಟ್ ಅತ್ಯಧಿಕ ಲೈಕ್ಸ್ ಪಡೆದ ಟ್ವೀಟ್ ಆಗಿ ಹೊರಹೊಮ್ಮಿದೆ.
ಸ್ವತಃ ಟ್ವಿಟರ್ ಅಧಿಕೃತ ಖಾತೆ ಇದನ್ನು ತಿಳಿಸಿದ್ದು, ಚಡ್ವಿಕ್‌ನನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದೆ. ಬೋಸ್‌ಮನ್ ಸಾವಿನ ಸುದ್ದಿ ತಿಳಿಸಿದ ಟ್ವೀಟ್‌ಗೆ 2.9 ಮಿಲಿಯನ್ ಲೈಕ್ಸ್ ಬಂದಿದೆ. 152 ಸಾವಿರ ರಿಪ್ಲೈಗಳು ಬಂದಿದೆವ.
undefined
ಟ್ವೀಟ್‌ನಲ್ಲಿ ಚಡ್ವಿಕ್‌ನ ಫೋಟೋ ಹಾಗೂ ಆತನ ಸಾವಿನ ಸಂಬಂಧಿಸಿ ಕುಟುಂಭ ನೀಡಿದ ಹೇಳಿಕೆ ಇದೆ. ನಾಲ್ಕು ವರ್ಷದಿಂದ ಕೊಲೊನ್ ಕ್ಯಾನ್ಸರ್ ಜೊತೆ ಹೋರಾಡುತ್ತಿದ್ದ ನಟ ಶುಕ್ರವಾರ ನಿಧನರಾಗಿದ್ದಾರೆ.
ಬ್ಲಾಕ್ ಪಾಂಥರ್ ನಟನ ಬಲಿ ಪಡೆದ ಕೊಲೊನ್ ಕ್ಯಾನ್ಸರ್ ಅಂದ್ರೇನು..?
ಬ್ಲಾಕ್ ಫಾಂಥರ್ ಸಿನಿಮಾ ಖ್ಯಾತಿಯ ಚಡ್ವಿಕ್ ಬೋಸ್ಮನ್ ಕೊನೆಯ ಟ್ವೀಟ್ ಅತ್ಯಧಿಕ ಲೈಕ್ಸ್ ಪಡೆದ ಟ್ವೀಟ್ ಆಗಿ ಹೊರಹೊಮ್ಮಿದೆ. ಮಾರ್ವೆಲ್ ಯುನಿವರ್ಸ್ ಸಿನಿಮಾಟಿಕ್ ಮೂವೀಸ್‌ನ ಬ್ಲಾಕ್ ಫಾಂಥರ್ ಅತ್ಯಂತ ಫೇಮಸ್. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ನಟನಿಗೆ ಗೌರವ ಸಲ್ಲಿಸಿದ್ದಾರೆ.
Most liked Tweet ever.
A tribute fit for a King. https://t.co/lpyzmnIVoP
ಜನರು, ಸಿನಿಮಾ ಉದ್ಯಮ ಪ್ರಮುಖರು, ರಾಜಕಾರಣಿಗಳೂ ಸೇರಿ ಒಬಾಮ ಅವರೂ ನಮನ ಸಲ್ಲಿಸಿದ್ದಾರೆ. ಜೀವದ ಜೊತೆ ಹೋರಾಡುತ್ತಲೇ ನಟನೆಯ ಲೆವೆಲ್ ತಲುಪಿದರು. ಇದುವೇ ಹಿರೋಯಿಸಂ. ನಾವು ಕಳೆದ ಖುಷಿಯ ಸಮಯ, ನಗು ಗೇಮ್ ಚೇಂಜಿಂಗ್ ರೀತಿ ಎಲ್ಲವನ್ನೂ ನೆನಪಿಸಿಕೊಳ್ಳುತ್ತೇನೆ ಎಂದು ಡೌನಿ ಜೆಆರ್ ಟ್ವೀಟ್ ಮಾಡಿದ್ದಾರೆ.
ಚಡ್ವಿಕ್ ಬೋಸ್‌ಮನ್ ನಿಧನರಾಗಿದ್ದಾರೆಂದು ಈ ಮೂಲಕ ತಿಳಿಸುತ್ತಿದ್ದೇವೆ. ಕೊಲೊನ್ ಕ್ಯಾನ್ಸರ್‌ಗೆ 2016ರಲ್ಲಿ ಡಯಾಗ್ನಿಸಿಸ್‌ಗೊಳಗಾಗಿದ್ದ ನಟ 4 ವರ್ಷದಿಂದ 4ನೇ ಹಂತದ ಕ್ಯಾನ್ಸರ್ ಜೊತೆ ಹೋರಾಡಿಕೊಂಡು ಬಂದಿದ್ದರು.
ನಿಜವಾದ ಫೈಟರ್ ಆಗಿದ್ದ ಚಡ್ವಿಕ್ ಇದೆಲ್ಲದರ ಜೊತೆಗೆ ಹೋರಾಡುತ್ತಲೇ ನೀವೆಲ್ಲರು ಇಷ್ಟಪಡುವ ಹಲವು ಸಿನಿಮಾ ಮಾಡಿದ್ದಾರೆ. ಮಾರ್ಷಲ್‌ನಿಂದ ತೊಡಗಿ ಡ 5 ಬ್ಲಡ್ಸ್, ಅಗಸ್ಟ್ ವಿಲ್ಸನ್ಸ್‌ನ ಮಾ ರೈನಿ ಬ್ಲಾಕ್ ಬಾಟಮ್ ಹಾಗೂ ಹಲವು ಸಿನಿಮಾಗಳು ಕ್ಯಾನ್ಸರ್ ಹೋರಾಟ ಮತ್ತು ಕಿಮಿಯೋ ಥೆರಪಿ ನಡುವೆಯೇ ನಡೆದಿತ್ತು.
ಬ್ಲಾಕ್ ಫಾಂಥರ್ ಮೂಲಕ ಕಿಂಗ್ ಟಿ ಚಲ್ಲಗೆ ಲೈಫ್ ಕೊಟ್ಟಿದ್ದು, ಚಡ್ವಿಕ್ ಸಿನಿಮಾ ಜರ್ನಿಯ ಗೌರವ. ಪತ್ನಿ, ಕುಟುಂಬಸ್ಥರ ಜೊತೆಯಲ್ಲಿದ್ದಾಗಲೇ ನಟ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ನಿಮ್ಮ ಪ್ರೀತಿ, ಪ್ರಾರ್ಥನೆಗಳಿಗಾಗಿ ಚಡ್ವಿಕ್ ಕುಟುಂಬದ ಧನ್ಯವಾದಗಳು. ಈ ಕಷ್ಟದ ಸಂದರ್ಭ ಅವರ ಖಾಸಗಿತನವನ್ನು ಗೌರವಿಸಿ ಎಂದು ಬರೆಯಲಾಗಿದೆ.