ಬೆತ್ತಲೆಯಾದ ನಟಿ ಜೊತೆ ನಿವೇದಿತಾ ಗೌಡ ಹೋಲಿಕೆ? ಯಾರು ಆ ನಗ್ನ ಸುಂದರಿ? ಇಲ್ಲಿದೆ ಮಾಹಿತಿ

By Mahmad Rafik  |  First Published Aug 10, 2024, 10:48 AM IST

ಬಿಗ್‌ಬಾಸ್‌ ಬೊಂಬೆ ನಿವೇದಿತಾ ಗೌಡರನ್ನು ಕನ್ನಡದ ತೃಪ್ತಿ ದಿಮ್ರಿ ಎಂದು ಕರೆಯಲಾಗುತ್ತಿದೆ. ಚಿತ್ರವೊಂದರಲ್ಲಿ ಬೆತ್ತಲಾಗಿದ್ದ ಈ ತೃಪ್ತಿ ದಿಮ್ರಿ ಯಾರು  ಎಂಬುದರ ಮಾಹಿತಿ ಇಲ್ಲಿದೆ.


ಬೆಂಗಳೂರು: ಬಿಗ್‌ಬಾಸ್‌ ಬೊಂಬೆ ಅಂತಾನೇ ಫೇಮಸ್ ಆಗಿರೋ ನಿವೇದಿತಾ ಗೌಡ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಅದರಲ್ಲಿಯೂ ಟ್ರೆಂಡಿಂಗ್ ಹಾಡುಗಳಿಗೆ ರೀಲ್ಸ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೆಲ್ಲದರ ಜೊತೆ ನಿವೇದಿತಾ ಗೌಡ ಅತಿ ಹೆಚ್ಚು ಟ್ರೋಲ್‌ಗೆ ಒಳಗಾಗುವ ಸೆಲಿಬ್ರಿಟಿಯಾಗಿದ್ದಾರೆ. ಯಾವುದೇ ವಿಡಿಯೋ ಅಥವಾ ರೀಲ್ಸ್ ಇರಲಿ ನಿವೇದಿತಾ ಗೌಡ ಒಂದಿಲ್ಲ ಒಂದು ಕಾರಣಕ್ಕೆ ಟ್ರೋಲ್ ಆಗುತ್ತಾರೆ. ಕೆಲ ದಿನಗಳ ಹಿಂದೆ ಬ್ಲ್ಯಾಕ್ ಗೌನ್ ಧರಿಸಿ ಮೊಳಕಾಲನ್ನು ತೋರಿಸಿ ಮಾದಕತೆಯಿಂದ ಸೊಂಟ ಬಳುಕಿಸಿದ್ದಕ್ಕೆ ನೆಟ್ಟಿಗರು ನೀವು ನಮ್ಮ ತೃಪ್ತಿ ದಿಮ್ರಿ ಎಂದು ಹೋಲಿಕೆ ಮಾಡಿದ್ದರು. ಹಾಗಾದ್ರೆ ಯಾರು ಈ ತೃಪ್ತಿ ದಿಮ್ರಿ?  ಈ ನಟಿಯನ್ನು ಕಂಡು ಪಡ್ಡೆ ಹುಡುಗರ ಕಣ್ಣು ಅರಳಿಸಿದ್ದೇಕೆ ಎಂದು ನೋಡೋಣ ಬನ್ನಿ. 

30 ವರ್ಷದ ತೃಪ್ತಿ ದಿಮ್ರಿ ಬಾಲಿವುಡ್ ನಟಿಯಾಗಿದ್ದು, ಮಾದಕತೆಯ ಮತ್ತೊಂದು ಹೆಸರು ಅಂದ್ರೆ ತೃಪ್ತಿ ಅನ್ನುವಂತಾಗಿದೆ. 2017ರ ಪೋಸ್ಟರ್ ಬಾಯ್ಸ್ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ರೂ ಅನಿಮಲ್ ಸಿನಿಮಾ ತೃಪ್ತಿಗೆ ದೊಡ್ಡಮಟ್ಟದ ಸಕ್ಸಸ್ ತಂದುಕೊಟ್ಟಿತ್ತು. ಲೈಲಾ ಮಜ್ನು (2018), ಬುಲ್‌ಬುಲ್ (2020), ಖಾಲಾ (2022) ಸಿನಿಮಾಗಳಲ್ಲಿಯೂ ತೃಪ್ತಿ ನಟಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಫೋರ್ಬ್ಸ್ ಏಷ್ಯಾದ 2021 ರ 30 ವರ್ಷದೊಳಗಿನವರ 30 ಮಹಿಳೆಯರ ಪಟ್ಟಿಯಲ್ಲಿ ತೃಪ್ತಿ ದಿಮ್ರಿ ಹೆಸರು ಸೇರ್ಪಡೆಯಾಗಿತ್ತು. ಕಳೆದ ತಿಂಗಳಷ್ಟೇ ವಿಕ್ಕಿ ಕೌಶಲ್‌ ಜೊತೆ ಬ್ಯಾಡ್ ನ್ಯೂಸ್ ಚಿತ್ರದ ಹಾಡಿನಲ್ಲಿ ತಮ್ಮ ಮಾದಕತೆ ಮೂಲಕ ನೀರಿನಲ್ಲಿಯೂ ಕಿಚ್ಚು ಹಚ್ವಿದ್ದರು. 

Tap to resize

Latest Videos

ತೃಪ್ತಿ ದಿಮ್ರಿ ಉತ್ತರಾಖಂಡದ ಗರ್ವಾಹಲ ಮೂಲದವರು. ನನ್ನ ಪೋಷಕರು ಅಮ್ಮ ಮೀನಾಕ್ಷಿ ಮತ್ತು  ತಂದೆ ದಿನೇಶ್ ನನಗೆ ಸಂಪೂರ್ಣ ಬೆಂಬಲ ನೀಡುತ್ತಾರೆ ಹಾಗೂ ನನ್ನ ಕೆಲಸವನ್ನು ಸಹ ಗೌರವಿಸುತ್ತಾರೆ ಎಂದು ತೃಪ್ತಿ ದಿಮ್ರಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಇದರ ಜೊತೆಗೆ ಅನಿಮಲ್ ಚಿತ್ರದಲ್ಲಿ ಬೆತ್ತಾಲಾಗಿದ್ದಕ್ಕೆ ತಂದೆ ಬೇಸರ ವ್ಯಕ್ತಪಡಿಸಿದ್ದರು ಎಂಬ ವಿಚಾರವನ್ನು ಹೇಳಿಕೊಂಡಿದ್ದರು. ಇದಾದ ಬಳಿಕವೂ ಬ್ಯಾಡ್‌ ನ್ಯೂಸ್‌ ನಲ್ಲಿಯೂ ಬಿಂದಾಸ್ ಆಗಿ ತೃಪ್ತಿ ದಿಮ್ರಿ ಕಾಣಿಸಿಕೊಂಡಿದ್ದರು. ಬಾಲಿವುಡ್‌ನಲ್ಲಿ ಹಾಟ್‌ ಗರ್ಲ್ ಎಂದೇ ತೃಪ್ತಿ ದಿಮ್ರಿ ಪರಿಚಿತರಾಗುತ್ತಿದ್ದು, ಇದೇ ನಟಿಗೆ ನಿವೇದಿತಾ ಗೌಡರನ್ನು ನೆಟ್ಟಿಗರು ಹೋಲಿಸಿ ಕಮೆಂಟ್ ಮಾಡುತ್ತಿದ್ದಾರೆ.

ನೀನು ನನ್ನನ್ನೇ ಲವ್​ ಮಾಡೋದು ಚೆನ್ನಾಗಿ ಗೊತ್ತು ಎಂದಳಲ್ಲಾ ನಿವೇದಿತಾ! ಮಂಚದಲ್ಲಿ ಕುಳಿತು ಏನಿದು ಹೊಸ ಸ್ಟೋರಿ?

ಯಾಕೆ ಈ ಹೋಲಿಕೆ?

ಇತ್ತೀಚಿನ ದಿನಗಳಲ್ಲಿ ನಿವೇದಿತಾ ಗೌಡ ಮಾದಕ ಚೆಲುವೆಯಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿವೆ. ಇತ್ತೀಚಿನ ರೀಲ್ಸ್ ನಲ್ಲಿಯೂ ನಿವೇದಿತಾರನ್ನು ಕಂಡವರು ಕ್ಯೂಟ್ ಬದಲಾಗಿ ಹಾಟ್ ಎಂದು ಕಮೆಂಟ್ ಮಾಡಲು ಶುರು ಮಾಡಿದ್ದಾರೆ. ಈ ಸೂಕ್ಷ್ಮತೆಯನ್ನು ಗಮನಿಸಿದ ನೆಟ್ಟಿಗರು ತೃಪ್ತಿ ದಿಮಿರಿ ಜೊತೆ  ನಿವೇದಿತಾ ಗೌಡರನ್ನು ಹೋಲಿಸುತ್ತಿದ್ದಾರೆ.

ಬಿಗ್‌ಬಾಸ್ ಶೋ ಮೂಲಕ ಕನ್ನಡಿಗರಿಗೆ ಪರಿಚಯವಾದ ನಿವೇದಿತಾ ಗೌಡ,  ನಂತರ ಗಿಚ್ಚ ಗಿಲಿ ಗಿಲಿ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದರು. ಬಿಗ್‌ಬಾಸ್‌ನಲ್ಲಿ ಪರಿಚಯವಾಗಿದ್ದ ಗಾಯಕ ಚಂದನ್ ಶೆಟ್ಟಿ ಜೊತೆ ನಿವೇದಿತಾ ಗೌಡ ಮದುವೆಯಾಗಿದ್ದರು. ಸಂಸಾರದಲ್ಲಿ ಹೊಂದಾಣಿಕೆ ಕಾಣದ ಹಿನ್ನೆಲೆ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡು ಬೇರೆಯಾಗಿದ್ದರು. ನಂತರ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಅಭಿಮಾನಿಗಳಿಗೆ ತಾವು ಪ್ರತ್ಯೇಕವಾಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದರು. ನಿವೇದಿತಾ ಗೌಡ ಮೈಸೂರು ಮೂಲದವರಾಗಿದ್ದು, ದಸರಾ ಕಾರ್ಯಕ್ರಮದಲ್ಲಿಯೇ ಚಂದನ್ ಶೆಟ್ಟಿ ಪ್ರಪೋಸ್ ಮಾಡಿದ್ದರು. ಇದು ಸಹ ವಿವಾದಕ್ಕೆ ಗುರಿಯಾದ ಕಾರಣ ಚಂದನ್ ಮತ್ತು ನಿವೇದಿತಾ ಕ್ಷಮೆ ಕೇಳಿದ್ದರು.

ನಿವೇದಿತಾ ಗೌಡ ನೀವು ಸೀರೆಗಿಂತ ಶಾರ್ಟ್‌ ಡ್ರೆಸ್‌ನಲ್ಲೇ ಚಂದ ಕಾಣ್ತೀರಿ ಎಂದವರು ಎಷ್ಟು ಜನ ಗೊತ್ತಾ?

click me!