ಮಗಳಿಗಾಗಿ ಇದಕ್ಕೆ ಗುಡ್ ಬೈ ಹೇಳಿದ್ರಂತೆ ರಣಬೀರ್‌ ಕಪೂರ್, ಪೇರೆಂಟಿಂಗ್ ಬಗ್ಗೆ ರಣಬೀರ್ ಏನಂತಾರೆ?

By Bhavani Bhat  |  First Published Aug 9, 2024, 6:59 PM IST

ಪೇರೆಂಟಿಂಗ್ ಬಗ್ಗೆ ರಣಬೀರ್ ಕಪೂರ್ ತುಂಬಾ ನಿಗಾ ವಹಿಸಿದ್ದಾರಂತೆ. ಮಗಳನ್ನು ಬಹಳ ಪ್ರೀತಿಸುವ ರಣಬೀರ್ ಕಪೂರ್, ಇದೀಗ ಆಕೆಗಾಗಿ ತನ್ನ ಬಹುಕಾಲದ ಸಿಗರೇಟ್ ಸೇವನೆ ಹವ್ಯಾಸಕ್ಕೆ ಗುಡ್ ಬೈ ಹೇಳಿದ್ದಾರೆ.


ಮೊದಲೆಲ್ಲ ಸಿಕ್ಕ ಸಿಕ್ಕ ಹುಡುಗೀರ ಜೊತೆಗೆ ಡೇಟಿಂಗ್ ಮಾಡ್ಕೊಂಡು ಬಿಂದಾಸ್ ಆಗಿ ಇರ್ತಿದ್ದ ರಣಬೀರ್ ಕಪೂರ್ ಇದೀಗ ಸಂಪೂರ್ಣ ಬದಲಾಗಿದ್ದಾರೆ. ಜವಾಬ್ದಾರಿಯುತ ಅಪ್ಪನಂತೆ ಬಿಹೇವ್ ಮಾಡ್ತಿದ್ದಾರೆ. ಕೂತ್ರೆ ನಿಂತ್ರೆ ಬಂದು ಬಂದು ಮೈಮೇಲೆ ಬೀಳುವ ಮಗಳು ರಾಹಾಳನ್ನು ಸಂಭಾಳಿಸೋದೇ ಅವರಿಗೆ ಬಹು ದೊಡ್ಡ ಟಾಸ್ಕ್ ಆಗಿ ಬಿಟ್ಟಿದೆ. ಜೊತೆಗೆ ಅವಳ ಜೊತೆಗೆ ತನ್ನ ತಂದೆತನವನ್ನೂ ಇವರು ಎನ್‌ಜಾಯ್ ಮಾಡ್ತಿದ್ದಾರೆ. ತನ್ನ ಹಾಗೂ ಪತ್ನಿ ಆಲಿಯಾ ಭಟ್ ಲವ್‌ಸ್ಟೋರಿ ಬಗ್ಗೆ ಕೆಲವೊಮ್ಮೆ ಪಾಡ್‌ಕಾಸ್ಟ್‌ಗಳಲ್ಲಿ ಎಗ್ಗಿಲ್ಲದೆ ಮಾತಾಡ್ತಾರೆ. ಅಂದರೆ ಹುಡುಗುತನದ ರಣಬೀರ್ ತಂದೆತನದೊಳಗೆ ಕಳೆದುಹೋಗಿದ್ದಾರೆ ಅಂತ ಅವರ ಗರ್ಲ್ಸ್ ಫ್ಯಾನ್ಸ್‌ಗಳು ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ. ಹಾಗಂತ ರಣಬೀರ್ ಬೆಕ್ಕಿನ ಕಣ್ಣಿನ ಮುದ್ದು ಬೊಂಬೆಯಂಥಾ ಮಗಳನ್ನೆತ್ತಿಕೊಂಡು ಬಂದಾಗ ಅವರಿಗೆ ಇಷ್ಟ ಆಗದೆಯೂ ಇರೋದಿಲ್ಲ. ಆದರೆ ಮಗಳಿಗೋಸ್ಕರ ಈ ಪುಣ್ಯಾತ್ಮ ತನ್ನ ಹುಡುಗುತನದ ಕ್ಯೂಟ್‌ನೆಸ್‌ ಅನ್ನೇ ಕಳ್ಕೊಂಡು ಬಿಡ್ತಿದ್ದಾನಾ ಅನ್ನೋದು ಅವರ ಆತಂಕ.

ತನ್ನ ಹೆಂಡತಿ ಆಲಿಯಾ ಬಗ್ಗೆ ಇತ್ತೀಚೆಗೆ ರಣಬೀರ್ ಮನಸ್ಸು ಬಿಚ್ಚಿ ಮಾತನಾಡಿರೋದು ಹೆಚ್ಚಿನವರಿಗೆ ಇಷ್ಟ ಆಗಿದೆ. 'ನಾನು ಮದುವೆಯಾಗಿರುವವರೊಂದಿಗೆ ಸ್ನೇಹಿತರಂತೆ ತುಂಬಾ ಹತ್ತಿರವಾಗಿದ್ದೇನೆ. ಅವರೊಂದಿಗೆ ನಾನು ಚಾಟ್ ಮಾಡಬಹುದು, ನಗಬಹುದು. ಅವಳು ನನ್ನ ಬೆಸ್ಟ್ ಫ್ರೆಂಡ್ ಹಾಗೆ. ಹೀಗಾಗಿ ನಾನು ನಿಜವಾಗಿಯೂ ಅದೃಷ್ಟಶಾಲಿಯಾಗಿದ್ದೇನೆ. ಆಲಿಯಾ ಅದ್ಭುತ ವ್ಯಕ್ತಿ. ನನಗಿಂತ 11 ವರ್ಷ ಚಿಕ್ಕವಳು. ಅವಳ ಜೊತೆಗಿನ ಒಡನಾಟ ತುಂಬಾ ತಮಾಷೆಯಾಗಿದೆ; ಸಂಜಯ್ ಲೀಲಾ ಬನ್ಸಾಲಿಯವರು ಬಾಲ್ಯವಿವಾಹದ ಕುರಿತು ‘ಬಾಲಿಕಾ ವಧು’ ಎಂಬ ಚಿತ್ರವನ್ನು ನಿರ್ಮಿಸಲು ಬಯಸಿದ್ದರಿಂದ ನಾನು ಆಲಿಯಾಳನ್ನು 9 ವರ್ಷ ಮತ್ತು ನಾನು 20 ವರ್ಷದವಳಿದ್ದಾಗ ಮೊದಲ ಬಾರಿಗೆ ಭೇಟಿಯಾದೆ. ನಾವು ಒಟ್ಟಿಗೆ ಫೋಟೋಶೂಟ್ ಮಾಡಿದ್ದೆವು' ಎಂದು ರಣಬೀರ್ ಹೇಳಿದ್ದಾರೆ. 

Tap to resize

Latest Videos

undefined

ಸಿದ್ದರಾಮಯ್ಯ ಭೇಟಿಗೆ ಬಂದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ವಾಹನದಲ್ಲಿ ಹೆಬ್ಬಾವು!

ಆದರೆ ಆಲಿಯಾಳನ್ನು ಹೊಗಳಿ ಅಟ್ಟಕ್ಕೇರಿಸುವ ಭರದಲ್ಲಿ ಈತ ಕೆಲವೊಮ್ಮೆ ಎಡವಟ್ಟು ಮಾಡ್ತಾನೆ. 'ಆಲಿಯಾ ಹೆಂಡತಿಗಿಂತಲೂ ಹೆಚ್ಚು ತಾಯಿಯಾಗಿದ್ದಾಳೆ' ಅಂತಿರೋದಕ್ಕೆ ಸಾಕಷ್ಟು ಜನ ಟ್ರೋಲ್ ಮಾಡಿದ್ದಾರೆ. 

ಇರಲಿ, ಈಗ ವಿಷಯಕ್ಕೆ ಬರಾಣ. ಈ ರಣಬೀರ್ ಕಪೂರ್ ತಾಯಿಯಾಗಿ ಆಲಿಯಾ ಕಳೆದುಹೋಗಿದ್ದಾಳೆ, ನಂಗೆ ಹೆಂಡ್ತಿ ಕೈಗೆ ಸಿಕ್ತಿಲ್ಲ ಅನ್ನೋ ಟೋನ್‌ನಲ್ಲೇನೋ ಮಾತಾಡಿಬಿಟ್ರು. ಆದರೆ ತಾನೂ ತಂದೆಯಾಗಿ ಕಳೆದುಹೋಗಿದ್ದೆ ಅನ್ನೋದನ್ನು ಈತ ಮರೆತ ಹಾಗಿದೆ. ಈ ರಣಬೀರ್‌ಗೆ ತನ್ನ 17ನೇ ವಯಸ್ಸಿಂದ ಸಿಗರೇಟ್ ಸೇದಿ ರೂಢಿ. ಒಂದು ಹಂತದಲ್ಲಂತೂ ಅದು ಊಟ, ತಿಂಡಿಯಷ್ಟೇ ಲೈಫಲ್ಲಿ ನಾರ್ಮಲ್ ಆಗಿತ್ತು. ಈಗ ಈ ಪುಣ್ಯಾತ್ಮನಿಗೆ ವಯಸ್ಸು ನಲವತ್ತು ದಾಟಿದೆ. ಅಂದರೆ ಸುಮಾರು 20 ವರ್ಷಕ್ಕೂ ಜಾಸ್ತಿ ಸಮಯದಿಂದ ಸೇದುತ್ತಿದ್ದಾರೆ. ಅಂಥಾ ಅಭ್ಯಾಸವನ್ನು ಮಗಳಿಗಾಗಿ ತ್ಯಾಗ ಮಾಡಿಬಿಟ್ಟಿದ್ದಾರೆ. ತಾನು ಸಿಗರೇಟು ಸೇದಿ ಈಗಷ್ಟೇ ಕಣ್ಬಿಡುತ್ತಿರುವ ಆ ಎಳೆ ಗುಲಾಬಿಯಂಥಾ ಮಗುವಿನ ಪಕ್ಕ ಹೋಗೋದು ಈತನಿಗೆ ಇಷ್ಟವೇ ಆಗ್ತಿಲ್ಲವಂತೆ. ಬಹಳ ಕಿರಿಕಿರಿ ಆಗೋದಕ್ಕೆ ಶುರುವಾಯ್ತಂತೆ. ಅದಕ್ಕಾಗಿ ತನ್ನ ಮುದ್ದಾದ ಮಗಳ ಮುಂದೆ ಈ ಕೆಟ್ಟ ಕೊಳಕು ಸಿಗರೇಟ್ ಬೇಕಾ ಅಂತ ದೂರ ಎಸೆದುಬಿಟ್ಟರಂತೆ, ನಿಮ್ಮಾಣೆ, ಆವತ್ತಿಂದ ಸೇದಿಲ್ಲ ಅಂತಿದ್ದಾರೆ ಈ ಆನಿಮಲ್ ನಟ.

ಅರೆರೆ! ಬದಲಾಗಿದ್ದಾರೆ ರಾಖಿ ಸಾವಂತ್, ಇದೇ ಫಸ್ಟ್ ಟೈಮ್ ಎಲ್ರೂ ಹೊಗಳುತ್ತಿದ್ದಾರೆ!
 

click me!