ಒಂದು ಕೀರ್ತನೆಗೆ 1 ಲಕ್ಷ ಪಡೆಯುವ ಈ ಸುಂದರಿ ಜಯಕಿಶೋರಿಗೂ ಬಾಗೇಶ್ವರ ಬಾಬಾಗೂ ನಡುವೆ ಏನಿದು ಕುಚ್‌ಕುಚ್‌?

By Bhavani Bhat  |  First Published Nov 9, 2024, 4:59 PM IST

ಜಯ ಕಿಶೋರಿ, ಪ್ರಸಿದ್ಧ ಕಥೆಗಾರ್ತಿ ಮತ್ತು ಭಜನೆ ಗಾಯಕಿ, ಇತ್ತೀಚೆಗೆ ತಮ್ಮ ದುಬಾರಿ ಬ್ಯಾಗ್‌ನಿಂದಾಗಿ ಸುದ್ದಿಯಲ್ಲಿದ್ದರು. ಬಾಗೇಶ್ವರ್ ಬಾಬಾ ಜೊತೆಗಿನ ಅವರ ಸಂಬಂಧದ ಬಗ್ಗೆಯೂ ವದಂತಿಗಳಿವೆ. ಇದು ನಿಜವಾ? 


ಇತ್ತೀಚೆಗೆ ಸುಂದರಿ, ಕೀರ್ತನಗಾರ್ತಿ, ಅಧ್ಯಾತ್ಮ ಭಾಷಣಗಾರ್ತಿ ಜಯಕಿಶೋರಿ ಸುದ್ದಿಯಲ್ಲಿದ್ದರು. ಅವರ ಕೈಯಲ್ಲಿದ್ದ ಬ್ರಾಂಡೆಡ್‌ ಬ್ಯಾಗ್‌ ‌ಸುದ್ದಿಯಾಗಿತ್ತು. ಅದು 2 ಲಕ್ಷ ರೂಪಾಯಿ ಬೆಲೆಯ ಡಿಯೊರ್‌ ಬ್ರಾಂಡ್‌ನ ಲಕ್ಷುರಿ ಬ್ಯಾಗು. ಆಧ್ಯಾತ್ಮಿಕತೆಯ ಬಗ್ಗೆ ಭಾಷಣ ಮಾಡುವವಳು ಬಳಸೋದು ಎಂಥಾ ಬ್ಯಾಗು ನೋಡಿ ಅಂತ ಸುಮಾರು ನೆಟಿಜೆನ್‌ಗಳು ಟ್ರೋಲ್‌ ಮಾಡಿದ್ದರು. ಆದರೆ ಜಯಕಿಶೋರಿಯೇ, "ನಾನು ಅಧ್ಯಾತ್ಮದ ಬಗ್ಗೆ ಮಾತಾಡ್ತೀನಿ ನಿಜ, ಆದರೆ ನಾನು ಎಲ್ಲವನ್ನೂ ತ್ಯಜಿಸಿದ ಸನ್ಯಾಸಿನಿ ಅಲ್ಲ" ಎಂದು ಹೇಳಿಕೊಂಡ ನಂತರ ಟ್ರೋಲುಗಳು ತಣ್ಣಗಾದವು.

ಅಂದಹಾಗೆ ಈ ಜಯಕಿಶೋರಿ ಜೊತೆಗೆ ಇನ್ನೊಂದು ಹೆಸರೂ ತಳುಕುಹಾಕಿಕೊಂಡಿದೆ. ಅದು  ಬಾಗೇಶ್ವರ್ ಬಾಬಾ ಅಲಿಯಾಸ್‌ ಧೀರೇಂದ್ರ ಕೃಷ್ಣ ಶಾಸ್ತ್ರಿ. ಇವರು ಉತ್ತರ ಭಾರತದ ಬಹುದೊಡ್ಡ ಕ್ರೌಡ್‌ ಪುಲ್ಲರ್.‌ ಲಕ್ಷಾಂತರ ಭಕ್ತರು ಇವರ ಭಾಷಣ, ಕೀರ್ತನೆಗಳೆಂದರೆ ಎಡತಾಕುತ್ತಾರೆ. ಈ ಹಿಂದೆ, ಹಲವಾರು ವರದಿಗಳು ಜಯ ಕಿಶೋರಿ ಅವರ ಹೆಸರನ್ನು ಬಾಗೇಶ್ವರ್ ಬಾಬಾ- ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರೊಂದಿಗೆ ಜೋಡಿಸಿವೆ. ಬಾಗೇಶ್ವರ್‌ ಬಾಬಾ ಕೂಡ ತನ್ನ ಸಿದ್ದಿಗಳ ಕುರಿತು ಸುದ್ದಿಯಲ್ಲಿದ್ದರು. "ಬಾಗೇಶ್ವರ್ ಧಾಮ್ ಸರ್ಕಾರ್" ಮತ್ತು "ಬಾಗೇಶ್ವರ್ ಬಾಬಾ" ಎಂದೂ ಕರೆಯಲ್ಪಡುವ ಧೀರೇಂದ್ರ ಕೃಷ್ಣ ಶಾಸ್ತ್ರಿ ಮಧ್ಯಪ್ರದೇಶದ ಛತ್ತರ್‌ಪುರದ ಬಾಗೇಶ್ವರ್ ಧಾಮ್ ದೇವಾಲಯದ ಮುಖ್ಯಸ್ಥ. ಇನ್ನೂ ಯುವಕ, ಸ್ಮಾರ್ಟ್.‌ 

Tap to resize

Latest Videos

undefined

ಜಯ ಕಿಶೋರಿ ಅವರು ಬಾಗೇಸ್ವರ್ ಬಾಬಾ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ ಎಂದು ಕೆಲವು ಸುದ್ದಿಗಳು ಹೇಳಿದ್ದವು. ಆದರೆ ಧೀರೇಂದ್ರ ಶಾಸ್ತ್ರಿ ಈ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಜಯ ಕಿಶೋರಿ ನನಗೆ ಸಹೋದರಿ ಇದ್ದಂತೆ ಎಂದು ಹೇಳಿದ್ದಾರೆ. ಬಾಗೇಶ್ವರ್‌ ಬಾಬಾನಂತೆಯೇ ಜಯಕಿಶೋರಿ ಕೂಡ ಶ್ರೀಕೃಷ್ಣನನ್ನು ಆರಾಧಿಸುತ್ತಾಳೆ ಮತ್ತು ಕೃಷ್ಣನೇ ಆಕೆಯ "ಮೊದಲ ಪ್ರೀತಿ" ಅಂತೆ. 

ಇನ್ನು ರಾಜಸ್ಥಾನದ ಜಯ ಕಿಶೋರಿ ಹರಿಕಥಾ ಕ್ಷೇತ್ರದಲ್ಲಿ ಎತ್ತಿದ ಕೈ. ಇನ್ಸ್ಟಾಗ್ರಾಮ್, ಫೇಸ್ಬುಕ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ಅವರ ಸುದ್ದಿ, ಅವರ ಪ್ರವಚನಗಳು ಹರಿದಾಡುತ್ತಿರುತ್ತವೆ. ಹಾಗಾಗಿ ಅನೇಕ ಕನ್ನಡಿಗರಿಗೆ ಅವರ ಪರಿಚಯವಿದೆ. ಇವರ ಮೂಲ ಹೆಸರು ಜಯಾ ಶರ್ಮಾ.  ಜುಲೈ 13, 1995 ರಂದು ರಾಜಸ್ಥಾನದ ಸಣ್ಣ ಹಳ್ಳಿಯಾದ ಸುಜನ್‌ಗಢದಲ್ಲಿ ಜನಿಸಿದ ಜಯಾ ಕಿಶೋರಿ ಸದ್ಯ ಕೊಲ್ಕತ್ತಾ (Kolkata) ದಲ್ಲಿ ನೆಲೆಸಿದ್ದಾರೆ.  ಜಯಾ ಕಿಶೋರಿ ಬಿ.ಕಾಂ ವ್ಯಾಸಂಗದ ಜೊತೆಗೆ ಅಧ್ಯಾತ್ಮಕ್ಕೂ ಸಮಯ ಮೀಸಲಿಟ್ಟಿದ್ದರು. ಬಾಲ್ಯದಲ್ಲೇ ಭಜನೆ, ಗೀತಾ ವಾಚನವನ್ನೂ ಮಾಡುತ್ತಿದ್ದ ಜಯಾ ಕಿಶೋರಿ, ಆಧ್ಯಾತ್ಮಿಕತೆಗೆ ಹೆಚ್ಚು ಒಲವು ತೋರಿಸುತ್ತಾರೆ. ವೇದ, ಭಗವದ್ಗೀತೆ, ಶಾಸ್ತ್ರಗಳನ್ನೂ ಜಯಾ ಕಿಶೋರಿ ಅಧ್ಯಯನ ಮಾಡಿದ್ದಾರೆ.  

ಕಾಲಿವುಡ್‌ನ ಆದರ್ಶ ದಂಪತಿಗಳೆಂದರೆ ಸೂರ್ಯ-ಜ್ಯೋತಿಕಾ: ಇವರಿಬ್ಬರಲ್ಲಿ ಅತಿ ಹೆಚ್ಚು ಆಸ್ತಿ ಇರುವುದು ಯಾರಿಗೆ?

ಜಯಾ ಕಿಶೋರಿ ಅವರ ಆಧ್ಯಾತ್ಮಿಕ ಪ್ರಯಾಣವು 6-7 ವರ್ಷ ವಯಸ್ಸಿನಲ್ಲಿ ಪ್ರಾರಂಭವಾಯಿತು. ಕುಟುಂಬದಲ್ಲಿ ಅವರ ಅಜ್ಜಿ ಅವರ ಮೇಲೆ ಹೆಚ್ಚಿನ ಪ್ರಭಾವ ಬೀರಿದ್ದರು. ಅವರ ಅಜ್ಜಿಯರು ಅವರಿಗೆ ಶ್ರೀಕೃಷ್ಣನ ಕಥೆಗಳನ್ನು ಹೇಳುತ್ತಿದ್ದರು. ಕೇವಲ 9 ನೇ ವಯಸ್ಸಿನಲ್ಲಿ, ಕಿಶೋರಿ ಅವರು ಲಿಂಗಾಷ್ಟಕಂ, ಶಿವ ತಾಂಡವ ಸ್ತೋತ್ರಂ, ಮಧುರಾಷ್ಟಕಾಮ್ರ, ಶಿವಪಂಚಾಕ್ಷರ ಸ್ತೋತ್ರಂ, ದಾರಿದ್ರಯ್ ದಹನ್ ಶಿವ ಸ್ತೋತ್ರಂ ಮುಂತಾದ ಅನೇಕ ಸ್ತೋತ್ರಗಳನ್ನು ಕಂಠಪಾಠ ಮಾಡಿದ್ದರು. ಸಂಗೀತವನ್ನೂ ಹಾಡಲು ಆರಂಭಿಸಿದರು. ಕೇವಲ 10ನೇ ವಯಸ್ಸಿನಲ್ಲಿ ಜಯಾ ಸಂಪೂರ್ಣ ಸುಂದರಕಾಂಡವನ್ನು ಪ್ರದರ್ಶಿಸಿದರು. ಅಲ್ಲಿಂದಲೇ ಅವರ ಆಧ್ಯಾತ್ಮಿಕ ಪಯಣ ಶುರುವಾಯ್ತು. 

ಜಯಾ ಕಿಶೋರಿ ಒಂದು ಕಥೆಗೆ ಲಕ್ಷ ರೂಪಾಯಿ ಶುಲ್ಕ ಪಡೆಯುತ್ತಾರೆ. ಆದರೆ ಅವರು ತಮ್ಮ ಗಳಿಕೆಯ ಹೆಚ್ಚಿನ ಭಾಗವನ್ನು ದಾನ ಮಾಡುತ್ತಾರೆ. ತಮಗಾಗಿ ಜಯಾ ಕಿಶೋರಿ ಹೆಚ್ಚು ಖರ್ಚು ಮಾಡೋದಿಲ್ಲ. ಕಥೆಗಾರ್ತಿ ಜಯ ಕಿಶೋರಿ ಅವರು ಯಾವುದೇ ಕಥೆಯನ್ನು ಬರೆಯುವ ಮೊದಲು ಮುಂಗಡವನ್ನು ತೆಗೆದುಕೊಳ್ಳುತ್ತಾರೆ ಮತ್ತು ಕಥೆಯನ್ನು ಪೂರ್ಣಗೊಳಿಸಿದ ನಂತರ ಅವರು ಪೂರ್ಣ ಮೊತ್ತವನ್ನು ತೆಗೆದುಕೊಳ್ಳುತ್ತಾರೆ. ಪ್ರೀತಿಪಾತ್ರರಿಗೆ ಮತ್ತು ಬಡವರಿಗೆ ಉಚಿತವಾಗಿ ಕಥೆಗಳನ್ನು ಹೇಳುತ್ತಾರೆ. ಕೋರಿಕೆ ಮೇರೆಗೆ ಕೆಲವರಿಗೆ ಅವರು ಉಚಿತವಾಗಿ ಕಥೆ ಹೇಳ್ತಾರೆ.

ನನ್ನ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿದೆ, ಅಮೆರಿಕಾದಲ್ಲಿ ಸರ್ಜರಿ ಆಗಲಿದೆ: ಶಿವರಾಜ್‌ಕುಮಾರ್
 

click me!