ಡಾಲಿ ಧನಂಜಯ್‌ಗೆ ಹೀಗೂ ಹೇಳಿದ್ರಾ ಗುರುಪ್ರಸಾದ್? ಹಳೇ ವೀಡಿಯೋ ಈಗ ವೈರಲ್!

Published : Nov 09, 2024, 01:53 PM IST
ಡಾಲಿ ಧನಂಜಯ್‌ಗೆ ಹೀಗೂ ಹೇಳಿದ್ರಾ ಗುರುಪ್ರಸಾದ್? ಹಳೇ ವೀಡಿಯೋ ಈಗ ವೈರಲ್!

ಸಾರಾಂಶ

ನಿರ್ದೇಶಕ ಗುರುಪ್ರಸಾದ್ ಸಾವಿನ ನಂತ್ರ ಅವರ ವಿಷ್ಯ ಸಾಕಷ್ಟು ಚರ್ಚೆಯಾಗ್ತಿದೆ. ಜಗ್ಗೇಶ್ ಹೇಳಿಕೆ ನಂತ್ರ ಈಗ ಧನಂಜಯ್ ವಿಡಿಯೋ  ವೈರಲ್ ಆಗಿದೆ. 8 ವರ್ಷದ ಹಿಂದೆ ಧನಂಜಯ್ ಪೋಸ್ಟ್ ಮಾಡಿದ್ದ ವಿಡಿಯೋಕ್ಕೆ ಈಗ ಸಾಕಷ್ಟು ಕಮೆಂಟ್ ಬರ್ತಿದೆ.  

ಸ್ಯಾಂಡಲ್ವುಡ್ ನಿರ್ದೇಶಕ ಗುರುಪ್ರಸಾದ್ (Sandalwood director Guruprasad) ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನದ ನಂತ್ರ ಸಾಕಷ್ಟು ವಿಷ್ಯಗಳು ಚರ್ಚೆಗೆ ಬರ್ತಿವೆ. ಗುರುಪ್ರಸಾದ್ ವ್ಯಕ್ತಿತ್ವದ ಬಗ್ಗೆ ಕೆಲ ಕಲಾವಿದರು ಮಾತನಾಡಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ನಟ ಧನಂಜಯ್ (Actor Dhananjay), ಗುರುಪ್ರಸಾದ್ ಬಗ್ಗೆ 8 ವರ್ಷಗಳ ಹಿಂದೆ ಮಾತನಾಡಿದ್ದ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಧನಂಜಯ್, ವೃತ್ತಿ ಆರಂಭದಲ್ಲಿ ಗುರುಪ್ರಸಾದ್ ನನ್ನನ್ನು ಹೇಗೆ ನೋಡಿದ್ದರು, ಏನೆಲ್ಲ ಹೇಳಿದ್ದರು ಎಂಬ ವಿಷ್ಯವನ್ನು ಹೇಳಿದ್ದಾರೆ.

ಧನಂಜಯ್ ಕಾರಿನಲ್ಲಿ ಕುಳಿತು ವಿಡಿಯೋ ಮಾಡಿದ್ದಾರೆ. ಎಲ್ಲ ಕೆಟ್ಟ ಅನುಭವವನ್ನು ನಾನು ಹೇಳಲು ಇಷ್ಟಪಡೋದಿಲ್ಲ. ನಿಮ್ಮಿಂದ ಆಗಿರುವ ಅತ್ಯಂತ ದೊಡ್ಡ ನೋವು, ಕೆಟ್ಟ ಅನುಭವವನ್ನು ಇಲ್ಲಿ ನಾನು ಹಂಚಿಕೊಳ್ಳುತ್ತೇನೆ ಎಂದು ಧನಂಜಯ್ ವಿಡಿಯೋ ಪ್ರಾರಂಭಿಸುತ್ತಾರೆ.  ಡೈರೆಕ್ಟರ್ ಸ್ಪೇಷಲ್ ಶೂಟಿಂಗ್ ಸಮಯದಲ್ಲಿ ನಡೆದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.  ಇದೇ ಸಮಯದಲ್ಲಿ ರಿಯಾಲಿಟಿ ಶೋ ಕನ್ನಡದ ಕೋಟ್ಯಾಧಿಪತಿ ನಡೆಯುತ್ತಿತ್ತು. ಇದರ ಶೂಟಿಂಗ್ ಗಾಗಿ ಗುರುಪ್ರಸಾದ್ ಚೆನ್ನೈಗೆ ಹೊರಟಿದ್ರಿ. ಆ ಸಮಯದಲ್ಲಿ ಡೈರೆಕ್ಟರ್ ಸ್ಪೆಷಲ್ (Director Special) ಸಿನಿಮಾದ ಒಂದೇ ಒಂದು ಐಟಂ ಸಾಂಗ್ ಉಳಿದಿತ್ತು. ಅದ್ರಲ್ಲೂ ಸಾಂಗ್ ನ ಒಂದು ಶಾಟ್ ನಲ್ಲಿ ಮಾತ್ರ ಧನಂಜಯ್ ಬರ್ಬೇಕಾಗಿತ್ತು. ಅದೇ ಒಂದು ದೃಶ್ಯಕ್ಕಾಗಿ ಗಡ್ಡ, ಕೂದಲು ಬಿಟ್ಟುಕೊಂಡು 8 ತಿಂಗಳ ಕಾದಿದ್ದರು ಧನಂಜಯ್.  ಎಂಟು ತಿಂಗಳ ನಂತ್ರ, ಗುರುಪ್ರಸಾದ್ ಊರಿಗೆ ಬಂದ ಮೇಲೆ,  ಒಂದು ದಿನ ಆಫೀಸ್ ಗೆ ಬಂದು ಈ ಬಗ್ಗೆ ಮಾತನಾಡಿದ್ದರು. ಗುರುಗಳೇ ನನಗೆ ತುಂಬಾ ಕಿರಿಕಿರಿ ಆಗ್ತಿದೆ. ಗಡ್ಡ, ಕೂದಲು ಬಿಟ್ಟು  ಮೂರ್ನಾಲ್ಕು ವರ್ಷವಾಯ್ತು. ದಯವಿಟ್ಟು ಇದನ್ನು ತೆಗೆಯುತ್ತೇನೆ. ಸಾಂಗ್ ಶೂಟಿಂಗ್ ಮುಗಿಸಿ ಅಂತ ರಿಕ್ವೆಸ್ಟ್ ಮಾಡಿದ್ದರು. ಅದಕ್ಕೆ, ಕಿರಿಕಿರಿ ಆಗ್ತಿದೆಯಾ ಧನಂಜಯ್. ಸೂಸೈಡ್ ಮಾಡ್ಕೊಳ್ಳಿ, ನಮ್ಮ ಸಿನಿಮಾಕ್ಕೆ ಪ್ರಚಾರವಾಗುತ್ತೆ ಅಂತ   ಗುರುಪ್ರಸಾದ್ ಹೇಳಿದ್ದರು.  ಆವತ್ತು ಆಫೀಸಿನಿಂದ ನಗ್ತಾ ಹೊರಗೆ ಬಂದಿದ್ದ ಧನಂಜಯ್ ಮತ್ತೆ  ಆಫೀಸ್ ಗೆ ಹೋಗಿರಲಿಲ್ಲ. ನೀವು ಕರೆದಾಗ ಮಾತ್ರ ನಾನು ಬಂದಿದ್ದೆ ಎಂದು ಧನಂಜಯ್ ಹೇಳಿದ್ದಾರೆ. ಆ ಹತಾಶೆಯಲ್ಲಿ ಮಾಡಿದ್ದೇ ಜಯನಗರ 4 ಬ್ಲಾಕ್. ಒಂದು ಫ್ರಸ್ಟ್ರೇಷನ್ನಾ ಪಾಸಿಟಿವ್ ಆಗಿ ಹೇಗೆ ಹೊರಗೆ ಹಾಕ್ಬೇಕು ಅನ್ನೋದಕ್ಕೆ ಬೆಸ್ಟ್ ಉದಾಹರಣೆ ನನ್ನ ಜಯನಗರ 4 ಬ್ಲಾಕ್ ಶಾರ್ಟ್ ಫಿಲ್ಮಂ. ಅದಾಗಿದ್ದು ನಿಮ್ಮಿಂದ. ನೀವು ಫ್ರಸ್ಟ್ರೇಷನ್ ಆದ್ರೆ ಸೂಸೈಡ್ ಮಾಡ್ಕೊಳ್ಳಿ ಅಂದಿದ್ದಕ್ಕೆ ನಾನು ಶಾರ್ಟ್ ಫಿಲ್ಮಂ ಮಾಡಿದೆ. ನಿಮಗೆ ಥ್ಯಾಂಕ್ಸ್ ಹೇಳ್ಬೇಕು ಎಂದಿದ್ದಾರೆ ಧನಂಜಯ್. 

ಒಂದು ವರ್ಷದ ಬ್ರೇಕ್‌, ವೈಯಕ್ತಿಕ ವಿಷ್ಯಕ್ಕೆ ಟ್ರೋಲ್‌ ಆದ ಸಮಂತಾ ರೋಲ್ ಮಾಡೆಲ್ ಇವ್ರು!

ಧನಂಜಯ್ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಸಾಕಷ್ಟು ಕಮೆಂಟ್ ಗಳು ಬಂದಿವೆ. ಕರ್ಮ ರಿಟರ್ನ್ಸ್, ಅವರೊಬ್ಬರು ಹುಚ್ಚರು, ಹೆದರಿ ಸೂಸೈಡ್ ಮಾಡ್ಕೊಂಡ್ರು ಎಂಬೆಲ್ಲ ಕಮೆಂಟ್ ಬಂದಿದೆ. ಗುರುಪ್ರಸಾದ್ ಸಾವಿನ ನಂತ್ರ, ಅವರ ಜೊತೆ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಜಗ್ಗೇಶ್ ಹೇಳಿಕೆ ವೈರಲ್ ಆಗಿತ್ತು. ಗುರುಪ್ರಸಾದ್ ಸ್ವಭಾವದ ಬಗ್ಗೆ ಜಗ್ಗೇಶ್ ಹೇಳಿಕೆ ಸಾಕಷ್ಟು ಟ್ರೋಲ್ ಆಗಿತ್ತು. ಸತ್ತ ವ್ಯಕ್ತಿ ಬಗ್ಗೆ ಹೀಗೆಲ್ಲ ಹೇಳೋದು ಸರಿಯಲ್ಲ ಎಂದು ಅನೇಕರು ಕಮೆಂಟ್ ಮಾಡಿದ್ದರು. 

ಯಶ್ ಬಗ್ಗೆ ಶಾರುಖ್‌ ಖಾನ್ ಕಾಮೆಂಟ್, ಬಾಲಿವುಡ್ ಸ್ಟಾರ್ ಮಾತಿಗೆ ಜಗತ್ತೇ ಶಾಕ್!

ಗುರುಪ್ರಸಾದ್ ಮೃತದೇಹ ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್ ಒಂದರಲ್ಲಿ ಸಿಕ್ಕಿದೆ. ಕೊಳೆತ ಸ್ಥಿತಿಯಲ್ಲಿದ್ದ ಗುರುಪ್ರಸಾದ್ ಮೃತದೇಹದ ಬಗ್ಗೆ ಅನುಮಾನವಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ. ಗುರುಪ್ರಸಾದ್ ಸೋರಿಯಾಸಿಸ್ ಹಾಗೂ ಎಸಿಡಿಟಿಯಿಂದ ಬಳಲುತ್ತಿದ್ದರು ಎಂಬುದು ಬಹಿರಂಗವಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Katrina Kaif: ತಾಯಿಯಾದ ಬಳಿಕ ಮೊದಲ ಹೋಳಿ: ಪತಿ ವಿಕ್ಕಿ ಜೊತೆ ಬಣ್ಣದೋಕುಳಿ ಆಡಿದ ಕತ್ರಿನಾ ಕೈಫ್
Thalapathy Vijay ಎಂದೆಂದೂ ನನ್ನವನೇ ಎಂದಾಕೆ ನಟಿ ತ್ರಿಷಾ ಅಲ್ವೇ ಅಲ್ಲಾ! ಏನಿದು ವೈರಲ್​ ಪೋಸ್ಟ್​ ಗಲಾಟೆ?