ಫೌಜಿಯಲ್ಲಿ ಪ್ರಭಾಸ್ ಜೊತೆ ರೊಮಾನ್ಸ್ ಮಾಡಲಿರೋ ಈ ಹೊಸ ಮುಖ ಯಾರು ?

By Anusha Kb  |  First Published Aug 26, 2024, 3:38 PM IST

ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್‌ ಎಂಬುದು ಎಲ್ಲರಿಗೂ ಗೊತ್ತು. ಆದರೆ ಪ್ರಭಾಸ್ ಜೊತೆ ಈ ಸಿನಿಮಾದಲ್ಲಿ ಪ್ರಮುಖ ಹೀರೋಯಿನ್ ರೋಲ್ ಮಾಡ್ತಿರುವ ನಟಿ ಯಾರು ಗೊತ್ತಾ ಈ ಬಗ್ಗೆ ಒಂದು ಡಿಟೇಲ್ಡ್ ಸ್ಟೋರಿ..


ಕಲ್ಕಿ 2898ಡಿ ಸಿನಿಮಾದ ಯಶಸ್ಸಿನ ನಂತರ ಈಗ ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಫೌಜಿ ಹೆಸರಿನ ಸಿನಿಮಾದ ಮೇಕಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ, ಈ ಸಿನಿಮಾ 2025ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್‌ ಎಂಬುದು ಎಲ್ಲರಿಗೂ ಗೊತ್ತು. ಆದರೆ ಪ್ರಭಾಸ್ ಜೊತೆ ಈ ಸಿನಿಮಾದಲ್ಲಿ ಪ್ರಮುಖ ಹೀರೋಯಿನ್ ರೋಲ್ ಮಾಡ್ತಿರುವ ನಟಿ ಯಾರು ಗೊತ್ತಾ ಈ ಬಗ್ಗೆ ಒಂದು ಡಿಟೇಲ್ಡ್ ಸ್ಟೋರಿ..

ಪ್ರಭಾಸ್ ಅವರ ಮುಂಬರುವ ಸಿನಿಮಾ ಫೌಜಿಗಾಗಿ  ಇಮಾನ್ ಇಸ್ಮಾಯಿಲ್ ಎಂಬ ಹೊಸ ಮುಖವೊಂದನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದ್ದು, ಯಾರು ಈ ಇಮಾನ್ ಇಸ್ಮಾಯಿಲ್ ಎಂಬ ಕುತೂಹಲ ಹಲವರದ್ದು,  ಇಮಾನ್ ಇಸ್ಮಾಯಿಲ್ ಅಲಿಯಾಸ್ ಇಮಾನ್ವಿ ಮೂಲತಃ ದೆಹಲಿ ಮೂಲದ ಡಾನ್ಸರ್ ಹಾಗೂ ಕೊರಿಯೋಗ್ರಾಫರ್‌. ಪ್ರಭಾಸ್‌ ಸಿನಿಮಾಗೆ ಇವರು ನಾಯಕಿಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಇವರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಂಚಲನ ಸೃಷ್ಟಿಸಿದ್ದರು. 1995ರಲ್ಲಿ ಆಕ್ಟೋಬರ್ 20 ರಂದು ದೆಹಲಿಯಲ್ಲಿ ಜನಿಸಿದ ಇಮಾನ್ ಇಸ್ಮಾಯಿಲ್ 6 ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿರುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕೂಡ ಆಗಿದ್ದಾರೆ. 

Tap to resize

Latest Videos

ಬಾಲಿವುಡ್‌ ಮಂದಿ ಹಿಂದಿಕ್ಕಿ ಪ್ರಭಾಸ್‌ ನಂ-1 ಪಟ್ಟ ವಿಜಯ್ ಸೆಕೆಂಡ್‌, ಕನ್ನಡ ಆ್ಯಕ್ಟರ್ಸ್ ಯಾರಿದ್ದಾರೆ?

ತನ್ನ ಅದ್ಭುತ ನೃತ್ಯ ಪ್ರದರ್ಶನದಿಂದ ವೇದಿಕೆಗೆ ಕಿಚ್ಚು ಹಚ್ಚುವ ಇಮಾನ್ ಇಸ್ಮಾಯಿಲ್ ಅವರಿಗೆ ಇದೊಂದು ಪ್ರತಿಭೆಯನ್ನು ತೆರೆದಿಡುವುದಕ್ಕೆ ಸಿಕ್ಕ ಹೊಸ ಅವಕಾಶವಾಗಿದೆ.  ಕಲ್ಕಿ ಸಿನಿಮಾದ ಯಶಸ್ಸಿನಲ್ಲಿರುವ ದಕ್ಷಿಣ ಭಾರತದ ಖ್ಯಾತ ನಟ ಎನಿಸಿರುವ ಪ್ರಭಾಸ್ ಜೊತೆ ಪರದೆ ಹಂಚಿಕೊಳ್ಳುವುದು ಅನೇಕ ನಟ ನಟಿಯರ ಮಹತ್ವಕಾಂಕ್ಷೆ ಹಾಗೂ ಕನಸಾಗಿದೆ. ಆದರೆ ಇಮಾನ್ ಇಸ್ಮಾಯಿಲ್ ಅವರಿಗೆ ಇದು ಸುಲಭವಾಗಿ ಒಲಿದು ಬಂದಿದೆ. 

ಪ್ರಭಾಸ್ ಅವರ ಫೌಜಿ ಸಿನಿಮಾಗೆ ಆಗಸ್ಟ್ 17 ರಂದು ವಿದ್ಯುಕ್ತವಾಗಿ ಹೈದರಾಬಾದ್‌ನಲ್ಲಿ ಚಾಲನೆ ಸಿಕ್ಕಿದೆ.  ಪ್ರಭಾಸ್‌ ಜೊತೆಗಿನ ಫಿಮೇಲ್ ರೋಲ್‌ಗೆ  ಇಮಾನ್ ಹೆಸರು ಘೋಷಣೆ ಮಾಡ್ತಿದ್ದಂಗೆ ಅಭಿಮಾನಿಗಳಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಏಕೆಂದರೆ ಮೊದಲಿಗೆ ಪ್ರಭಾಸ್ ಜೊತೆಗೆ ಈ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಟನೆ ಮಾಡ್ತಾರೆ ಎಂಬ ಊಹಾಪೋಹಾ ಹಬ್ಬಿತ್ತು. ಆದರೆ ಇದ್ದಕ್ಕಿದ್ದಂತೆ ಹೊಸ ಮುಖವನ್ನು ಪರಿಚಯಿಸಿದ್ದರಿಂದ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. 

ಟಾಂ ಟಾಂ ಮಾಡದೇ ಘನತೆವೆತ್ತ ಕಾರ್ಯ ಮಾಡಿ ದೇಶದ ಜನತೆ ಮೆಚ್ಚುಗೆ ಪಡೆದ ಡಾರ್ಲಿಂಗ್ ಪ್ರಭಾಸ್!

ಅಂದಹಾಗೆ  ಈ ಸಿನಿಮವಾವನ್ನು ಹನು ರಾಘವಪುಡಿ ನಿರ್ದೇಶನ ಮಾಡುತ್ತಿದ್ದಾರೆ. 1940ರಲ್ಲಿ ನಡೆದ ಘಟನೆಯೊಂದರ ತುಣಕು ಇದಾಗಿದ್ದು,  ಮಾತೃಭೂಮಿಗಾಗಿ ಹೋರಾಡುವ ಧೀರ ಯೋಧನ ಕತೆಯನ್ನು ಹೊಂದಿದೆ. ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು,  ಮುಂದಿನ ದಿನಗಳಲ್ಲಿ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.

click me!