ಸಕ್ಸಸ್‌ ನೋಡಿ ಮೆಣಸು ಇಟ್ಟಂಗಾಗ್ತಿದೆ ಅಲ್ವಾ? ಶ್ರದ್ಧಾ ಕಪೂರ್ ವಿರುದ್ಧ ಟ್ರೋಲ್‌ಗೆ ನಟಿಯ ಆಕ್ರೋಶ

By Suvarna News  |  First Published Aug 26, 2024, 2:47 PM IST

ಸ್ತ್ರೀ 2 ಸಿನಿಮಾದ ಯಶಸ್ಸಿನ ಕ್ರೆಡಿಟ್ ಅನ್ನು ಶ್ರದ್ಧಾ ಕಪೂರ್ ಅವರ ಪ್ರಚಾರ ತಂತ್ರಕ್ಕೆ ನೀಡಬೇಕೆ ಅಥವಾ ರಾಜ್‌ಕುಮಾರ್ ರಾವ್ ಅವರ ನಟನೆಗೆ ನೀಡಬೇಕೆ ಎಂಬ ಬಗ್ಗೆ ಅಭಿಮಾನಿಗಳ ನಡುವೆ ಚರ್ಚೆ ನಡೆಯುತ್ತಿದೆ. ನಟಿ ಮಲ್ಲಿಕಾ ದುವಾ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿ ಶ್ರದ್ಧಾ ಕಪೂರ್ ಅವರ ಪರ ನಿಂತಿದ್ದಾರೆ.


ಸಾಮಾನ್ಯವಾಗಿ ಸಿನಿಮಾ ರಂಗದಲ್ಲಿ ಹೀರೋಗಳು ಹಾಗೂ ಮತ್ತೊಬ್ಬರ ಹೀರೋಗಳ ಮಧ್ಯೆ ಸ್ಟಾರ್‌ ವಾರ್ ಇರುತ್ತೆ. ಆದರೆ ನಟಿಯರು ಹಾಗೂ ನಟರ ಮಧ್ಯೆ ಸ್ಟಾರ್ ವಾರ್ ಇರೋದು ತೀರಾ ಕಡಿಮೆ. ಆದರೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಹಾಗೂ ರಾಜ್‌ಕುಮಾರ್ ರಾವ್ ಮಧ್ಯೆ ಈಗ ಅವರ ಅಭಿಮಾನಿಗಳು ಸ್ಟಾರ್ ವಾರ್ ಸೃಷ್ಟಿಸಿದ್ದಾರೆ. ನಟಿ ಶ್ರದ್ಧಾ ಕಪೂರ್ ಹಾಗೂ ರಾಜ್‌ಕುಮಾರ್ ರಾವ್ ಅಭಿನಯದ ಸ್ತ್ರೀ 2 ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಈ ಸಿನಿಮಾದ ಯಶಸ್ಸಿನ ಕ್ರೆಡಿಟ್ ಅನ್ನು ತಮ್ಮ ತಮ್ಮ ನೆಚ್ಚಿನ ನಟ ನಟಿಗೆ ಕೊಡುತ್ತಿದ್ದಾರೆ ಅಭಿಮಾನಿಗಳು.  ಅತ್ತ ಕೆಲವು ಅಭಿಮಾನಿಗಳು ಶ್ರದ್ಧಾಗೆ  ಸೆಲ್ಪ್ ಫಂಡೆಡ್ ಪ್ರಮೋಷನ್ ಎಂದೆಲ್ಲಾ ಕಾಲೆಳೆಯುತ್ತಿದ್ದಾರೆ. ಆದರೆ ಇದಕ್ಕೆ ಬಾಲಿವುಡ್‌ನ ಮತ್ತೊಬ್ಬ ನಟಿ ಕಾಮಿಡಿಯನ್ ಮಲ್ಲಿಕಾ ದುವಾ ಅವರು ತಿರುಗೇಟು ನೀಡಿದ್ದು,  ಶ್ರದ್ಧಾ ಕಪೂರ್ ಪರ ನಿಂತಿದ್ದಾರೆ. 

ಸಿನಿಮಾ ರಿಲೀಸ್ ಆದ ನಂತರ ಶ್ರದ್ಧಾ ಕಪೂರ್ ಮಾಡಿದ ಪಿಆರ್ ಗೇಮ್‌ನಿಂದ ಸಿನಿಮಾ ಯಶಸ್ವಿಯಾಯ್ತು ಎಂಬ ವಿಚಾರದ ಬಗ್ಗೆಯೂ ಮಲ್ಲಿಕಾ ದುವಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Tap to resize

Latest Videos

ಶ್ರದ್ಧಾ ಅಭಿಮಾನಿಗಳ ಪ್ರಕಾರ, ಶ್ರದ್ಧಾ ಈ ಸಿನಿಮಾದಲ್ಲಿ ಲೀಡಿಂಗ್‌ ರೋಲ್‌ನಲ್ಲಿ ಇರುವುದರಿಂದ ಅವರು ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವುದರಿಂದ ಅವರನ್ನು ವೀಕ್ಷಕರಾಗಿ ಥಿಯೇಟರ್‌ಗೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇತರರು ಹಾಗೂ ರಾಜ್‌ಕುಮಾರ್ ರಾವ್ ಅಭಿಮಾನಿಗಳು ಹೇಳುವುದೇನೆಂದರೆ ಸ್ತ್ರೀ ಸಿನಿಮಾದ ಯಶಸ್ಸಿನ ಕ್ರೆಡಿಟ್ ಅನ್ನು ರಾಜ್‌ ಕುಮಾರ್‌ಗೆ ನೀಡ್ಬೇಕು ಅನ್ನೋದು. ಅಲ್ಲದೇ ಈ ಸಿನಿಮಾದಲ್ಲಿ ಇತರ ಪಾತ್ರಗಳಲ್ಲಿ ನಟಿಸಿರುವ ಪಂಕಜ್ ತ್ರಿಪಾಠಿ, ಅಪಾರಶಕ್ತಿ ಖುರಾನ ಹಾಗೂ ಅಭಿಷೇಕ್ ಬ್ಯಾನರ್ಜಿ ಅವರಿಗೆ ಸಿನಿಮಾ ಯಶಸ್ಸಿನ ಕ್ರೆಡಿಟ್ ನೀಡಲಾಗಿದೆ.

ಸ್ತ್ರೀ 2 ಚಿತ್ರದ ನಂತರ ಹೆಚ್ಚಾಯಿತು ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಪ್ರಸಿದ್ಧಿ, ಇನ್ಸ್ಟಾಗ್ರಾಮ್ ನಲ್ಲಿ ಮೋದಿ ಹಿಂದಿಕ್ಕಿದ ನಟಿ

ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕಾಮಿಡಿಯನ್ ಮಲ್ಲಿಕಾ ದುವಾ, ನನಗೆ ಮಾಡಲು ಬೇರೇನೂ ಕೆಲಸವಿಲ್ಲದೇ ಇದ್ದಿದ್ದರಿಂದ ನಾನು ಟ್ವಿಟ್ಟರ್‌ನಲ್ಲೇ ಸ್ಕ್ರಾಲ್ ಮಾಡ್ತಾ ಸಾಕಷ್ಟು ವಿಚಾರವನ್ನು  ಓದುತ್ತೇನೆ. ಬಾಲಿವುಡ್‌ನ ಕಿರಿಕಿರಿಯುಂಟು ಮಾಡುವ ಚಿಂತನೆ ಇದು, ಥಿಯೇಟರ್‌ನಲ್ಲಿ ಸೂಪರ್ ಹಿಟ್ ಆಗಿರುವ ಸಿನಿಮಾದ ಪ್ರಮೋಷನ್‌ ಅನ್ನು ನಟಿಯರು ಹೈಜಾಕ್ ಮಾಡುವುದನ್ನು ನೀವು ಬಯಸದೇ ಇದ್ದರೆ ಅವರಿಗೆ ಚಲನಚಿತ್ರದಲ್ಲಿ ಹೆಚ್ಚಿನ ಅವಕಾಶ ಕೊಡಿ, ಇದರಿಂದ ಅವರು ಈ ಸಿನಿಮಾದಲ್ಲಿ ನಾವೆಲ್ಲೂ ಕಾಣೋದೆ ಇಲ್ಲ ನಮಗೆ ನಟಿಸಲು ಅವಕಾಶವೇ ಸಿಕ್ಕಿಲ್ಲ ಎಂದು ಭಾವಿಸುವುದಿಲ್ಲ.  ಆದರೆ ಮಹಿಳೆಯೊಬ್ಬಳು ನೈತಿಕವಾಗಿ ದಿವಾಳಿಯಾದ ಆಟವೊಂದನ್ನು ನೈತಿಕತೆ ಇಲ್ಲದೇ ಆಡಲು ಆರಂಭಿಸಿದಾಗ ಎಲ್ಲರಿಗೂ ಇಷ್ಟೊಂದು ಮೆಣಸು (ಖಾರ) ಇಟ್ಟಂತೆ ಆಗುತ್ತದೆ. ಇದನ್ನು ನೋಡುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ ಎಂದು ಮಲ್ಲಿಕಾ ದುವಾ ಬರೆದುಕೊಂಡಿದ್ದಾರೆ. 

ಆದರೆ ಮಲ್ಲಿಕಾ ದುವಾ ಎಲ್ಲೂ ತಮ್ಮ ಪೋಸ್ಟ್‌ನಲ್ಲಿ ಯಾರ ಹೆಸರನ್ನು ಕೂಡ ಉಲ್ಲೇಖಿಸಿಲ್ಲ,  ಆದರೆ ಶ್ರದ್ಧಾ ಕಪೂರ್ ಅವರನ್ನು ಬೆಂಬಲಿಸಿರುವ ಮಲ್ಲಿಕಾ ದುವಾ ಬಾಲಿವುಡ್‌ನಲ್ಲಿರುವ ಲಿಂಗಬೇಧದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುರುಷರಿಗೆ ನೀಡುವ ಪಾತ್ರವೂ ಚೆನ್ನಾಗಿರುತ್ತದೆ.  ಅವರಿಗೆ ನೀಡುವ ಪೇಮೆಂಟ್ ಕೂಡ ಹೆಚ್ಚಿರುತ್ತದೆ. ಆದರೆ ಮಹಿಳೆಯೊಬ್ಬಳು, ಅವಳಷ್ಟಕ್ಕೆ ಪ್ರಮೋಟ್ ಮಾಡಿಕೊಂಡಳು ಅದು ಚೆನ್ನಾಗಿ ಕೆಲಸವನ್ನೂ ಮಾಡಿತ್ತು. ಆದರೆ ಅದನ್ನು ಎಲ್ಲರಿಗೂ ಸಹಿಸಲಾಗುತ್ತಿಲ್ಲ. ಬಾಲಿವುಡ್‌ನ ಎಲ್ಲರೂ ಪೇಪರ್‌ನಲ್ಲಿ ಹೀರೋಯಿನ್ ಇರಬೇಕು ಎಂದು ಬಯಸುತ್ತಾರೆ ಆದರೆ ನಿಜ ಜೀವನದಲ್ಲಿ ಯಾರು ಕೂಡ ಹಿರೋಯಿನ್ ಬಯಸುವುದಿಲ್ಲ ಎಂದು ಮೇಲ್ ಓರಿಯೆಂಟೇಡ್ ಬಾಲಿವುಡ್ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ ಮಲ್ಲಿಕಾ ದುವಾ. 

Highest Paid Actress: ಬಾಲಿವುಡ್‌ನ ಅತ್ಯಂತ ದುಬಾರಿ ನಟಿಯರು ಇವರು..!

ಇತ್ತ ಅಮರ್ ಕೌಶಿಕ್ ನಿರ್ದೇಶನದ ಸ್ತ್ರೀ 2 ಸಿನಿಮಾ ಥಿಯೇಟರ್‌ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಕೇವಲ 11 ದಿನದಲ್ಲಿ 386.15 ಕೋಟಿ ಕಲೆಕ್ಷನ್ ಮಾಡಿದೆ.  ಶ್ರದ್ಧಾ ಕಪೂರ್ ಹಾಗೂ ರಾಜ್‌ಕುಮಾರ್ ರಾವ್ ಅಭಿನಯದ ಸ್ತ್ರೀ-2 ಸಿನಿಮಾವೂ ಅಕ್ಷಯ್‌ ಕುಮಾರ್ ಹಾಗೂ ತಾಪ್ಸಿ ಪನ್ನು ನಟನೆಯ ಖೇಲ್ ಖೇಲ್ ಮೇ, ಹಾಗೂ ಜಾನ್ ಅಬ್ರಾಹಂ ಹಾಗೂ ಶಾರ್ವರಿ ನಟನೆಯ ವೇದಾಗೆ ಸಖತ್ ಪೈಪೋಟಿ ನೀಡಿದೆ. 

click me!