Urfi Javed: ಸೆಕ್ಸ್ ಬಗ್ಗೆ ಉರ್ಫಿ ಜಾವೇದ್ ಶಾಕಿಂಗ್ ಸ್ಟೇಟ್ಮೆಂಟ್, ಕಳೆದ ಮೂರು ವರ್ಷದಿಂದ…!

By Roopa Hegde  |  First Published Aug 26, 2024, 2:39 PM IST

ನಟಿ ಹಾಗೂ ಮಾಡೆಲ್ ಉರ್ಫಿ ಜಾವೇದ್ ಡ್ರೆಸ್ ಸೆನ್ಸ್ ನಿಮಗೆ ಗೊತ್ತೇ ಇದೆ. ದಿನಕ್ಕೊಂದು ಹೊಸ ವೇಷದಲ್ಲಿ ಬರುವ ಉರ್ಫಿ ಅಭಿಮಾನಿಗಳನ್ನು ದಂಗಾಗಿಸುವ ಹೇಳಿಕೆ ನೀಡಿದ್ದಾಳೆ. ಸೆಕ್ಸ್ ಬಗ್ಗೆ ಮೊದಲ ಬಾರಿ ಮಾತನಾಡಿರುವ ಉರ್ಫಿ, ಏನೆಂದಿದಾಳೆ ನೀವೇ ಓದಿ. 
 


ಡಿಫರೆಂಟ್ ಫ್ಯಾಷನ್ (Different fashion) ಮೂಲಕವೇ ಅಭಿಮಾನಿಗಳ ಗಮನ ಸೆಳೆದಿರುವ ಉರ್ಫಿ ಜಾವೇದ್ (Urfi Javed), ಕಾಂಟ್ರವರ್ಸಿ ಕ್ವೀನ್. ಆಕೆ ಧರಿಸಿದ ಬಟ್ಟೆ, ಮಾಡಿದ ಕೆಲಸ ಎಲ್ಲವೂ  ಟ್ರೋಲರ್ (troller) ಬಾಯಿಗೆ ಆಹಾರವಾಗುತ್ತೆ. ತುಂಬಾ ಬೋಲ್ಡ್ ಉರ್ಫಿ ಮೈಮೇಲೆ, ಅತಿ ಕಡಿಮೆ ಬಟ್ಟೆ ಇರುತ್ತೆ. ಚಿತ್ರವಿಚಿತ್ರ ವಸ್ತುಗಳನ್ನೆಲ್ಲ ಧರಿಸ್ಕೊಂಡು ಸುದ್ದಿ ಮಾಡೋದೇ ಆಕೆ ಕೆಲಸ. ಈಗ ಉರ್ಫಿ ಜಾವೇದ್ ಬಟ್ಟೆ ವಿಷ್ಯಕ್ಕಲ್ಲ ಸೆಕ್ಸ್ ವಿಷ್ಯಕ್ಕೆ ಮತ್ತೆ ಚರ್ಚೆಗೆ ಬಂದಿದ್ದಾಳೆ. ಎಲ್ಲವನ್ನೂ ಬಿಂದಾಸ್ ಆಗಿ ಹೇಳುವ ಮಾಡೆಲ್ ಈ ಬಾರಿ ತನ್ನ ಸ್ನೇಹಿತೆಯರ ಬಳಿ ಸೆಕ್ಸ್ ಬಗ್ಗೆ ಮಾತನಾಡಿದ್ದಾಳೆ. ಆಕೆ ಮಾತು ಕೇಳಿದ ಜನರು ಇದನ್ನು ನಂಬ್ಬೇಕಾ ಅಂತ ಪ್ರಶ್ನೆ ಮಾಡಿದ್ದಾರೆ. 

ಇತ್ತೀಚೆಗೆ ಅಮೆಜಾನ್ ಪ್ರೈಮ್‌ನಲ್ಲಿ ಪ್ರಾರಂಭವಾದ ಫಾಲೋ ಕಾರ್ಲೋ ಯಾರ್ ಶೋನಲ್ಲಿ ಉರ್ಫಿ ಜಾವೇದ್ ಈ ವಿಷ್ಯವನ್ನು ಬಹಿರಂಗಪಡಿಸಿದ್ದಾಳೆ. ಈ ಶೋನಲ್ಲಿ ಉರ್ಫಿ ತನ್ನ ಸ್ನೇಹಿತೆಯರ ಜೊತೆ ಮಾತನಾಡಿದ್ದಾಳೆ. ಫ್ರೆಂಡ್ಸ್, ಯಾವಾಗ್ಲೂ ಪ್ರಯಾಣದಲ್ಲಿರುವ, ಸದಾ ಹೊಸ ವ್ಯಕ್ತಿಗಳನ್ನು ಭೇಟಿಯಾಗುವ ಉರ್ಫಿ, ಯಾರ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದಾಳೆ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಉರ್ಫಿ, ಕಳೆದ ಮೂರು ವರ್ಷಗಳಿಂದ ಯಾರ ಜೊತೆಯೂ ಸೆಕ್ಸ್ ಮಾಡಿಲ್ಲ ಎಂದಿದ್ದಾಳೆ.

Tap to resize

Latest Videos

ಸ್ತ್ರೀ 2 ಚಿತ್ರದ ನಂತರ ಹೆಚ್ಚಾಯಿತು ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಪ್ರಸಿದ್ಧಿ, ಇನ್ಸ್ಟಾಗ್ರಾಮ್ ನಲ್ಲಿ ಮೋದಿ ಹಿಂದಿಕ್ಕಿದ ನಟಿ

ಸೆಕ್ಸ್ – ಕಿಸ್ ಎರಡೂ ಮಾಡದ ಉರ್ಫಿ : ಸಂದರ್ಶನದಲ್ಲಿ ಉರ್ಫಿ ಹೇಳಿರೋ ಪ್ರಕಾರ, ಆಕೆ ಕಳೆದ ಮೂರು ವರ್ಷಗಳಿಂದ ಯಾರ ಜೊತೆಯೂ ಶಾರೀರಿಕ ಸಂಬಂಧ ಬೆಳೆಸಿಲ್ಲ. ಅಷ್ಟೇ ಅಲ್ಲ ಯಾವುದೇ ಪುರುಷನಿಗೆ ಕಿಸ್ ಕೂಡ ನೀಡಿಲ್ಲ.   ಯಾರ ಜೊತೆಯೂ ಆಕೆ ರೋಮ್ಯಾಂಟಿಕ್ ಆಗಿ ಮಾತನಾಡಿಲ್ಲ.

ಸೆಕ್ಸ್ ನಿಂದ ದೂರವಿರಲು ಇದು ಕಾರಣ : ಉರ್ಫಿ ಈ ಮಾತು ಕೇಳಿ ಸ್ನೇಹಿತೆಯರು ಅಚ್ಚರಿಪಡುವ ಮೊದಲೇ ಮಾತು ಮುಂದುವರೆಸಿದ ಉರ್ಫಿ, ಸೆಕ್ಸ್ ನಿಂದ ದೂರವಿರಲು ಕಾರಣವೇನು ಎಂಬುದನ್ನು ಹೇಳಿದ್ದಾಳೆ. ಉರ್ಫಿ, ತನಗೆ ತಾನೇ ಪ್ರಮಾಣ ಮಾಡಿದ್ದಾಳೆ. ತನ್ನ ಬಳಿ ಪ್ರೈವೆಟ್ ಜೆಟ್ ಬರುವವರೆಗೂ ಯಾರ ಜೊತೆಯೂ ಸಂಬಂಧ ಬೆಳೆಸುವುದಿಲ್ಲ ಎಂದು ಉರ್ಫಿ ಪ್ರಾಮಿಸ್ ಮಾಡ್ಕೊಂಡಿದ್ದಾಳೆ. 

ಉರ್ಫಿ ಹುಡುಗ ಹೇಗಿರಬೇಕು? : ಫ್ರೆಂಡ್ ಜೊತೆ ಮಾತನಾಡ್ತಾ, ಉರ್ಫಿ ತನ್ನ ಸಂಗಾತಿ ಹೇಗಿರಬೇಕು ಎಂಬುದನ್ನು ಬಹಿರಂಗಪಡಿಸಿದ್ದಾಳೆ. ಉರ್ಫಿ ಸಂಪೂರ್ಣ ಸ್ವತಂತ್ರವಾಗಿ ಬೆಳೆದ ಮಾಡೆಲ್. ಆಕೆ ದುಡಿದ್ರೆ ಮಾತ್ರ ನಮ್ಮ ಸಂಸಾರ ನಡೆಯೋದು ಎಂದು ಈ ಹಿಂದೆ ಉರ್ಫಿ ತಾಯಿ ಹೇಳಿದ್ದರು. ಉರ್ಫಿ, ಎಲ್ಲ ಕೆಲಸವನ್ನು ಒಂಟಿಯಾಗಿ, ಸಂಪೂರ್ಣ ಬಿಂದಾಸ್ ಆಗಿ ಮಾಡ್ತಾಳೆ. ಪ್ರೀತಿ, ಮದುವೆ ಎಂಬ ಸಂಬಂಧಕ್ಕೆ ಕಟ್ಟುಬಿದ್ದಾಗ ತನ್ನ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತದೆ. ನನ್ನ ಸಂಗಾತಿಯಿಂದ ನಾನು ದುರ್ಬಲನಾಗಲು ಬಯಸೋದಿಲ್ಲ ಎನ್ನುವ ಮೂಲಕ, ಮದುವೆ ನಂತ್ರವೂ ನನಗೆ ಸ್ವಾತಂತ್ರ್ಯಬೇಕು ಎಂಬುದನ್ನು ಸ್ಪಷ್ಟಪಡಿಸಿದ್ದಾಳೆ. 

ಉರ್ಫಿ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ರೋಲರ್ಸ್ ಒಂದೊಂದು ರೀತಿ ಕಮೆಂಟ್ ಶುರು ಮಾಡಿದ್ದಾರೆ. ಉರ್ಫಿ ಬಳಿ ಪ್ರೈವೆಟ್ ಜೆಟ್ ಖರೀದಿ ಮಾಡುವಷ್ಟು ಹಣ ಬರಲ್ಲ, ಆಕೆ ಜೀವನ ಪರ್ಯಂತ ಸೆಕ್ಸ್ ಮಾಡಲ್ಲ ಅನ್ನೋದು ಕೆಲವರ ಕಮೆಂಟ್ ಆದ್ರೆ ಮತ್ತೆ ಕೆಲವರು ಸುಳ್ಳು ಹೇಳ್ತಿದ್ದಾಳೆ ಎಂದಿದ್ದಾರೆ.  

Vijay Raghavendra: ನನ್ನ ಬೆಳಕಾಗು ಎನ್ನುತ್ತಲೇ ಪ್ರೀತಿಯ ಮಡದಿಗೆ ವೆಡ್ಡಿಂಗ್ ಆನಿವರ್ಸರಿ ವಿಶ್ ಮಾಡಿದ ವಿಜಯ್

ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ, ಕಸೌತಿ ಜಿಂದಗಿ ಕಿ ಧಾರಾವಾಹಿಯಲ್ಲಿ ನಟಿಸಿದ್ದ ಉರ್ಫಿ ಜಾವೇದ್ ಈಗ ಸಾಮಾಜಿಕ ಜಾಲತಾಣ ಹಾಗೂ ಮಾಡಲಿಂಗ್ ನಲ್ಲಿ ಬ್ಯುಸಿಯಿದ್ದಾಳೆ. ಅವಳ ನಿವ್ವಳ ಆಸ್ತಿ 173 ಕೋಟಿ ಎಂದು ಮಾಧ್ಯಮಗಳು ವರದಿ ಮಾಡಿವೆ.

click me!