ಅಮಿತಾಭ್​ ಪುತ್ರಿ ಶ್ವೇತಾಗೆ ಅತ್ತಿಗೆ ಐಶ್ವರ್ಯ ರೈ ಕಂಡ್ರೆ ಸಿಟ್ಟೇಕೆ? ವೈರಲ್​ ವಿಡಿಯೋದಿಂದ ಕಾರಣ ಬಹಿರಂಗ

By Suvarna News  |  First Published Oct 14, 2023, 1:06 PM IST

ಅಮಿತಾಭ್​ ಬಚ್ಚನ್​ ಪುತ್ರಿ ಶ್ವೇತಾ ಬಚ್ಚನ್​ ತಮ್ಮ ಅತ್ತಿಗೆ ಐಶ್ವರ್ಯ ರೈ ಅವರನ್ನು ದ್ವೇಷಿಸೋದ್ಯಾಕೆ? ಶ್ವೇತಾ ಅವರ ಹಳೆಯ ವಿಡಿಯೋ ಇದೀಗ ವೈರಲ್​ ಆಗಿದೆ. 
 


ಅಮಿತಾಭ್​ ಬಚ್ಚನ್​ ಕುಟುಂಬ ಆದರ್ಶ ಕುಟುಂಬ ಎನಿಸಿಕೊಂಡಿದ್ದರೂ, ಈ ಕುಟುಂಬದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವ ಮಾತು ಇತ್ತೀಚೆಗೆ ಸಾಬೀತಾಗಿತ್ತು. ಈ ವಿಷಯ ಇದೀಗ ಮತ್ತೆ ಮುನ್ನೆಲೆಗೆ ಬರಲು ಕಾರಣ, ಅಮಿತಾಭ್​ ಬಚ್ಚನ್​ ಮೊಮ್ಮಗಳು ಅಂದ್ರೆ ಶ್ವೇತಾ ಅವರ ಪುತ್ರಿ ನವ್ಯಾ ನವೇಲಿ ಕಾಸ್ಮೆಟಿಕ್ ಬ್ರಾಂಡ್ L'Oréal ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಅದರ ವಿಡಿಯೋಗಳನ್ನು ಐಶ್ವರ್ಯ ರೈ ಅವರನ್ನು ಬಿಟ್ಟು ಉಳಿದವರಿಗೆಲ್ಲಾ ಟ್ಯಾಗ್​ ಮಾಡಿದ್ದ ಸಂದರ್ಭದಲ್ಲಿ!  ಅವರು ಈ ವಿಡಿಯೋವನ್ನು ತಮ್ಮ ಮಾಮಿ ಐಶ್ವರ್ಯ ರೈ ಬಚ್ಚನ್​ ಅವರಿಗೆ ಟ್ಯಾಗ್​ ಮಾಡದೇ  ವಿಡಿಯೋವನ್ನು ತಾಯಿ, ತಂದೆ, ಅಜ್ಜ, ಅಜ್ಜಿ ಸೇರಿದಂತೆ ಹಲವರಿಗೆ ಟ್ಯಾಗ್​ ಮಾಡಿದ್ದರು.  ಇದು ಚರ್ಚೆಗೆ ಕಾರಣವಾಗಿದ್ದೇಕೆ ಎಂದರೆ, ಶ್ವೇತಾ ಅವರಿಗೆ ಐಶ್ವರ್ಯ ಅವರನ್ನು ಕಂಡರೆ ಆಗುವುದಿಲ್ಲ ಎನ್ನುವುದು ಬಹಳ ಹಿಂದಿರುವ ಇರುವ ಸುದ್ದಿ. ಆದ್ದರಿಂದ ನವ್ಯಾ ನವೇಲಿ ಕೂಡ ಅಮ್ಮ ಶ್ವೇತಾರ ಹಾದಿ ಹಿಡಿದು ಮಾಮಿ ಐಶ್ವರ್ಯರನ್ನು ಕಡೆಗಣಿಸ್ತಾ ಇದ್ದಾರೆಯೇ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ.
 
ಅಷ್ಟಕ್ಕೂ ಐಶ್ವರ್ಯ ರೈ ಬಚ್ಚನ್​ ಅವರನ್ನು ಕಂಡರೆ ಅಮಿತಾಭ್​ ಬಚ್ಚನ್​ ಅವರ ಪುತ್ರಿ ಶ್ವೇತಾ ಅವರಿಗೆ  ಹೊಟ್ಟೆ ಉರಿ ಎಂದೇ ಹೇಳಲಾಗುತ್ತಿದೆ.  ಅದ್ಯಾಕೆ ಎಂದರೆ,  ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾರನ್ನು ಮದುವೆಯಾಗುವುದನ್ನು ಶ್ವೇತಾ ಬಯಸಿರಲಿಲ್ಲವಂತೆ.  ಅಭಿಷೇಕ್ ಅವರು ತಮ್ಮ  ಮಾಜಿ ಗೆಳತಿ ಕರಿಷ್ಮಾ ಕಪೂರ್ ಅವರನ್ನು ಮದುವೆಯಾಗಬೇಕು ಎನ್ನುವುದು ಅವರ ಆಸೆಯಾಗಿತ್ತು. ಇವರಿಬ್ಬರ ಸಂಬಂಧ ಅವರಿಗೆ ಇಷ್ಟವಿತ್ತು. ಏಕೆಂದರೆ  ಶ್ವೇತಾ ಯಾವಾಗಲೂ ಕರಿಷ್ಮಾ ಅವರನ್ನು ಪರಿಪೂರ್ಣ ಬಚ್ಚನ್ ಬಹು ಎಂದು ಪರಿಗಣಿಸುತ್ತಿದ್ದರು. ಅಭಿಷೇಕ್ ಕಪೂರ್ ಕುಟುಂಬದ ಅಳಿಯನಾಗಬೇಕೆಂದು ಅವರು ಬಯಸಿದ್ದರು. ಅಭಿಷೇಕ್​ ಅವರು ಐಶ್ವರ್ಯರನ್ನು ಮದುವೆಯಾಗುವ ಪಟ್ಟು ಹಿಡಿದಾಗ,  ಆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನೆಯವರ ಮೇಲೂ ಶ್ವೇತಾ ಸಾಕಷ್ಟು ಒತ್ತಡ ಹೇರಿದ್ದರು ಎನ್ನಲಾಗಿದೆ. ಅದೇ ಕಾರಣಕ್ಕೆ ಐಶ್ವರ್ಯರನ್ನು ಕಂಡರೆ ಅವರಿಗೆ ಆಗಿ ಬರುವುದಿಲ್ಲ ಎನ್ನುವ ಮಾತಿದೆ.

ಡ್ರೆಸ್​ ಒಳಗೆ ಕೈಹಾಕಿ ಕ್ಯಾಮೆರಾಕ್ಕೆ ಸಿಕ್ಕಿಬಿದ್ದ ಜಾಹ್ನವಿ ಕಪೂರ್​: ಇರುವೆ ಹೊಕ್ಕಿತ್ತಾ ಅಂದ ಫ್ಯಾನ್ಸ್​!
 
ಆದರೆ ಇದೀಗ ಶ್ವೇತಾ ಬಚ್ಚನ್​ ಅವರ ಹಳೆಯ ವಿಡಿಯೋ ಒಂದು ವೈರಲ್​ ಆಗುತ್ತಿದ್ದು, ಅದರಲ್ಲಿ ತಾವು ಯಾಕೆ ಐಶ್ವರ್ಯ ಅವರನ್ನು ದ್ವೇಷಿಸುತ್ತೇನೆ ಎಂದು ಶ್ವೇತಾ ಹೇಳಿದ್ದಾರೆ. ಕರಣ್ ಜೋಹರ್ ಅವರ ವಿವಾದಾತ್ಮಕ ಟಾಕ್ ಷೋ, ಕಾಫಿ ವಿತ್ ಕರಣ್​ನಲ್ಲಿ,  ಶ್ವೇತಾ ಅವರು  ಸಹೋದರ ಅಭಿಷೇಕ್ ಬಚ್ಚನ್ ಅವರೊಂದಿಗೆ ಬಂದಿದ್ದರು. ಆಗ ಶ್ವೇತಾ ಅವರು ಐಶ್ವರ್ಯ ಕುರಿತು ಕೆಲವೊಂದು ಮಾಹಿತಿ ಶೇರ್​ ಮಾಡಿಕೊಂಡಿದ್ದರು.  ಐಶ್ವರ್ಯಾ ರೈ ಬಗ್ಗೆ ಶ್ವೇತಾ ಅವರು ಪ್ರೀತಿಸುವ, ದ್ವೇಷಿಸುವ ಮತ್ತು ಸಹಿಸಿಕೊಳ್ಳುವ ಪ್ರಶ್ನೆಗಳಿಗೆ ಶ್ವೇತಾ ಉತ್ತರಿಸಿದ್ದರು. ಕರಣ್​ ಅವರು, ನಿಮ್ಮ ಅತ್ತಿಗೆ ಐಶ್ವರ್ಯ ಅವರಲ್ಲಿ ಏನು ಒಳ್ಳೆಯದ್ದನ್ನು ನೋಡುತ್ತೀರಿ ಎಂದಿದ್ದಾಗ,  ಶ್ವೇತಾ, ಆಕೆ ಸ್ವಯಂ ನಿರ್ಮಿತ, ಬಲಿಷ್ಠ ಮಹಿಳೆ ಮತ್ತು ಅದ್ಭುತ ತಾಯಿ. ಅದನ್ನು ನಾನು ಪ್ರೀತಿಸುತ್ತೇನೆ ಎಂದಿದ್ದರು. ಅವರ ಯಾವ ಗುಣ ಸಹಿಸಿಕೊಳ್ಳುತ್ತೀರಿ ಎಂದಾಗ,   ಅತ್ತಿಗೆಯ ಸಮಯ ನಿರ್ವಹಣೆ ಕೌಶಲವನ್ನು  ಸಹಿಸಿಕೊಳ್ಳುತ್ತೇನೆ ಎಂದಿದ್ದರು. ನಂತರ ಕರಣ್​ ಅವರು, ಐಶ್ವರ್ಯಾರನ್ನು ಯಾವ ಕಾರಣಕ್ಕೆ ದ್ವೇಷಿಸುತ್ತೀರಿ ಎಂದು ಹೇಳಿದ್ದಾಗ, ಆಕೆ ಯಾವುದೇ  ಕರೆಗಳು ಮತ್ತು ಸಂದೇಶಗಳಿಗೆ ರಿಪ್ಲೈ ಮಾಡುವಾಗ ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ಅದು ನನಗೆ ಇಷ್ಟ ಆಗುವುದಿಲ್ಲ ಎಂದಿದ್ದರು. ಇದರ ವಿಡಿಯೋ ಈಗ ವೈರಲ್​ ಆಗಿದೆ. 
 
ಇದರ ನಡುವೆಯೇ ಈಗ ಮತ್ತೊಂದು ಸುದ್ದಿ ಸದ್ದು ಮಾಡುತ್ತಿದೆ. ಅದೇನೆಂದರೆ, ಅಮಿತಾಭ್​ ಬಚ್ಚನ್​ ಹುಟ್ಟುಹಬ್ಬದ ದಿನ ಸೋಷಿಯಲ್ ಮೀಡಿಯಾದಲ್ಲಿ ಐಶ್ವರ್ಯಾ ರೈ ಹಂಚಿಕೊಂಡ ಫೋಟೋದಲ್ಲಿ ಆರಾಧ್ಯಾ ಹಾಗೂ ಅಮಿತಾಭ್ ಇದ್ದಾರೆ. ಆದ್ರೆ ಆ ಫೋಟೋ ಶೇರ್​ ಮಾಡುವಾಗ ಐಶ್ವರ್ಯಾ ರೈ ಅತ್ತೆ ಜಯಾ ಬಚ್ಚನ್​ ಅವರ ಫೋಟೋ ಕ್ರಾಪ್​ ಮಾಡಿದ್ದಾರೆ. ಆರಾಧ್ಯ, ಅಮಿತಾಭ್ ಜೊತೆ ಜಯಾ ಬಚ್ಚನ್​, ನವ್ಯಾ ನವೇಲಿ ನಂದಾ, ಅಗಸ್ತ್ಯ ನಂದಾ ಕೂಡ ಇದ್ರು. ಅವರ ಫೋಟೋವನ್ನು ಐಶ್ವರ್ಯ ತೆಗೆದಿದ್ದು ಯಾಕೆ ಎನ್ನುವ ಪ್ರಶ್ನೆ ಇದೀಗ ಎದ್ದಿದೆ.  ಐಶ್ವರ್ಯಾ ರೈ ಯಾಕೆ ಹೀಗೆ ಮಾಡಿದ್ರು ಎನ್ನುವ ಪ್ರಶ್ನೆಗೆ ಇದೀಗ ಉತ್ತರ ಹುಡುಕುತ್ತಿದ್ದಾರೆ. ನಟಿ ಬೇಕಂತಲೇ ಹೀಗೆ ಮಾಡಿದ್ರಾ? ಅತ್ತೆ ಹಾಗೂ ನಾದಿನಿ ಶ್ವೇತಾ ಬಚ್ಚನ್​ ಫ್ಯಾಮಿಲಿ ಜೊತೆ ಐಶ್ವರ್ಯಾ ರೈ ಮುನಿಸಿಕೊಂಡಿದ್ದಾರಾ ಎಂಬ ಅನುಮಾನಗಳು ಮೂಡಿದೆ.

Tap to resize

Latest Videos

ನೀವು ಕಾಮ ಪ್ರಚೋದಕ ಚಿತ್ರವನ್ನೇ ಮಾಡೋದ್ಯಾಕೆ ಎಂದು ಏಕ್ತಾ ಕಪೂರ್​ಗೆ ಪ್ರಶ್ನೆ ಕೇಳಿದ್ರೆ ಹೀಗೆ ಹೇಳೋದಾ?
 

click me!