ಇಮ್ರಾನ್ ಹಶ್ಮಿ ಜೀವನದಲ್ಲೇ ಈ ನಟಿಯ ಜೊತೆ ಅತ್ಯಂತ ಕೆಟ್ಟ ಕಿಸ್ಸಿಂಗ್ ಅನುಭವಂತೆ

Published : Mar 25, 2023, 12:25 PM IST
ಇಮ್ರಾನ್ ಹಶ್ಮಿ ಜೀವನದಲ್ಲೇ ಈ ನಟಿಯ ಜೊತೆ ಅತ್ಯಂತ ಕೆಟ್ಟ ಕಿಸ್ಸಿಂಗ್ ಅನುಭವಂತೆ

ಸಾರಾಂಶ

ಇಮ್ರಾನ್ ಹಶ್ಮಿ ಜೀವನದಲ್ಲೇ ಈ ನಟಿಯ ಜೊತೆ ಅತ್ಯಂತ ಕೆಟ್ಟ ಕಿಸ್ಸಿಂಗ್ ಅನುಭವ ಎಂದು ಬಹಿರಂಗ ಪಡಿಸಿದ್ದಾರೆ. 

ಬಾಲಿವುಡ್ ಸ್ಟಾರ್ ಇಮ್ರಾನ್ ಹಶ್ಮಿ ಅವರಿಗೆ ಇಂದು (ಮಾರ್ಚ್ 24) ಹುಟ್ಟುಹಬ್ಬದ ಸಂಭ್ರಮ. 44ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ಇಮ್ರಾನ್ ಹಶ್ಮಿ ಅವರಿಗೆ ಅಭಿಮಾನಿಗಳು ಮತ್ತು ಸಿನಿಮಾ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ. ಇಮ್ರಾನ್ ಹಶ್ಮಿ ಗ್ಯಾಪ್‌ನ ಬಳಿಕ ಮತ್ತೆ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ, ತೆರೆಮೇಲೆ ಮಿಂಚುತ್ತಿದ್ದಾರೆ. ಸದ್ಯ ಹಶ್ಮಿ ಟೈಗರ್ 3 ರಿಲೀಸ್ ಗಾಗಿ ಎದುರು ನೋಡುತ್ತಿದ್ದಾರೆ. ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ನಟನೆಯ ಟೈಗರ್-3 ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

ನಟ ಇಮ್ರಾನ್ ಹಶ್ಮಿ ಎಂದರೆ ಅಭಿಮಾನಿಗಳಿಗೆ ಮೊದಲು ನನೆಪಾಗುವುದು ಕಿಸ್ಸಿಂಗ್ ದೃಶ್ಯಗಳು. 'ಸೀರಿಯಲ್ ಕಿಸ್ಸರ್' ಅಂತನೆ ನಟ ಇಮ್ರಾನ್ ಹಶ್ಮಿ ಖ್ಯಾತಿಗಳಿಸಿದ್ದಾರೆ. ಅನೇಕ ಸಿನಿಮಾಗಳಲ್ಲಿ ಇಮ್ರಾನ್ ಹಶ್ಮಿ ಕಿಸ್ಸಿಂಗ್ ದೃಶ್ಯಗಲ್ಲಿ ಕಾಣಿಸಿಕೊಂಡಿದ್ದಾರೆ, ಸಿಕ್ಕಾಪಟ್ಟೆ ಹಾಟ್ ಆಗಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಮರ್ಡರ್, ಜನ್ನತ್, ರಾಜ್;ದಿ ಮಿಸ್ಟರಿ ಕಂಟಿನ್ಯೂಸ್,  ಮರ್ಡರ್ 2, ದಿ ಡರ್ಟಿ ಪಿಕ್ಚರ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಲೆಕ್ಷನ್ ಮಾಡಿವೆ. ಇಮ್ರಾನ್ ಹಶ್ಮಿ ತನ್ನ ನಟನೆ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. 

ಇಮ್ರಾನ್ ಹಶ್ಮಿ ಸಿನಿಮಾಗಳು ಅಂದರೆ ಕೇವಲ ಕಿಸ್ಸಿಂಗ್ ದೃಶ್ಯಗಳು ಮಾತ್ರವಲ್ಲದೇ ಉತ್ತಮ ಹಾಡುಗಳನ್ನು ಸಹ ಅಭಿಮಾನಿಗಳನ್ನು ರಂಜಿಸಿವೆ. ಇಮ್ರಾನ್ ಹಶ್ಮಿ ಸಿನಿಮಾ ಅಂದರೆ ಬ್ಲಾಕ್ ಬಸ್ಟರ್ ಹಾಡುಗಳು ಪಕ್ಕಾ ಎಂದು ಅಭಿಮಾನಿಗಳು ಕಾಯುತ್ತಿದ್ದರು. ದಿ ಕಿಸ್ಸಿಂಗ್ ಕಿಂಗ್ ಆಫ್ ಬಾಲಿವುಡ್ ಇಮ್ರಾನ್ ಹಶ್ಮಿ 2003ರಲ್ಲಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಫುಟ್ಪಾತ್ ಮೂಲಕ ಮೊದಲ ಬಾರಿಗೆ ತೆರೆಮೇಲೆ ಮಿಂಚಿದರು. 2004ರಲ್ಲಿ ಮರ್ಡರ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ದೊಡ್ಡ ಮಟ್ಟದ ಸದ್ದು ಮಾಡಿದರು. ಆ ಸಿನಿಮಾದಲ್ಲಿ ಮಲ್ಲಿಕಾ ಶೆರಾವತ್ ಜೊತೆ ಹಂಚಿಕೊಂಡರು.  ಇಬ್ಬರ ಹಾಟ್ ಕೆಮಿಸ್ಟ್ರಿ ಅಭಿಮಾನಿಗಳ ನಿದ್ದೆ ಗೆಡಿಸಿತ್ತು. ಈ ಸಿನಿಮಾ ಬಳಿಕ ಇಮ್ರಾನ್ ಹಶ್ಮಿ ಅವರಿಗೆ ಬಹುತೇಕ ಅದೇ ರೀತಿಯ ಪಾತ್ರಗಳು ಅರಸಿ ಬಂದವು. 

ಅತ್ಯಂತ ಕೆಟ್ಟ ಕಿಸ್ಸರ್ ಯಾರೆಂದು ಹೇಳಿದ ಇಮ್ರಾನ್ 

ತೆರೆಮೇಲಿನ ಕಿಸ್ಸಿಂಗ್ ದೃಶ್ಯಗಳ ಬಗ್ಗೆ ನಟ ಇಮ್ರಾನ್ ಹಶ್ಮಿ ಅನೇಕ ಬಾರಿ ಮಾತನಾಡಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಇಮ್ರಾನ್ ಹಶ್ಮಿ, ಅತ್ಯಂತ ಕೆಟ್ಟ ಕಿಸ್ಸಿಂಗ್ ಅನುಭವ ಯಾರ ಜೊತೆಗೆ ಎಂದು ಬಹಿರಂಗ ಪಡಿಸಿದ್ದರು. ವೃತ್ತಿ ಜೀವನದ ಕಿಸ್ಸಿಂಗ್ ದೃಶ್ಯಗಳಲ್ಲಿಯೇ ಅತ್ಯಂತ ಕೆಟ್ಟ ಕಿಸ್ಸರ್ ನಟಿ ಮಲ್ಲಿಕಾ ಶೆರಾವತ್ ಎಂದು ಹೇಳಿದ್ದರು. ಕಿಸ್ಸಿಂಗ್ ದೃಶ್ಯಗಳಲ್ಲಿ ಮಲ್ಲಿಕಾ ಶೆರಾವತ್‌ಗಿಂತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಉತ್ತಮ ಎಂದು ಹೇಳಿದ್ದರು. ಇಮ್ರಾನ್ ಹಶ್ಮಿ ಹಾಗೆ ಹೇಳಿದ ಬಳಿಕ ನಟಿ ಮಲ್ಲಿಕಾ ಶೆರಾವತ್ ಕೂಡ ಟಾಂಗ್ ಕೊಟ್ಟಿದ್ದರು. 

Aishwarya Rai ಬಗ್ಗೆ ಅಸಭ್ಯ ಕಾಮೆಂಟ್‌ ಮಾಡಿ ಸಿಕ್ಕಿಬಿದ್ದ Emraan Hashmi!

ಕಿಸ್ಸಿಂಗ್ ದೃಶ್ಯಗಳ ಬಗ್ಗೆ ಪತ್ನಿಯ ರಿಯಾಕ್ಷನ್ 

ಇಮ್ರಾನ್ ಹಶ್ಮಿ ಕಿಸ್ಸಿಂಗ್ ದೃಶ್ಯಗಳ ಬಗ್ಗೆ ನಟಿ ಪತ್ನಿ ಕೂಡ ಪ್ರತಿಕ್ರಿಯೆ ನೀಡಿದ್ದರು. ಇಮ್ರಾನ್ ಹಶ್ಮಿ ಪತ್ನಿ ಪರ್ವೀನ್ ಶಹಾನಿ. ಈ ದಂಪತಿಗೆ ಅಯಾನ್ ಹಶ್ಮಿ ಎನ್ನುವ ಮಗನಿದ್ದಾನೆ. ಸಂದರ್ಶನದಲ್ಲಿ ಕಿಸ್ಸಿಂಗ್ ದೃಶ್ಯಗಳ ಬಗ್ಗೆ ಪತ್ನಿ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಬಹಿರಂಗ ಪಡಿಸಿದ್ದರು. ಇಂತಹ ದೃಶ್ಯಗಳನ್ನು ನೋಡಿದ್ರೆ ತುಂಬಾ ಮುಜುಗರ ಪಡುತ್ತಾಳೆ ಎಂದು ಹೇಳಿದ್ದರು. ಅಲ್ಲದೇ ಅನೇಕ ಬಾರಿ ತನಗೆ ಹೊಡೆದಿದ್ದಳು ಎಂದು ಬಹಿರಂಗ ಪಡಿಸಿದ್ದರು. 

ಮಗನ ಕ್ಯಾನ್ಸರ್ ಚಿಕಿತ್ಸೆ ವೇಳೆ ಅಕ್ಷಯ್ ಕುಮಾರ್ ಮಾಡಿದ ಸಹಾಯ ನೆನೆದ ಇಮ್ರಾನ್ ಹಶ್ಮಿ

'ನನ್ನ ಚಿತ್ರಗಳನ್ನು ನೋಡಿ ಹೊರಬಂದ ಬಳಿಕ ನನ್ನ ಹಿಂಡತಿ ಯಾವಾಗಲೂ ನನಗೆ ಹೊಡೆಯುತ್ತಾಳೆ.  ಅವಳು ಅರ್ಥಮಾಡಿಕೊಳ್ಳುವುದಿಲ್ಲ ಎಂದು ನಾನು ನಿರೀಕ್ಷಿಸುತ್ತೇನೆ ಆದರೆ ಇದು ನನ್ನ ವೃತ್ತಿ ನಾನು ಮಾಡಬೇಕು ಎಂದು ಅವಳು ತಿಳಿದಿದ್ದಾಳೆ' ಎಂದು ಹೇಳಿದರು. ಮರ್ಡರ್ ಸ್ಕ್ರೀನಿಂಗ್ ಸಮಯದ ಘಟನೆಯನ್ನು ಇಮ್ರಾನ್ ನೆನಪಿಸಿಕೊಂಡರು. ತನ್ನ ಹೆಂಡತಿಗೆ ದೃಶ್ಯಗಳ ಬಗ್ಗೆ ತಿಳಿದಿರಲಿಲ್ಲ. ಆದ್ದರಿಂದ, ಸ್ಕ್ರೀನಿಂಗ್ ಸಮಯದಲ್ಲಿ ಕೋಪದಿಂದ ನನಗೆ ಆಕೆಯ ಉಗುರುಗಳಿಂದ ಪರಿಚಿದ್ದಳು. ಚಿತ್ರ ಮುಗಿದ ನಂತರ ನನ್ನ ಕೈಗಳ ಮೇಲೆ ಹಲವಾರು ಉಗುರು ಗುರುತುಗಳಾಗಿತ್ತು' ಎಂದು ಹೇಳಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Actor Dileep Case: ಖ್ಯಾತ ನಟಿ ಮೇಲಿನ ಅ*ತ್ಯಾಚಾರ ಆರೋಪ; 8 ವರ್ಷಗಳ ಹೋರಾಟ, ನಟ ದಿಲೀಪ್‌ಗೆ ನಿರಾಳ!
ಗಂಡನ ಜಾಕೆಟ್ ಕದ್ದ ದೀಪಿಕಾ ಪಡುಕೋಣೆ.. ಅಂಥ ಪರಿಸ್ಥಿತಿಗೆ ಬಂದು ತಲುಪಿದ್ರಾ ಬಾಲಿವುಡ್ ಸ್ಟಾರ್ ನಟಿ?