ನಟ ಸೂರ್ಯ ಕುಟುಂಬ ಚೆನ್ನೈನಿಂದ ಮುಂಬೈಗೆ ಶಿಫ್ಟ್; ಕಾರಣವೇನು?

Published : Mar 25, 2023, 11:15 AM IST
ನಟ ಸೂರ್ಯ ಕುಟುಂಬ ಚೆನ್ನೈನಿಂದ ಮುಂಬೈಗೆ ಶಿಫ್ಟ್; ಕಾರಣವೇನು?

ಸಾರಾಂಶ

ಕಾಲಿವುಡ್ ಸ್ಟಾರ್ ಸೂರ್ಯ ಮತ್ತು ಜ್ಯೋತಿಕಾ ದಂಪತಿ ಚೆನ್ನೈನಿಂದ ಮುಂಬೈಗೆ ಶಿಫ್ಟ್  ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

ತಮಿಳುನಾಡಿನ ಸ್ಟಾರ್ ನಟ, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಸೂರ್ಯ ಮುಂಬೈಗೆ ಶಿಫ್ಟ್ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಇತ್ತೀಚಿಗೆ ಸೂರ್ಯ ಮುಂಬೈನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾಪಾರಾಜಿಗಳ ಕ್ಯಾಮರಾಗೆ ಸೆರೆಯಾಗುತ್ತಿದ್ದಾರೆ. ವಿಡಿಯೋಗಳು ವೈರಲ್ ಆದ ಬಳಿಕ ಬಹಿರಂಗವಾಗಿದೆ ಸೂರ್ಯ ಮತ್ತು ಜ್ಯೋತಿಕಾ ದಂಪತಿ ಕುಟುಂಬ ಸಮೇತಾ ಮುಂಬೈಗೆ ಶಿಫ್ಟ್ ಆಗಿರುವ ವಿಚಾರ. ಸದ್ಯ ಮುಂಬೈನಲ್ಲಿ ನೆಲೆಸಿರುವ ಸ್ಟಾರ್ ದಂಪತಿ ಬರೋಬ್ಬರಿ 70 ಕೋಟಿ ರೂಪಾಯಿ ಮೌಲ್ಯದ ಆಸ್ತಿಯಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. 

ಅಂದಹಾಗೆ ಸೂರ್ಯ ದಿಢೀರ್ ಅಂತ ಕುಟುಂಬ ಸಮೇತ ಮುಂಬೈಗೆ ಸ್ಥಳಾಂತರಗೊಂಡಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ಸೂರ್ಯ ಶಿಫ್ಟ್ ಆಗಿದ್ದೇಕೆ ಎನ್ನುವ ಪ್ರಶ್ನೆ ಕೂಡ ಅಭಿಮಾನಿಗಳಲ್ಲಿ ಮೂಡಿದೆ. ಮೂಲಗಳ ಪ್ರಕಾರ ಸ್ಟಾರ್ ದಂಪತಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮುಂಬೈಗೆ ಸ್ಥಳಾಂತರಗೊಂಡಿದ್ದಾರೆ ಎನ್ನಲಾಗಿದೆ. ಹೌದು ಸೂರ್ಯ ಮತ್ತು ಜ್ಯೋತಿಕಾ ದಂಪತಿಗೆ ಇಬ್ಬರೂ ಮಕ್ಕಳು. ಮಗಳು ದಿಯಾ (15 ವರ್ಷ) ಮಗ ದೇವ್ (12 ವರ್ಷ).   

ಸೂರ್ಯ ಮತ್ತು ಜ್ಯೋತಿಕಾ ದಂಪತಿ ಮುಂಬೈನಲ್ಲಿ 9ಸಾವಿರ ಚದರ ಅಡಿಯ ದುಬಾರಿ ಬಂಗಲೆ ಖರೀದಿ ಮಾಡಿದ್ದಾರೆ. ಸೂರ್ಯ ಮತ್ತು ಜ್ಯೋತಿಕಾ ದಂಪತಿ ಅನೇಕ ಬಾರಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಈ ಹಿಂದೆ ಸೂರ್ಯ ಮಕ್ಕಳನ್ನು ಸೆರೆಹಿಡಿಯದಂತೆ ಪಾಪಾರಾಜಿಗಳಿಗೆ ಮನವಿ ಕೂಡ ಮಾಡಿದ್ದರು. ಬಳಿಕ ಇಬ್ಬರೂ ವೇಗವಾಗಿ ತಮ್ಮ ಕಾರಿನ ಕಡೆ ಚಲಿಸಿದ್ದರು. 

ಸೂರ್ಯ ಇಲ್ಲದೆ ಜೀವನ ನಡೆಸೋದೇ ಕಷ್ಟ; ಪತಿಯ ಬಗ್ಗೆ ನಟಿ ಜೋತಿಕಾ ಪ್ರೀತಿಯ ಮಾತು

ಸಿನಿಮಾ ವಿಚಾರಕ್ಕೆ ಬರುವುದಾರೇ ನಟ ಸೂರ್ಯ ಕೊನೆಯದಾಗಿ  ಎಥರ್ಕ್ಕುಂ ತುನಿಂಧವನ್‌ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಬಳಿಕ ಸೂರ್ಯ ಸೂಪರ್ ಹಿಟ್ ವಿಕ್ರಮ್ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾದಲ್ಲಿ ಸೂರ್ಯ, ರೋಲೆಕ್ಸ್ ಪಾತ್ರದಲ್ಲಿ ಸೂರ್ಯ ಎಂಟ್ರಿ ಕೊಟ್ಟಿದ್ದರು. ಕೊನೆಯಲ್ಲಿ ಕಾಣಿಸಿಕೊಂಡಿದ್ದಾದರೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಸದ್ಯ ಸೂರ್ಯ ನಿರ್ದೇಶಕ ಶಿವ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯದಲ್ಲೇ ಬಹಿರಂಗವಾಗುವ ಸಾಧ್ಯತೆ ಇದೆ.

16 ವರ್ಷಗಳ ನಂತರ ಸೂರ್ಯ ಮತ್ತು ಜ್ಯೋತಿಕಾ ಒಟ್ಟಿಗೆ ಕಾಣಿಸಿಕೊಳ್ಳುತ್ತಾರಾ?

ಪತ್ನಿ ಜ್ಯೋತಿಕಾ ಕೂಡ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಕೊನೆಯದಾಗಿ ಜ್ಯೋತಿಕಾ ಉದನ್ಪಿರಪ್ಪೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಕಾದಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಮತ್ತೊಂದು ಸಿನಿಮಾ ಕೂಡ ಕೈಯಲ್ಲಿದೆ. ನಟನೆ ಜೊತೆಗೆ ಜ್ಯೋತಿಕಾ ಸಿನಿಮಾ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Actor Dhanush Wedding: 20 ವರ್ಷದ ಮಗನಿರೋ ತಮಿಳು ನಟ ಧನುಷ್‌ಗೆ ಮದುವೆ, ನೆಟ್‌ವರ್ಥ್ ಏನು?
ಮೊದಲು 'ಕಪಾಲಿ ಥಿಯೇಟರ್' ಇದ್ದ ಜಾಗದಲ್ಲಿ ಈಗ ತೆಲುಗು ಸ್ಟಾರ್ ಮಹೇಶ್ ಬಾಬು ಸಿನಿಮಾಸ್ ಶುರು..!