ಐಶ್ವರ್ಯಾ ರೈ ಬಾಳಲ್ಲಿನಾ ಬಿರುಕಿಗೂ ಪ್ರಿನ್ಸೆಸ್​ ಡಯಾನಾಗೂ ಲಿಂಕ್​ ಏನು? ಯಾಕಿಷ್ಟು ಚರ್ಚೆ?

By Suvarna News  |  First Published Oct 26, 2024, 3:30 PM IST

ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಗಾಸಿಪ್‌ಗಳು ಹರಿದಾಡುತ್ತಿವೆ. ಈ ಸುದ್ದಿಯನ್ನು ರಾಜಕುಮಾರಿ ಡಯಾನಾ ಅವರ ದಾಂಪತ್ಯದ ಬಿರುಕಿನೊಂದಿಗೆ ಹೋಲಿಸಲಾಗುತ್ತಿದೆ. 


ಬರಹ: ವಿನುತ ಪರಮೇಶ್
ಕೆಲ ದಿನಗಳಿಂದ ಸೋಶಿಯಲ್​ ಮೀಡಿಯಾದಲ್ಲಿ ಇದೊಂದು ವಿಚಾರದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಗಳಾಗ್ತಿದೆ. ಭಾಗಶಃ ಒಂದೇ ರೀತಿ ವಾದ ಮಾಡ್ತಿದ್ದಾರೆ ಕೂಡ.. ಎಣಿಕೆಗೂ ಸಿಗದಷ್ಟು ಮಂದಿ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿದ್ದು, ಅಷ್ಟರಲ್ಲಿ ಕೆಲವಕು ಕಾಮೆಂಟ್​ ಗೋಜಿಗೆ ಹೋಗದಿದ್ರೂ.. ಹಲವರು ಕಾಮೆಂಟ್​ ಸೆಕ್ಷನ್​ನಲ್ಲಿ ತಮಗನಿಸ್ಸಿದ್ದನ್ನ ಕಾಮೆಂಟ್​ ಮಾಡಿ ಪಂಡಿತರಂತೆ ಪೋಸ್​ ಕೋಡ್ತಾರೆ.. ಹೀಗೆ ಶುರುವಾಗಿರೋ ಚರ್ಚೆಯಲ್ಲಿ ಹಾಟ್​ ಟಾಪಿಕ್​ ಅಂದ್ರೆ ಮಾಜಿ ವಿಶ್ವ ಸುಂದರಿಯ ದಾಂಪತ್ಯ ಬಿರುಕಿನ ಗಾಸಿಪ್​.. ಈ ಗಾಸಿಪ್​ ಎಲ್ಲಿಯವರೆಗೂ ಮುಂದುವರೆದಿದೆ ಅಂದ್ರೆ ಬ್ರಿಟಿಷ್​​ ರಾಜಮನೆತನದ ರಾಜಕುಮಾರಿ ಡಯಾನಾ ಫ್ರಾನ್ಸಿಸ್ ಸ್ಪೆನ್ಸರ್ 1 ವರೆಗೂ.. ಹಾಗಾದ್ರೆ ಏನದು ಲಿಂಕ್​?

ಡಯಾನಾ ಫ್ರಾನ್ಸಿಸ್ ಸ್ಪೆನ್ಸರ್ 1, ವಿಶ್ವದ ಸುಂದರ ಮಹಿಳೆಯರಲ್ಲಿ ಈಕೆಯ ಹೆಸರು ಅಗ್ರ ಸ್ಥಾನದಲ್ಲಿದೆ.. 1961 ನಲ್ಲಿ ಇಂಗ್ಲೆಂಡ್​ನಲ್ಲಿ ಜನಿಸಿದ ಈಕೆ  1997 ರಲ್ಲಿ ಸಾವನಪ್ಪಿದ್ರು.. ಇದು ಎಲ್ಲರಿಗೂ ಗೊತ್ತಿರೋ ವಿಚಾರ. ಈ ರಾಜಕುಮಾರಿಯ ಹೆಸರು ಇತಿಹಾಸದ ಪುಟಗಳನ್ನ ಸೇರಿದ್ರೂ, ನಮ್ಮ ನೆಲದ ಐಶ್ವರ್ಯಾ ರೈ ದಾಂಪತ್ಯ ಜೀವನಕ್ಕೆ ಈಕೆಯ ಹೆಸರನ್ನ ಎಳೆದು ತರಲಾಗ್ತಿದೆ.. ನಿಮ್ಗೆಲ್ಲಾ ಗೊತ್ತಿರೋ ಹಾಗೆ ಈಗಾಗ್ಲೇ ಐಶೂ ದಾಂಪತ್ಯದಲ್ಲಿ ಏನೋ ಸರಿಯಿಲ್ಲ ಅನ್ನೋ ಟಾಕ್​ ಗುಲ್ಲೆಬ್ಬಿದೆ. ಮಾಜಿ ವಿಶ್ವಸುಂದರಿ ಮಡದಿಯಾಗಿ ಸಿಕ್ಕಿದ್ರೂ ಅಭಿಷೇಕ್​ ಹೀಗೆ ಮಾಡ್ಬಿಟ್ರಾ.. ಟಾಟಾ ಸುಮೋಗಾಗಿ ಅಭಿಷೇಕ್​ ರೇಂಜ್ ರೋವರ್​ನ ಬಿಡೋ ನಿರ್ಧಾರ ಮಾಡ್ಬಿಟ್ರಾ ಅಂತೆಲ್ಲಾ ಚರ್ಚೆಗಳಾಗ್ತಿದೆ.

Tap to resize

Latest Videos

ಈ ಚರ್ಚೆಯಲ್ಲಿ ಪ್ರಿನ್ಸೆಸ್​ ಡಯಾನಾ ಕಥೆ ಯಾಕೆ ಲಿಂಕ್​ ಆಗ್ತಿದೆ ಅಂದ್ರೆ, ಡಯಾನಾಗೂ ಆಕೆಯ ಪತಿ ಪ್ರಿನ್ಸ್​​ ಚಾರ್ಲ್​, ಮೋಸ ಮಾಡಿದ್ದ ಅನ್ನೋದು. ಡಯಾನಳನ್ನ ಬಿಟ್ಟು ಪರಸಂಘ ಮಾಡಿದ್ದ ಅನ್ನೋ ಸುದ್ದಿಯೂ ಇದ್ದು, ಡಯಾನ ತನ್ನ ಪತಿಯಿಂದ ಡಿವೋರ್ಸ್​​ ತೆಗೆದುಕೊಂಡು ದಾಂಪತ್ಯ ಜೀವನದಿಂದ ಹೊರ ಬಂದಿದ್ದರು. ಡಯಾನರಿಂದ ವಿಚ್ಚೇದನ ಪಡೆದ ಬಳಿಕ ಡಯಾನ ಮಾಜಿ ಪತಿ ಪ್ರಿನ್ಸ್​ ಚಾರ್ಲ್​​ ಮತ್ತೊಬ್ಬಳನ್ನ ಮದುವೆಯಾಗಿದ್ರು. ಈ ಸಂದರ್ಭದಲ್ಲಿ ಡಯಾನ ಕುಗ್ಗಿ ಹೋಗ್ತಾರೆ ಅಂತಲೇ ಪ್ರತಿಯೊಬ್ಬರೂ ಅಂದುಕೊಂಡಿದ್ರು, ಆದ್ರೆ ಈ ಹೊತ್ತಲ್ಲೇ ಬ್ಲಾಕ್​ ಗೌನ್​ನಲ್ಲಿ ಕಾಣಿಸಿಕೊಂಡಿದ್ದ ಡಯಾನ ತನ್ನ ಬಾಳಲ್ಲಿ ಏನೂ ನಡೆದೇ ಇಲ್ಲ ಅನ್ನೋ ಹಾಗೆ ವರ್ತಿಸಿದ್ರು..

ಸದ್ಯ ಪ್ರೀತಿಸಿ ಅಭಿಷೇಕ್​ ಕೈ ಹಿಡಿದಿದ್ದ ಐಶ್​ ಬಾಳಲ್ಲೂ ಇಂಥದೇ ಕಹಿ ಘಟನೆಯ ಗಾಳಿ ಸುದ್ದಿ ಹರಿದಾಡ್ತಿದ್ದು, ಸೋಶಿಯಲ್​ ಮೀಡಿಯಾ ಪಂಡಿತರು, ಪ್ರಿನ್ಸೆಸ್​ ಡಯಾನಗೂ ಆಕೆಯ ಪತಿ ಮೋಸ ಮಾಡಿದ್ದ, ವಿಶ್ವಸುಂದರಿ ಸಿಕ್ಕಿದ್ರೂ ದಾಂಪತ್ಯ ಜೀವನದಲ್ಲಿ ಏನೋ ಸರಿಯಿಲ್ಲ.. ಇನ್ನು ನಮ್ಮ ನಿಮ್ಮ ಪ್ರೀತಿ ಅದ್ಯಾವ ಲೆಕ್ಕ ಅಂತ ಸ್ಯಾಡ್​​ ಮೋಟಿವೇಷನಲ್​ ಕಂಟೆಂಟ್​ ವಿಡಿಯೋಗಳು ವೈರಲ್​ ಆಗ್ತಿವೆ.

ಸಮಂತಾಗೂ ಲಿಂಕ್​!
ಇತ್ತ ಈ ಚರ್ಚೆಯಿಂದ ಸೌತ್​ ಬ್ಯೂಟಿ ಸಮಂತಾ ಹಾಗೂ ಬಾಲಿವುಡ್​ ಹಿರಿಯ ನಟಿ ರೇಖಾ ಕೂಡ ಹೊರತಾಗಿಲ್ಲ. ಸಮಂತಾ ನಾಗಚೈತನ್ಯನನ್ನ ಅತಿಯಾಗಿ ಪ್ರೀತಿಸಿದ್ರು,ಕೊನೆಗೆ ನಾಗ್​ ಬೇರೊಬ್ಬಳ ಕೈ ಹಿಡಿದಿದ್ದಾನೆ. ಇತ್ತ ರೇಖಾ ಅಮಿತಾಬ್​ ಬಚ್ಚನ್​ ಮೇಲಿನ ಪ್ರೀತಿಯಿಂದಾಗಿ ಬೇರೊಬ್ಬನನ್ನ ವಿವಾಹವಾಗಿಲ್ಲ. ಹೆಣ್ಣು ಯಾವಾಗ ಅತಿಯಾಗಿ ಪ್ರೀತಿ ಕೊಡ್ತಾಳೆ ಆಗ ಆಕೆಗೆ ನಿರಾಸೆಯೇ ಎದುರಾಗುತ್ತೆ ಅನ್ನೋದು ನೆಟ್ಟಿಗರ ವಾದ.

ತಂದೆಯಂತೇ ಮಗ!
ಅಮಿತಾಬ್​ ಬಚ್ಚನ್​ರಿಂದ ರೇಖಾ ಇನ್ನೊಬ್ಬರನ್ನ ಮದ್ವೆಯಾಗಿಲ್ಲ ಅನ್ನೋ ಚರ್ಚೆ ಈಗಲೂ ಬಿಟೌನ್​ನಲ್ಲಿ ಚಾಲ್ತಿಯಲ್ಲಿದೆ. ಅದೇ ಚರ್ಚೆಯನ್ನ ಮುಂದಿಟ್ಟು ಮಾತಾಡ್ತಿರೋ ಜನ ಅಪ್ಪ ರೇಖಾ ಬದುಕಲ್ಲಿ ಆಟವಾಡಿದ. ಮಗ ಈಗ ಅದೇ ಹಾದಿಯಲ್ಲಿ ಸಾಗ್ತಿದ್ದಾನೆ ಅಂತಲೂ ಕಿಡಿಕಾರ್ತಿದ್ದಾರೆ.

ತಪ್ಪೇನಿದೆ?
ಇನ್ನೂ ಕೆಲವರು ಆಕೆ ವಿಶ್ವ ಸುಂದರಿಯೇ ಆಗಿರ್ಬೋದು, ರಾಜಕುಮಾರಿಯೇ ಆಗಿರಬೋದು ಆದ್ರೆ ಇಬ್ಬರ ಮನಸ್ಥಿತಿ ಮ್ಯಾಚ್​ ಆಗದೆ ಇದ್ದಾಗ, ಇಕ್ಕಟ್ಟಲ್ಲಿ ಬದಕುವ ಬದಲು ದೂರವಾಗೋದೇ ಸರಿ ಅನ್ನೋ ವಾದವೂ ಇದೆ.

click me!