ಟಬು ಮದ್ವೆಯಾಗದೇ ಇರೋದಕ್ಕೆ ಅಜಯ್​ ದೇವಗನ್​ ಕಾರಣನಾ? ಸಂದರ್ಶನದಲ್ಲಿ ಇಬ್ಬರೂ ಹೇಳಿದ್ದೇನು?

By Suchethana D  |  First Published Oct 26, 2024, 3:24 PM IST

ನಟಿ ಟಬು ಇನ್ನೂ ಮದ್ವೆಯಾಗದೇ ಇರೋದಕ್ಕೆ ಅಜಯ್​ ದೇವಗನ್​ ಕಾರಣನಾ? ಕಾಫಿ ವಿತ್​ ಕರಣ್​ ಷೋನಲ್ಲಿ ಹೇಳಿದ್ದೇನು? 
 


ಬಾಲಿವುಡ್‌ನ ಎವರ್‌ಗ್ರೀನ್‌ ನಟಿಯರಲ್ಲಿ ಒಬ್ಬರು ಟಬು. ಬರುವ ನವೆಂಬರ್​ನಲ್ಲಿ ಅವರಿಗೆ 53 ವರ್ಷ.  ವಯಸ್ಸು ಇಷ್ಟಾದರೂ ಇಂದಿಗೂ ಅವರಿಗೆ ಬಾಲಿವುಡ್‌ನಲ್ಲಿ ಸಕತ್‌ ಡಿಮ್ಯಾಂಡ್‌ ಇದೆ, ಮಾತ್ರವಲ್ಲದೇ ಯಾವ ನಾಯಕನ ತಾಯಿಯಾಗಿಯೂ ನಟಿಸುವ ಕಾಲ ಬಂದಿಲ್ಲ, ನಾಯಕಿಯಾಗಿಯೇ ನಟಿಸುತ್ತಿರುವ ಹೆಮ್ಮೆ ಇವರದ್ದು. ದೃಶ್ಯಂ 2 ರಲ್ಲಿ ತಮ್ಮ ಮಗನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಯಾವುದೇ ಹಂತಕ್ಕೂ ಹೋಗುವ ಪ್ರತಿಸ್ಪರ್ಧಿಯಾಗಿ ಅವರು ಕಾಣಿಸಿಕೊಂಡರೆ ಭೂಲ್ ಭುಲೈಯಾ 2 ರಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡರು, ಎರಡೂ ಪಾತ್ರಗಳು ಪರಸ್ಪರ ಭಿನ್ನವಾಗಿವೆ. ಹೀಗೆ ಎಲ್ಲಾ ಪಾತ್ರಗಳಲ್ಲಿ ಟಬು ಅವರದ್ದು ಎತ್ತಿದ ಕೈ. ಇಂತಿಪ್ಪ ನಟಿ ಇಂದಿಗೂ ಸಿಂಗಲ್‌. ಮದುವೆಯಾಗುವ ಗೋಜಿಗೆ ಹೋಗಲಿಲ್ಲ, ಅದರ ಆಸೆಯೂ ಅವರಿಗೆ ಇಲ್ಲವಂತೆ. ಸಿಂಗಲ್‌ ಆಗಿರುವುದನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಟಬುವಿಗೆ ಇಂದಿಗೂ ಖುಷಿಯಿದೆ. ಅಂದಹಾಗೆ ನಟಿ ಟಬು ಅವರ ಪೂರ್ಣ ಹೆಸರು ತಬಸ್ಸುಮ್ ಫಾತಿಮಾ ಹಶ್ಮಿ. ಇವರ ಚಿಕ್ಕಮ್ಮ ಶಬಾನಾ ಅಜ್ಮಿ ಬಾಲಿವುಡ್‌ನ ಪ್ರಸಿದ್ಧ ನಟಿ ಎನ್ನುವುದನ್ನು ಬಿಟ್ಟರೆ, ಯಾವುದೇ ಚಿತ್ರರಂಗದ ಬ್ಯಾಕ್‌ಗ್ರೌಂಡ್‌ ಇಲ್ಲದ ನಟಿ ಟಬು.  

ಟಬು ಅವರ ಹೆಸರು ಕೆಲವು ನಟರ ಜೊತೆ ಥಳಕು ಹಾಕಿಕೊಂಡಿದ್ದರೂ, ಅಜೆಯ ದೇವಗನ್​ ಜೊತೆ ನಟಿಗೆ ಫ್ರೆಂಡ್​ಷಿಪ್​ ಇತ್ತು ಎಂದು ಹೇಳಲಾಗುತ್ತದೆ. ಅಷ್ಟಕ್ಕೂ ‘ದೇ ದೇ ಪ್ಯಾರ್ ದೇ’ ಸಿನಿಮಾ 2019ರಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ಈ ಜೋಡಿ ನಟಿಸಿತ್ತು. ಆಗ ಇಬ್ಬರೂ ತುಂಬಾ ಕ್ಲೋಸ್​ ಆಗಿದ್ದರು ಎನ್ನಲಾಗಿದೆ. ಇದೇ ವಿಷಯವಾಗಿ ಕಾಫಿ ವಿತ್​ ಕರಣ್​ ಷೋನಲ್ಲಿ ಈ ಜೋಡಿಗೆ ಮದುವೆಯ ಪ್ರಶ್ನೆ ಕೇಳಲಾಗಿತ್ತು. ಅಜಯ್​ ದೇವಗನ್​ ಅವರು ಕಾಜೋಲ್​ ಜೊತೆ ಮದುವೆಯಾಗಿ ಸುಖಿ ದಾಂಪತ್ಯ ನಡೆಸುತ್ತಿದ್ದರೆ, ಟಬು ಯಾಕೆ ಇನ್ನೂ ಸಿಂಗಲ್​ ಎಂದು ಪ್ರಶ್ನಿಸಲಾಯಿತು. ಅದಕ್ಕೆ ಅಜಯ್​ ದೇವಗನ್​ ಮಧ್ಯೆ ಪ್ರವೇಶಿಸಿ,  ಟಬುಗೆ ನಾನು ಬೇಕಿತ್ತು, ಆದರೆ ಈಗ ಕಾಲ ಮಿಂಚಿ ಹೋಗಿದೆ. ಅದಕ್ಕೇ ಅವರಿನ್ನೂ ಮದ್ವೆಯಾಗಿಲ್ಲ ಎಂದರು. ಇದನ್ನು ಕೇಳಿ ಟಬು ಹುಸಿ ಕೋಪ ಮಾಡಿಕೊಂಡು ಅಜಯ್​ ದೇವಗನ್​ ಅವರಿಗೆ ಹೊಡೆದರು. ತಕ್ಷಣ, ಅಜಯ್​ ನಗುತ್ತಾ, ಅದು ಹಾಗಲ್ಲ. ನನ್ನಂಥ ಹುಡುಗ ಬೇಕಿತ್ತು ಎಂದು ಹೇಳಿದೆ ಎಂದು ನಕ್ಕರು. ನಾನು ಸಿಗುವುದಿಲ್ಲವಲ್ಲ, ನನ್ನಂಥ ಹುಡುಗ ಬೇಕಿತ್ತು. ಆದರೆ ಇದು ಒಂದೇ ಪೀಸ್​,  ಇಡೀ ಪ್ರಪಂಚದಲ್ಲಿ ನನ್ನಂತೆ ಬೇರೆ ಯಾರೂ ಇಲ್ಲ ಎಂದು ನಕ್ಕಾಗ, ಟಬು ಕೂಡ ನಕ್ಕರು. 

Tap to resize

Latest Videos

ಕಮಲಾ ಹ್ಯಾರೀಸ್ ಪ್ರೆಗ್ನೆಂಟ್​, ಹೊಟ್ಟೆ ಹಿಡಿದ ಟ್ರಂಪ್​! ಎಲೆಕ್ಷನ್​ ಹೊತ್ತಿಗೆ ಇದೆಂಥ ಫೋಟೋ ವೈರಲ್​?

ಅಷ್ಟಕ್ಕೂ ಟಬು ಅವರು ತಾವು ಮದ್ವೆ ಯಾಕೆ ಆಗಿಲ್ಲ ಎನ್ನುವ ಬಗ್ಗೆ ಇದುವರೆಗೆ ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ. ಆದರೆ, ಹಿಂದೊಮ್ಮೆ ಸಂದರ್ಶನದಲ್ಲಿ,  ಒಂಟಿಯಾಗಿರುವುದಕ್ಕೆ ತಮಗೆ ಖುಷಿ ಇದೆ ಎಂದಿದ್ದರು. ನಾನು ಒಂದು ವೇಳೆ ಮದುವೆಯಾಗಿದ್ದರೆ ಎಲ್ಲವನ್ನೂ ತ್ಯಜಿಸಬೇಕಿತ್ತು. ಕೆಲವು ನಟಿಯರು ಮದುವೆಯಾದ ಬಳಿಕ ಗಂಡ, ಸಂಸಾರ ಎಂದು ನಟನಾವೃತ್ತಿಯನ್ನು ಅನಿವಾರ್ಯವಾಗಿ ತೊರೆದಿದ್ದಾರೆ. ಇಂಥ ಅನ್ಯಾಯ ನನಗೂ ಆಗುತ್ತಿತ್ತು ಎಂದಿರುವನ ನಟಿ,  ನನ್ನ  ನಟನಾ ವೃತ್ತಿಯೇ ನನಗೆ ಜೀವ.  ಜಗತ್ತನ್ನು ಸುತ್ತುವ ಬಯಕೆ ಇದೆ. ಆದರೆ ಒಬ್ಬ ವ್ಯಕ್ತಿಗಾಗಿ ಇವೆಲ್ಲವನ್ನೂ ತ್ಯಜಿಸುವ ಇಚ್ಛೆ ನನಗಿಲ್ಲ ಎಂದಿದ್ದಾರೆ.  ಒಂಟಿತನದ ಜೀವನವನ್ನು ಸುಲಭವಾಗಿ ನಿಭಾಯಿಸಬಹುದು, ಆದರೆ ದುರ್ದೈವವಶಾತ್‌ ತಪ್ಪು ಸಂಗಾತಿ ಆಯ್ಕೆ ಮಾಡಿಕೊಂಡರೆ ಅದಕ್ಕಿಂತ ಭಯಾನಕ ಮತ್ತೊಂದಿಲ್ಲ. ಆದ್ದರಿಂದ ಒಂಟಿ ಜೀವನವೇ ಲೇಸು ಎಂದಿದ್ದರು. ಆದರೆ  ನಟಿ, ಮದುವೆಯಿಲ್ಲದೆ ಮಗುವನ್ನು ಹೊಂದುವ ಬಗ್ಗೆ ಯೋಚಿಸಿದ್ದೇನೆ ಎಂದೂ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. 
 
ಇನ್ನು ಟಬು ಚಿತ್ರದ ನಂಟಿನ ಕುರಿತು ಹೇಳುವುದಾದರೆ,  1980 ರಲ್ಲಿ  'ಬಜಾರ್' ಚಿತ್ರದಲ್ಲಿ  ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು. ಇದಾದ ನಂತರ 14ನೇ ವಯಸ್ಸಿನಲ್ಲಿ ‘ಹಮ್ ನೌಜವಾನ್’ ಚಿತ್ರದಲ್ಲಿ ದೇವಾನಂದ್ ಅವರ ಮಗಳಾಗಿ ಕಾಣಿಸಿಕೊಂಡರು.ನಂತರ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು,  ಬೋನಿ ಕಪೂರ್ ನಿರ್ಮಾಣದ ಚಿತ್ರ 'ಪ್ರೇಮ್' ಮೂಲಕ.  ಸಂಜಯ್ ಕಪೂರ್ ಈ ಚಿತ್ರದ ನಾಯಕ. ನಂತರ ಇವರಿಬ್ಬರ ಸಂಬಂಧದ ಬಗ್ಗೆ ಸಾಕಷ್ಟು ಗುಸುಗುಸು ಶುರುವಾಗಿತ್ತು. ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ. ಇದಾದ ಬಳಿಕ ನಟಿ 'ಕಾಲಾಪಾನಿ', 'ಮಾಚಿಸ್', 'ಚಾಂದಿನಿ ಬಾರ್', 'ಮಕ್ಬೂಲ್' ನಂತಹ ಬ್ಲಾಕ್‌ಬಸ್ಟರ್‌ ಚಿತ್ರಗಳನ್ನು ನೀಡಿದರು. 

ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಷನಲ್ ಪ್ರಶಸ್ತಿ ಪಡೆದು ಇತಿಹಾಸ ಸೃಷ್ಟಿಸಿದ ಭಾರತದ ಸುಂದರಿ ರಾಚೆಲ್​

 
 
 
 
 
 
 
 
 
 
 
 
 
 
 

A post shared by ehsas (@eh_sas12)

click me!