ತನ್ನ ಸೀನ್‌ ಕಟ್ ಮಾಡಲ್ಲ ಅಂತ ಬರೆದುಕೊಡುವಂತೆ ಅಮರನ್ ನಿರ್ದೇಶಕರಿಗೆ ಆಗ್ರಹಿಸಿದ ಸಾಯಿಪಲ್ಲವಿ

Published : Oct 26, 2024, 02:49 PM IST
ತನ್ನ ಸೀನ್‌ ಕಟ್ ಮಾಡಲ್ಲ ಅಂತ ಬರೆದುಕೊಡುವಂತೆ ಅಮರನ್ ನಿರ್ದೇಶಕರಿಗೆ ಆಗ್ರಹಿಸಿದ ಸಾಯಿಪಲ್ಲವಿ

ಸಾರಾಂಶ

ನಟಿ ಸಾಯಿ ಪಲ್ಲವಿ ಅವರು 'ಅಮರನ್' ಸಿನಿಮಾದಲ್ಲಿ ನಟಿಸಲು ಒಪ್ಪಿಕೊಳ್ಳುವ ಮುನ್ನ ಚಿತ್ರತಂಡದಿಂದ ತಮ್ಮ ಪಾತ್ರಕ್ಕೆ ಕತ್ತರಿ ಹಾಕುವುದಿಲ್ಲ ಎಂಬ ಲಿಖಿತ ಭರವಸೆ ನೀಡುವಂತೆ ನಿರ್ದೇಶಕರ ಬಳಿ ಆಗ್ರಹಿಸಿದರಂತೆ

ಸಿನಿಮಾಗಳಲ್ಲಿ ಪುರುಷ ಪ್ರಧಾನ ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ಇರುವುದು ಗೊತ್ತೆ ಇದೆ. ಕೆಲವೊಂದು ಪೌರಾಣಿಕ ಸಿನಿಮಾಗಳ ಹೊರತಾಗಿ ಬಹುತೇಕ ಎಲ್ಲಾ ಸಿನಿಮಾಗಳಲ್ಲಿ ನಾಯಕನ ಪಾತ್ರಕ್ಕೆ ಪ್ರಾಮುಖ್ಯತೆ ಹೆಚ್ಚು,  ಇಂತಹ ಸಿನಿಮಾಗಳಲ್ಲಿ ನಾಯಕಿಯ ಪಾತ್ರವನ್ನು ಕೆಲವೊಮ್ಮೆ ತೀರ ಕಡೆಗಣನೆ ಮಾಡಲಾಗುತ್ತದೆ. ಶೂಟ್ ಮಾಡಿದ ಸೀನ್‌ಗಳನ್ನು ಕೂಡ ನಂತರದಲ್ಲಿ ಕಟ್‌ ಮಾಡಲಾಗಿರುತ್ತದೆ. ನಾಯಕಿಗೆ ಈ ವಿಚಾರವನ್ನು ನಿರ್ದೇಶಕರಾಗಲಿ ನಿರ್ಮಾಪಕರಾಗಲಿ ಹೇಳಿರುವುದಿಲ್ಲ, ಸಿನಿಮಾ ಬಿಡುಗಡೆಯ ವೇಳೆ ಸಿನಿಮಾ ನೋಡಿದಾಗಲೇ ಕೆಲವೊಮ್ಮೆ ನಾಯಕಿಗೆ ತಾನು ನಟಿಸಿದ ಪ್ರಮುಖ ಸೀನ್‌ಗಳಿಗೆ ಕತ್ತರಿ ಹಾಕಲಾಗಿದೆ ಎಂಬ ವಿಚಾರ ಗೊತ್ತಾಗುತ್ತದೆ. ಈ ವಿಚಾರಗಳು ನಟಿಯರಿಗೆ ಹೊಸದೇನಲ್ಲ, ಇದೇ ಕಾರಣಕ್ಕೆ ನಟಿ ಸಾಯಿ ಪಲ್ಲವಿ ಅವರು ತಮ್ಮ ಮುಂಬರುವ ಸಿನಿಮಾ  'ಅಮರನ್‌' ಮೇಕರ್ ಬಳಿ ತಮ್ಮ ನಟನೆಯ ಸೀನ್‌ಗಳಿಗೆ ಕತ್ತರಿ ಹಾಕುವುದಿಲ್ಲ ಎಂದು ಬರಹ ರೂಪದಲ್ಲಿ ಭರವಸೆ ನೀಡುವಂತೆ ಒತ್ತಾಯಿಸಿದ್ದಾರೆ. ಸಾಯಿ ಪಲ್ಲವಿ ನಟನೆಯ ಅಮರನ್‌  ಸಿನಿಮಾವೂ ಇದೇ ತಿಂಗಳ 31ರಂದು ದೇಶದೆಲ್ಲೆಡೆ ರಿಲೀಸ್ ಆಗಲಿದೆ. 

ನಟಿ ಸಾಯಿ ಪಲ್ಲವಿ ಅವರು ಪಾತ್ರಗಳ ಹಾಗೂ ಸಿನಿಮಾಗಳ ಆಯ್ಕೆಯಲ್ಲಿ ಬಹಳ ಚೂಸಿ, ಅಳೆದು ತೂಗಿ ಪಾತ್ರಗಳ ಆಯ್ಕೆ ಮಾಡಿಕೊಳ್ಳುವ ಫ್ಯಾಮಿಲಿ ಗರ್ಲ್ ಲುಕ್ ಇರುವ ನಟಿಗೆ ದೇಶದೆಲ್ಲೆಡೆ ಲಕ್ಷಾಂತರ ಜನ ಅಭಿಮಾನಿಗಳಿದ್ದಾರೆ. ಇಂತಹ ಸಾಯಿ ಪಲ್ಲವಿ, ಈ ಅಮರನ್ ಸಿನಿಮಾದ ಆಯ್ಕೆಯ ವೇಳೆ ಇದು ಪುರುಷ ಪ್ರಧಾನ ಸಿನಿಮಾವಾಗಿರುವುದರಿಂದ ಸಹಿ ಹಾಕಬೇಕೆ ಬೇಡವೇ ಎಂಬ ಗೊಂದಲದಲ್ಲಿದ್ದರಂತೆ, ಈ ವಿಚಾರವನ್ನು ಅವರು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. 'ಅಮರನ್' ಸಿನಿಮಾವೂ ಭಾರತೀಯ ಸೇನೆಯ ರಾಜ್‌ಪುತ್ ರೆಜಿಮೆಂಟ್‌ನಲ್ಲಿ ಕಮೀಷನ್ಡ್ ಆಫೀಸರ್ ಆಗಿದ್ದ, ಅಶೋಕಚಕ್ರ ಪುರಸ್ಕೃತ ಮೇಜರ್ ಮುಕುಂದ್ ವರದರಾಜನ್ ಅವರ ನಿಜ ಜೀವನದ ಕತೆಯನ್ನು ಹೊಂದಿದೆ. 

ಹೀಗಾಗಿ ಇದು ಬಹುತೇಕ ನಾಯಕನ ಪಾತ್ರವನ್ನೇ ವೈಭವೀಕರಿಸುವ ಸಿನಿಮಾ ಹೀಗಾಗಿ ನಟಿ ಸಾಯಿಪಲ್ಲವಿಗೆ ಈ ಸಿನಿಮಾದಲ್ಲಿ ತನ್ನ ಪಾತ್ರಕ್ಕೆ ಅಂತ ದೊಡ್ಡ ಮಹತ್ವ ಇರುತ್ತೋ ಇಲ್ಲವೋ ಎಂಬ ಸಂಶಯವಿತ್ತು. ಹೀಗಾಗಿ ಅವರು ನಿರ್ದೇಶಕ ರಾಜ್‌ಕುಮಾರ್ ಪೆರಿಸಾಮಿ ಅವರ ಬಳಿ ತನಗೆ ಈ ಸಿನಿಮಾದಲ್ಲಿನ ಪಾತ್ರಗಳಿಗೆ ಕೊನೆಯಲ್ಲಿ ಕತ್ತರಿ ಹಾಕಬಾರದು ಎಂದು ಲಿಖಿತ ಭರವಸೆ ನೀಡುವಂತೆ ಆಗ್ರಹಿಸಿದ್ದರಂತೆ, ಬಹುತೇಕ ಮೇಲ್ ಡಾಮಿನೇಟೆಡ್ ಸಿನಿಮಾಗಳಲ್ಲಿ ಸಿನಿಮಾ ತಯಾರಕು ಸುಲಭವಾಗಿ ಹಿರೋಯಿನ್ ಪಾತ್ರಗಳಿಗೆ ಕತ್ತರಿ ಹಾಕುತ್ತಾರೆ ಎಂದು ಸಾಯಿ ಪಲ್ಲವಿ ಹೇಳದ್ದಾರೆ. 

ರಿಯಾಲಿಟಿ ಶೋ ದಿನಗಳಿಂದಲೇ ನಿರ್ದೇಶಕ ಪೆರಿಸಾಮಿ ಜೊತೆ ಕೆಲಸ ಮಾಡಿದ್ದರಿಂದ ಅವರ ಜೊತೆ ತುಂಬಾ ಆತ್ಮೀಯ ಒಡನಾಟವಿದ್ದು, ಈ ರೀತಿ ಲಿಖಿತ ಭರವಸೆ ನೀಡುವಂತೆ ಕೇಳಿದ್ದಾರಂತೆ ಈ ವೇಳೆ ಪ್ರತಿಕ್ರಿಯಿಸಿದ ಪೆರಸ್ವಾಮಿ ನಿಮ್ಮ ಪಾತ್ರವಾದ ಇಂದು ರೆಬೆಕಾ ವರ್ಗೀಸ್ ಪಾತ್ರವೂ ಮೇಜರ್ ಮುಕುಂದ್ ವರದರಾಜನ್ ಅರ ಪಾತ್ರದಷ್ಟೇ ಮಹತ್ವವನ್ನು ಹೊಂದಿದೆ. ಹೀಗಾಗಿ ನಿಮ್ಮ ಪಾತ್ರಕ್ಕೆ ಕತ್ತರಿ ಹಾಕುವುದಿಲ್ಲ ಎಂದು ಭರವೆಸ ನೀಡಿದರಂತೆ.

ಪಾತ್ರಗಳನ್ನು ಆಯ್ಕೆ ಮಾಡುವ ತನ್ನ ಈ ಗುಣವೂ ತನ್ನ ಕೆಲಸದ ಅವಕಾಶಗಳ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ಒಪ್ಪಿಕೊಳ್ಳುವ ಸಾಯಿ ಪಲ್ಲವಿ, ತನ್ನ ವೃತ್ತಿಜೀವನದ ಕೆಲ ತತ್ವಗಳಿಗೆ ಸದಾ ಬದ್ಧರಾಗಿರುವುದಾಗಿ, ತತ್ವಗಳನ್ನು ಮೀರಿದ ಅಂತಹ ಬೆಳವಣಿಗೆಗಳು ನನಗೆ ಬೇಡ ಎಂದು ಹೇಳುತ್ತಾರೆ ಪ್ರೇಮಂ ನಟಿ. ಅಂದಹಾಗೆ ಈ ಅಮರನ್ ಸಿನಿಮಾವನ್ನು ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲಂ ಇಂಟರ್‌ನ್ಯಾಷನಲ್ ನಿರ್ಮಾಣ ಮಾಡುತ್ತಿದ್ದು, ಆಕ್ಟೋಬರ್ 31ರಂದು ಬಿಡುಗಡೆಯಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?