ಕಲರ್ಸ್ ಕನ್ನಡ ವಾಹಿನಿಯ ಕೆಂಡ ಸಂಪಿಗೆ ಸೀರಿಯಲ್ನ ಸಂತೆ ಹೊಸಪೇಟೆಯಲ್ಲಿ ನಡೆದಾಗ ಮದುವೆಯಾಗುವ ಹುಡುಗನ ಕುರಿತು ಕೇಳಿದ ಪ್ರಶ್ನೆಗೆ ಸಂಗೀತಾ ಶೃಂಗೇರಿ ಹೇಳಿದ್ದೇನು?
ಬಿಗ್ಬಾಸ್ ಸೀಸನ್ 10 ಮುಗಿದು ಹಲವು ದಿನಗಳೇ ಕಳೆದಿದ್ದರೂ ಇದರ ಗುಂಗಿನಿಂದ ಫ್ಯಾನ್ಸ್ ಹೊರಕ್ಕೆ ಬರಲಿಲ್ಲ. ಬಿಗ್ಬಾಸ್ ಮನೆಯಿಂದ ಬಂದ ಸ್ಪರ್ಧಿಗಳೆಲ್ಲರೂ ಬಹುದೊಡ್ಡ ಸೆಲೆಬ್ರಿಟಿಗಳಾಗಿ ಬದಲಾಗುತ್ತಾರೆ. ಅವರನ್ನು ಒಂದಿಷ್ಟು ಜನರು ನೋಡುವ ದೃಷ್ಟಿಯೇ ಬದಲಾಗುತ್ತದೆ. ಅದರಲ್ಲಿಯೂ ಬಿಗ್ಬಾಸ್ ವಿನ್ನರ್ ಎಂದರೆ ಅವರ ರೇಂಜೇ ಬೇರೆ. ಅವರ ಅಭಿಮಾನಿಗಳು ಖುಷಿ ಪಡುವ ರೀತಿಯೇ ಬೇರೆ. ಅದೇ ರೀತಿ ಇದೀಗ ಬಿಗ್ಬಾಸ್ ಸೀಸನ್ 10 ವಿನ್ನರ್ ಕಾರ್ತಿಕ್ ಮಹೇಶ್ ಅವರು ಬಹುದೊಡ್ಡ ಸೆಲೆಬ್ರಿಟಿಯಾಗಿದ್ದಾರೆ. ಆರಂಭದಲ್ಲಿ ಬಿಗ್ಬಾಸ್ ಅನ್ನು ಒಪ್ಪಿಕೊಳ್ಳದೇ ಕೊನೆಕ್ಷಣದಲ್ಲಿ ಒಪ್ಪಿಕೊಂಡು ಹೋಗಿದ್ದ ಕಾರ್ತಿಕ್ ಅವರಿಗೆ ಈ ಗೆಲುವು ವಿಶೇಷ ಅನುಭವವನ್ನೂ ನೀಡಿದೆ.
ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕೆಂಡಸಂಪಿಗೆ ಸೀರಿಯಲ್ ಜಾತ್ರೆ ಹೊಸಪೇಟೆಯಲ್ಲಿ ನಡೆದಿದ್ದು, ಅದರಲ್ಲಿ ಬಿಗ್ಬಾಸ್ನ ಕೆಲವು ಸ್ಪರ್ಧಿಗಳು ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್ಬಾಸ್ನ ವಿನಯ್, ಕಾರ್ತಿಕ್, ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಕಾಣಿಸಿಕೊಂಡಿದ್ದಾರೆ. ಇದೇ ವೇದಿಕೆಯ ಮೇಲೆ ಪರ್ಫಾಮ್ ಮಾಡಿದ್ದಾರೆ. ಬಿಗ್ಬಾಸ್ ಪ್ರೇಮಿಗಳಿಗೆ ತಿಳಿದಿರುವಂತೆ ಕಾರ್ತಿಕ್, ಬಿಗ್ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದರೆ, ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಶೃಂಗೇರಿ ಅವರು ರನ್ನರ್ಸ್ ಅಪ್ ಆಗಿದ್ದಾರೆ. ಈ ಸಮಯದಲ್ಲಿ ಆ್ಯಂಕರ್ ಸಂಗೀತಾ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳುವ ಮೂಲಕ ಜನರನ್ನು ನಗೆಗಡಲಿನಲ್ಲಿ ತೇಲಿಸಿದ್ದಾರೆ. ಆರಂಭದಲ್ಲಿ ಸಂಗೀತಾ ಅವರು ರೆಬಲ್ ಆಗಿ ಎಲ್ಲಾ ಡಿಸಿಷನ್ ತಗೊಂಡ್ರು ಎಂದಾಗಿ ಹೆಚ್ಚಿನ ಮಂದಿ ಹೌದು ಎಂದಿದ್ದಾರೆ. ಇದೇ ವೇಳೆ ಸಂಗೀತಾಗೆ ಕೋಪ ಜಾಸ್ತಿ ಎಂದಾಗಲೂ ಹೌದು ಎಂದಿದ್ದಾರೆ.
ಮದ್ವೆಯಾಗ್ತೇನಂತ ಪ್ರತಾಪ್ ಬಳಿ ಹೊಸಪೇಟೆ ಯುವತಿಯರು! ನಾಚಿ ನೀರಾದ ಡ್ರೋನ್ ಮಾಡಿದ್ದೇನು ನೋಡಿ...
ನಂತರ ಇನ್ನೊಂದು ಪ್ರಶ್ನೆ ಕೇಳಿ ಸಂಗೀತಾರನ್ನು ಗಲಿಬಿಲಿಗೊಳಿಸಲಾಗಿದೆ. ಸಂಗೀತಾ ಅವರನ್ನು ಮದುವೆಯಾಗುವ ಹುಡುಗ ಈ ಸಮಯದಲ್ಲಿ ಹೊಸಪೇಟೆಯಲ್ಲಿಯೇ ಇದ್ದಾನೆ ಎಂದಾಗ, ಸಂಗೀತಾ ಹುಸಿಗೋಪದಿಂದ ಅವರ ಮುಖ ನೋಡಿದ್ದಾರೆ. ಎಲ್ಲರೂ ಗೊಳ್ಳೆಂದು ನಕ್ಕಿದ್ದಾರೆ. ಅಷ್ಟಕ್ಕೂ ಬಿಗ್ಬಾಸ್ನಲ್ಲಿ ಸಕತ್ ಸೌಂಡ್ ಮಾಡಿದ್ದ ಜೋಡಿ ಸಂಗೀತಾ ಮತ್ತು ಕಾರ್ತಿಕ್ ಅವರದ್ದು. ಬಿಗ್ಬಾಸ್ ಮನೆಯಲ್ಲಿ ಕಾರ್ತಿಕ್ ಅವರು ಸದ್ದು ಮಾಡಿದ್ದು ಸಂಗೀತಾ ಜೊತೆಗಿನ ಸ್ನೇಹದ ಕುರಿತು. ಬಿಗ್ ಬಾಸ್ ಪ್ರಿಯರಿಗೆ ತಿಳಿದಿರುವಂತೆ, ಅಸಮರ್ಥರ ತಂಡದಲ್ಲಿ ಒಂದಾಗಿ ಮನೆಯೊಳಗೆ ಪ್ರವೇಶಿಸಿದ್ದರು ಕಾರ್ತಿಕ್ (Karthik). ಇವರ ಜೊತೆ ಸಂಗೀತಾ ಶೃಂಗೇರಿ ಮತ್ತು ತನಿಷಾ ಇದ್ದರು.
ಈ ಮೂವರು ಬಹುಬೇಗ ಸ್ನೇಹಿತರಾದರು. ಅದರಲ್ಲಿಯೂ ಶುರುವಿನಲ್ಲಿ ಸಂಗೀತಾ ಮತ್ತು ಕಾರ್ತಿಕ್ ಅವರ ಸಂಬಂಧ ಒಂದು ಲೆವೆಲ್ ಮುಂದೆಯೇ ಹೋಗಿತ್ತು. ಪ್ರೇಕ್ಷಕರು ಇವರನ್ನು ನೋಡುವ ಸ್ಟೈಲೇ ಬೇರೆಯಾಗಿತ್ತು. ಇದಕ್ಕೆ ಕಾರಣ, ಬಿಗ್ಬಾಸ್ ಮನೆಯಲ್ಲಿ ಇವರಿಬ್ಬರೂ ಕೇವಲ ಸ್ನೇಹಿತರಾಗಿ ಇರದೇ ಕೆಲವು ಸಲ ರೊಮ್ಯಾಂಟಿಕ್ ಆಗಿಯೂ ಕಾಣಿಸಿಕೊಂಡರು. ಇದೇ ವೇಳೆ ಒಂದು ಹಂತದಲ್ಲಿ ‘ಲವ್ ಗಿವ್ ಎಲ್ಲ ಬೇಡ… ಫ್ರೆಂಡ್ ಆಗಿರೋಣ’ ಎಂದು ಸಂಗೀತ ಸ್ಪಷ್ಟವಾಗಿ ಹೇಳಿದ್ದರು ಕೂಡ. ಅದಕ್ಕೆ ಕಾರ್ತಿಕ್ ಕೂಡ ಒಪ್ಪಿದ್ದರು. ಕೆಲ ವಾರ ಇವರಿಬ್ಬರ ನಡುವಿನ ಗಾಢ ಪ್ರೀತಿ ನಡೆಯಿತು .ನಂತರ ಇವರಿಬ್ಬರೂ ಜಗಳ ಶುರು ಮಾಡಿಕೊಂಡರು. ಈ ಜಗಳ ಬೆಳೆದು ದೊಡ್ಡದಾಗುತ್ತಾ ಇಬ್ಬರೂ ಹಾವು-ಮುಂಗುಸಿ ರೀತಿ ವರ್ತಿಸಿದರು. ಆದರೆ ಹೊರ ಬಂದ ಮೇಲೂ ಇವರ ಮದ್ವೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಕಾರ್ಯಕ್ರಮವೊಂದರಲ್ಲಿ ಖುದ್ದು ಕಾರ್ತಿಕ್ ತಾಯಿ ಕೂಡ ಇದೇ ವೇದಿಕೆಯಲ್ಲಿಯೇ ಕಾರ್ತಿಕ್ ಅವರನ್ನು ಮದ್ವೆಯಾಗುವ ಹುಡುಗಿ ಇದ್ದಾಳೆ ಎಂದೂ ಹೇಳಿದ್ದರು. ಇದೀಗ ಮತ್ತದೇ ಪ್ರಶ್ನೆ ಎದುರಾಗಿದೆ.