ವಿರುಷ್ಕಾ ಪುತ್ರ ಹುಟ್ಟುತ್ತಲೇ ನೂರಾರು ಸೋಷಿಯಲ್​ ಮೀಡಿಯಾ ಅಕೌಂಟ್​! ನೆಟ್ಟಿಗರು ಸುಸ್ತೋ ಸುಸ್ತು...

By Suvarna News  |  First Published Feb 21, 2024, 4:59 PM IST

ವಿರುಷ್ಕಾ ಪುತ್ರ ಹುಟ್ಟುತ್ತಲೇ ನೂರಾರು ಸೋಷಿಯಲ್​ ಮೀಡಿಯಾ ಅಕೌಂಟ್​ ಸೃಷ್ಟಿಯಾಗಿದ್ದು, ಏನೆಲ್ಲಾ ಹೇಳ್ತಿದ್ದಾರೆ ನೋಡಿ...  
 


"ಥ್ಯಾಂಕ್ ಯು ಅಪ್ಪ ವಿರಾಟ್ ಕೊಹ್ಲಿ ಮತ್ತು ಅಮ್ಮ ಅನುಷ್ಕಾ ಶರ್ಮಾ ನನಗೆ ಜನ್ಮ ನೀಡಿದಕ್ಕಾಗಿ"... ಥ್ಯಾಂಕ್ಸ್​ ಪಪ್ಪಾ... ನಿಮ್ಮಂಥ ಅಪ್ಪ-ಅಮ್ಮ ಪಡೆದ ನಾನೇ ಧನ್ಯ... ಮೊನ್ನೆಯಷ್ಟೇ ನಾನು ಹುಟ್ಟಿದೆ, ಎಲ್ಲರೂ ವಿಷ್​ ಮಾಡಿ... ನಿಮ್ಮ ಅಭಿಮಾನಕ್ಕೆ ನಾನು ಧನ್ಯ... ನಿಮಗೆ ನಾನು ಸರ್​ಪ್ರೈಸ್​ ನೀಡಿದ್ದೇನೆ, ಹೇಗನ್ನಿಸಿತು....?

ಇವೆಲ್ಲವೂ ಕ್ರಿಕೆಟಿಗ ವಿರಾಟ್ ಕೊಹ್ಲಿ, ನಟಿ ಅನುಷ್ಕಾ ಶರ್ಮಾ ದಂಪತಿ (ವಿರುಷ್ಕಾ) ಪುತ್ರ ತನ್ನ ಇನ್​ಸ್ಟಾಗ್ರಾಮ್​, ಎಕ್ಸ್​ ಖಾತೆಯಲ್ಲಿ ಬರೆದುಕೊಂಡದ್ದು!  ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ದಂಪತಿ 2ನೇ ಮಗುವಿನ ತಂದೆಯಾಗಿರುವುದನ್ನು ಅನೌನ್ಸ್​ ಮಾಡುತ್ತಿದ್ದಂತೆಯೇ ನೂರಾರು ಸೋಷಿಯಲ್​ ಮೀಡಿಯಾಗಳು ಹುಟ್ಟಿಕೊಂಡಿದ್ದು ಅಕಾಯ್​ ಹೆಸರಿನಲ್ಲಿ ಖಾತೆಯನ್ನು ತೆರೆಯಲಾಗಿದೆ. ಒಂದೊಂದು ಖಾತೆಯಲ್ಲಿ ತಾವೇ ಅಕಾಯ್​ ಎಂದು ಬರೆದುಕೊಂಡಿರುವ ಅಭಿಮಾನಿಗಳು, ಥಹರೇವಾರಿಯಾಗಿ ಶೀರ್ಷಿಕೆ ನೀಡಿದ್ದಾರೆ! ಅಕಾಯ್​ ಎಂದು ತಿಳಿದು ತಮಗೆ ಒಂದಿಷ್ಟು ವ್ಯೂಸ್​ ಬರಲಿ ಎನ್ನುವುದು ಕೆಲವರ ಅಭಿಪ್ರಾಯವಾಗಿದ್ದರೆ, ಇನ್ನು ಕೆಲವರು ಅಭಿಮಾನದಿಂದ ಖಾತೆ ತೆರೆದಿದ್ದಾರೆ.

Tap to resize

Latest Videos

ಡಿವೋರ್ಸ್​, ಮಯೋಸೈಟಿಸ್‌ ಕಾಯಿಲೆ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ಸಮಂತಾ ರುತ್​ ಪ್ರಭು

ಅಂದಹಾಗೆ,  2021ರಲ್ಲಿ ಅನುಷ್ಕಾ ಶರ್ಮಾ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಹೆಣ್ಣು ಮಗುವಿಗೆ ವಮಿಕಾ ಎಂದು ಹೆಸರಿಡಲಾಗಿದೆ.  ಜನವರಿ 11ರಂದು ಕೊಹ್ಲಿ ದಂಪತಿ ವಮಿಕಾಳ 3ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಇದೀಗ ಇದೇ ಫೆಬ್ರವರಿ 15 ರಂದು ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 5 ದಿನಗಳ ಬಳಿಕ ಕೊಹ್ಲಿ 2ನೇ ಬಾರಿಗೆ ತಂದೆಯಾಗಿರುವ ಸಂತಸ ಹಂಚಿಕೊಂಡಿದ್ದಾರೆ. ಇದೇ ವೇಳೆ 2ನೇ ಮಗುವಿನ ಹೆಸರನ್ನು ಬಹಿರಂಗಪಡಿಸಿದ್ದಾರೆ.ವಿರುಷ್ಕಾ ದಂಪತಿ ಎರಡನೇ ಮಗುವಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ. ಟರ್ಕಿ ಮೂಲದ ಪದ ಹುಡುಕಿ ವಿರುಷ್ಕಾ ದಂಪತಿ 2ನೇ ಮಗುವಿಗೆ ಹೆಸರಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಟರ್ಕಿಯಲ್ಲಿ ಅಕಾಯ್ ಎಂದರೆ ಹೊಳೆಯುತ್ತಿರುವ ಚಂದ್ರ ಎಂದರ್ಥವಾಗಿದೆ. ಮಗ ಹೊಳೆಯುವ ಚಂದ್ರನಂತೆ ಅನ್ನೋ ಅರ್ಥದಲ್ಲಿ ಮುದ್ದಾದ ಹೆಸರನ್ನು ವಿರುಷ್ಕಾ ದಂಪತಿ ತಮ್ಮ ಮಗುವಿಗೆ ಇಟ್ಟಿದ್ದಾರೆ. ಇದೀಗ ಕೊಹ್ಲಿ ದಂಪತಿಯ 2ನೇ ಮಗುವಿನ ಹೆಸರಿನ ಚರ್ಚೆಯಾಗುತ್ತಿದೆ.

ಆದರೆ ಇದುವರೆಗೂ ಈ ವಿಷಯವನ್ನು ದಂಪತಿ ಮುಚ್ಚಿಟ್ಟಿದ್ದರು. ಕೆಲ ತಿಂಗಳ  ಹಿಂದೆ  ಕ್ರಿಕೆಟ್​ ಮ್ಯಾಚ್​ ನಡೆಯುತ್ತಿದ್ದ ಸಂದರ್ಭದಲ್ಲಿ ಪತಿಯನ್ನು ಸಪೋರ್ಟ್​ ಮಾಡಲು ಅನುಷ್ಕಾ (Anushka Sharma)  ಅಹಮದಾಬಾದ್​ಗೆ ಹೋಗಿದ್ದರು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಅನುಷ್ಕಾ ಶರ್ಮಾ ಹೊರಬರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ, ಅನುಷ್ಕಾ ಶರ್ಮಾ ಸಂಪೂರ್ಣ ಭದ್ರತೆಯ ನಡುವೆ ಕಪ್ಪು ಉಡುಪಿನಲ್ಲಿ ವಿಮಾನ ನಿಲ್ದಾಣದಿಂದ ಹೊರ ಬರುತ್ತಿರುವುದನ್ನು ಕಾಣುತ್ತಿದ್ದರು. ಹೊಟ್ಟೆಯನ್ನು ಅವರು ಮುಚ್ಚಿಕೊಂಡಿದ್ದರು. ಆಗ ಇವರು ಗರ್ಭಿಣಿ ಎಂದು ಅಭಿಮಾನಿಗಳು ಹೇಳಿದ್ದರು. ಆದರೆ ಇದು ನಿಜನೋ, ಇಲ್ಲವೋ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಕೊನೆಗೂ ಗರ್ಭಿಣಿ ಎಂದು ಈಚೆಗಷ್ಟೆ ದಂಪತಿ ಅನೌನ್ಸ್​ ಮಾಡಿದ್ದರು. ಅದಾಗಲೇ ಮಗುವಿಗೂ ಜನ್ಮ ನೀಡಿದ್ದಾರೆ ಅನುಷ್ಕಾ. 

ಕಂಗನಾ ರಣಾವತ್​ರ 10 ಕೋಟಿಯ ಆಸ್ತಿಯ ಒಡತಿಯಾದ ನಟಿ ಮೃಣಾಲ್​ ಠಾಕೂರ್​! ಏನಿದು ವಿಷ್ಯ?

click me!