ಆಮೀರ್, ಸಲ್ಮಾನ್, ಶಾರುಖ್, ರಜನಿಕಾಮತ್, ಪ್ರಭಾಸ್ ಯಾರೂ ಅಲ್ಲ... ಪ್ರತಿ ನಿಮಿಷದ ದೃಶ್ಯಕ್ಕೆ ನಾಲ್ಕೂವರೆ ಕೋಟಿ ರೂ. ಪಡೆದ ಬಾಲಿವುಡ್ ಸ್ಟಾರ್ ಯಾರು ಗೊತ್ತಾ?
ಸರಿಸುಮಾರು ಮೂರು ದಶಕಗಳ ಹಿಂದೆಯೇ ಮೊದಲ ಬಾರಿಗೆ ಭಾರತೀಯ ನಟನೊಬ್ಬ ಚಿತ್ರವೊಂದರ ಸಂಭಾವನೆಯ ವಿಷಯದಲ್ಲಿ 1 ಕೋಟಿ ರೂಪಾಯಿಗಳನ್ನು ಮೀರಿಸಿದ್ದರು. ಅಂದಿನಿಂದ, ಭಾರತೀಯ ಸೂಪರ್‌ಸ್ಟಾರ್‌ಗಳು ವಿಧಿಸುವ ಶುಲ್ಕವು ಹತ್ತಾರು ಮತ್ತು ನೂರರಷ್ಟು ಹೆಚ್ಚಾಗಿದೆ, ದೊಡ್ಡ ಸ್ಟಾರ್‌ಗಳು ಪ್ರತಿ ಚಿತ್ರಕ್ಕೆ 100 ಕೋಟಿ ರೂಪಾಯಿವರೆಗೂ ವಿಧಿಸುವುದು ಬಾಲಿವುಡ್ನಲ್ಲಿ ಮಾತ್ರವಲ್ಲದೇ ಎಲ್ಲಾ ವುಡ್ಗಳಲ್ಲಿಯೂ ಮಾಮೂಲಾಗಿಬಿಟ್ಟಿದೆ. ಆದರೆ ಅವರಲ್ಲಿ ಒಬ್ಬರ ಹೆಸರೂ ಇನ್ನೂ ಒಂದು ಹಂತಕ್ಕೆ ಮುಂದಕ್ಕೆ ಹೋಗಿದೆ. ಅದೇನೆಂದರೆ, ಅವರು ಪ್ರತಿ ನಿಮಿಷಕ್ಕೆ ನಾಲ್ಕೂವರೆ ಕೋಟಿ ರೂಪಾಯಿಗಳ ಶುಲ್ಕ ಪಡೆದುಕೊಂಡಿದ್ದರು. ಅದು ಕೂಡ ಅತಿಥಿ ಪಾತ್ರಕ್ಕೆ ಎನ್ನುವುದು ವಿಶೇಷ.
ಹೀಗೆಂದ ತಕ್ಷಣ ಎಲ್ಲರ ಗಮನಕ್ಕೆ ಆಮೀರ್ ಖಾನ್, ಶಾರುಖ್ ಖಾನ್, ಪ್ರಭಾಸ್, ರಜನಿಕಾಂತ್, ಸಲ್ಮಾನ್ ಖಾನ್ ಮತ್ತು ದಳಪತಿ ವಿಜಯ್ ಅವರಂತಹ ಹೆಸರುಗಳು ಕಣ್ಣಮುಂದೆ ಬರಬಹುದು. ಈ ಎಲ್ಲಾ ನಟರು ಪ್ರತಿ ಚಿತ್ರಕ್ಕೆ 100 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಗಳಿಸುತ್ತಿದ್ದಾರೆ ಎನ್ನುವುದು ಸುಳ್ಳಲ್ಲ. ಅವರಲ್ಲಿ ಕೆಲವರು ತಮ್ಮ ದೊಡ್ಡ ಹಿಟ್‌ಗಳ ಲಾಭದಲ್ಲಿ ಪಾಲನ್ನು ಲೆಕ್ಕ ಹಾಕಿದ ನಂತರ ಒಂದು ಚಿತ್ರಕ್ಕೆ 200 ಕೋಟಿ ರೂಪಾಯಿ ಪಡೆದಿದ್ದಾರೆ. ಆದರೆ ಆಗಲೂ ಅವರ ಪ್ರತಿ ನಿಮಿಷದ ಗಳಿಕೆ 2-3 ಕೋಟಿ ರೂಪಾಯಿ. ಆದರೆ ನಾವು ಈಗ ಹೇಳುತ್ತಿರುವುದು ಇವರ್ಯಾರ ಹೆಸರೂ ಅಲ್ಲ. ಬದಲಿಗೆ ಅಜಯ್ ದೇವಗನ್. ಹೌದು. 2021 ರಲ್ಲಿ ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್‌ನಲ್ಲಿ ಸಂಕ್ಷಿಪ್ತ ಪಾತ್ರದಲ್ಲಿ ಕಾಣಿಸಿಕೊಳ್ಳಲು 35 ಕೋಟಿ ರೂಪಾಯಿಗಳನ್ನು ವಿಧಿಸಿದ್ದಾಗ ಇಡೀ ಚಿತ್ರರಂಗ ಕಣ್ ಕಣ್ ಬಿಟ್ಟಿದ್ದು ಇದೆ. ಚಿತ್ರದಲ್ಲಿ ಅಜಯ್ ಕೇವಲ ಎಂಟು ನಿಮಿಷಗಳ ಕಾಲ ಪರದೆಯ ಮೇಲೆ ಇದ್ದರು, ಅಂದರೆ ಅವರ ಪ್ರತಿ ನಿಮಿಷದ ಶುಲ್ಕವು ನಾಲ್ಕೂವರೆ ಕೋಟಿ ರೂಪಾಯಿ ಎಂದು ಲೆಕ್ಕ ಹಾಕಲಾಗಿದೆ.
ಬಾಲಿವುಡ್ ನಟಿಯ ಮದ್ವೆಯಲ್ಲಿ ವೇದಿಕೆ ಮೇಲೆ ಕಿಚ್ಚು ಹೊತ್ತಿಸಿದ ಶಿಲ್ಪಾ-ರಾಜ್ ಕುಂದ್ರಾ: ವಿಡಿಯೋ ವೈರಲ್
RRR ನಲ್ಲಿ, ಅಜಯ್ - ಶ್ರಿಯಾ ಸರನ್ ಜೊತೆಗೆ - ಒಂದು ಫ್ಲ್ಯಾಷ್‌ಬ್ಯಾಕ್ ದೃಶ್ಯದಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ದೃಶ್ಯಕ್ಕೆ ಅವರು ಈ ಪರಿಯ ಸಂಭಾವನೆ ಪಡೆದಿದ್ದಅರೆ ಎನ್ನಲಾಗಿದೆ. ಇನ್ನು ಅಜಯ್ ಅವರು ಒಂದು ಚಿತ್ರದ ನಾಯಕನಾಗಿದ್ದ ಸಂದರ್ಭದಲ್ಲಿ ಆ ಚಿತ್ರದ ಲಾಭದಲ್ಲಿ 50% ಪಾಲನ್ನು ತೆಗೆದುಕೊಳ್ಳುವುದು ಮಾಮೂಲು. ಅಂದರೆ ತಾನ್ಹಾಜಿ ಮತ್ತು ದೃಶ್ಯಂ 2 ಚಿತ್ರಗಳಿಗೆ ಅವರ ಸಂಭಾವನೆ 100 ಕೋಟಿಗೂ ಮೀರಿದೆ.
ಇನ್ನು ಅಜಯ್ ಅವರ ಚಿತ್ರದ ಕುರಿತು ಹೇಳುವುದಾದರೆ, 2024 ರಲ್ಲಿ, ಅಜಯ್ ಅವರು ಚಲನಚಿತ್ರ ಸರಣಿಯ ಮೂರನೇ ಆವೃತ್ತಿಯ ಸಿಂಘಮ್ ಎಗೇನ್‌ನಲ್ಲಿ ಸೂಪರ್‌ಕಾಪ್ ಬಾಜಿರಾವ್ ಸಿಂಘಂ ಅವರ ಸಾಂಪ್ರದಾಯಿಕ ಪಾತ್ರದೊಂದಿಗೆ ಮರಳುತ್ತಿದ್ದಾರೆ. ರೋಹಿತ್ ಶೆಟ್ಟಿ ಅವರ ಕಾಪ್ ಯೂನಿವರ್ಸ್‌ನ ಭಾಗವಾಗಿರುವ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಅರ್ಜುನ್ ಕಪೂರ್, ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಟೈಗರ್ ಶ್ರಾಫ್ ಮತ್ತು ಜಾಕಿ ಶ್ರಾಫ್ ಸೇರಿದಂತೆ ದೊಡ್ಡ ತಾರಾಗಣವಿದೆ. ಇದು ಆಗಸ್ಟ್ 15 ರಂದು ಬಿಡುಗಡೆಯಾಗುತ್ತದೆ. ಆದರೆ ಅದಕ್ಕೂ ಮೊದಲು, ಅವರು ಸೈಕಲಾಜಿಕಲ್ ಥ್ರಿಲ್ಲರ್ ಶೈತಾನ್‌ನಲ್ಲಿ ಅಜಯ್ ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ಜ್ಯೋತಿಕಾ ಮತ್ತು ಆರ್ ಮಾಧವನ್ ಕೂಡ ನಟಿಸಿದ್ದಾರೆ. ಈ ಚಿತ್ರವು ಮಾರ್ಚ್ 8 ರಂದು ಥಿಯೇಟರ್‌ಗಳಿಗೆ ಬರಲಿದೆ.
ವಿರುಷ್ಕಾ ಪುತ್ರ ಹುಟ್ಟುತ್ತಲೇ ನೂರಾರು ಸೋಷಿಯಲ್ ಮೀಡಿಯಾ ಅಕೌಂಟ್! ನೆಟ್ಟಿಗರು ಸುಸ್ತೋ ಸುಸ್ತು...