ಬಹುಕಾಲದ ಗೆಳೆಯನೊಂದಿಗೆ ಎಂಗೇಜ್ ಆದ ಅಮೀರ್ ಖಾನ್ ಪುತ್ರಿ

Published : Nov 18, 2022, 09:08 PM IST
ಬಹುಕಾಲದ ಗೆಳೆಯನೊಂದಿಗೆ ಎಂಗೇಜ್ ಆದ ಅಮೀರ್ ಖಾನ್ ಪುತ್ರಿ

ಸಾರಾಂಶ

ಅಮೀರ್ ಖಾನ್ ಪುತ್ರಿ ಇರಾ ಖಾನ್ ತನ್ನ ಬಹುಕಾಲದ ಗೆಳೆಯ ನೂಪುರ್ ಶಿಖರೆ ಜೊತೆ ಮುಂಬೈನಲ್ಲಿ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಈ ಸಮಾರಂಭದಲ್ಲಿ ಕೆಲ ಸ್ನೇಹಿತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ತಮ್ಮ ಈ ಬಹುಕಾಲದ ಪ್ರೀತಿಗೆ ನಿಶ್ಚಿತಾರ್ಥದ ಮುದ್ರೆಯೊತ್ತಿದ್ದಾರೆ.

ಅಮೀರ್ ಖಾನ್ ಪುತ್ರಿ ಇರಾ ಖಾನ್ ತನ್ನ ಬಹುಕಾಲದ ಗೆಳೆಯ ನೂಪುರ್ ಶಿಖರೆ ಜೊತೆ ಮುಂಬೈನಲ್ಲಿ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಈ ಸಮಾರಂಭದಲ್ಲಿ ಕೆಲ ಸ್ನೇಹಿತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ತಮ್ಮ ಈ ಬಹುಕಾಲದ ಪ್ರೀತಿಗೆ ನಿಶ್ಚಿತಾರ್ಥದ ಮುದ್ರೆಯೊತ್ತಿದ್ದಾರೆ. ಅಮಿರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್, ಅಳಿಯ ಇಮ್ರಾನ್ ಖಾನ್ ಹಾಗೂ ನಿರ್ದೇಶಕ ಅಶುತೋಷ್ ಗೌರೀಕರ್ ಹಾಗೂ ಕುಟುಂಬ ಸದಸ್ಯರು, ಸ್ನೇಹಿತರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.  

ಮುಂಬೈನಲ್ಲಿ(Mumbai) ಸ್ನೇಹಿತರು (Friends) ಹಾಗೂ ಆತ್ಮೀಯರ ಮಧ್ಯೆ ಈ ಜೋಡಿ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದು, ಇವರಿಬ್ಬರ ನಿಶ್ಚಿತಾರ್ಥದ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ(Social media) ಸುತ್ತು ಹೊಡೆಯುತ್ತಿವೆ. ತಮ್ಮ ಈ ವಿಶೇಷ ದಿನದಂದು ಇರಾ ಖಾನ್ (Ira Khan) ಕೆಂಪು ಬಣ್ಣದ ಉದ್ದನೆಯ ಗವನ್‌ನಲ್ಲಿ ಕಂಗೊಳಿಸುತ್ತಿದ್ದರು. ಜೊತೆ ಸುಂದರವಾದ ನೆಕ್ಲೇಸ್ ಇರಾ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು. ಇತ್ತ ಇರಾ ಬಾಯ್ಫ್ರೆಂಡ್ ನೂಪುರ್ ಶಿಖರೆ ಕಪ್ಪು ಬಣ್ಣದ ಟುಕ್ಸೆಡೊ ಸೂಟ್‌ನಲ್ಲಿ ಕಂಗೊಳಿಸುತ್ತಿದ್ದರು. ಇತ್ತ ನಟ ಅಮೀರ್ ಖಾನ್ ಕೂಡ ತನ್ನ ಮಗಳ ನಿಶ್ಚಿತಾರ್ಥದಲ್ಲಿ ಬಿಳಿ ಬಣ್ಣದ ಕುರ್ತಾ ಸೆಟ್‌ (Kurta set) ಧರಿಸಿ ಸಾಲ್ಟ್ ಪೆಪ್ಪರ್‌ ಲುಕ್‌ನಲ್ಲಿ ಮಿಂಚುತ್ತಿದ್ದರು. 

 

ಕಳೆದ ತಿಂಗಳಷ್ಟೇ ಇರಾ ಖಾನ್, ನೂಪುರ್‌ ಸೈಕ್ಲಿಂಗ್ (cycling) ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಅಲ್ಲಿ ನೂಪುರ್ ತನ್ನ ಲೇಡಿ ಲೌ ಇರಾಗೆ ಪ್ರೇಮ ನಿವೇದನೆ ಮಾಡಿದ್ದರು. ಇರಾ ಆ ರೋಮ್ಯಾಂಟಿಕ್ ಪ್ರಫೋಸಲ್‌ನ ವಿಡಿಯೋವನ್ನು ಕೂಡ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.  ಈ ವಿಡಿಯೋದಲ್ಲಿ ಜನರೊಂದಿಗೆ ನಿಂತುಕೊಂಡಿದ್ದು, ಈ ವೇಳೆ ನೂಪುರ್ ಆಕೆಗೆ ಮುತ್ತಿಕ್ಕಿ ಆಕೆಯ ಮುಂದೆ ಮೊಣಕಾಲೂರಿ ಪ್ರೇಮ ನಿವೇದನೆ (Love Proposal) ಮಾಡಿದ್ದ. 

Salaam Venky Trailer; 'ಲಾಲ್ ಸಿಂಗ್ ಚಡ್ಡಾ' ಸೋಲಿನ ಬಳಿಕ ಫ್ಯಾನ್ಸ್ ಮುಂದೆ ಆಮೀರ್, ವಾವ್ ಎಂದ ನೆಟ್ಟಿಗರು

ಇರಾ ಹಾಗೂ ನೂಪುರ್ (Nupur Shikhare) ಫೆಬ್ರವರಿ 2021ರಲ್ಲಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಈ ಜೋಡಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಆಗಾಗ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇರಾ ಆಗಾಗ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡುತ್ತಿರುತ್ತಾರೆ. ಅಲ್ಲದೇ ನೂಪುರ್‌ನ ಇರುವಿಕೆ ಆಕೆಯ ಬದುಕನ್ನು ಹೇಗೆ ಬದಲಾಯಿಸಿತು ಎಂದು ಆಕೆ ಹೇಳಿಕೊಂಡಿದ್ದಾಳೆ. 

ಹಿಂದುಗಳ ಭಾವನೆಗಳಿಗೆ ಮತ್ತೆ ಧಕ್ಕೆ, ಅಮೀರ್‌ ಖಾನ್‌ ಜಾಹೀರಾತಿಗೆ ವಿವಾದದ ಕಿಡಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?